ಎಡವಿದಲ್ಲೇ ಎದ್ದು ನಿಲ್ಲಬೇಕಿದೆ ಕೊಹ್ಲಿ ಪಡೆ
Team Udayavani, Feb 11, 2021, 1:15 AM IST
ಚೆನ್ನೈ: ಚೆನ್ನೈ ಹರ್ಡಲ್ಸ್‌ನಲ್ಲಿ ಟೀಮ್ ಇಂಡಿಯಾ ಮುಗ್ಗರಿಸಿದೆ. ಎಡವಿದಲ್ಲೇ ಎದ್ದು ನಿಲ್ಲ ಬೇಕೆಂಬುದು ಲೋಕ ನಿಯಮ. ಆದ್ದರಿಂದಲೋ ಏನೋ, ಭಾರತ-ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಚೆನ್ನೈಯಲ್ಲೇ ನಡೆಯಲಿದೆ!
ಕಾಂಗರೂ ನಾಡಿನಲ್ಲಿ ಸರಣಿ ಗೆದ್ದು ಬಂದವರಿಗೆ ತವರಿನ ಮುಖಾಮುಖೀಯಲ್ಲಿ ಮೇಲುಗೈ ಸಾಧಿಸುವುದು ಕಷ್ಟವಲ್ಲ ಎಂಬ ನಂಬಿಕೆಯೊಂದಿತ್ತು. ಆದರೆ ಜೋ ರೂಟ್ ಪಡೆ ಭಾರತಕ್ಕೆ ಮರ್ಮಾಘಾತವಿಕ್ಕಿದೆ. ಇದೊಂದು ವಿಭಿನ್ನ ಸವಾಲು, ಭಾರತದ “ರೂಟ್’ ಸುಗಮವಲ್ಲ ಎಂಬುದು ಅರಿವಿಗೆ ಬಂದಿದೆ.
ಭಾರತ ಮತ್ತು ಕೊಹ್ಲಿ ನಾಯಕತ್ವಕ್ಕೆ ಚೆನ್ನೈಯಲ್ಲೇ ಅಗ್ನಿಪರೀಕ್ಷೆ ಎದುರಾಗಿದೆ. ಫಲಿತಾಂಶ ಪುನರಾವರ್ತನೆ ಯಾದರೆ ಭಾರತದ ಕ್ರಿಕೆಟ್ ಪ್ರತಿಷ್ಠೆ ತವರಲ್ಲೇ ಮಣ್ಣಾಗುವ ಜತೆಗೆ ಕೊಹ್ಲಿ ಕ್ಯಾಪ್ಟನ್ಸಿಗೂ ಗಂಡಾಂತರ ಎದುರಾಗಬಹುದು. ಈ ಎಲ್ಲ ಸಂಭಾವ್ಯ ಕಂಟಕಗಳಿಗೆ ಗೆಲುವೊಂದೇ ಪರಿಹಾರ. ಇದಕ್ಕೆ ರಾಜಕೀಯ ಬಿಟ್ಟು ಸಮರ್ಥ ಹಾಗೂ ಸಶಕ್ತ ಟೀಮ್ ಒಂದನ್ನು ಕಣಕ್ಕಿಳಿಸುವುದು ಅಗತ್ಯ.
ಇದನ್ನೂ ಓದಿ:ಹೆಬ್ಬೆರಳಿನ ಮೂಳೆ ಮುರಿತ : ಟೆಸ್ಟ್ ಸರಣಿಯಿಂದ ಜಡೇಜ ಔಟ್
ಅಭ್ಯಾಸಕ್ಕೆ ಮರಳಿದ ಅಕ್ಷರ್
ಮೊದಲ ಟೆಸ್ಟ್‌ನಲ್ಲಿ ಅಪರೂಪದ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರನ್ನು ಕೈಬಿಡುವ ಮೂಲಕ ಭಾರತ ಬಹಳ ದೊಡ್ಡ ತಪ್ಪು ಮಾಡಿರುವುದು ಸಾಬೀತಾಗಿದೆ. ಆದರೂ ಇವರಿಗೆ ದ್ವಿತೀಯ ಟೆಸ್ಟ್‌ನಲ್ಲಿ ಜಾಗ ಸಿಗುವುದು ಅನುಮಾನ. ಕಾರಣ, ಅಕ್ಷರ್ ಪಟೇಲ್ ಗುಣಮುಖರಾಗಿ ಬುಧವಾರ ಅಭ್ಯಾಸಕ್ಕೆ ಮರಳಿದ್ದಾರೆ. ಹೀಗಾಗಿ ನದೀಂ ಸ್ಥಾನ ಪಟೇಲ್ ಪಾಲಾಗುವುದು ಬಹುತೇಕ ಖಚಿತ.
ತವರಲ್ಲಿ ಸ್ಪಿನ್ ಆಕ್ರಮಣವೇ ಭಾರತದ ಪ್ರಮುಖ ಅಸ್ತ್ರ. ಆದರೆ ಚೆನ್ನೈ ಸ್ಪಿನ್ನಿನಲ್ಲಿ ವೆರೈಟಿಯೇ ಇರಲಿಲ್ಲ. ಅಶ್ವಿನ್, ವಾಷಿಂಗ್ಟನ್ ಇಬ್ಬರೂ ಬಲಗೈ ಆಫ್ ಸ್ಪಿನ್ನರ್, ನದೀಂ ಎಡಗೈ ಆಫ್ ಸ್ಪಿನ್ನರ್, ಅಷ್ಟೇ. ಇವರಲ್ಲಿ ಅಶ್ವಿನ್ ಹೊರತುಪಡಿಸಿದರೆ ಉಳಿದಿಬ್ಬರಿಗೆ ಅನುಭವವಿಲ್ಲ. ವಾಷಿಂಗ್ಟನ್ ಬ್ಯಾಟಿಂಗ್‌ನಲ್ಲಿ ಓಕೆ ಆದರೂ ಘಾತಕ ಸ್ಪಿನ್ನರ್ ಅಲ್ಲ. ನದೀಂ ಮೂಲ ತಂಡದಲ್ಲೇ ಇರಲಿಲ್ಲ. ಈಗ 4 ವಿಕೆಟಿಗೆ 233 ರನ್ ನೀಡಿ ದುಬಾರಿಯಾಗಿದ್ದಾರೆ. ಅಕ್ಷರ್ ಪಟೇಲ್ ಕೂಡ ಎಡಗೈ ಆಫ್ಸ್ಪಿನ್ನರ್. ಆದರೆ ಇನ್ನೂ ಟೆಸ್ಟ್ ಆಡಿಲ್ಲ.
ರೋಹಿತ್ ಓಪನಿಂಗ್ ವೈಫಲ್ಯ
ಆರಂಭಿಕನಾಗಿ ರೋಹಿತ್ ಶರ್ಮ ಸತತ ವೈಫಲ್ಯ ಕಾಣುತ್ತಿರುವುದು ಭಾರತಕ್ಕೆ ಎದುರಾದ ದೊಡ್ಡ ಹೊಡೆತ. ಹೀಗಾಗಿ ಮತ್ತೆ ಅಗರ್ವಾಲ್ ಕಣಕ್ಕಿಳಿಯಬಹುದೇ, ರಾಹುಲ್ ಅವಕಾಶ ಪಡೆಯಬಹುದೇ ಎಂಬ ಕುತೂಹಲ ಸಹಜ. ರಹಾನೆ ವೈಫಲ್ಯದಿಂದ ತಂಡದ ಮಿಡ್ಲ್ ಆರ್ಡರ್ ಮೇಲೂ ಹೊಡೆತ ಬಿದ್ದಿದೆ. ಉಪಕಪ್ತಾನನ ಬ್ಯಾಟ್ ಮಾತಾಡಬೇಕಿದೆ.
ಮೊದಲ ದಿನದಿಂದಲೇ ಟರ್ನ್
ದ್ವಿತೀಯ ಟೆಸ್ಟ್ ಪಂದ್ಯಕ್ಕೆಂದು ನಿರ್ಮಿಸಲಾದ ಚೆನ್ನೈ ಪಿಚ್ ಮೊದಲ ದಿನದಿಂದಲೇ ತಿರುವು ಪಡೆಯಲಿದೆ ಎಂಬುದಾಗಿ ಕ್ಯುರೇಟರ್ ವಿ. ರಮೇಶ್ ಕುಮಾರ್ ಹೇಳಿದ್ದಾರೆ. ಹೀಗಾಗಿ ಭಾರತವಿಲ್ಲಿ ಮೂವರು ಸಮರ್ಥ ಸ್ಪಿನ್ನರ್‌ಗಳನ್ನು ದಾಳಿಗಿಳಿಸಬೇಕಿದೆ. ಆಗ, ರವೀಂದ್ರ ಜಡೇಜ ಗೈರಿನಿಂದ ತಪ್ಪಿದ ಸ್ಪಿನ್ ಸಮತೋಲನಕ್ಕೆ ಸ್ವಲ್ಪವಾದರೂ ಪರಿಹಾರ ಸಿಗಲಿದೆ. ವೇಗಿಗಳಾದ ಇಶಾಂತ್, ಬುಮ್ರಾ ಯಾವುದೇ ಪರಿಣಾಮ ಬೀರಿಲ್ಲ. ಹೀಗಾಗಿ ಠಾಕೂರ್, ಸಿರಾಜ್, ಆಲ್‌ರೌಂಡರ್ ಪಾಂಡ್ಯ ಹೆಸರು ಮುನ್ನೆಲೆಗೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.