ಸಾವಿರ ಕೋ.ರೂ. ದಾಟಿದ ರಾಮಮಂದಿರ ನಿಧಿ!
Team Udayavani, Feb 10, 2021, 2:40 AM IST
ಉಡುಪಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣದ ನಿಧಿ ಸಂಗ್ರಹ ಕಾರ್ಯ ಜ. 15ರಿಂದ ದೇಶಾದ್ಯಂತ ನಡೆಯುತ್ತಿದ್ದು ಫೆ. 8ರ ವರೆಗೆ 950 ಕೋ.ರೂ. ಸಂಗ್ರಹವಾಗಿದೆ. ಫೆ. 9ರಂದು ಇದು ಸಾವಿರ ಕೋ.ರೂ.ಗೆ ಏರಿರುವ ಸಾಧ್ಯತೆ ಇದೆ.
ಪೇಜಾವರ ಮಠದಲ್ಲಿ ಮಂಗಳವಾರ ನಾಗರಿಕರ ದೇಣಿಗೆ ಸ್ವೀಕರಿಸಿದ ಸಂದರ್ಭ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅಯೋಧ್ಯೆ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಯಾದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ದಕ್ಷಿಣ ಭಾರತವಲ್ಲದೆ ಇಡೀ ದೇಶದಲ್ಲಿಯೇ ಸಿರಿವಂತರು, ನಾಡಿನ ಪ್ರಥಮ ಪ್ರಜೆಗಳಿಂದ ಹಿಡಿದು, ಜನಸಾಮಾನ್ಯರ ವರೆಗೆ, ಹಿಂದೂಗಳಲ್ಲದೆ ಇತರ ಮತೀಯ ರಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದರು.
ಫೆ. 27ರ ವರೆಗೆ ನಿಧಿ ಸಂಗ್ರಹ ಅಭಿಯಾನ ಮುಂದುವರಿಯಲಿದೆ. ಕೇವಲ ರಾಮ ಮಂದಿರ ಮಾತ್ರವಲ್ಲದೆ ರಾಮರಾಜ್ಯ ಕಟ್ಟುವ ಗುರಿ ಇದೆ. ಹಣವನ್ನು ಹೇಗೆ ಬಳಸಬೇಕೆಂದು ಟ್ರಸ್ಟ್ ನಿರ್ಧರಿಸುತ್ತದೆ. ಈಗ ಉತVನನದ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
ಜಾತಿ ಮೀಸಲಾತಿ ಸರಿಯಲ್ಲ ಜಾತಿ ಮೀಸಲಾತಿ ಕುರಿತು ಕೇಳಿದ ಪ್ರಶ್ನೆಗೆ, “ಇದು ಮೂಲದಲ್ಲಿಯೇ ತಪ್ಪಾಗಿದೆ. ಜಾತಿ ಆಧಾರದಲ್ಲಿ ಮೀಸಲಾತಿ ಎಂದು ಯಾವಾಗ ಆರಂಭಿಸಿದರೋ ಅಲ್ಲಿಯೇ ತಪ್ಪಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಘೋಷಣೆ ಮಾಡಿದ್ದರೆ ಹೀಗೆ ಆಗಲು ಸಾಧ್ಯವೇ ಇರಲಿಲ್ಲ. ಸೌಲಭ್ಯ ಯಾರಿಗೆ ಬೇಡ? ಎಲ್ಲರಿಗೂ ಬೇಕು. ಮೀಸಲಾತಿ ಆದ ಬಳಿಕ ಒಳ ಮೀಸಲಾತಿ ಬೇಕೆಂಬ ಮತ್ತು ಅವರಿಗೆ ಬೇಡ, ಇವರಿಗೆ ಬೇಕು ಎಂಬಿತ್ಯಾದಿ ಮಾತುಗಳು ಆರಂಭವಾ ಗುತ್ತದೆ. ಈಗ ನಾವು ಸಾಕಷ್ಟು ಮುಂದೆ ಹೋಗಿಯಾಗಿದೆ. ಇದನ್ನು ಸರಿಪಡಿಸು ವುದು ಹೇಗೆ’ ಎಂದರು.
ರಾಮೋತ್ಸವ ಸಂಭ್ರಮ
ಮುಂಬಯಿ, ತಮಿಳುನಾಡು, ಕೇರಳ, ಕರ್ನಾಟಕದ ವಿವಿಧೆಡೆ ಸಂಚಾರ ಮಾಡಿದ್ದೇವೆ. ಇದರಲ್ಲಿ ಮುಖ್ಯವಾಗಿ ಬಸ್ತಿ ಪ್ರದೇಶಗಳಲ್ಲಿ ಪಾದಯಾತ್ರೆ ಮತ್ತು ಸಂತ ಸಮಾವೇಶಗಳಲ್ಲಿ ಪಾಲ್ಗೊಂಡಿರುವುದಾಗಿದೆ. ವಸತಿ ಪ್ರದೇಶಗಳಲ್ಲಿ ರಾಮೋತ್ಸವ ರೀತಿಯಲ್ಲಿ ಜನರು ಸಂಭ್ರಮಿಸುತ್ತಿದ್ದಾರೆ ಎಂದರು.
ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ಪಕ್ಷಾತೀತವಾಗಿ ರಾಮಭಕ್ತರಿಂದ ನಿಧಿ ಸಂಗ್ರಹ ನಡೆಯುತ್ತಿದೆ. ಇದು ಯಾವುದೇ ಸಂಘಟನೆಯವರು, ಪಕ್ಷದವರ ನಿರ್ದೇಶನವಲ್ಲ. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಾನುಸಾರ ಮಂದಿರ ನಿರ್ಮಾಣ ನಡೆಯುತ್ತಿದೆ ಎಂದರು.
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಆಂಧ್ರ ಪ್ರದೇಶದಲ್ಲಿ ಧ್ವಂಸಗೊಂಡ ದೇವಸ್ಥಾನ, ರಥವನ್ನು ಪುನರ್ನಿಮಿಸುತ್ತಿದ್ದೇವೆ ಎಂದು ಆಂಧ್ರಪ್ರದೇಶದ ಧಾರ್ಮಿಕ ದತ್ತಿ ಸಚಿವರು ನಮ್ಮಲ್ಲಿ ಬಂದು ತಿಳಿಸಿದರೆಂದರು. ರೈತರ ಹೆಸರಿನಲ್ಲಿ ಸಂವಿಧಾನಕ್ಕೆ ಅಪಚಾರವಾದರೆ ಸಲ್ಲದು. ಸರಕಾರ ಮಾತುಕತೆಗೆ ಸಿದ್ಧ ಎಂದರೂ ಹೋಗದೆ ಇದ್ದರೆ ಏನು ಮಾಡುವುದು? ಇದು ಇದ್ದಕ್ಕಿದ್ದಂತೆ ಮಾಡಿದ ಕಾನೂನು ಅಲ್ಲ ಎಂದು ಸರಕಾರವೇ ಹೇಳುತ್ತಿದೆಯಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ
Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ
PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.