ಕಳಂಜಿ ಮಹಿಳೆಯರಿಂದ ಕಾಲ್ನಡಿಗೆ ಜಾಥಾ
Team Udayavani, Feb 9, 2021, 12:42 PM IST
ನೆಲಮಂಗಲ: ಸಮಾಜದಲ್ಲಿ ಮಹಿಳೆಯರು ಸದೃಢ ಜೀವನ ನಡೆಸಲು ಮೊದಲು ಆರೋಗ್ಯವಾಗಿರಬೇಕು ಎಂದು ಕ್ಯಾನ್ಸರ್ ಫೌಂಡೇಷನ್ ಮುಖ್ಯಸ್ಥೆ ಕಮಲೇಶ್ವರಿ ಸಲಹೆ ನೀಡಿದರು.
ನಗರದ ಬಸವಣ್ಣದೇವರದಲ್ಲಿ ಧಾನ್ ಫೌಂಡೇಷನ್ ಸಂಸ್ಥೆ ಆರೋಗ್ಯ ಮತ್ತು ಪೌಷ್ಟಿಕಾಂಶ ಭದ್ರತೆ ಉದ್ದೇಶವನ್ನಿಟ್ಟುಕೊಂಡು ಆಯೋಜಿಸಿದ್ದ ವಾಕಥಾನ್-2021 ಕಾಲ್ನಡಿಗೆ ಜಾಥಾ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಒಂದು ಕುಟುಂಬದ ನಿರ್ವಹಣೆ ಸಂಪೂರ್ಣ ಜವಾಬ್ದಾರಿ ಮಹಿಳೆಯರು ವಹಿಸಿಕೊಳ್ಳಬೇಕು. ಮೊದಲ ತನ್ನ ಆರೋಗ್ಯ ಕಾಪಾಡಿಕೊಂಡು ನಂತರ ಕುಟುಂಬದ ಆರೋಗ್ಯ ಕಾಪಾಡುವ ಮೂಲಕ ಜಾಗೃತಿ ವಹಿಸಬೇಕು ಎಂದರು.
ಯೋಜನೆ ಸದ್ಭಳಕೆ ಮಾಡಿಕೊಳ್ಳಿ: ಎಸ್ ಬಿಐ ಬ್ಯಾಂಕ್ ನೆಲ ಮಂಗಲ ಶಾಖೆ ವ್ಯವಸ್ಥಾಪಕಿ ರಾಗಪ್ರಿಯಾ ಮಾತನಾಡಿ, ಪ್ರತಿಯೊಬ್ಬ ಮಹಿಳೆಯೂ ಬ್ಯಾಂಕ್‌ನಲ್ಲಿ ಖಾತೆ ತೆರೆದು ವ್ಯವಹರಿಸುವಂತಾಗಬೇಕು. ಸಂಘಗಳ ಮೂಲ ಕ ಸಾಲ ಪಡೆದು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಪಡೆದ ಸಾಲವನ್ನು ದುಡಿಮೆ ಬಂಡವಾಳವನ್ನಾಗಿಸಿಕೊಂಡು ಅಭಿವೃದ್ಧಿ ಹೊಂದಬೇಕು. ಎಸ್‌ಬಿಐನಲ್ಲಿ ಹಾಗೂ ಸರ್ಕಾರದ ಎಲ್ಲ ಯೋಜನೆ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಜಾಥಾ: ಧಾನ್ ಫೌಂಡೇಷನ್ ರಾಮನಗರ ವಲಯದ 500ಕ್ಕೂ ಹೆಚ್ಚು ಕಳಂಜಿಯಂ ಸ್ವಸಹಾಯ ಸಂಘದ
ಮಹಿಳಾ ಸದಸ್ಯರಿಂದ ನೆಲಮಂಗಲಮಧುರೈ ರಸ್ತೆಯಲ್ಲಿರುವ ಕವಾಡಿ ಮಠದಿಂದ ಆರಂಭವಾದ ಕಾಲ್ನಡಿಗೆ ಜಾಥಾ ಪೂರ್ಣ ಕುಂಭ ಕಳಶ, ಡೊಳ್ಳು ಕುಣಿತದೊಂದಿಗೆ ಹೊರಟು ನೆಲಮಂಗಲ ಬಸ್ ನಿಲ್ದಾಣದ ಮಾರ್ಗವಾಗಿ ತೆರಳಿ ಬಸವಣ್ಣದೇವರ ಮಠದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮ ತಲುಪಿತು.
ಇದನ್ನೂ ಓದಿ :ಮಾವು ಉತ್ತಮ ಇಳುವರಿ ನಿರೀಕ್ಷೆ
ಬಹುಮಾನ ವಿತರಣೆ: ವಾಕಥಾನ್ ಪ್ರಯುಕ್ತ ಆಯೋಜಿಸಿದ್ದ ರಂಗೋಲಿ, ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾಗಿದ್ದ 20ಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಭಾಗವಹಿಸಿದ್ದ ಎಲ್ಲಾ ಮಹಿಳಾ ಸದಸ್ಯರಿಗೂ ಸಸಿಗಳನ್ನು ವಿತರಿಸಲಾಯಿತು.
ಧಾನ್ ಫೌಂಡೇಷನ್ ರಾಮನಗರ ವಲಯ ಸಂಯೋಜಕಿ ನಾಗರತ್ನ, ಸಂಯೋಜಕಿ ನಾಗರತ್ನ, ಸಿಬ್ಬಂದಿರಾಘವೇಂದ್ರ, ಮೋಹನ್‌ಕುಮಾರ್, ರೇಣುಕಪ್ರಸಾದ್, ಗಿರೀಶ್, ನಯನಶ್ರೀ ದೊಡ್ಡಬಳ್ಳಾಪುರ, ನೆಲಮಂಗಲ, ಕುದೂರು, ಮಾಗಡಿ, ರಾಮನಗರ, ಕನಕಪುರ, ಕೋಡಿಹಳ್ಳಿ ಒಕ್ಕೂಟಗಳ ನಿರ್ದೇಶಕಿಯರು, ಸಂಘದ ಸದಸ್ಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.