
ಕಡಲೆಗೆ ಕುಂಕುಮ ರೋಗ
ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ! ಸಿಗುತ್ತಿಲ್ಲ ಬೆಳೆಗೆ ಉತ್ತಮ ಬೆಲೆ
Team Udayavani, Feb 7, 2021, 6:25 PM IST

ಲಕ್ಷ್ಮೇಶ್ವರ: ಹಿಂಗಾರಿನ ವಾಣಿಜ್ಯ ಬೆಳೆ ಕಡಲೆ ಕೊಯ್ಲಿನ ಹಂತದಲ್ಲಿರುವಾಗ ತೀವೃಗತಿಯಲ್ಲಿ ಕುಂಕುಮ ರೋಗಬಾಧೆ ಆವರಿಸಿದೆ. ಇದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ.
ಮುಂಗಾರಿನಲ್ಲಿ ಹೆಚ್ಚು ತೇವಾಂಶದಿಂದ ರೈತರು ಬೆಳೆಹಾನಿ ಅನುಭವಿಸಿದ್ದಾರೆ. ಹಿಂಗಾರಿನಲ್ಲಿ ಹವಾಮಾನ ವೈಪರಿತ್ಯ, ಅಕಾಲಿಕ ಮಳೆ, ಕೀಟಬಾಧೆ ಮತ್ತು ಭೂಮಿಯಲ್ಲಿನ ಸೂಕ್ಷ್ಮಾಣು ಜೀವಿಗಳಿಂದ ಹಿಂಗಾರು ಬೆಳೆಗಳು ರೋಗಬಾಧೆಗೆ ತುತ್ತಾಗುತ್ತಿದ್ದು, ರೈತ ಸಮುದಾಯದ ಸಂಕಷ್ಟ ತಪ್ಪದಂತಾಗಿದೆ.
ಅಕಾಲಿಕ ಮಳೆಗೆ ಜೋಳದ ಬೆಳೆ ಸಂಪೂರ್ಣ ನೆಲಕಚ್ಚಿದೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ ಲಕ್ಷೆ ¾àಶ್ವರ ತಾಲೂಕಿನಾದ್ಯಂತ ಒಟ್ಟು 26,750 ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರಿನ ಬೆಳೆ ಬಿತ್ತನೆಯಾಗಿದ್ದು, ಅದರಲ್ಲಿ 11,700 ಹೆಕ್ಟೇರ್ ಪ್ರದೇಶದಲ್ಲಿ ಜೋಳ, 9,750 ಹೆಕ್ಟೇರ್ ಜಮೀನನಲ್ಲಿ ಕಡಲೆ ಬಿತ್ತನೆಯಾಗಿದೆ.
ಲಕ್ಷ್ಮೇಶ್ವರ ಸೇರಿ ತಾಲೂಕಿನ ಗೊಜನೂರ, ಮಾಗಡಿ, ಯಳವತ್ತಿ, ಮಾಡಳ್ಳಿ, ಯತ್ತಿನಹಳ್ಳಿ, ರಾಮಗೇರಿ, ಬೂದಿಹಾಳ, ಗೊಜನೂರ, ಅಡರಕಟ್ಟಿ, ದೊಡೂxರ, ಶಿಗ್ಲಿ, ಅಡರಕಟ್ಟಿ ಗ್ರಾಮ ವ್ಯಾಪ್ತಿಯ ಕಪ್ಪು ಮಣ್ಣಿನ ಜಮೀನುಗಳಲ್ಲಿ ಕಡಲೆ ಬೆಳೆಯಲಾಗಿದೆ.
ಇದನ್ನೂ ಓದಿ :ರೈತರ ಹಿತ ಕಾಪಾಡುವಲ್ಲಿ ಶಾಸಕರು ವಿಫಲ: ಶ್ರೀನಿವಾಸ್
ಪ್ರಾರಂಭದಲ್ಲಿ ಕಡಲೆ ಬೆಳೆ ಕೀಟಬಾಧೆ, ಸಿಡಿ ರೋಗಕ್ಕೆ ತುತ್ತಾಗಿ ನಿರೀಕ್ಷಿತ ಮಟ್ಟದಲ್ಲಿ ಬೆಳೆ ಇರಲಿಲ್ಲ. ಸಂಪೂರ್ಣ ಕಾಯಿ ಬಿಟ್ಟು ಈ ತಿಂಗಳಾಂತ್ಯದಲ್ಲಿ ಕೊಯ್ಲಿಗೆ ಬರುವ ಹಂತದಲ್ಲಿರುವ ಬೆಳೆಗೆ ಇಷ್ಟು ವರ್ಷಗಳಲ್ಲಿ ಕಾಣದ ಕೆಂಪು(ಕುಂಕುಮ) ರೋಗ ಆವರಿಸಿದೆ. ಸಂಪೂರ್ಣ ಬೆಳೆಗೆ ಕೆಂಪು ಬಣ್ಣ, ಕುಂಕುಮ ಪುಡಿ ಎರಚಿದಂತಾಗಿದೆ. ಜಮೀನಿನಲ್ಲಿ ಸಂಚರಿಸಿದರೆ ಕೆಂಪುಪುಡಿ ಮೆತ್ತುತ್ತದೆ. ಇದು ಕೇವಲ ಗಿಡಕ್ಕೆ ಆವರಿಸಿಕೊಳ್ಳದೇ ಕಾಳಿನ ಬೆಳವಣಿಗೆ ಕುಂಠಿತವಾಗಿ ಕಾಳೂ ಕಪ್ಪುಗಟ್ಟುತ್ತದೆ. ಈ ಬೆಳೆ ಒಕ್ಕಲಿ ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಕೇಳಿದ ಬೆಲೆಗೆ ಮಾರಾಟ ಮಾಡಿ ಮತ್ತಷ್ಟು ಕೈ ಸುಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ

CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು

Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ

Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.