ನನ್ನ ಗಮನಕ್ಕೆ ತರದೆ ನಿವೇಶನ ಮಾರಾಟ: ವಿಶ್ವನಾಥ್
ಬಿಡಿಎ ಅಧ್ಯಕ್ಷ ವರ್ಸಸ್ ಆಯುಕ್ತ!, ಬಿಡಿಎ ಅಧ್ಯಕ್ಷರಿಂದ ಆಯುಕ್ತರ ಮೇಲೆ ಆರೋಪ
Team Udayavani, Feb 10, 2021, 1:18 PM IST
ಬೆಂಗಳೂರು: ಬಿಡಿಎ ಸಗಟು ನಿವೇಶನ ಹಂಚಿಕೆ ಮಾಡಬಾರದು ಎಂದು ಮುಖ್ಯಮಂತ್ರಿಗಳ ಸೂಚನೆ ಇದೆ. ಆದರೆ, ನಮ್ಮ ಗಮನಕ್ಕೆ ತರದೆ ಬಿಡಿಎ ಆಯುಕ್ತರು ಮತ್ತು ಸಹಾಯಕ ಅಧಿಕಾರಿಗಳು ತರಾತುರಿ ಯಲ್ಲಿ ಹಂಚಿಕೆಗೆ ಮುಂದಾಗಿದ್ದಾರೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ನೇರವಾಗಿ ತಮ್ಮ ಆಯು ಕ್ತರ ವಿರುದ್ಧ ಆರೋಪಿಸಿದ್ದಾರೆ. ಬೆನ್ನಿಗೇ, ಅಧ್ಯಕ್ಷರು ಇಲ್ಲಸಲ್ಲದಆರೋಪ ಮಾಡುತ್ತಿದ್ದಾರೆ ಎಂದು ಆಯುಕ್ತ ಮಹಾದೇವ್ ಪ್ರತ್ಯಾರೋಪ ಮಾಡಿದರು.
ಭವಾನಿ ಸೊಸೈಟಿಗೆ ಸಗಟು ನಿವೇಶನ ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ದಂತೆ ಬಿಡಿಎ ಕಚೇರಿಯಲ್ಲಿ ಮಂಗಳವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ವಿಶ್ವನಾಥ್ ಮಾತನಾಡಿದರು.
ಸಗಟು ನಿವೇಶನ ಹಂಚಿಕೆ ಮಾಡಬಾರದು ಎಂದು ಮುಖ್ಯಮಂತ್ರಿಗಳ ಸೂಚನೆ ಇದೆ. ಆದರೆ, ನಮ್ಮಗಮನಕ್ಕೆ ತರದೆ ಬಿಡಿಎ ಆಯುಕ್ತರು ಮತ್ತುಸಹಾಯಕ ಅಧಿಕಾರಿಗಳು ತರಾತುರಿಯಲ್ಲಿ “ಭವಾನಿಗೃಹ ನಿರ್ಮಾಣ ಸಹಕಾರ ಸಂಘ’ ಎಂಬ ಸಂಸ್ಥೆಗೆಬರೋಬ್ಬರಿ 12 ಎಕರೆ 36 ಗುಂಟೆ ಭೂಮಿ ಮಂಜೂರು ಮಾಡಿದ್ದಾರೆ. ಹಗರಣಗಳಿಗೆ ಸಂಬಂಧಿಸಿದ ಕಡತಗಳನ್ನು ಆಯುಕ್ತರು ನೀಡುತ್ತಿಲ್ಲ ಎಂದು ಆರೋಪಿಸಿದರು.
ರಾತ್ರೋರಾತ್ರಿ ಸಿಡಿ ಸಿದ್ಧ!: ಭವಾನಿ ಸೊಸೈಟಿ ನಿವೇಶನ ಕುರಿತು ನನಗೆ ಪರಿಶೀಲನೆಗೆ ಕಡತ ಕಳುಹಿಸಿ ಎಂದು ಕೇಳಿದ್ದರೂ ಲೆಕ್ಕಿಸದ ಆಯುಕ್ತರು ರಾತ್ರಿ 10.45 ರವರೆಗೆ ಎಂಜಿನಿಯರ್‌ಗಳನ್ನು ಕೂರಿಸಿಕೊಂಡು ಖಚಿತ ಅಳತೆ ವರದಿ (ಕರೆಕr… ಡೈಮೆನ್‌ಷನ್ ರಿಪೋರ್ಟ್- ಸಿಡಿಆರ್) ಅನ್ನು ಸಿದ್ಧಪಡಿಸಿದ್ದಾರೆ.ಫೈಲ್ ಕೇಳಿದರೆ ಕೊಡದ ಆಯುಕ್ತರು ರಾತ್ರೋರಾತ್ರಿಸಿಡಿ ಸಿದ್ಧಪಡಿಸುವ ಅಗತ್ಯವಾದರೂ ಏನಿತ್ತು?ತರಾತುರಿಯಲ್ಲಿ ಸಂಘಕ್ಕೆ ಭೂಮಿ ಮಂಜೂರುಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದರೆ ಎಂದಾದರೆ ಇದರ ಹಿಂದೆ ದಟ್ಟವಾದ ಅನುಮಾನಗಳು ವ್ಯಕ್ತವಾಗುತ್ತಿವೆ. ಒಂದು ವೇಳೆ ಆಯುಕ್ತರೇ ಆಸಕ್ತಿ ವಹಿಸಿ ಇದನ್ನು ಮಾಡಿದ್ದೇ ಆದಲ್ಲಿ ಅವರ ಬಗ್ಗೆಯೇ ಅನುಮಾನಗಳು ಬರುವುದು ಸಹಜ ಎಂದರು.
ಸಗಟು ನಿವೇಶನ ಹಂಚಿಕೆ ಎಂಬುದೇ ದೊಡ್ಡ ಅವ್ಯವಹಾರ: ಸಗಟು ನಿವೇಶನ ಹಂಚಿಕೆ ಎಂದರೆ ಅದರಲ್ಲಿ ಅವ್ಯವಹಾರ ಹೆಚ್ಚಿದೆ ಎಂದರ್ಥ. ಈವರೆಗೂ ಬಿಡಿಎದಲ್ಲಿ ನಡೆದಿರುವ ಎಲ್ಲಾ ಸಗಟು ನಿವೇಶ ಹಂಚಿಕೆಯಲ್ಲಿ ದೊಡ್ಡಅವ್ಯವಹಾರ ಆಗಿವೆ. ಇದರಿಂದ 2,000 ಕೋಟಿ ರೂ. ಹೆಚ್ಚು ಬಿಡಿಎಗೆ ನಷ್ಟವಾಗಿದೆ.ಈ ಕುರಿತು ತನಿಖೆ ನಡೆಸಲು ಈಗಾಗಲೇ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಗೆ ಮಾಡಲಾಗುತ್ತಿದೆ. ಮೊದಲಹಂತದಲ್ಲಿ ಒಟ್ಟು ಏಳು ಸೊಸೈಟಿಗಳ ಸಗಟು ನಿವೇಶನಹಂಚಿಕೆ ಕುರಿತು ತನಿಖೆ ಆರಂಭಿಸುವಂತೆಅಗತ್ಯ ದಾಖಲಾತಿಯನ್ನು ಮುಖ್ಯಮಂತ್ರಿಗಳಿಗೆನೀಡಲಾಗುವುದು. ಒಂದು ವಾರದಲ್ಲಿಯೇ ತನಿಖೆಆರಂಭಿಸಲು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಈವರೆಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ (ಬಿಡಿಎ) ಸಗಟು ನಿವೇಶನ ಹಂಚಿಕೆಗಳು ಸಂಪೂರ್ಣ ಅವ್ಯವಹಾರ ದಿಂದ ಕೂಡಿದ್ದು, ಪ್ರಾಧಿಕಾರಕ್ಕೆ ಕೋಟ್ಯಂತರರೂ. ನಷ್ಟವಾಗುತ್ತಿದೆ. ಇವುಗಳ ವಿರುದ್ಧ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್ ಐಟಿ) ಒಂದು ವಾರದಲ್ಲಿಯೇ ನೇಮಿಸಲು ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಗುವುದು ಎಂದು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ತಿಳಿಸಿದರು.
ಅಸಹಕಾರಕ್ಕೆ ಅಸಹಾಯಕತೆ ವ್ಯಕ್ತಪಡಿಸಿದ ವಿಶ್ವನಾಥ್ ;
ಬಿಡಿಎನಲ್ಲಿ ಸಗಟು ನಿವೇಶನ ಹಂಚಿಕೆ ಕುರಿತು 11 ಪತ್ರ ಬರೆದಿದ್ದೇನೆ. ಆದರೆ, ಯಾವುದೇ ಪತ್ರಕ್ಕೂ ಆಯುಕ್ತ ಮಹದೇವ್ ಉತ್ತರ ನೀಡಿಲ್ಲ. ಅವರ ಕಚೇರಿಗೆ ನಾನೇಖುದ್ದಾಗಿ ತೆರಳಿದರು ಸೂಕ್ತ ಸ್ಪಂದನೆ ಇಲ್ಲ. ಜತೆಗೆಎಲ್ಲವನ್ನು ಸ್ವಯಂ ನಿರ್ಧಾರ ಕೈಗೊಳ್ಳುತ್ತಾರೆ. ಅಧ್ಯಕ್ಷರ ಮಾತಿಗೂ ಕಿಮ್ಮತ್ತಿಲ್ಲದಂತಾಗಿದೆ. ಅಲ್ಲದೆ, ಮುಖ್ಯಮಂತ್ರಿಗಳ ಸೂಚನೆಯನ್ನು ಪಾಲಿಸುತ್ತಿಲ್ಲ.ಸಂಪೂರ್ಣವಾಗಿ ಬಿಡಿಎ ಅಧಿಕಾರಿಗಳು ಅಸಹಕಾರನೀಡುತ್ತಿದ್ದಾರೆ ಎಂದು ಅಧ್ಯಕ್ಷ ವಿಶ್ವನಾಥ್ ಅಸಹಾಯಕತೆ ವ್ಯಕ್ತಪಡಿಸಿದರು.
ಏನಿದು ಭವಾನಿ ಸೊಸೈಟಿ ಸಗಟು ನಿವೇಶನ ಹಂಚಿಕೆ? :
ಬಿಡಿಎಯಿಂದ ಭವಾನಿ ಸೊಸೈಟಿ ಜಾಗ ಒತ್ತುವರಿ ಹಿನ್ನೆಲೆ ಪರಿಹಾರವಾಗಿ ಹಣ ನೀಡಲಾಗಿತ್ತು. ಜತೆಗೆ ಪರಿಹಾರವಾಗಿ ಸೊಸೈಟಿಯು ಭೂಮಿ ಕೇಳಿ 1987ರಲ್ಲಿಬಿಡಿಎಗೆ ಅರ್ಜಿ ನೀಡಲಾಗಿತ್ತು. ಆಗ, ಆ ಅರ್ಜಿ ಸ್ವೀಕರಿಸಿ, 32.5 ಎಕರೆ ಜಾಗನೀಡುವುದಾಗಿ ಪ್ರಾಧಿಕಾರ ಸಭೆ ತೀರ್ಮಾನ ಕೈಗೊಂಡಿತ್ತು. ಕೂಡಲೇ 20 ಎಕರೆಜಾವನ್ನು ಕೊಡಲಾಗಿತ್ತು. ಈ ಮತ್ತೆ 2017ರಲ್ಲಿ ಭವಾನಿ ಸೊಸೈಟಿ ಭೂಮಿಗಾಗಿಮತ್ತೆ ಅರ್ಜಿ ಹಾಕಿ ಬಾಕಿ 12.5 ಎಕರೆ ಜಮೀನು ಕೇಳಿದೆ. ಸ್ವಹಿತಾಸಕ್ತಿ ಮತ್ತುಅವ್ಯವಹಾರದಲ್ಲಿ ಭಾಗಿಯಾಗಿರುವ ಕೆಲ ಅಧಿಕಾರಿಗಳು ಪ್ರಮುಖ ಬಡಾವಣೆಗಳಲ್ಲಿ ನಿವೇಶನ ನೀಡಲು ಮುಂದಾಗಿದ್ದಾರೆ.
ಸುಪ್ರೀಂ ಕೋರ್ಟ್‌ಗೆ ಹೋಗೋಣ ;
ಭವಾನಿ ಸೊಸೈಟಿಗೆ ನಿವೇಶನ ನೀಡಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ. ಆದರೆ, 40 ವರ್ಷದ ಹಿಂದಿನ ದರಕ್ಕೆ ಸಾಧ್ಯವಿಲ್ಲ ಎಂಬ ಕುರಿತು ಮೇಲ್ಮನವಿ ಸಲ್ಲಿಸಲು ಬಿಡಿಎಗೆ ಅವಕಾಶವಿದೆ. ರೈತರಿಗೆ ಒಂದು ಸಣ್ಣ ನಿವೇಶನ ನೀಡುವ ಸಂಬಂಧ ಸುಪ್ರೀಂ ಕೋರ್ಟ್ ಹೋಗ್ತಾರೆ. ಆದರೆ, 500 ಕೋಟಿ ರೂ. ಜಾಗದ ಯಾಕೆ ಮೇಲ್ಮನವಿ ಸಲ್ಲಿಸುತ್ತಿಲ್ಲ. ಈ ಮೂಲಕ ಅವ್ಯವಹಾರ ನಡೆದಿರುವುದು ಸ್ಪಷ್ಟವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಯುಕ್ತರ ಸ್ಪಷ್ಟನೆ; ಪ್ರತ್ಯಾರೋಪ :
ಭವಾನಿ ಸೊಸೈಟಿಗೆ 20 ಎಕರೆ ಜಮೀನು ಹಂಚಿಕೆ ಮಾಡಿದ್ದೇವೆ. ಉಳಿದ ಜಮೀನು ಕೊಡಲು ಕೋರ್ಟ್ ಸೂಚಿಸಿದೆ. ಇದು ಸಗಟು ಹಂಚಿಕೆ ಅಲ್ಲ. ಜಾಗಕ್ಕೆ ಬದಲಾಗಿ ಜಾಗವನ್ನು ಕೊಡುತ್ತಿದ್ದೇವೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಬಿಡಿಎ ಕ್ರಮದಂತೆ, ಕೋರ್ಟ್ ತೀರ್ಪಿನಂತೆ ನಡೆದುಕೊಳ್ಳಲಾಗಿದೆ. ಸದ್ಯ ಸಗಟು ನಿವೇಶನ ವಿಚಾರ ದೊಡ್ಡ ಮಟ್ಟಕ್ಕೆ ಹೋಗಿದೆ. ಕೆಲವೊಂದು ವಿಚಾರದ ಬಗ್ಗೆ ಅಧ್ಯಕ್ಷರು ಪತ್ರ ಬರೆದಿದ್ದರು. ನನಗೆ ಅಧ್ಯಕ್ಷರು ಯಾವ ಸಭೆಗೆ ಕರೆದಿಲ್ಲ ಇಲ್ಲ. ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆಯುಕ್ತ ಮಹಾದೇವ್ ಪ್ರತ್ಯಾರೋಪ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.