ಉಪಚುನಾವಣೆಗೆ ಟಿಕೆಟ್ ಕೊಟ್ಟರೆ ಸ್ಪರ್ಧಿಸಲು ಸಿದ್ಧ: ರಮೇಶ ಕತ್ತಿ
Team Udayavani, Feb 9, 2021, 6:20 PM IST
ಪಾಲಬಾವಿ: ಬಿಜೆಪಿ ಹೈಕಮಾಂಡ್ ನನಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿದರೆ ಸ್ಪರ್ಧಿಸಲು ರೆಡಿ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಸಂಸದ ರಮೇಶ ಕತ್ತಿ ಹೇಳಿದ್ದಾರೆ.
ಪಾಲಬಾವಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮದ ಪಿಕೆಪಿಎಸ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬರುವ ಎಂ.ಪಿ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ದಿ. ಸುರೆಶ ಅಂಗಡಿಯವರ ಕುಟುಂಬದವರಿಗೆ ಮೊದಲ ಆದ್ಯತೆ ನೀಡಬೇಕು. ಹೊರಗಿನವರಿಗೆ ಟಿಕೆಟ್ ನೀಡುವ ಹಿರಿಯರ ಲೆಕ್ಕಾಚಾರ ಇದ್ದರೆ ನನಗೆ ಕೊಡಿರಿ. 2019ರ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭಾ ಟಿಕೆಟ್ ವಂಚಿತನಾಗಿದ್ದೇನೆ. ರಾಜ್ಯಸಭೆಯ ಟಿಕೆಟ್ ಕೊಡುತ್ತೇವೆ ಎಂದಿದ್ದರು. ಯಾವ ಕಾರಣಕ್ಕೆ ಟಿಕೆಟ್ ಕೊಡಲಿಲ್ಲ ಎಂಬುದು ಇನ್ನೂ ತಿಳಿದಿಲ್ಲ. ಪಕ್ಷದ ನಿಷ್ಠಾವಂತರಾದ ಈರಣ್ಣ ಕಡಾಡಿ ಅವರಿಗೆ ಟಿಕೆಟ್ ನೀಡಿ ರಾಜ್ಯಸಭೆ ಸದಸ್ಯರನ್ನಾಗಿ ಮಾಡಿದ್ದು ಸಂತೋಷದ ವಿಷಯ ಎಂದರು.
ಚಿಕ್ಕೋಡಿ ಲೋಕಸಭಾ ಸಂಸದನಾಗಿ, ಬಿಡಿಸಿಸಿ ಅಧ್ಯಕ್ಷನಾಗಿ ಜಿಲ್ಲೆಯನ್ನು ಬಲ್ಲವನಾಗಿದ್ದೇನೆ. ನಮ್ಮ ಹಿಂದಿನ ಕೆಲಸವನ್ನು ಗಮನಿಸಿ ನನಗೆ ಬೆಳಗಾವಿ ಕ್ಷೇತ್ರದ ಎಂ.ಪಿ.ಟಿಕೆಟ್ ನೀಡಿದರೆ ಚುನಾವಣೆಗೆ ಸ್ಪ ರ್ಧಿಸುವೆ ಎಂದರು.
ಇದನ್ನೂ ಓದಿ :ಸಮಸ್ಯೆಗಳ ಪರಿಹಾರಕ್ಕೆ ಶೀಘ್ರ ಸ್ಪಂದನೆ
ಸಂಘದ ಅಧ್ಯಕ್ಷ ಗುರುಪಾದ ಮರಡಿ, ಉಪಾಧ್ಯಕ್ಷ ನಿಂಗಪ್ಪ ಸಪ್ತಸಾಗರ ಸನ್ಮಾನಿಸಿದರು. ಚಂದ್ರಯ್ಯ ಹಿರೇಮಠ, ಮಾರುತಿ ಗೋಡಿ, ರಮೇಶ ಕರೋಶಿ, ರಾಜು ಮಾದರ, ಬರಮಪ್ಪ ತಳವಾರ, ಅಣ್ಣಾಸಾಬಗೌಡ ಪಾಟೀಲ, ಗಿರೆಪ್ಪ ಬಳಗಾರ, ಶಿವಾನಂದ ತೇಗೂರ, ಶ್ರೀಶೈಲ ಮರಡಿ, ಸಂಜು ತೇಗೂರ, ಮುಖ್ಯ ಕಾರ್ಯನಿರ್ವಾಹಕ ಸಿದ್ದಪ್ಪ ಗುಗ್ಗರಿ, ಲಕ್ಷ್ಮಣ ರಾಗಿ, ಮಹಾದೇವ ಮರಡಿ, ರೆಹಮಾನ್ ಮಿರ್ಜಿ, ಭೀಮಶಿ ತೇಗೂರ, ಶಿವಾನಂದ ಕಾಡಶೆಟ್ಟಿ, ಪರಪ್ಪ ಗೋಡಿ, ಬಸಪ್ಪ ತೇಗೂರ, ಇಲಾಹಿ ಕಾಗವಾಡ, ರಾಮಪ್ಪ ಕಾಡಶೆಟ್ಟಿ, ಬರಮಪ್ಪ ನಿಂಗನೂರ, ಗಿರೇಪ್ಪ ತೇಗೂರ, ಬರಮಪ್ಪ ಮಾನಶೆಟ್ಟಿ, ಪ್ರಕಾಶ ಪಾಟೀಲ, ಶ್ರೀಶೈಲ ಗೋಡಿ, ಹನುಮಂತ ಚಿಕ್ಕೋಡಿ, ಈರಪ್ಪ ಕಾಪಶಿ, ಅಬ್ಟಾಸ ಬಿರಾದಾರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
ಮಂಗಳೂರಿಗೆ ವಾಟರ್ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.