ಸುಕೋ ಬ್ಯಾಂಕ್ ವಿಶೇಷ ಸಾಲ ಯೋಜನೆಗೆ ಇಂದು ಚಾಲನೆ: ಮಸ್ಕಿ
ಆನ್‌ಲೈನ್ ಮೂಲಕ ಡಿಸಿಎಂ ಡಾ| ಅಶ್ವತ್ಥ್ ನಾರಾಯಣರಿಂದ ಚಾಲನೆ
Team Udayavani, Feb 8, 2021, 5:30 PM IST
ಬಳ್ಳಾರಿ: ಸುಕೊ ಬ್ಯಾಂಕಿನ ಸ್ಟಾರ್ಟ್ ಅಪ್ ಟು ಸೆಲ್ ಎಂಪ್ಲಾಯ್ಮೆಂಟ್’ (ಎಸು2ಎಸ್‌ಇ) ಎಂಬ ವಿಶೇಷ ಸಾಲ ಯೋಜನೆಯನ್ನು ಉಪ
ಮುಖ್ಯಮಂತ್ರಿ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಅವರು ಫೆ. 8 ರಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ಅವರ ಕಚೇರಿಯಿಂದ ಆನ್‌ಲೈನ್ ಮೂಲಕ ಉದ್ಘಾಟನೆ ಮಾಡಲಿದ್ದಾರೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ್ ಅವರು ಮುಖ್ಯ ಅತಿಥಿಗಳಾಗಿದ್ದಾರೆ. ಇವರು ಕಲುºರ್ಗಿಯಿಂದ (ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಕಚೇರಿ) ಆನ್ ಲೈನ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಸುಕೋ ಬ್ಯಾಂಕ್‌ನ ಸಂಸ್ಥಾಪಕ ಅಧ್ಯಕ್ಷ, ಮನೋಹರ್ ಮಸ್ಕಿ ಅವರು ಬ್ಯಾಂಕ್‌ನ ಮುಖ್ಯ ಕಚೇರಿ, ಬಳ್ಳಾರಿಯಿಂದ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸುಕೋ ಬ್ಯಾಂಕಿನ ಅಧ್ಯಕ್ಷ ಮೋಹಿತ ಮಸ್ಕಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿ, ಬೆಂಗಳೂರು ಮತ್ತು ಕಲಬುರ್ಗಿಯಲ್ಲಿ ಏಕಕಾಲದಲ್ಲಿ ನಡೆಯುವ ಈ ವಿಶೇಷ ಕಾರ್ಯಕ್ರಮದಲ್ಲಿ 500 ಕ್ಕೂ ಹೆಚ್ಚಿನ ಯುವಕ ಯುವತಿಯರ ಸ್ವಾವಲಂಬನೆ ಬದುಕಿಗೆ ನೆರವಾಗಲು ಈ “ಸ್ವ ಉದ್ಯೋಗಕ್ಕಾಗಿ ಸುಕೋ ಬ್ಯಾಂಕ್ ರೂಪಿಸಿರುವ “ಸ್ಟಾರ್ಟ್ ಅಪ್ ಟು ಸೆಲ್ ಎಂಪ್ಲಾಯ್ಮೆಂಟ್ ವಿಶೇಷ ಸಾಲ ಯೋಜನೆ ಅಡಿಯಲ್ಲಿ ಸಾಲ ನೀಡುವ ಪ್ರಕ್ರಿಯನ್ನು ಆರಂಭಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನ ಬನಶ್ರೀ ಸಿಸ್ಟಂ ಪ್ರೈವೇಟ್ ಲಿಮಿಟೆಡ್‌ನ ಪೇಟೆಂಟ್ ಆಧಾರಿತ “ಪರಿಸರ ಸ್ನೇಹಿ’ ಬ್ಯಾಟ್-ಫ್ಲೆ ತಂತ್ರಜ್ಞಾನದಿಂದ ನಿರುಪಯುಕ್ತ ಮತ್ತು ಸಾಮರ್ಥ್ಯ ಕುಗ್ಗಿದ ಲೆಡ್ ಬ್ಯಾಟರಿಗಳನ್ನು ಕೇವಲ ಶೇ.30% ವೆಚ್ಚದಲ್ಲಿ ನವೀಕರಿಸಿ ಅವುಗಳ ಪುನರ್ ಬಳಕೆಯ ಸಾಮರ್ಥ್ಯವನ್ನು ಕನಿಷ್ಠ
ಮೂರು ವರ್ಷಗಳಿಗೆ ಹೆಚ್ಚಿಸಲಿದೆ ಹಾಗೂ ಶಿವಮೊಗ್ಗದ “ಮಲೆನಾಡು ನಟ್ಸ್ ಆ್ಯಂಡ್ ಸ್ಪೈಸ್ ರೈತ ಸಂಸ್ಥೆ’ ನೀರಾ ಉತ್ಪಾದಕ ರೈತ ಸಂಸ್ಥೆ ಆಗಿದ್ದು, ಕರ್ನಾಟಕ ಸರ್ಕಾರದ ಪರವಾನಗಿ ಮತ್ತು ಭಾರತೀಯ ಆಹಾರ ಗುಣಮಟ್ಟ ಸಂಸ್ಥೆಯಿಂದ ಮಾನ್ಯತೆ ಪಡೆದುಕೊಂಡ ರಾಜ್ಯದ ಏಕೈಕ ಸಂಸ್ಥೆ ಇದಾಗಿದೆ. ಬೆಂಗಳೂರಿನ ವೆನ್‌ಜೈನ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ರೋಗಿ ಮನೆ ಬಾಗಿಲಲ್ಲೇ ಬಿಪಿ, ಶುಗರ್, ಬ್ಲಿಡ್ ಕೌಂಟ್ ಸೇರಿ 60ಕ್ಕೂ ಹೆಚ್ಚಿನ ವ್ಯಾಧಿ ಯನ್ನು ಸುಲಭವಾಗಿ ಗುರುತಿಸುವ ವೈದ್ಯಕೀಯ ಉಪಕರಣಗಳ ಕಿಟ್ ಅನ್ನು ಕಡಿಮೆ ವೆಚ್ಚದಲ್ಲಿ ಸಿದ್ಧಪಡಿಸಿದೆ. ಈ ಉಪಕರಣವು ಗ್ರಾಮೀಣ ಜನರಿಗೆ ಸಂಜೀವಿನಿಯಂತೆ ಕೆಲಸ ಮಾಡುತ್ತಿದ್ದು, ಸಕಾಲದಲ್ಲಿ ರೋಗಿಗೆ ಸೂಕ್ತ ಚಿಕಿತ್ಸೆ ನೀಡಲು ನೆರವಾಗಲಿದೆ. ಈ ಮೇಲಿನ ಎಲ್ಲ ಸಂಸ್ಥೆಗಳ ಉತ್ತೇಜನಕ್ಕಾಗಿ ಹಾಗೂ ಉತ್ಪನ್ನಗಳಿಗೆ ಸುಕೋ ಬ್ಯಾಂಕ್ ಸಾಲ ನೀಡುತ್ತಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Waqf Notice: ಸಿಎಂ ಪಿತೂರಿ, ಸಚಿವ ಜಮೀರ್ ದ್ರೋಹದಿಂದ ಜಮೀನು ಕಬಳಿಸುವ ಕೆಲಸ: ವಿಜಯೇಂದ್ರ
By Election: ಮಾತಿನ ಭರದಲ್ಲಿ ವಿಜಯೇಂದ್ರಗೂ ಪಾಲು ಎಂದ ಶ್ರೀರಾಮುಲು!
Modi,BSY ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆ ಇರಲಿ: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ
Kotturu: ಹಸಿರು ಪಟಾಕಿ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ಮಾಮೂಲಿ ಪಟಾಕಿ ಮಾರಾಟ…
MUST WATCH
ಹೊಸ ಸೇರ್ಪಡೆ
Thalapathy 69: ರಿಲೀಸ್ ಗೂ ಮುನ್ನ ಕೋಟಿ ಕೋಟಿ ಕಮಾಯಿ ಮಾಡಿದ ವಿಜಯ್ ಕೊನೆಯ ಸಿನಿಮಾ
Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು
Bengaluru; ಶೋಕಿಗಾಗಿ ಸರಗಳ್ಳತನ: 70 ಲಾರಿಗಳ ಮಾಲಿಕ ಸೆರೆ!!
Lokayukta ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿಯಿಂದ ಪ್ರತಿಭಟನೆ
Lawyer Jagadish: ಕೊಲೆ ಬೆದರಿಕೆ; ದರ್ಶನ್, ಅಭಿಮಾನಿ ಮೇಲೆ ದೂರು ದಾಖಲಿಸಿದ ಜಗದೀಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.