ಮೂರು ವರ್ಷಗಳಲ್ಲಿ ಪಾಕ್‌ಗೆ ತೆರಳಿದ 100 ಕಾಶ್ಮೀರಿಗಳು ನಾಪತ್ತೆ!
Team Udayavani, Feb 7, 2021, 9:40 PM IST
ಶ್ರೀನಗರ: ಭಾರತೀಯ ಭದ್ರತಾಸಂಸ್ಥೆಗಳು ದೇಶದ ಭದ್ರತೆಗೆ ಆತಂಕ ಒಡ್ಡಿರುವ ಸಂಗತಿಯೊಂದನ್ನು ಬಹಿರಂಗಪಡಿಸಿವೆ.
ಕಳೆದ 3 ವರ್ಷಗಳಲ್ಲಿ ಪಾಕಿಸ್ತಾನಕ್ಕೆ ತೆರಳಿರುವ ಕಾಶ್ಮೀರದ 100 ಯುವಕರು, ಒಂದೋ ವಾಪಸ್ ಬಂದಿಲ್ಲ ಅಥವಾ ಮರಳಿದ ಬಳಿಕ ನಾಪತ್ತೆಯಾಗಿದ್ದಾರೆ. ಈ ಯುವಕರು ಪಾಕ್ ಭಯೋತ್ಪಾದಕ ಸಂಘಟನೆಗಳ ಸ್ಲಿಪರ್‌ಸೆಲ್ ರೀತಿ ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆಯಿದೆ ಎಂಬ ಬಲವಾದ ಅನುಮಾನ ವ್ಯಕ್ತಪಡಿಸಲಾಗಿದೆ.
ಈ ಅನುಮಾನ ಹುಟ್ಟಲು ಕಾರಣ ಕಳೆದವರ್ಷ ಏಪ್ರಿಲ್‌ನಲ್ಲಿ ಉತ್ತರ ಕಾಶ್ಮೀರದ ಹಂದ್ವಾರಾದಲ್ಲಿ ಸಾವನ್ನಪ್ಪಿದ ಐದು ಉಗ್ರರು. ಅದರಲ್ಲೊಬ್ಟಾತ ಕಾಶ್ಮೀರಿ. ಆತ 2018ರಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದರೂ, ಬಳಿಕ ಭಾರತಕ್ಕೆ ಮರಳಿಯೇ ಇಲ್ಲ! ಕಳೆದ ವರ್ಷ ಏ.1ರಿಂದ 6ರವರೆಗೆ ಭಾರತ ಪ್ರವೇಶಿಸಲು ಯತ್ನಿಸಿದ ಉಗ್ರರ ಗುಂಪುಗಳಲ್ಲಿ; ದಕ್ಷಿಣ ಕಾಶ್ಮೀರದ ಶಾಪಿಯಾನ್, ಕುಲ್ಗಾಮ್, ಅನಂತ್‌ನಾಗ್ ಜಿಲ್ಲೆಯವರೂ ಸೇರಿದ್ದಾರೆ.
ಪಾಕ್ ವೀಸಾ ಪಡೆದು ತೆರಳಿದ ಅವರ್ಯಾರೂ ಮರಳಿಲ್ಲ. ಇದರಿಂದ ಭದ್ರತಾಪಡೆಗಳು ಹೀಗೆ ಪಾಕ್‌ಗೆ ತೆರಳಿದವರ ಹಿನ್ನೆಲೆ, ಕುಟುಂಬವನ್ನು ವಿಚಾರಿಸುತ್ತಿದ್ದಾರೆ. ಇದರಿಂದ ಕೆಲವರಿಗೆ ತೊಂದರೆಯಾದರೂ, ಅಪಾಯವನ್ನು ಗರಿಷ್ಠಪ್ರಮಾಣದಲ್ಲಿ ತಗ್ಗಿಸಬಹುದೆಂಬ ಉದ್ದೇಶವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ
Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ
PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.