ಹೆಸರಘಟ್ಟದಲ್ಲಿ ಕೃತಕ ಬುದ್ಧಿಮತ್ತೆಯಂಥ ಹೈಟೆಕ್ ತಂತ್ರಜ್ಞಾನದ ತೋಟಗಾರಿಕಾ ಪದ್ಧತಿ ಪರಿಚಯ
Team Udayavani, Feb 9, 2021, 4:23 PM IST
ಬೆಂಗಳೂರು: ಕೆಲವೇ ನಿಮಿಷಗಳಲ್ಲಿ ಟನ್ ಗಟ್ಟಲೆ ಈರುಳ್ಳಿ ಕಾಂಡ ಕತ್ತರಿಸಿ ಎಸೆಯುವ ದೈತ್ಯಯಂತ್ರ, ಹಣ್ಣು-ಕಾಯಿಗಳನ್ನು ಸುಲಿಯುವ ಯಂತ್ರ, ಕೃತಕ ಬುದ್ಧಿಮತ್ತೆಯಂತಹ ಹೈಟೆಕ್ ತಂತ್ರಜ್ಞಾನ ಆಧಾರಿತ ಕೃಷಿ ಪದ್ಧತಿ, ಹೊಸ ತಳಿಗಳು ಸೇರಿದಂತೆ ಹೆಸರಘಟ್ಟದಲ್ಲಿ ತೋಟಗಾರಿಕೆ ಲೋಕವೇ ಅನಾವರಣಗೊಂಡಿದೆ.
ಒಂದೆಡೆ ತರಹೇವಾರಿ ಹೂವುಗಳು, ಹಣ್ಣುಗಳು, ತರಕಾರಿ ತಳಿಗಳು ಗಮನಸೆಳೆದರೆ, ಮತ್ತೂಂದೆಡೆ ಯಂತ್ರಗಳು, ತಂತ್ರ ಜ್ಞಾನಗಳು ರೈತರನ್ನು ಬೆರಗುಗೊಳಿಸುತ್ತವೆ. ಅತಿದೊಡ್ಡ ಈ ವರ್ಚುವಲ್ ಮೇಳದ ಪ್ರಮುಖ ಆಕರ್ಷಣೆ ಇಲ್ಲಿವೆ.
ನಿಮ್ಮ ಜಮೀನಿನ ಮಣ್ಣಿನಲ್ಲಿರುವ ತೇವಾಂಶ ಎಷ್ಟು? ಯಾವಾಗ ಎಷ್ಟು ಗೊಬ್ಬರ ಮತ್ತು ನೀರುಣಿಸಬೇಕು? ಬೆಳೆಗೆ ರೋಗಗಳ ಲಕ್ಷಣಗಳಿವೆಯೇ? ಇದೆಲ್ಲವನ್ನೂ ಮುಂಚಿತವಾಗಿಯೇ ರೈತರಿಗೆ ಮಾಹಿತಿ ನೀಡುವ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನ ಬಂದಿದೆ. ಫಸಲ್ ಐಒಟಿ ಇಂತಹದ್ದೊಂದು ತಂತ್ರ ಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಹೆಸರೇ ಸೂಚಿಸುವಂತೆ ಇದು ಹೈಟೆಕ್ ಆಗಿದೆ. ಯಂತ್ರದಲ್ಲಿ ಸೆನ್ಸರ್ ಅಳವಡಿಸಲಾಗಿರುತ್ತದೆ. ಇದು ಮಣ್ಣಿನ ಗುಣಧರ್ಮ ಹಾಗೂ ಪ್ರಸ್ತುತ ಸ್ಥಿತಿಗತಿಯನ್ನು ವಿಶ್ಲೇಷಣೆ ಮಾಡುತ್ತದೆ. ರೈತನ ಜಮೀನಿನಲ್ಲಿರುವ ತಾಪಮಾನ, ತೇವಾಂಶದ ಬಗ್ಗೆ 14 ದಿನಗಳ ಮುನ್ಸೂಚನೆಯನ್ನೂ ಮೊಬೈಲ್ ಮೂಲಕ ನೀಡುತ್ತದೆ. ಅದನ್ನು ಆಧರಿಸಿ ಬೆಳೆಗಳಿಗೆ ಎಷ್ಟು ನೀರುಣಿಸಬೇಕು ಎಂಬುದನ್ನು ಹೇಳುತ್ತದೆ. ಅಷ್ಟೇ ಅಲ್ಲ, ಯಾವ ಗೊಬ್ಬರ ನೀಡಬೇಕು ಎಂಬುದರ ಬಗ್ಗೆಯೂ ಮಾರ್ಗದರ್ಶನ ಮಾಡುತ್ತದೆ.
ಇದರಿಂದ ಸಮಯ ಉಳಿತಾಯದ ಜತೆಗೆ ಅಗತ್ಯವಿದ್ದಷ್ಟು ಸಿಂಪಡಣೆ ಮಾಡುವುದರಿಂದ ರೈತರಿಗೆ ಶೇ. 35ರಷ್ಟು ವೆಚ್ಚ ಉಳಿತಾಯ ಹಾಗೂ ಶೇ. 10ರಿಂದ 35ರಷ್ಟು ಇಳುವರಿ ಹೆಚ್ಚಳ ಆಗುತ್ತದೆ. ಈಗಾಗಲೇ ದೇಶಾದ್ಯಂತ ಒಟ್ಟಾರೆ 600 ಯಂತ್ರಗಳನ್ನು ರೈತರ ಜಮೀನುಗಳಲ್ಲಿ ಅಳವಡಿಸಲಾಗಿದೆ ಎಂದು ಫಸಲ್ ಐಒಟಿ ಎಂ. ಚಿರಾಗ್ ರೆಡ್ಡಿ ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ಅಟೋಮೆಟಿಕ್ ಆಗಿ ನೀರು ಪೂರೈಸುವ ವ್ಯವಸ್ಥೆಯನ್ನೂ ಸೇರಿಸುವ ಚಿಂತನೆ ನಡೆದಿದೆ. ಸೌರವಿದ್ಯುತ್ ಆಧಾರಿತ ಈ ಒಂದು ಯಂತ್ರ ಸುಮಾರು ಎರಡೂವರೆ ಹೆಕ್ಟೇರ್ ಕವರ್ ಮಾಡುತ್ತದೆ. ಸೌರ ವಿದ್ಯುತ್ ಲಭ್ಯವಿಲ್ಲದಿದ್ದರೂ 15 ದಿನಗಳ ಕಾಲ ಇದು ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದರು.
ಸಂಪೂರ್ಣ ಸ್ಟೇನ್‌ಲೆಸ್‌ಸ್ಟೀಲ್‌ನಿಂದ ತಯಾರಿಸಿದ ಈ ಯಂತ್ರಕ್ಕೆ 20-25 ಸಾವಿರ ರೂ. ಆಗುತ್ತದೆ. ಈಗಾಗಲೇ ಹತ್ತು ಯಂತ್ರಗಳು ಮಾರಾಟ ಆಗಿವೆ. ಸಗಟು ರೂಪದಲ್ಲಿ ತಯಾರಿಸಿದರೆ, ಖರ್ಚು ಹತ್ತು ಸಾವಿರಕ್ಕೆ ತಗ್ಗಲಿದೆ ಎಂದು ಕೊಯ್ಲೊತ್ತರ ತಂತ್ರಜ್ಞಾನಗಳ ವಿಭಾಗದ ತಾಂತ್ರಿಕ ಅಧಿಕಾರಿ ಪಿ. ದಯಾನಂದ್ ತಿಳಿಸಿದರು. ಹೂವಿನ ಬೆಳೆಗಳೂ ಗಮನಸೆಳೆಯುತ್ತಿವೆ.
ಹಲಸಿನ ಸಿಪ್ಪೆ ತೆಗೆಯುವ ಯಂತ್ರ
ಹಲಸಿನ ಕಾಯಿ ತಿನ್ನಲು ಇಷ್ಟ. ಆದರೆ, ಅದರ ಸಿಪ್ಪೆ ತೆಗೆಯುವುದೇ ದೊಡ್ಡ ತಲೆನೋವು. ಇದೇ ಕಾರಣಕ್ಕೆ ಹಲಸಿನ ಕಾಯಿಗಳ ಬಗ್ಗೆ ತಾತ್ಸಾರ. ಈ ಸಮಸ್ಯೆಗೆ ಐಐಎಚ್‌ಆರ್ ಒಂದು ಸರಳ ಯಂತ್ರ ಅಭಿವೃದ್ಧಿಪಡಿಸಿದೆ. ಇದು ಎರಡು ನಿಮಿಷಗಳಲ್ಲಿ ಮೂರ್‍ನಾಲ್ಕು ಇಂಚು ಗಾತ್ರದ ಹಲಸಿನ ಕಾಯಿಯನ್ನು ಸುಲಿಯುತ್ತದೆ
ಈರುಳ್ಳಿ ಬೆಳೆ ಸುಲಭ
ಈರುಳ್ಳಿ ಕಾಂಡ ಕತ್ತರಿಸಲು ಸೀಜನ್‌ನಲ್ಲಿ ಕಾರ್ಮಿಕರನ್ನು ಹೊಂದಿಸುವುದೇ ರೈತರಿಗೆ ದೊಡ್ಡ ಸವಾಲು. ಈ ಹಿನ್ನೆಲೆಯಲ್ಲಿ ಕಾಂಡ ಕತ್ತರಿಸುವ ಯಂತ್ರವನ್ನು ಮೇಳದಲ್ಲಿ ಪ್ರದರ್ಶನಕ್ಕಿಡಲಾಗಿದೆ. 30 ಜನ ಕೂಲಿ ಕಾರ್ಮಿಕರು ಇಡೀ ದಿನ ಮಾಡುವ ಕೆಲಸವನ್ನು ಈ ಯಂತ್ರ ಕೇವಲ ಒಂದು ತಾಸಿನಲ್ಲಿ ಮಾಡಿಮುಗಿಸುತ್ತದೆ. ಗಂಟೆಗೆ ಒಂದು ಟನ್ ವಿವಿಧ ಪ್ರಕಾರದ ಈರುಳ್ಳಿ ಕಾಂಡ ಕತ್ತರಿಸುವ ಸಾಮರ್ಥ್ಯ ಹೊಂದಿದೆ. ಸಮಯದ ಜತೆಗೆ ವೆಚ್ಚ ಕೂಡ ರೈತರಿಗೆ ಉಳಿಯುತ್ತದೆ. ಒಂದು ಯಂತ್ರದ ಬೆಲೆ 10 ಲಕ್ಷ ರೂ. ಆಗುತ್ತದೆ. ರೈತರಿಗೆ ಇದರ ಖರೀದಿ ಕಷ್ಟ. ಆದರೆ, ಎಫ್ಪಿಒ ಅಥವಾ ಕೃಷಿ ಇಲಾಖೆಯು ಇದನ್ನು ಖರೀದಿಸಿ, ರೈತರಿಗೆ ಬಾಡಿಗೆ ನೀಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.