ತೊಡಿಕಾನ: ಅಳಿವಿನಂಚಿನಲ್ಲಿರುವ ಮಹಷೀರ್ ಜಾತಿಯ ಮೀನುಗಳಿಗೆ ಬೇಕು ಶಾಶ್ವತ ಸಂರಕ್ಷಣೆ ಯೋಜನೆ

ಸ್ಥಳೀಯರ ಬೇಡಿಕೆ ಈ ಬಾರಿ ಈಡೇರಿತೆ ?

Team Udayavani, Feb 10, 2021, 3:45 PM IST

fish-1

ಅರಂತೋಡು: ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ಸಂಬಂಧಪಟ್ಟ ಮತ್ಸ್ಯತಟಾಕದಲ್ಲಿರುವ ದೇವರ (ಮಹಷೀರ್) ಜಾತಿಯ ಮೀನುಗಳು ಅಳಿವಿನಂಚಿನಲ್ಲಿದ್ದು ಇವುಗಳ ಸಂರಕ್ಷಣೆಗೆ ಶಾಶ್ವತ ಯೋಜನೆಯಯೊಂದರ  ಅಗತ್ಯತೆ ಕಾಡುತ್ತಿದೆ.

ತೊಡಿಕಾನ ದೇವಳದಿಂದ ಸುಮಾರು ನೂರು ಮೀಟರ್ ದೂರದಲ್ಲಿ ಮತ್ಸ್ಯ ತೀರ್ಥ ಹೊಳೆ ಇದೆ. ಇದರಲ್ಲಿ ಸಾವಿರಾರು ಮಹಷೀರ್ ಜಾತಿಯ ಮೀನುಗಳಿದ್ದು ಇವುಗಳನ್ನು ಇಲ್ಲಿ ದೇವರ ಮೀನುಗಳೆಂದು ಕರೆಯುತ್ತಾರೆ. ಈ ಮೀನುಗಳಿಗೆ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗಿ ಮೀನುಗಳು ಸಾವನ್ನಪ್ಪುತ್ತವೆ. ನೀರಿನ ಕೊರತೆಯಿಂದ ಮೀನುಗಳು ಸಾವನ್ನಪ್ಪುವುದನ್ನು ತಪ್ಪಿಸಲು ದೇವಳದವರು ಮೀನುಗಳಿರುವ ಜಾಗದಿಂದ ಸುಮಾರು ಎರಡುವರೆ ಕಿ.ಮೀ ದೂರದ ದೇವರಗುಂಡಿ ಜಲಪಾತ ಸಮೀಪದ ಹೊಳೆಯಿಂದ ಪೈಪುಗಳ ಮೂಲಕ ನೀರು ತಂದು ಮತ್ಸ್ಯತಟಾಕಕ್ಕೆ ನೀರು ಹಾಕುವ ಕೆಲಸವನ್ನು ಬೇಸಿಗೆಯಲ್ಲಿ ಮಾಡುತ್ತಿದ್ದಾರೆ.ಇದರಿಂದ ಮೀನುಗಳ ಜೀವಕ್ಕೆ ಉಂಟಾಗುವ ಅಪಾಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.ಆದರೂ ಬೇಸಿಗೆಯಲ್ಲಿ ಉರಿ ಬಿಸಿಲ ತಾಪಕ್ಕೆ ಮೀನುಗಳು ಒಮ್ಮೊಮ್ಮೆ ಅಸುನೀಗುತ್ತಿವೆ.

ಪ್ರವಾಸೋದ್ಯಮ ಪಟ್ಟಿಯಲ್ಲಿ ಮಹಷೀರ್ ಜಾತಿಯ ಮೀನುಗಳು

ತೊಡಿಕಾನದ ದೇವರಗುಂಡಿ ಜಲಪಾತ ಮತ್ತು ಇಲ್ಲಿಯ ಮಹಷೀರ್ ಜಾತಿಯ  ಮೀನುಗಳಿರುವ ಜಾಗ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ. ಆದರೆ ಪ್ರವಾಸೋದ್ಯಮ ಇಲಾಖೆ ಇತ್ತ ಕಡೆ ಗಮನ ಹರಿಸಿ ಮೀನುಗಳ ಸಂರಕ್ಷಣೆಗೆ ಶಾಶ್ವತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ. ಮೀನುಗಾರಿಕೆ ಇಲಾಖೆಯೂ ಈ ಅಪರೂಪದ ಮಹಷೀರ್ ಜಾತಿಯ ಮೀನುಗಳ ಸಂರಕ್ಷಣೆಯ ಬಗ್ಗೆ ಶಾಶ್ವತ ಯೋಜನೆ ರೂಪಿಸದೆ ದಿವ್ಯ ನಿರ್ಲಕ್ಷ್ಯ ದೋರಣೆ ತಾಳಿದೆ. ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಕನಿಷ್ಠ ವರ್ಷಕ್ಕೆ  ಎರಡು ಬಾರಿಯಾದರೂ ತೊಡಿಕಾನಕ್ಕೆ ಬೇಟಿ ನೀಡಿ ಮೀನುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಗರಿಗೆದರಿದ  ಹೊಸ ಭರವಸೆ

ಈ ಬಾರಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಅಂಗಾರರು ಮೀನುಗಾರಿಕೆ, ಬಂದರು ಹಾಗೂ  ಒಳನಾಡು ಜಲಸಾರಿಗೆಯ ಸಚಿವರಾಗಿ ಆಯ್ಕೆಗೊಂಡಿದ್ದು, ಇದೀಗ ಸಚಿವರು ಈ ಮಹಷೀರ್ ಜಾತಿಯ ಮೀನುಗಳನ್ನು ಸಂರಕ್ಷಣೆ ಮಾಡುವ ಯೋಜನೆಯನ್ನು ಮಂಜೂರು ಮಾಡಬಹುದೆಂದು  ಭರವಸೆ ಇಟ್ಟುಕೊಂಡಿದ್ದಾರೆ. ಈ ಭರವಸೆ ಎಷ್ಟರಮಟ್ಟಿಗೆ ಈಡೇರುತ್ತದೆ ಎಂದು ಕಾದು ನೋಡಬೇಕಾಗಿದೆ.

ಈ ಮಹಷೀರ್ ಜಾತಿಯ  ಮೀನುಳನ್ನು ಇಲ್ಲಿ ದೇವರ ಮೀನುಗಳೆಂದು ಕರೆಯುವುದಕ್ಕೆ  ಕಾರಣವೆನೆಂದರೆ, ಇಲ್ಲಿ ವಿಷ್ಣುವು ಮತ್ಸ್ಯರೂಪ ತಾಳಿ ಮೇಲೆದ್ದ ಸ್ಥಳ ಇದಾಗಿದೆ ಎಂದು ಐತಿಹ್ಯಗಳು ಹೇಳುತ್ತವೆ. ಈ ಹಿನ್ನಲೆಯಲ್ಲಿ  ಇಲ್ಲಿ ಯಾರು ಈ ಮೀನುಗಳನ್ನು ತಿನ್ನುವುದಿಲ್ಲ. ಮತ್ಸ್ಯ ತೀರ್ಥ ಹೊಳೆಯಲ್ಲಿ ಮೀನು ಹಿಡಿಯುವುದನ್ನು ನಿಷೇಧಲಾಗಿದೆ.

ಚರ್ಮ ರೋಗಕ್ಕೆ ಇಲ್ಲಿಯ ದೇವರ (ಮಹಷೀರ್ ) ಮೀನುಗಳಿಗೆ ಆಹಾರ ಹಾಕುತ್ತೆವೆ ಎಂದು ಹರಕೆ ಹೇಳಿಕೊಂಡರೆ ಅದು ಗುಣಮಖವಾಗುತ್ತದೆ ಎಂಬ ನಂಬಿಕೆ ಸ್ಥಳೀಯರಲ್ಲಿದೆ. ಮೀನುಗಳನ್ನು ನೋಡಲು ನೂರಾರು ಭಕ್ತರು ಪ್ರವಾಸಿ ಪ್ರೇಮಿಗಳು ದಿನ ನಿತ್ಯ ಆಗಮಿಸುತ್ತಿದ್ದಾರೆ.

ತೊಡಿಕಾನ ದೇವಳಕ್ಕೆ ಸಂಬಂಧಪಟ್ಟ ಮೀನುಗಳಿಗೆ ಪ್ರತಿ ವರ್ಷ  ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗಿ ಅವುಗಳ ಪ್ರಾಣಕ್ಕೆ ಸಮಸ್ಯೆ ಉಂಟಾಗುವ ವಿಷಯ ನಾನು ತಿಳಿದಿದ್ದೇನೆ. ಮೀನುಗಾರಿಕೆ ಇಲಾಖೆಯಲ್ಲಿ ಮಹಷೀರ್ ಮೀನುಗಳ ಸಂರಕ್ಷಣೆಗೆ ಇರುವ ಯೋಜನೆಗಳ ಬಗ್ಗೆ ಮಾಹಿತಿ ಪಡಕೊಂಡು ಸೂಕ್ತ ಯೋಜನೆ ರೂಪಿಸಲಾಗುವುದು.

ಎಸ್.ಅಂಗಾರ

ಸಚಿವರು ಮೀನುಗಾರಿಕೆ, ಬಂದರು ಹಾಗೂ  ಒಳನಾಡು ಜಲಸಾರಿಗೆ

 

ತೊಡಿಕಾನದ ದೇವಳಕ್ಕೆ ಸಂಬಂಧಟ್ಟ ದೇವರ (ಮಹಷೀರ್) ಜಾತಿಯ ಮೀನುಗಳಿಗೆ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗಿ ಮೀನುಗಳ ಜೀವಕ್ಕೆ ಸ‌ಮಸ್ಯೆಯಾಗುತ್ತದೆ. ಇದಕ್ಕೆ ಮೀನುಗಾರಿಕಾ ಇಲಾಖೆಯಿಂದ ಶಾಶ್ವತ ಯೋಜನೆಯನ್ನು ರೂಪಿಸುವ ಅಗತ್ಯ ಇದೆ.

ಆನಂದ ಕಲ್ಲಗದ್ದೆ

ವ್ಯವಸ್ಥಾಪಕರು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ

 

  • ತೇಜೇಶ್ವರ್ ಕುಂದಲ್ಪಾಡಿ

ಟಾಪ್ ನ್ಯೂಸ್

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ

Naxaliam-End

Naxal Surrender: ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಳಂತೂರಿನಲ್ಲಿ ಮನೆ ದೋಚಿದ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ?

ಬೋಳಂತೂರಿನಲ್ಲಿ ಮನೆ ದೋಚಿದ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ?

ಇಂದು ಉಪರಾಷ್ಟ್ರಪತಿ ಧನ್ಕರ್‌ ಧರ್ಮಸ್ಥಳಕ್ಕೆ

ಇಂದು ಉಪರಾಷ್ಟ್ರಪತಿ ಧನ್ಕರ್‌ ಧರ್ಮಸ್ಥಳಕ್ಕೆ

Belthangady ಶಾರ್ಟ್ ಸರ್ಕ್ಯೂಟ್: ಮನೆ ಬೆಂಕಿಗಾಹುತಿ

Belthangady ಶಾರ್ಟ್ ಸರ್ಕ್ಯೂಟ್: ಮನೆ ಬೆಂಕಿಗಾಹುತಿ

Uppinangady: ಬಸ್‌ ನಿಲ್ದಾಣದಲ್ಲಿ ಕಳವು

Uppinangady: ಬಸ್‌ ನಿಲ್ದಾಣದಲ್ಲಿ ಕಳವು

Punjalkatte: ವಿದ್ಯುತ್‌ ಶಾಕ್‌ನಿಂದ ಕೂಲಿ ಕಾರ್ಮಿಕ ಸಾವು

Punjalkatte: ವಿದ್ಯುತ್‌ ಶಾಕ್‌ನಿಂದ ಕೂಲಿ ಕಾರ್ಮಿಕ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.