ನವಮಂಗಳೂರು ಬಂದರು ಸೇರಿದಂತೆ ದೇಶದ 12 ಪ್ರಮುಖ ಬಂದರುಗಳಿಗೆ ಹೆಚ್ಚಿನ ಅಧಿಕಾರ
ಪ್ರಮುಖ ಬಂದರುಗಳ ಪ್ರಾಧಿಕಾರ ಮಸೂದೆ-2020ಕ್ಕೆ ಸಂಸತ್ ಅಸ್ತು
Team Udayavani, Feb 11, 2021, 7:00 AM IST
ಹೊಸದಿಲ್ಲಿ/ ಪಣಂಬೂರು: ಮಂಗಳೂರಿನ ಪಣಂಬೂರಿ ನಲ್ಲಿರುವ ನವಮಂಗಳೂರು ಬಂದರು ಮಂಡಳಿ (ಎನ್‌ಎಂಪಿಟಿ) ಸೇರಿದಂತೆ ದೇಶದ 12 ಪ್ರಮುಖ ಬಂದರುಗಳಿಗೆ ಹೆಚ್ಚಿನ ಸ್ವಾಯತ್ತೆ ನೀಡುವ ಕೇಂದ್ರ ಸರಕಾರದ ಕನಸು ನನಸಾಗಿದೆ.
ಇದಕ್ಕೆ ಸಂಬಂಧಿಸಿದ “ಪ್ರಮುಖ ಬಂದರುಗಳ ಪ್ರಾಧಿಕಾರ ಮಸೂದೆಗೆ 2020’ಕ್ಕೆ ಬುಧವಾರ ಸಂಸತ್‌ನಲ್ಲಿ ಅನುಮೋದನೆ ಸಿಕ್ಕಿದೆ. 2020ರ ಸೆ. 23ರಂದು ಲೋಕಸಭೆಯಲ್ಲಿ ಇದೇ ಮಸೂದೆಗೆ ಅನುಮೋದನೆ ಲಭಿಸಿತ್ತು.
ಬಂದರು, ನೌಕಾಯಾನ ಮತ್ತು ಜಲಸಾರಿಗೆ ಸಚಿವ ಮನ್ಸುಖ್ ಮಾಂಡವೀಯ ಮಾತನಾಡಿ, “ಖಾಸಗೀಕರಣ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿಲ್ಲ. ಪ್ರಮುಖ ಬಂದರು ಮಂಡಳಿಗಳಿಗೆ ಆಡಳಿತದಲ್ಲಿ ತಮ್ಮದೇ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡುತ್ತಿದ್ದೇವೆ. ಖಾಸಗಿ ಬಂದರುಗಳಿಗೆ ಸ್ಪರ್ಧೆ ನೀಡುವುದೇ ಉದ್ದೇಶ’ ಎಂದಿದ್ದಾರೆ.
ಕಾಂಗ್ರೆಸ್, ಟಿಎಂಸಿ, ಎಸ್‌ಪಿ, ಆರ್‌ಜೆಡಿ, ಡಿಎಂಕೆ, ಸಿಪಿಎಂ, ಸಿಪಿಐ ಸೇರಿದಂತೆ ಹಲವು ವಿಪಕ್ಷಗಳು ಮಸೂದೆಗೆ ವಿರೋಧ ವ್ಯಕ್ತಪಡಿಸಿವೆ.
ಏನು ಬದಲಾವಣೆ ?
ಆಡಳಿತ ಮಂಡಳಿಯಲ್ಲಿ ಆಗುತ್ತಿದ್ದ ಬಂದರು ಅಭಿವೃದ್ಧಿ ಕುರಿತ ನಿರ್ಣಯಗಳನ್ನು ಕೇಂದ್ರದ ಒಪ್ಪಿಗೆಗೆ ಕಳಿಸಬೇಕಿತ್ತು. ಆದರೆ ಈ ಮಸೂದೆ ಪ್ರಕಾರ ಬಂದರಿನ ಚೇರ್‌ಮನ್ ಅವರ ನೇತೃತ್ವದಲ್ಲಿ ನಿರ್ಣಯಗಳಿಗೆ, ಪ್ರಮುಖ ಅಭಿವೃದ್ಧಿ, ಹಣಕಾಸಿಗೆ ಸಂಬಂಧಿಸಿದ ಕಾಮಗಾರಿಗಳಿಗೆ ಒಪ್ಪಿಗೆ ನೀಡಬಹುದಾಗಿದೆ. ಬಂದರಿನಲ್ಲಿ ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡುವ ಜತೆಗೆ ಸ್ಥಳೀಯವಾಗಿ ಮೂಲಸೌಕರ್ಯವನ್ನು ಕ್ಷಿಪ್ರವಾಗಿ ಒದಗಿಸಲು ಸಾಧ್ಯವಾಗಲಿದೆ. ಈಗಿರುವ ಸರ್ವಿಸ್ ಪೋರ್ಟ್‌ಗೆ ಬದಲಾಗಿ ಲ್ಯಾಂಡ್ ಲಾರ್ಡ್ ಮಾದರಿಯಾಗಿ ಬಂದರು ಪರಿವರ್ತನೆಗೊಳ್ಳಲಿದೆ.
1. 1963ರ ಮೇಜರ್ ಪೋರ್ಟ್ ಟ್ರಸ್ಟ್ ಕಾಯಿದೆಯಲ್ಲಿನ ಬೇಡವಾದ ಅಂಶಗಳನ್ನು ತೆಗೆದು ಹಾಕಲಾಗಿದ್ದು ಆ್ಯಕ್ಟ್ಗಳ ಸಂಖ್ಯೆಯನ್ನು 134ರಿಂದ 76ಕ್ಕೆ ಇಳಿಸಲಾಗಿದೆ.
2. ಬಂದರು ಮಂಡಳಿಯಲ್ಲಿ ರೈಲ್ವೇ, ರಕ್ಷಣೆ, ಕಸ್ಟಮ್ಸ್, ಕಂದಾಯ ಇಲಾಖೆಯ ಅಧಿಕಾರಿಗಳು ಹೆಚ್ಚುವರಿಯಾಗಿ ಸದಸ್ಯರಾಗಲಿದ್ದಾರೆ.
3. ಬಂದರು, ಚಟುವಟಿಕೆ, ನಿರ್ವಹಣೆ, ಹಡಗುಗಳ ಮೇಲುಸ್ತುವಾರಿ ಸಹಿತ ಪ್ರಮುಖ ಭಾಗಗಳನ್ನು ಸರಕಾರಿ, ಖಾಸಗಿ ಸಹಭಾಗಿತ್ವದಲ್ಲಿ ಖಾಸಗಿ ವಲಯಕ್ಕೆ ನೀಡಲು ಅವಕಾಶವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.