ಮೀನುಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಪ್ರಯತ್ನ : ಸಚಿವ ಎಸ್. ಅಂಗಾರ ಭರವಸೆ
Team Udayavani, Feb 10, 2021, 5:30 AM IST
ಮಲ್ಪೆ: ಮೀನುಗಾರಿಕೆ ಬಂದರು ಮತ್ತು ಮೀನುಗಾರರ ಸಮಸ್ಯೆಗಳೇನು ಎಂಬ ಬಗ್ಗೆ ಸಮಗ್ರ ವಾಗಿ ಅಧ್ಯಯನ ನಡೆಸುವುದಲ್ಲದೆ ಇಲಾಖೆಯ ಅಧಿಕಾರಿಗಳು, ಮೀನುಗಾರ ಮುಖಂಡರ ಜತೆ ಚರ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಮೀನುಗಾರಿಕೆ ಹಾಗೂ ಬಂದರು ಸಚಿವ ಎಸ್. ಅಂಗಾರ ಭರವಸೆ ನೀಡಿದರು.
ಅವರು ಮಂಗಳವಾರ ಮಲ್ಪೆ ಮೀನುಗಾರಿಕೆ ಬಂದರು, ಸ್ಲಿಪ್‌ವೇ ಮತ್ತು ಟೆಬ್ಮಾ ಶಿಪ್ ಯಾರ್ಡ್ ಸ್ಥಳವನ್ನು ವೀಕ್ಷಿಸಿ ಬಳಿಕ ಮೀನುಗಾರರ ಮುಖಂಡ ರೊಂದಿಗೆ ಸಮಾಲೋಚನೆ ನಡೆಸಿದರು.
ಬೇಡಿಕೆ ಈಡೇರಿಕೆಗೆ ಮನವಿ
ಮಲ್ಪೆ ಆಳಸಮುದ್ರ ಮೀನುಗಾರರ ಸಂಘದ ಅಧ್ಯಕ್ಷ ಕಿಶೋರ್ ಡಿ. ಸುವರ್ಣ ಮಾತನಾಡಿ, ಹೊರ ರಾಜ್ಯದಲ್ಲಿ ಮೀನುಗಾರಿಕೆ ನಡೆಸುವಾಗ ಅಲ್ಲಿನ ಮೀನುಗಾರರಿಂದ ಅಗುವ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸಬೇಕು, ಮೀನುಗಾರಿಕೆ ಬೋಟ್‌ಗಳಿಗೆ ನೀಡಲಾಗುತ್ತಿರುವ ಡೀಸೆಲ್ ಪ್ರಮಾಣವನ್ನು 300 ಲೀ.ನಿಂದ 500 ಲೀ.ಗೆ ಹೆಚ್ಚಿಸಿ ತಿಂಗಳವಾರು ಬದಲು ವಾರ್ಷಿಕ ಕೋಟದಲ್ಲಿ ನೀಡಬೇಕು, ಡೀಸೆಲ್ ಸಹಾಯಧನ ಈ ಹಿಂದಿನಂತೆ ಡೆಲಿವರಿ ಪಾಯಿಂಟ್‌ನಲ್ಲಿ ಸಿಗಬೇಕು ಎಂದು ಮನವಿ ಮಾಡಿದರು.
ಮೀನು ಮಾರಾಟ ಫೇಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಅವರು 3ನೇ ಹಂತದ ಬಂದರಿನಲ್ಲಿ ನಿರ್ಮಿಸಿದ ಸ್ಲಿಪ್‌ವೇ ನಿರ್ವಹಣೆಯನ್ನು ಮೀನುಗಾರರ ಸಂಘಕ್ಕೆ ನೀಡಬೇಕು ಮತ್ತು ಟೆಬಾ¾ ಶಿಪ್‌ಯಾರ್ಡ್ ಅವಧಿ ಮುಗಿದ ಬಳಿಕ ಆ ಜಾಗವನ್ನು ಕರಾರಿನಂತೆ ಮೀನುಗಾರಿಕೆ ಬಂದರಿನ ಅಭಿವೃದ್ಧಿಗೆ ಮಾತ್ರ ನೀಡಬೇಕೆಂದು ಮನವಿ ಮಾಡಿದರು.
ಸಮ್ಮಾನ
ಮಲ್ಪೆ ಮೀನುಗಾರ ಸಂಘ ಮತ್ತು ಮೀನು ಮಾರಾಟ ಫೆಡರೇಶನಿನ ವತಿಯಿಂದ ಸಚಿವರನ್ನು ಸಮ್ಮಾನಿಸಲಾಯಿತು.
ಮೀನುಗಾರರ ಸಂಘದ ಉಪಾಧ್ಯಕ್ಷರಾದ ರಮೇಶ್ ಕೋಟ್ಯಾನ್, ವಿಟuಲ ಕರ್ಕೇರ, ನಾಗರಾಜ್ ಬಿ. ಕುಂದರ್, ಪ್ರಧಾನ ಕಾರ್ಯದರ್ಶಿ ಸುಭಾಸ್ ಮೆಂಡನ್, ಕೋಶಾಧಿಕಾರಿ ಶಿವಾನಂದ, ಮೀನುಗಾರ ಮುಖಂಡರಾದ ಸತೀಶ್ ಕುಂದರ್, ರಾಮಚಂದ್ರ ಕುಂದರ್, ಸಾಧು ಸಾಲ್ಯಾನ್, ಗೋಪಾಲ ಆರ್.ಕೆ., ನಾರಾಯಣ ಕರ್ಕೇರ, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ, ಎಂಜಿನಿಯರ್ ಮಂಜೇಗೌಡ, ಉಪ ನಿರ್ದೇಶಕ ಗಣೇಶ್ ಕೆ., ಹಿರಿಯ ಸಹಾಯಕ ನಿರ್ದೇಶಕ ಶಿವಕುಮಾರ್‌ಉಪಸ್ಥಿತರಿದ್ದರು.
ಶೀಘ್ರ ಜಾರಿಗೆ ಪ್ರಯತ್ನ
ಫೆ. 10ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಮೀನುಗಾರಿಕೆ ಇಲಾಖೆಗೆ ಮತ್ತು ಬಜೆಟ್‌ಗೆ ಸಂಬಂಧಪಟ್ಟ ಸಭೆ ಇದೆ. ಆ ಸಭೆಯಲ್ಲಿ ಡೀಸೆಲ್ ಸಬ್ಸಿಡಿಯನ್ನು ಈ ಹಿಂದಿನಂತೆ ಡೆಲಿವರಿ ಪಾಯಿಂಟ್‌ನಲ್ಲಿ ದೊರೆಯುವಂತೆ ಮತ್ತು ಸ್ಲಿಪ್‌ವೇ ನಿರ್ವಹಣೆಯನ್ನು ಮೀನುಗಾರ ಸಂಘಕ್ಕೆ ನೀಡುವ ಇನ್ನಿತರ ವಿಷಯಗಳನ್ನು ಅವರ ಗಮನಕ್ಕೆ ತಂದು ಇವೆರಡನ್ನು ಅದಷ್ಟು ಶೀಘ್ರದಲ್ಲಿ ಜಾರಿಗೊಳಿಸುವಂತೆ ಪ್ರಯತ್ನ ಮಾಡಲಾಗುವುದು ಎಂದು ಸಚಿವ ಎಸ್. ಅಂಗಾರ ಅವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.