ವಿಶಾಲ ಚಿಂತನೆಯ ಹಾದಿಯಲ್ಲಿ ಮುನ್ನ ಡೆಯಿರಿ: ಕಾಗೇರಿ
ಸಾಗರ: ನಗರದ ಬ್ರಾಸಂ ಸಭಾಭವನದಲ್ಲಿ ಬ್ರಾಸಮ್ ರಜತ ಮಹೋತ್ಸವ ಕಾರ್ಯಕ್ರಮವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು.
Team Udayavani, Feb 7, 2021, 6:08 PM IST
ಸಾಗರ: ಮಾನವ ಜನ್ಮ ವಿಶಿಷ್ಟವಾದುದು. ನಾವು ಯಂತ್ರಗಳಲ್ಲ. ವಿಶಾಲ ಚಿಂತನೆಯ ಹಾದಿಯಲ್ಲಿ ಜ್ಞಾನ, ಸತ್ಯದ ಸಂಗ್ರಹದ
ಕೆಲಸದಲ್ಲಿ ನಾವು ಮುನ್ನಡೆಯಬೇಕು. ಇಂತಹ ಕೆಲಸಕ್ಕೆ ಸಂಘಟನಾತ್ಮಕ ಶಕ್ತಿಗಳು ಕೆಲಸ ಮಾಡಬೇಕಾದ ಕಾಲ ಬಂದಿದೆ ಎಂದು
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಬ್ರಾಸಂ ಸಭಾಭವನದಲ್ಲಿ ಶನಿವಾರ ಬ್ರಾಸಮ್ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವು ಮಾಡುವ ಕೆಲಸಕ್ಕೆ ಚೌಕಟ್ಟು ಹಾಕಿಕೊಳ್ಳದೆ ಮಿತಿಗಳನ್ನು ಮೀರಿದ ಕೆಲಸ ಮಾಡಲು ಹೊರಟಾಗ ಮಾತ್ರ ಸಾಧನೆಗಳು ಸಾಧ್ಯವಾಗುತ್ತವೆ. ಎಲ್ಲ ಧರ್ಮ, ಜಾತಿ, ಪಂಗಡಗಳು ಸಂಘಟನೆಗಳ ರೂಪದಲ್ಲಿ ಕಾರ್ಯ ನಿರ್ವಹಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಇತರ ಸಮುದಾಯದ ದ್ವೇಷ, ಹಾನಿ ಚಿಂತನೆ ಒಳ್ಳೆಯದೂ ಅಲ್ಲ, ಅದು ಸಮಾಜವನ್ನು ಬೆಳೆಸುವುದಿಲ್ಲ ಎಂದರು. ಸಂಕೀರ್ಣ ಕಾಲಘಟ್ಟದಲ್ಲಿ ನಾವಿದ್ದೇವೆ.
ಶಿಕ್ಷಣದಿಂದ ಜೀವನ ದೃಷ್ಟಿಕೋನ ಸಿಗುತ್ತಿಲ್ಲ.
ಮನೆಯಲ್ಲಿನ ಪೋಷಕರ ಬೋಧನೆ, ನಡವಳಿಕೆಯಲ್ಲೂ ಮಿತಿಗಳಿವೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ, ರಾಷ್ಟ್ರೀಯ ಜವಾಬ್ದಾರಿಯನ್ನು ಅರಿತು ನಡೆದುಕೊಳ್ಳುವ ಕೆಲಸ ಸುಲಭದ್ದಲ್ಲ. ರಾಮಾಯಣ, ಮಹಾಭಾರತ ಕಾಲದಲ್ಲಿಯೂ ಇಂತಹ ವೈರುಧ್ಯಗಳನ್ನು ನೋಡಲಾಗಿದೆ. ಆದರೆ
ಸಂಘಟನೆಗಳು ಇಂತಹ ವಿಚಾರದಲ್ಲಿ ಸೂತ್ರಧಾರನಂತೆ ನಡೆದು ಸಮಾಜದ ಮಾರ್ಗದರ್ಶಿಗಳಾಗಬೇಕು ಎಂದು ಪ್ರತಿಪಾದಿಸಿದರು. ಸಮಾಜ ಎಂಬುದು ಹವಳದ ಹಾರವಿದ್ದಂತೆ. ಇಲ್ಲಿ ಎಲ್ಲ ಜಾತಿ, ಧರ್ಮ, ಉಪಜಾತಿ, ಪಂಗಡಗಳು ಸೇರಿ ಸುಂದರ ಹಾರ ಸಾಧ್ಯವಾಗಿದೆ. ಹಾಗಾಗಿ ನಮ್ಮ ನೀತಿಗಳಲ್ಲಿ ಮಿತಿಗಳನ್ನು ಹೇರಿಕೊಳ್ಳದೆ, ಸಮಾಜಮುಖೀ ಸಂಗತಿಗಳಿಗೆ ಸ್ಪಂದಿಸಬೇಕು. ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
“ನಾವು ಹವ್ಯಕರು’ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಷಿ, ಬ್ರಾಹ್ಮಣರು ಎಂದರೆ ಬಹುಜನ ಪ್ರಿಯರು ಎನ್ನುವ ಮಾತಿದೆ. ಅದಕ್ಕೆ ಪೂರಕವಾಗಿ ತಾನೂ ಬೆಳೆಯುತ್ತಾ ಇತರೆ ಸಮುದಾಯವನ್ನು ಬೆಳೆಸುವ ಕೆಲಸವನ್ನು ಬ್ರಾಹ್ಮಣ ಸಮಾಜ ಲಾಗಾಯ್ತಿನಿಂದ ಮಾಡಿಕೊಂಡು ಬರುತ್ತಿದೆ. ಎಲ್ಲ ಕ್ಷೇತ್ರದಲ್ಲೂ ಹವ್ಯಕರಿದ್ದಾರೆ. ಆರಂಭದ ತಮ್ಮ ವೈದಿಕ ವೃತ್ತಿಯ ಜೊತೆಗೆ ಕೃಷಿ ಸೇರಿದಂತೆ ವಿವಿಧ ಕಾಯಕಗಳನ್ನು ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ. ನಾವು ಎಷ್ಟೇ ಆಧುನಿಕವಾಗಿ ಬದಲಾದರೂ ಮೂಲ ಬಿಟ್ಟು ಬದಕುವ ಬಗ್ಗೆ ಗಮನ ಹರಿಸಬಾರದು. ಈ ನಿಟ್ಟಿನಲ್ಲಿ ಹವ್ಯಕ ಸಾಗರ ಗ್ರಂಥವು ಹವ್ಯಕ ಸಂಸ್ಕೃತಿ, ಸಾಧಕರ
ಪರಿಚಯ, ಬ್ರಾಸಮ್ ನಡೆದು ಬಂದ ದಾರಿ ಇನ್ನಿತರೆ ವಿಷಯಗಳನ್ನು ತೆರೆದಿಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಪರ ಧಾರ್ಮಿಕ ಕಾರ್ಯದಲ್ಲಿ ತೊಡಗಿರುವ 23 ವಿಪ್ರರನ್ನು ಸನ್ಮಾನಿಸಲಾಯಿತು. ಬ್ರಾಸಮ್ ಅಧ್ಯಕ್ಷ ಅ.ರಾ. ಲಂಬೋದರ ಅಧ್ಯಕ್ಷತೆ ವಹಿಸಿದ್ದರು. ಬ್ರಾಸಮ್ ಕಾರ್ಯದರ್ಶಿ ಬಿ.ವಿ. ರವೀಂದ್ರನಾಥ್, ಕೋಶಾಧ್ಯಕ್ಷ ಎಂ.ಟಿ.ಪರಮೇಶ್ವರ್ ಇದ್ದರು. ರಾಜೇಂದ್ರಭಟ್ಟ ಸಂಗಡಿಗರು ವೇದಘೋಷ ಮಾಡಿದರು. ಸಮುದ್ಯತಾ ವೆಂಕಟರಾಮು ಸ್ವಾಗತ ಗೀತೆ ಗಮಕ ಪಠಣ ಮಾಡಿದರು.
ವಸುಧಾಶರ್ಮ ಪ್ರಾರ್ಥಿಸಿದರು. ಎಚ್. ಎಸ್. ಮಂಜಪ್ಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ್ ಪಟೇಲ್ ಕಟ್ಟಿನಕೆರೆ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.