“ಸ್ಕಿಮ್ಮಿಂಗ್’: ಎಟಿಎಂ ಬಳಕೆದಾರರೇ ಎಚ್ಚರ! ಸೈಬರ್ ಅಪರಾಧ ಹೆಚ್ಚಳ
Team Udayavani, Feb 10, 2021, 7:00 AM IST
ಮಂಗಳೂರು: ಕರಾವಳಿ ಸಹಿತ ರಾಜ್ಯದ ಹಲವೆಡೆ ಎಟಿಎಂ “ಸ್ಕಿಮ್ಮಿಂಗ್’ ನಡೆಸಿ ಬ್ಯಾಂಕ್ ಖಾತೆಗಳಿಂದ ಹಣ ಎಗರಿಸುವ ದುಷ್ಕೃತ್ಯ ಹೆಚ್ಚುತ್ತಿದ್ದು, ಎಟಿಎಂ ಬಳಕೆದಾರರು ಹೆಚ್ಚು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.
ಮಂಗಳೂರು ನಗರ ಮತ್ತು ಹೊರ ವಲಯದ ಒಟ್ಟು 3 ಎಟಿಎಂಗಳಲ್ಲಿ “ಸ್ಕಿಮ್ಮಿಂಗ್’ ನಡೆಸಿ ಎಟಿಎಂ ಬಳಕೆದಾರರ ಖಾತೆಗಳಿಂದ ಹಣ ವಿದ್‌ಡ್ರಾ ಮಾಡಿರುವ ಘಟನೆ ಈಚೆಗೆ ಸಂಭವಿಸಿದೆ. ಉಡುಪಿ ಭಾಗದಲ್ಲೂ ಇಂಥ ಪ್ರಕರಣ ವರದಿಯಾಗಿವೆ.
ಎಟಿಎಂ ಯಂತ್ರಗಳಲ್ಲಿ ಸೂಕ್ಷ್ಮ ಉಪಕರಣ ಅಳ ವಡಿಸಿ ಎಟಿಎಂ ಕಾರ್ಡ್‌ಗಳ ಮಾಹಿತಿ ಕದ್ದು ಅನಂತರ ನಕಲಿ ಕಾರ್ಡ್ ತಯಾರಿಸಿ ಹಣ ವಿದ್‌ಡ್ರಾ ಮಾಡುವುದಕ್ಕೆ “ಸ್ಕಿಮ್ಮಿಂಗ್’ ಎನ್ನಲಾಗುತ್ತದೆ. ಇದಕ್ಕಾಗಿ ವಂಚಕರು ಅಳವಡಿಸುವ ಉಪಕರಣವು ಬಳಕೆದಾರರು ಎಟಿಎಂ ಕಾರ್ಡ್ ಸ್ವೆ„ಪ್ ಮಾಡಿದಾಗ ಅದರಲ್ಲಿರುವ 16 ಅಂಕಿಗಳ ಸಂಖ್ಯೆ ಮತ್ತು ಸಿವಿಸಿ ಸಂಖ್ಯೆಗಳನ್ನು ದಾಖಲಿಸಿಕೊಳ್ಳುತ್ತದೆ. ನಗರದ ಚಿಲಿಂಬಿ, ನಾಗುರಿ ಮತ್ತು ಕುಳಾçಯ ತಲಾ ಒಂದು ಎಟಿಎಂಗಳಲ್ಲಿ ಈ ರೀತಿ ಸ್ಕಿಮ್ಮಿಂಗ್ ನಡೆದಿದ್ದು, ವಂಚಕರು ನೂರಾರು ಗ್ರಾಹಕರ ಲಕ್ಷಾಂತರ ರೂಪಾಯಿಗಳನ್ನು ಎಗರಿಸಿದ್ದಾರೆ.
ಹಳೆ ಮಾದರಿ ಎಟಿಎಂಗಳು?
ಈ ಕೃತ್ಯಗಳು ನಡೆದಿರುವ ಎಟಿಎಂಗಳೆಲ್ಲ ಹಳೆಯ ಮಾದರಿಯವು ಎಂದು ತಿಳಿದು ಬಂದಿದೆ. ಈ ಎಟಿಎಂ ಗಳಲ್ಲಿ ಸ್ಕಿಮ್ಮಿಂಗ್ ಉಪಕರಣವನ್ನು ಜೋಡಿಸಲು ವಂಚಕರಿಗೆ ಸಾಧ್ಯವಾಗುತ್ತದೆ. ಈ ಎಟಿಎಂಗಳಲ್ಲಿ ಭದ್ರತ ಸಿಬಂದಿಯೂ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ವೆಪ್ ಎಟಿಎಂಗಳು ಅಸುರಕ್ಷಿತ?
ಎನ್‌ಸಿಆರ್ ಎಟಿಎಂಗಳು, ಅಂದರೆ ಕಾರ್ಡ್ ಸ್ವೆಪ್ ಮಾಡಬಹುದಾದ ಯಂತ್ರಗಳು ಸುರಕ್ಷಿತವಲ್ಲ.
ಬ್ಯಾಂಕ್‌ನವರೇನು ಮಾಡಬಹುದು?
ಬ್ಯಾಂಕ್‌ಗಳು ಎಟಿಎಂ ಬಳಕೆದಾರ ರಿಗೆ ಗರಿಷ್ಠ ಸುರಕ್ಷತೆ ಒದಗಿಸುವ ಆವಶ್ಯಕತೆ ಎದುರಾಗಿದೆ.
– ಸ್ಕಿಮ್ಮಿಂಗ್ ಸಾಧ್ಯವಾಗದ ಹೊಸ ಮಾದರಿಯ ಎಟಿಎಂ ಅಳವಡಿಸಬೇಕು.
– ಎಟಿಎಂಗಳಲ್ಲಿ ದಿನದ 24 ತಾಸು ಭದ್ರತ ಸಿಬಂದಿ ಇರಬೇಕು.
– ಸಿಸಿ ಕೆಮರಾ ಅಳವಡಿಸಿ ನಿರಂತರ ನಿರ್ವಹಿಸುತ್ತಿರಬೇಕು.
– ಎಟಿಎಂ ಬಳಕೆ, ಸುರಕ್ಷೆ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಬೇಕು.
– ದೂರು ನೀಡಲು ಬರುವ ಗ್ರಾಹಕರಿಗೆ ತುರ್ತಾಗಿ ಸ್ಪಂದಿಸಬೇಕು, ಅಗತ್ಯ ದಾಖಲೆ (ಸ್ಟೇಟ್‌ಮೆಂಟ್) ನೀಡಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸಹಕರಿಸಬೇಕು.
ಗ್ರಾಹಕರೇನು ಮಾಡಬೇಕು?
– ಎಟಿಎಂನಲ್ಲಿ ಅನುಮಾಸ್ಪಾದವಾದ ಉಪಕರಣ ಜೋಡಣೆಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು.
– ಅನುಮಾನ ಬಂದರೆ ಅಲ್ಲಿ ಕಾರ್ಡ್ ಬಳಕೆ ಮಾಡದೆ ಕೂಡಲೇ ಹತ್ತಿರದ ಬ್ಯಾಂಕ್ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು.
– ಸ್ಕಿಮ್ಮಿಂಗ್ ಅನುಮಾನ ಬಂದರೆ ಎಟಿಎಂ ಕಾರ್ಡ್ ಬ್ಲಾಕ್ ಮಾಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.