ದೇವರ ಮೀನು ಸಂರಕ್ಷಣೆಗೆ ಬೇಕು ಶಾಶ್ವತ ಯೋಜನೆ
ತೊಡಿಕಾನ: ಸ್ಥಳೀಯರ ಬೇಡಿಕೆ ಈ ಬಾರಿ ಈಡೇರಿತೇ?
Team Udayavani, Feb 10, 2021, 12:40 PM IST
ಅರಂತೋಡು: ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ಸಂಬಂಧ ಪಟ್ಟ ಮತ್ಸé ತಟಾಕದಲ್ಲಿರುವ ದೇವರ (ಮಹಷೀರ್) ಜಾತಿಯ ಮೀನುಗಳು ಅಳಿವಿನಂಚಿನಲ್ಲಿದ್ದು, ಇವುಗಳ ಸಂರಕ್ಷಣೆಗೆ ಶಾಶ್ವತ ಯೋಜನೆಯೊಂದರ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.
ತೊಡಿಕಾನ ದೇಗುಲದಿಂದ ಸುಮಾರು ನೂರು ಮೀಟರ್ ದೂರದಲ್ಲಿ ಮತ್ಸ್ಯ ತೀರ್ಥ ಹೊಳೆ ಇದೆ. ಇದರಲ್ಲಿ ಸಾವಿರಾರು ಮಹಷೀರ್ ಜಾತಿಯ ಮೀನುಗಳಿದ್ದು ಇವುಗಳನ್ನು ದೇವರ ಮೀನುಗಳೆಂದು ಕರೆಯಲಾಗುತ್ತದೆ. ಬೇಸಗೆಯಲ್ಲಿ ನೀರಿನ ಕೊರತೆ ಎದುರಾಗುತ್ತದೆ. ಹೀಗಾಗಿ ದೇವ ಸ್ಥಾನದವರು ಮೀನುಗಳಿರುವ ಜಾಗದಿಂದ ಸುಮಾರು ಎರಡೂವರೆ ಕಿ.ಮೀ. ದೂರದ ದೇವರಗುಂಡಿ ಜಲಪಾತ ಸಮೀಪದ ಹೊಳೆಯಿಂದ ಪೈಪ್‌ಗ್ಳ ಮೂಲಕ ಮತ್ಸ್ಯ ತಟಾಕಕ್ಕೆ ನೀರು ಪೂರೈಸುತ್ತಾರೆ. ಇದರಿಂದ ಮೀನುಗಳ ಜೀವಕ್ಕೆ ಉಂಟಾಗುವ ಅಪಾಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಾದರೂ ಬಿಸಿಲ ತಾಪಕ್ಕೆ ಮೀನುಗಳು ಒಮ್ಮೊಮ್ಮೆ ಅಸುನೀಗುತ್ತವೆ. ಆದ್ದರಿಂದ ಮೀನಿಗಳ ಸಂರಕ್ಷಣೆಗೆ ಶಾಶ್ವತ ಯೋಜನೆ ಅಗತ್ಯವಿದೆ ಎನ್ನುವ ಆಗ್ರಹ ಕೇಳಿ ಬಂದಿದೆ.
ಪ್ರವಾಸೋದ್ಯಮ ಪಟ್ಟಿಯಲ್ಲಿ ಮಹಷೀರ್ ಜಾತಿಯ ಮೀನುಗಳು ತೊಡಿಕಾನದ ದೇವರಗುಂಡಿ ಜಲಪಾತ ಮತ್ತು ಮಹಷೀರ್ ಜಾತಿಯ ಮೀನುಗಳಿರುವ ಜಾಗ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ.ಆದರೆ ಪ್ರವಾಸೋದ್ಯಮ ಇಲಾಖೆ ಇತ್ತ ಕಡೆ ಗಮನ ಹರಿಸಿ ಮೀನುಗಳ ಸಂರಕ್ಷಣೆಗೆ ಶಾಶ್ವತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ. ಮೀನುಗಾರಿಕೆ ಇಲಾಖೆಯೂ ಈ ಅಪರೂಪದ ಜಾತಿಯ ಮೀನುಗಳ ಸಂರಕ್ಷಣೆಯ ಬಗ್ಗೆ ಶಾಶ್ವತ ಯೋಜನೆ ರೂಪಿಸದೆ ಅಸಡ್ಡೆ ದೋರಣೆ ತಾಳಿದೆ ಎಂದು ಸ್ಥಳೀಯರು ದೂರುತ್ತಾರೆ.
ಗರಿಗೆದರಿದ ಭರವಸೆ :
ಈ ಬಾರಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಅಂಗಾರ ಅವರು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆಯ ಸಚಿವರಾಗಿ ಆಯ್ಕೆಗೊಂಡಿರುವುದು ಸ್ಥಳೀಯರಲ್ಲಿ ನಿರೀಕ್ಷೆ ಮೂಡಿಸಿದೆ.
ಸ್ಥಳೀಯರ ನಂಬಿಕೆ :
ವಿಷ್ಣುವು ಮತ್ಸ್ಯರೂಪ ತಾಳಿ ಮೇಲೆದ್ದ ಸ್ಥಳ ಇದಾಗಿದೆ ಎಂಬ ನಂಬಿಕೆ ಇಲ್ಲಿದೆ. ಈ ಹಿನ್ನಲೆಯಲ್ಲಿ ಇಲ್ಲಿನ ಮೀನುಗಳನ್ನು ಯಾರೂ ತಿನ್ನುವುದಿಲ್ಲ. ಮತ್ಸ್ಯ ತೀರ್ಥ ಹೊಳೆಯಲ್ಲಿ ಮೀನು ಹಿಡಿಯುವುದನ್ನು ನಿಷೇಧಲಾಗಿದೆ. ಇಲ್ಲಿಯ ದೇವರ ಮೀನುಗಳಿಗೆ ಆಹಾರ ಹಾಕುತ್ತೆವೆ ಎಂದು ಹರಕೆ ಹೇಳಿಕೊಂಡರೆ ಚರ್ಮ ರೋಗ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಸ್ಥಳೀಯರಲ್ಲಿದೆ.
ಮೀನುಗಳಿಗೆ ಪ್ರತಿ ವರ್ಷ ಬೇಸಗೆಯಲ್ಲಿ ನೀರಿನ ಕೊರತೆ ಉಂಟಾಗಿ ಸಮಸ್ಯೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಮೀನುಗಾರಿಕೆ ಇಲಾಖೆಯಲ್ಲಿ ಮಹಷೀರ್ ಮೀನುಗಳ ಸಂರಕ್ಷಣೆಗೆ ಇರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸೂಕ್ತ ಯೋಜನೆ ರೂಪಿಸಲಾಗುವುದು.-ಎಸ್.ಅಂಗಾರ, ಸಚಿವರು, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ
ತೇಜೇಶ್ವರ್ ಕುಂದಲ್ಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.