ಪ್ಯಾನ್ ಇಂಡಿಯಾ ಸಿನಿಮಾ ‘ಲೈಗರ್’ ಬಿಡುಗಡೆ ದಿನಾಂಕ ಪ್ರಕಟ
Team Udayavani, Feb 11, 2021, 8:45 PM IST
ಮುಂಬೈ: ಯೂಥ್ ಸ್ಟಾರ್ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾವಾದ ‘ಲೈಗರ್’ ಸಿನಿಮಾದ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ಮುಂಬರುವ ಸೆಪ್ಟೆಂಬರ್ 9 ಕ್ಕೆ ಸಿನಿಮಾವನ್ನು ಬಿಡುಗಡೆಗೊಳಿಸುವುದಾಗಿ ಚಿತ್ರ ತಂಡ ತಿಳಿಸಿದೆ.
ನಿನ್ನೆಯಷ್ಟೇ ‘ಲೈಗರ್’ ಸಿನಿಮಾದ ಬಿಡುಗಡೆ ದಿನಾಂಕವನ್ನು ತಿಳಿಸುವುದಾಗಿ ಹೇಳಿದ್ದ ಚಿತ್ರತಂಡ ಇದೀಗ ಚಿತ್ರದ ಬಿಡುಗಡೆ ದಿನಾಂಕವನ್ನು ಫೈನಲ್ ಮಾಡಿದೆ. ಈ ಕುರಿತಾಗಿ ತಮ್ಮ ಇನ್ ಸ್ಟಾಗ್ರಾಂ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿರುವ ನಟ ವಿಜಯ್ ದೇವರಕೊಂಡ, ದಿನಾಂಕ ನಿಗದಿಯಾಗಿದೆ. ಸೆಪ್ಟೆಂಬರ್ 9 ರಂದು ನಾವು ಬರುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಅವಮಾನಕ್ಕೊಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿಗೆ ಧೈರ್ಯ ತುಂಬಿದ ಶಿಕ್ಷಣ ಸಚಿವ
ಕೆಲ ದಿನಗಳ ಹಿಂದೆಯಷ್ಟೇ ಚಿತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆಗೊಳಿಸಿದ್ದ ಚಿತ್ರತಂಡ ಸಿನಿ ರಸಿಕರಲ್ಲಿ ಭಾರಿ ಕುತೂಹಲವನ್ನು ಉಂಟುಮಾಡಿತ್ತು. ಲೈಗರ್ ಸಿನಿಮಾ ತೆಲುಗು ಸೇರಿದಂತೆ ಹಿಂದಿಯಲ್ಲಿಯೂ ಶೂಟ್ ಮಾಡಲಾಗಿದ್ದು, ಈ ಸಿನಿಮಾದ ಮೂಲಕ ವಿಜಯ್ ದೇವರಕೊಂಡ ಬಾಲಿವುಡ್ ಅಂಗಳಕ್ಕೂ ಪದಾರ್ಪಣೆ ಮಾಡಿದ್ದಾರೆ.
The Date is set.
India – we are coming!
September 9, 2021. #LIGER#SaalaCrossbreed#PuriJagannadh @ananyapandayy @karanjohar @charmmeofficial @apoorvamehta18 @DharmaMovies @PuriConnects pic.twitter.com/pgclqQYiQ4— Vijay Deverakonda (@TheDeverakonda) February 11, 2021
ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿರುವ ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳಿದ್ದು, ಮನಿ ಶರ್ಮಾ ಸಂಗೀತ ನಿರ್ದೇಶನ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
AI: ಶಾರುಖ್ ಪತ್ನಿ ಗೌರಿ ಮತಾಂತರ?: ಡೀಪ್ ಫೇಕ್ ಫೋಟೋ ವೈರಲ್
Life threat: ಸಲ್ಮಾನ್ ಮನೆ ಬಾಲ್ಕನಿಗೆ ಬುಲೆಟ್‌ಪ್ರೂಫ್ ಗಾಜು
ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್.. ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ
MUST WATCH
ಹೊಸ ಸೇರ್ಪಡೆ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.