ನಳಪಾಕ -1; ಖರೆ ಅಂದ್ರ ಅಡಗಿ ಮಾಡೋದು ಒಂದು ಕಲೆ…
ಅಲ್ಲ ಒಮ್ಮೊಮ್ಮೆ ಎಮರ್ಜೆನ್ಸಿ ಸಹಾಯ ಆಗ್ತವ ಇವು ಆ್ಯಪ್ಸ್
Team Udayavani, Feb 12, 2021, 12:31 PM IST
“ಮನು ಏನ್ ಅಡಗಿ ಮಾಡೀಲೇ. ನನಗ ಭಾಳಾ ಬ್ಯಾಸರ ಬಂದದ ಅಡಗಿ ಮಾಡ್ಲಿಕ್ಕೆ . ದಿನಾ ಮುಂಜಾನೆ ಸಂಜೀಕ ರಾತ್ರಿ ಎಷ್ಟ್ ಮಾಡ್ಬೇಕ್ಲೆ..” ಅಂತ ನನ್ನ್ ಗೆಳತಿ ಮನಸ್ವಿಗೆ ಫೋನ್ ನ್ಯಾಗ್ ಹೇಳಿಕತ್ತಿದ್ದೆ . ಆಕಿನು ಆ ಕಡ ಇಂದ ಅಂದ್ದು ” ಹೂನ್ ಲೆ ರಶ್ಮಿ ನಾನು ಈಗ ಮನೆಗೆ ಬಂದೆ ನೋಡು. ಕೆಟ್ ಹಶಿವಿ ಆಗೇದ. ಮನ್ಯಾಗ್ ತಿನ್ಲಿಕ್ಕೆ ಏನು ಇಲ್ಲ. ನಾನ ಮಾಡ್ಬೇಕ್ ಈಗ ಏನಾರ. ಅನ್ನಕ್ ಇಟ್ಟೇನಿ. ಅದಕ್ ಸಾದ್ನಿ ಏನ್ ಮಾಡ್ಲಿಲೆ” ಅಂದ್ಲು .
ನಾ ಅಂದೆ ಝುಣಕಾ ಮಾಡು ಸುಮ್ನ್. ಈಜೀ ಆಗ್ತದೆ ಅಂತ್. ಅಷ್ಟ್ ಮಾಡ್ತೀನಿ ಲೆ ಅಂದ್ಲು. ನಾನು ಫೋನ್ ನ್ಯಾಗ ಮಾತಾಡ್ಕೋಂತ್ ಒಂದು ಸಾರ್ ಮಾಡಿದೆ. ಬೆಂಗಳ್ಳೂರ್ ನ್ಯಾಗ್ ಇರೋ ವರ್ಕಿಂಗ್ ವುಮನ್ ದು ಇದು ದಿನದ್ ಕಥಿ. ಮುಂಜಾನೆ ಎದ್ದ್ ಕೂಡ್ಲೇ ಕಾಡುವ ಮೊಟ್ಟ್ ಮೊದ್ಲ ಪ್ರಶ್ನೆ ಏನ್ ಅಂದ್ರ ಇವತ್ತಿನ್ ಅಡುಗೆ ಏನ್ ? ಬಿಲಿಯನ್ ಡಾಲರ್ ಪ್ರಶ್ನೆ ಅಂತಾರ್ ಅಲ್ಲ ? ಇದಕ ಇರ್ಬೇಕ್ ಅನಸ್ತದ.
ಮನ್ನೆ ನಮ್ಮ ಬಳಗದ ಒಬ್ರು ಮಾಮಾ ಅನ್ಲಿಕತ್ತಿದ್ರು ನನ್ ಹೆಂಡ್ತಿ ಇದ್ದಾಗ್ ಮನ್ಯಾಗ ಟೈಮ್ ಟು ಟೈಮ್ ಅಡಗಿ, ಊಟ ಆಗ್ತಿತ್ತು. ನಾ ಸಾಮಾನ ತಂದ್ ಹಾಕೋದ್ ಅಷ್ಟ, ಎಲ್ಲ ಅಕೀನ್ ಮಾಡ್ತಿದ್ಲು. ಈಗ ಮಗಾ ಸೋಸಿ ಇಬ್ರೂ ನೌಕ್ರಿ ಹೋಗ್ತಾರ. ಅಡಗ್ಯಾಕಿನ್ನ ಇಟ್ಟಾರ್. ಆಕೀ ಮಾಡಿದ್ದು, ಸುಮ್ನ ತಿನಬೇಕ್ ನೋಡ್ವಾ “ ಅಂತ ಅಂದ್ರು ಪಾಪ್.
ನಮ್ ಜನರೇಶನ್ ದವ್ರಿಗೆ ಇದೊಂದ್ ದೊಡ್ಡ ಸಮಸ್ಯೆ ಆಗೇದ ಅಂದ್ರ ತಪ್ಪಿಲ್ಲ. ಇದ್ರಾಗ್ ಸರಿ ತಪ್ಪು ಅನ್ಲಿಕ್ಕು ಆಗುದಿಲ್ಲ. ಮನಿಗೆ ಎರಡ್ನೇದವ್ರು ಬಿಟ್ಟ್ ಮೂರ್ನೇದವ್ರು ಬಂದ್ರ ಎದೀನ್ ಒಡಿತದ. ಹೆಂಗ್ ಮಾಡೋದ ಪಾ ಅಡಗಿ ಅಂತ.
ಬೆಂಗಳೂರು ಮಂದಿಗೆ ಟ್ರ್ಯಾಫಿಕ್ ನ್ಯಾಗ್ ಸಿಕ್ಕೋಂಡ್ ಮನೆಗೆ ಬರೋದ್ರಾಗ್ ಕೆಟ್ಟ ಸುಸ್ತ್ ಆಗಿರ್ತದ. ಮತ್ತ ಹೆಣ್ಮಕ್ಳು ಹೊರಗ ಕೆಲ್ಸ್ ಮಾಡಿ ಬಂದ್ರೂ ಅಡಗಿ ಮನಿ ಕೆಲ್ಸ ತಪ್ಪಿದ್ದಲ್ಲ. ಹಿಂಗಾಗಿ ಅಡಗಿ ಮಾಡೋ ಅಭಿರುಚಿ ಇರುದಿ್ಲ್. ಯಾವಾಗರ ಒಮ್ಮೊಮ್ಮೆ ಚೊಲೊ ಮೂಡ್ ನಾಗ್ ಇದ್ರ ಮಸ್ತ್ ಅಡಗಿ ಮಾಡ್ಬೇಕ್ ಅಂತ ಅನಸ್ತದ.
ಖರೆ ಅಂದ್ರ ಅಡಗಿ ಮಾಡೋದು ಒಂದು ಕಲೆ. ಎಲ್ಲರ್ಗೂ ಅದ ಬರುದಿಲ್ಲ. ಕಣ್ಣಳತಿ ಮ್ಯಾಲೆ ಎಲ್ಲಾ ಗೊತ್ ಆಗ್ಬೇಕ್. ಅಡಗಿ ಮಾಡೋ ಮುಂದ ಮನಸು ಆರಾಮ್ ಇರ್ಬೇಕು. ಎಲ್ಲರ ಲಕ್ಷ ಕೊಟ್ಟ್ ಮಾಡಿದ್ರಾ ಏನಾರ ಒಂದ್ ಆಗ್ತದ. ಉಪ್ಪು ಜಾಸ್ತಿ ಆಗೋದು, ಇಲ್ಲ ಅಂದ್ರ ಹೊತ್ತೋದು, ಏನಾರ ಒಂದ್ ಆಗಿ ಕೆಟ್ಟ ಬಿಡ್ತದ. ಆಮೇಲೆ ಅದನ್ ತಿನ್ಲಿಕ್ಕೆ ಇನ್ನ ತ್ರಾಸ್. ಅದಕ ಅಮ್ಮ, ಅಜ್ಜಿ ಅಂತಿರ್ತಾರ, ಜಳಕಾ ಮಾಡೀನೆ ಅಡಗಿ ಮನ್ಯಾಗ್ ಹೋಗ್ಬೇಕು ಅಂತ. ಮನಸು ಅರಾಮ ಇದ್ರ ಅಡಗಿ ರುಚಿ ಆಗ್ತದ .ತಿನ್ನಾವ್ರಿಗೆ ಹಿಡಸ್ತದ. ಆದ್ರ ನಮ್ ಅವಸ್ರಕ್ ನಾವು ಇದನ್ನೆಲ್ಲ ನೋಡಾಂಗಿಲ್ಲ.
ಈಗಂತೂ ಮೊಬೈಲ್ನಾಗ್ ಊಟ ಆರ್ಡರ್ ಮಾಡ್ಲಿಕ್ಕೆ ನಾನಾ ನಮೂನಿ ಆ್ಯಪ್ಸ್ ಬಂದಾವ.ಸ್ವಿಗ್ಗಿ, ಜೂಮ್ಯಾಟೊ, ಫುಡ್ ಪಾಂಡ್, ಹಿಂಗ್ ಇನ್ನರಗಡ ಅವ. ಖರೆ ಹೇಳ್ತೀನಿ ಚಹಾ ಕಾಪಿ ಮೊದಲ್ ಮಾಡಿ ಎಲ್ಲ ಸಿಗ್ತಾವ ಅದರಾಗ. ನಾ ಅನ್ಕೊಂಡೆ ಅಷ್ಟೂ ಮನ್ಯಾಗ ಮಾಡ್ಲಿಲ್ಲ ಅಂದ್ರ ಅಡಗಿ ಮನಿ ಯದಕ ಬೇಕು ? ಒಲಿ ಯದಕ ಬೇಕ ಅಂತ. ಅಲ್ಲ ಒಮ್ಮೊಮ್ಮೆ ಎಮರ್ಜೆನ್ಸಿ ಸಹಾಯ ಆಗ್ತವ ಇವು ಆ್ಯಪ್ಸ್.ನಾನು ಆರ್ಡ್ರ್ ಮಾಡೇನಿ. ಅಂದ್ರು ಮನ್ಯಾಗ ಮಾಡಿದ ರುಚಿ ಬ್ಯಾರೆನ. ಒಟ್ನ್ಯಾಗ್ ನಮ್ಮ ಮಂದಿಗೆ ಮಡ್ಕೋಂಡ್ ತಿನ್ಲಿಕ್ಕೆ, ತಿನಸ್ಲಿಕ್ಕೆ ದೊಡ್ ಕೆಲ್ಸ್ ಆಗೇದ್.
ಇನ್ ನಮ್ಮ ಮಕ್ಕಳ್ ಕಾಲಕ್ಕ್ ರೋಬ್ಯಾಟ್ಸ್ ಬಂದಿರ್ತಾವ್, ಅವ ಎಲ್ಲಾ ಕೆಲ್ಸ ಮಾಡಿ, ಊಟ ಮಾಡ್ಸಿ, ಅಡಗಿ ಮನೀ ಸ್ಚಚ್ಛ್ ಮಾಡಿ, ನಮ್ಮನ್ನು ರೆಡಿ ಮಾಡಿ ಕೂಡಸ್ತಾವ್ . ಏನ್ ಅಂತೀರಿ ? ( ಅಲ್ಲ ಒಮ್ಮೊಮ್ಮೆ ಬ್ಯಾಸರ್ ಬಂದಾಗ ಹಿಂತಾ ರೋಬಾಟ್ಸ್ ಬೇಕು ಅನಸ್ತದ ಮತ್ತ )
ಮುಂದುವರಿಯುವುದು)
ರಶ್ಮಿ ಅಜಯ್
ಧಾರವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.