ಭಾಷೆ ಸಂಸ್ಕೃತಿಯ ವಾಹಕ: ಡಾ| ಮಹಾದೇವ
ಭಾರತೀಯ ಸಂಸ್ಕೃತಿ ವಿಶ್ವದೆಲ್ಲೆಡೆ ಪಸರಿಸುವಂತೆ ಮಾಡಿದೆ "ಸಂಸ್ಕೃತ'
Team Udayavani, Feb 7, 2021, 5:13 PM IST
ಧಾರವಾಡ: ಭಾಷೆಯು ಸಂಸ್ಕೃತಿಯ ವಾಹಕವಾಗಿದ್ದು, ಅದರಲ್ಲೂ ಸಂಸ್ಕೃತ ಭಾಷೆಯು ಭಾರತೀಯ ಸಂಸ್ಕೃತಿಯನ್ನು ನಮ್ಮ ದೇಶದಲ್ಲಷ್ಟೇ ಅಲ್ಲ ವಿಶ್ವದ ವಿವಿಧ ದೇಶಗಳ ಪಯಂìತ ಪಸರಿಸುವಂತೆ ಮಾಡಿದೆ ಎಂದು ಕವಿವಿಯ ವಿಶ್ರಾಂತ ಕುಲಸಚಿವ ಡಾ| ಮಹಾದೇವ ಜೋಶಿ ಹೇಳಿದರು.
ನಗರದ ಕರ್ನಾಟಕ ಕಲಾ ಮಹಾವಿದ್ಯಾಲಯದ ಐಕ್ಯೂಎಸಿ ಮತ್ತು ಸಂಸ್ಕೃತ, ಪ್ರಾಕೃತ, ಮತ್ತು ಯೋಗ ಅಧ್ಯಯನ ವಿಭಾಗಗಳ ಸಹಯೋಗದಲ್ಲಿ ಭಾರತೀಯ ಭಾಷಾ ಸಂವರ್ಧನೆಗೆ ಸಂಸ್ಕೃತ ಭಾಷೆಯ ಕೊಡುಗೆ’ ವಿಷಯ ಕುರಿತು ರಾಷ್ಟಿÅàಯ ವಿಚಾರ ಸಂಕಿರಣ (ವೆಬನಾರ್) ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಕೃತ ಭಾಷೆ ಎಲ್ಲ ಭಾಷೆಗಳಿಗೆ ಮೂಲವಾಗಿದ್ದು, ಸಂಸ್ಕೃತ ಭಾಷೆ ಸಂಸ್ಕೃತಿಗಳ ಮಿಶ್ರಣವಾಗಿದೆ. ವಿದ್ಯಾರ್ಥಿಗಳು ಸಂಸ್ಕೃತ ಭಾಷೆ ಕುರಿತು ಅಧ್ಯಯನ ಮತ್ತು ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕೆಂದು ಸಲಹೆ ನೀಡಿದರು.
ಕರ್ನಾಟಕ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ಡಾ|ಎಂ.ಎಸ್ ತರ್ಲಗಟ್ಟಿ ಮಾತನಾಡಿ, ಸಂಗೀತಕ್ಕೆ ಯಾವುದೇ ಭಾಷೆ ಇಲ್ಲ, ಆದರೆ ಸಂಗೀತ ವಿದ್ಯೆ ಹೇಗಿರಬೇಕೆಂಬುದನ್ನು ಸಂಸ್ಕೃತ ಭಾಷೆ ತಿಳಿಸಿಕೊಟ್ಟಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಸಿಡಿ ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ|ಡಿ.ಬಿ.ಕರಡೋಣಿ ಮಾತನಾಡಿ, ಸಂಗೀತ ಮತ್ತು ಸಂಸ್ಕೃತ ಸಂಸ್ಕೃತಿಯ ಪ್ರತೀಕಗಳಾಗಿವೆ. ಸಂಸ್ಕೃತ ಭಾಷೆ ಪ್ರಾಚೀನ ಭಾಷೆಯಾಗಿದೆ. ಯೋಗ ಮತ್ತು ಸಂಸ್ಕೃತ ಎರಡು ಒಂದೇ ನಾಣ್ಯದ ಮುಖವಿದ್ದಂತೆ. ಯೋಗ-ಸಂಸ್ಕೃತ ಭಾಷೆ ಇಂದಿಗೂ ತನ್ನ ಪ್ರಸ್ತುತತೆ ಉಳಿಸಿಕೊಂಡಿದೆ ಎಂದರು.
ಕೇರಳದ ಎರ್ನಾಕುಲಂ ವಿದ್ಯಾಪೀಠದ ಡಾ|ರಾಮಕೃಷ್ಣ ಪೇಜತ್ತಾಯ ಆಶಯ ಭಾಷಣ ಮಾಡಿದರು. ಶೃಂಗೇರಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಡಾ|ಚಂದ್ರಕಲಾ ಕೊಂಡಿ, ಗೋವಾದ ವಿದ್ವಾನ್ ಮಹಾಬಲ ಭಟ್ಟ, ವಿಭಾಗದ ಮುಖ್ಯಸ್ಥೆ ಡಾ|ರಜನಿ. ಹೆಚ್. ಮಾತನಾಡಿದರು.
ಇದನ್ನೂ ಓದಿ :ವಿವಿಧ ಸೌಲಭ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ
ಡಾ|ಅಮರನಾಥ ಶರ್ಮ ವೇದಘೋಷ ಮತ್ತು ಶ್ರೇಯಾ, ದೀಪಾ, ಕೃತಿಕಾ ಪ್ರಾರ್ಥಿಸಿದರು. ಡಾ|ಪ್ರಕಾಶ ಹೆಗಡೆ, ವಿದ್ವಾನ್ ವಾಚಸ್ಪತಿ ಶಾಸ್ತ್ರೀ ಜೋಶಿ, ಡಾ|ಸುಜಾತಾ ಎಂ. ಎನ್, ಡಾ| ಸಿ.ಆರ್.ಲಮಾಣಿ, ಡಾ| ಪ್ರೇಮಾ ನಡಕಟ್ಟಿ, ಡಾ|ಅನ್ನಪೂರ್ಣಾ ಹೆಗಡೆ, ಡಾ|ಜ್ಯೋತಿ ಗೋಕಾವಿ, ವಿದುಷಿ ಲತಾ ಪಾಟೀಲ, ಡಾ|ಗೀತಾ ಕುಂಶಿಕರ್, ಡಾ| ವ ಡಾ|ಮೇಗೇರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kundapura: ಹತ್ತೂರು ಸೇರುವ ಮುಳ್ಳಿಕಟ್ಟೆಗೆ ಬೇಕು ಬಸ್ ನಿಲ್ದಾಣ
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್
Mangaluru: 7 ಕೆರೆ, ಪಾರ್ಕ್ ಅಭಿವೃದ್ಧಿಗೆ ಅಮೃತ 2.0
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.