ಇನ್ಮುಂದೆ “ಕೂ”ಮಯ : ಮೂಲೆಗೆ ಸರಿಯುತ್ತಾ ಟ್ವೀಟರ್ ?
ಟ್ವೀಟರ್ ಗೆ ಪರ್ಯಾಯವಾಗುತ್ತಾ “ಕೂ ಆ್ಯಪ್”..!?
Team Udayavani, Feb 11, 2021, 10:41 AM IST
ನವ ದೆಹಲಿ : ಚೀನಿ ಅಪ್ಲಿಕೇಶನ್ ಗಳು, ಫೇಸ್ಬುಕ್ , ವಾಟ್ಸಾಪ್ ಹಾಗೂ ಡೇಟಾ ಕಳ್ಳತನ, ಗೌಪ್ಯತೆಗೆ ಸಂಬಂಧಿಸಿದ ಕೆಲವು ನೀತಿ ನಿಯಮಗಳಿಂದ ದೇಶದಲ್ಲಿ ಚಾಟಿಂಗ್ ಪ್ಲ್ಯಾಟ್ ಫಾರ್ಮ್ ಗಾಗಿ ಸೂಕ್ತ ಅಪ್ಲಿಕೇಶನ್ ಗಳ ಹುಡುಕಾಟದಲ್ಲಿ ಇಡೀ ಭಾರತ ನಿರತವಾಗಿದೆ. ಇಂತಹ ಸಂದರ್ಭದಲ್ಲಿ ಅದಕ್ಕೆ ಪರ್ಯಾಯವೆಂಬಂತೆ “ಕೂ ಆ್ಯಪ್” ಜನರ ಆಯ್ಕೆಯಲ್ಲಿ ಮೊದಲ ಸ್ಥಾನವನ್ನು ಪಡೆಯುತ್ತಿದೆ.
ಕೇಂದ್ರ ಸಚಿವರಾದ ರವಿ ಶಂಕರ್ ಪ್ರಸಾದ್, ಪಿಯೂಶ್ ಗೋಯಲ್ ಸೇರಿ ಹಲವರು “ಕೂ ಆ್ಯಪ್” (Koo App) ಬಳಸಲು ಪ್ರಾರಂಭಿಸಿದ್ದಾರೆ ಎನ್ನುವುದು ಅದರ ಜನಪ್ರಿಯತೆಗೆ ಸಾಕ್ಷಿಯಾಗುತ್ತಿದೆ.
ಓದಿ : ತೆರೆಮೇಲೆ ಬರಲಿದೆ ‘ಸೈನೈಡ್ ಮಲ್ಲಿಕಾ’ ಕ್ರೈಂ ಸ್ಟೋರಿ
ಟ್ವೀಟರ್ ಗೆ ಪರ್ಯಾಯವಾಗುತ್ತಾ “ಕೂ ಆ್ಯಪ್”..!?
“ಕೂ” ಎಂಬುದು ಮೈಕ್ರೋ ಬ್ಲಾಗಿಂಗ್ ಸಾಮಾಜಿಕ ಜಾಲತಾಣವಾಗಿದ್ದು, ಟ್ವೀಟರ್ ನಂತೆಯೇ ಎಲ್ಲಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಹಿಂದಿ, ಇಂಗ್ಲಿಷ್ ಸೇರಿದಂತೆ ಎಂಟು ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. 350 ಪದಗಳ ಮಿತಿಯನ್ನು ಹೊಂದಿರುವ “ಕೂ ಆ್ಯಪ್”, ಟ್ವೀಟರ್ ಗೆ ಹೋಲುವ ಹಾಗೆಯೇ ಇಂಟರ್ ಫೇಸ್ ಹೊಂದಿದೆ.ಅಷ್ಟಲ್ಲದೇ, “ಕೂ ಆ್ಯಪ್” ತನ್ನ ಸರಣಿ ಎ ಫಂಡಿಂಗ್ ನ ಭಾಗವಾಗಿ 30 ಕೋಟಿ ರೂ. ಸಂಗ್ರಹಿಸಿದೆ.
ಕಳೆದ ಕೆಲವು ದಿನಗಳಿಂದ ಟ್ವೀಟರ್ ಹಾಗೂ ಭಾರತ ಸರ್ಕಾರದ ನಡುವೆ ಸಂಘರ್ಷವಿತ್ತು, ಇತ್ತೀಚೆಗೆ ಟ್ವೀಟರ್ ಇಂಡಿಯಾದ ಸಾರ್ವಜನಿಕ ನೀತಿ ನಿರ್ದೇಶಕ ಮಹೀಂದ್ರಾ ಕೌಲ್ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದರು. ಕಳೆದ ವಾರ, ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸರ್ಕಾರ ಟ್ವೀಟರ್ ನಿಂದ ಉತ್ತರವನ್ನು ಕೋರಿತ್ತು.
ಟ್ವೀಟರ್ ಕೇಂದ್ರ ಸರ್ಕಾರ ಕೇಳಿಕೊಂಡ ಹಿನ್ನಲೆಯಲ್ಲಿ, ಕೃಷಿ ಕಾಯ್ದೆಯ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿರುವ ಸುಮಾರು 500 ಖಾತೆಗಳನ್ನು ಅಮಾನತುಗೊಳಿಸಿತ್ತು. ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು, ರಾಜಕಾರಣಿಗಳ ಖಾತೆಗಳನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ತನ್ನ ಬ್ಲಾಗ್ ನಲ್ಲಿ ಹೇಳಿಕೊಂಡಿದೆ.
ಇನ್ನು, “ ನಾನು ಈಗ “ಕೂ” ನಲ್ಲಿ ಇದ್ದೇನೆ. ಪ್ರಸ್ತುತ ವಿಷಯಗಳಿಗಾಗಿ “ಕೂ” ನಲ್ಲಿ ನನ್ನನ್ನು ಸಂಪರ್ಕಿಸಬಹುದು. ನಮ್ಮ ಯೋಚನೆ ಮತ್ತು ಯೋಜನೆಗಳನ್ನು ಇನ್ಮುಂದೆ ಕೂ ನಲ್ಲಿ ಹಂಚಿಕೊಳ್ಳೋಣ ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ ಟ್ವೀಟರ್ ನಲ್ಲಿಯೇ ಟ್ವೀಟರ್ ಗೆ ಟಕ್ಕರ್ ಕೊಡುವಂತೆ “ಕೂ” ಬಗ್ಗೆ ಬರೆದುಕೊಂಡಿದ್ದಾರೆ.
I am now on Koo.
Connect with me on this Indian micro-blogging platform for real-time, exciting and exclusive updates.
Let us exchange our thoughts and ideas on Koo.
? Join me: https://t.co/zIL6YI0epM pic.twitter.com/REGioTdMfm
— Piyush Goyal (@PiyushGoyal) February 9, 2021
ಓದಿ : ಶಿರೂರು: ಅತೀ ವೇಗದಿಂದ ಬೈಕ್ ಚಲಾಯಿಸಿದ 15ರ ಬಾಲಕ; ಡಿವೈಡರ್ ಗೆ ಢಿಕ್ಕಿ, ಸ್ಥಳದಲ್ಲೇ ಸಾವು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.