ಮತದಾರರಿಗೆ ಮೋಸ ಮಾಡದಂತೆ ಕೆಲಸ ಮಾಡಿ: ವಿದ್ಯಾಧರ ಕಾಂಬಳೆ
ಚಿದಾನಂದ ಅವರಿಗೆ 15 ಮತಗಳು ಬಂದರೆ ಭಾಗಮ್ಮ ಕೊಳ್ಳಿ ಅವರಿಗೆ 6 ಮತಗಳು ಬಂದಿವೆ.
Team Udayavani, Feb 9, 2021, 4:28 PM IST
ಅಫಜಲಪುರ: ತಾಲೂಕಿನ ಮಲ್ಲಾಬಾದ ಗ್ರಾಪಂ ಚುನಾವಣೆಯ ಅಧ್ಯಕ್ಷ, ಉಪಾದ್ಯಕ್ಷರ ಆಯ್ಕೆಯೂ ಬಹಳ ಕುತೂಹಲ ಕೆರಳಿಸಿ ಕೊನೆಗೆ ಕಾಂಗ್ರೆಸ್ ಪಾಲಾಗಿದೆ.
ಕಾಂಗ್ರೆಸ್ ಬೆಂಬಲಿತ ಪರಿಶಿಷ್ಟ ಜಾತಿ ಕ್ಷೇತ್ರದ ಸದಸ್ಯ ಚಿದಾನಂದ ಬಸರಿಗಿಡ ಅಧ್ಯಕ್ಷರಾದರೆ, ಹಿಂದುಳಿದ ವರ್ಗ(ಅ) ಕ್ಷೇತ್ರದ ಬಿಜೆಪಿ ಬೆಂಬಲಿತ ಮಹಿಳಾ ಸದಸ್ಯೆ ಕಲ್ಲವ್ವ ಬೀರಪ್ಪ ಈರಕರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಶಿವಶರಣಪ್ಪ, ಪಿಡಿಒ ವಿದ್ಯಾಧರ ಕಾಂಬಳೆ ತಿಳಿಸಿದ್ದಾರೆ.
ಒಟ್ಟು 21 ಸದಸ್ಯ ಬಲದ ಮಲ್ಲಾಬಾದ ಗ್ರಾ.ಪಂ ಅಧ್ಯಕ್ಷ, ಉಪಾದ್ಯಕ್ಷರ ಆಯ್ಕೆಗೆ ಬಹಳಷ್ಟು ತಿಕ್ಕಾಟಗಳು ನಡೆದಿದ್ದವು. ಕೊನೆಗೆ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗುವ ಮೂಲಕ ಎರಡು ಪಕ್ಷಗಳು ಪಂಚಾಯಿತಿ ಹಂಚಿಕೊಳ್ಳುವಂತಾಗಿದೆ. ಅಧ್ಯಕ್ಷಗಿರಿಗೆ ಕಾಂಗ್ರೆಸ್ ಚಿದಾನಂದ ಬಸರಿಗಿಡ ಹಾಗೂ ಭಾಗಮ್ಮ ಭೀಮು ಕೊಳ್ಳಿ ಸ್ಪ ರ್ಧಿಸಿದ್ದರು. ಇವರಲ್ಲಿ ಚಿದಾನಂದ ಅವರಿಗೆ 15 ಮತಗಳು ಬಂದರೆ ಭಾಗಮ್ಮ ಕೊಳ್ಳಿ ಅವರಿಗೆ 6 ಮತಗಳು ಬಂದಿವೆ. ಉಪಾಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಲಕ್ಷ್ಮೀ ಸುರೇಶ ಜಮಾದಾರ ಅವರಿಗೆ ಕೇವಲ 7 ಮತಗಳು ಬಂದಿದ್ದು, ವಿಜೇತ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಲ್ಲವ್ವ ಬೀರಪ್ಪ ಈರಕರ ಅವರಿಗೆ 14 ಮತಗಳು ಬರುವ ಮೂಲಕ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದರು.
ಆಯ್ಕೆಯ ಬಳಿಕ ಶಾಸಕ ಎಂ.ವೈ. ಪಾಟೀಲ್ ಅವರಿಗೆ ಸನ್ಮಾನಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಶಾಸಕ ಎಂ.ವೈ. ಪಾಟೀಲ್ ಮಾತನಾಡಿ, ಮತದಾರರು ನಿಮ್ಮ ಮೇಲೆ ನಂಬಿಕೆ ಇಟ್ಟು ಮತ ನೀಡಿದ್ದಾರೆ. ಅದಕ್ಕೆ ಮೋಸವಾಗದ ರೀತಿಯಲ್ಲಿ ಕೆಲಸ ಮಾಡಿ ಎಂದು ಸಲಹೆ ನೀಡಿದರು. ಜಿ.ಪಂ ಉಪಾಧ್ಯಕ್ಷ ಶೋಭಾ ಶಿರಸಗಿ, ಮಾಜಿ ಸದಸ್ಯ ಪ್ರಕಾಶ ಜಮಾದಾರ, ಶರಣು ಕುಂಬಾರ, ಮಲ್ಲಿಕಾರ್ಜುನ ಖರ್ಗೆ, ಸಿದ್ದು ಶಿರಸಗಿ, ನಾಗೇಶ ಕೊಳ್ಳಿ, ಬಾಬುಗೌಡ ಬಳಗುಂಪಿ, ಭಾಗಪ್ಪ
ಕೊಳ್ಳಿ, ವಿಠಲ್ ಸಿಂಗೆ, ಶಾಂತಮಲ್ಲಿ ಹಡಲಗಿ, ಜೈಭೀಮ ಬಟಗೇರಿ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.