ಕನ್ನಡಿಯಲ್ಲಿ ಕಾಣುವುದು ನಮ್ಮದೇ ಪ್ರತಿಬಿಂಬ


Team Udayavani, Feb 12, 2021, 6:15 AM IST

ಕನ್ನಡಿಯಲ್ಲಿ ಕಾಣುವುದು ನಮ್ಮದೇ ಪ್ರತಿಬಿಂಬ

ನಾಲ್ಕೆ „ದು ಮಂದಿ ವೃದ್ಧರು ಊರ ಹೊರಗಿನ ಅರಳಿ ಕಟ್ಟೆಯ ಮೇಲೆ ಮಾತನಾಡುತ್ತ ಕುಳಿತುಕೊಂಡಿದ್ದರು. ಸಂಜೆ ಹೀಗೆ ಪಟ್ಟಾಂಗ ಹಾಕುವುದು ವ್ಯರ್ಥ ಕಾಲಯಾಪನೆ ಎಂಬುದಾಗಿ ಈಗಿನ ಕಾಲದವರು ಹೇಳಬಹುದು. ಆದರೆ ಮನದಾಳವನ್ನು ಹಂಚಿಕೊಂಡು ಎದೆ ಹಗುರ ಮಾಡಿಕೊಳ್ಳಲು ಇದಕ್ಕಿಂತ ಒಳ್ಳೆಯ ಮಾರ್ಗ ಬೇರೊಂದಿಲ್ಲ. ಸಂವಾದದ ಇಂತಹ ಮಾರ್ಗಗಳು ಇಲ್ಲವಾದರೆ ಎದೆಯ ಮೇಲಣ ಭಾರ ಹೆಚ್ಚುತ್ತ ಹೋಗುವುದು.

ಇರಲಿ; ಅಷ್ಟು ಹೊತ್ತಿಗೆ ಕುದುರೆಯ ಮೇಲೇರಿ ಒಬ್ಟಾತ ಅಲ್ಲಿಗೆ ಬಂದ. ಅರಳಿ ಕಟ್ಟೆಯ ಬಳಿಗೆ ಬಂದವನೇ ಕಡಿವಾಣ ಎಳೆದು ಕುದುರೆ ನಿಲ್ಲಿಸಿ ಆತ ವೃದ್ಧರನ್ನು ಉದ್ದೇಶಿಸಿ ಕೇಳಿದ, “ಈ ಊರು ಹೇಗಿದೆ? ಜನರು ಎಂಥವರು?’
“ಈ ಪ್ರಶ್ನೆಯನ್ನು ನೀನು ಕೇಳುತ್ತಿರು ವುದರ ಉದ್ದೇಶವೇನು?’ ವೃದ್ಧರಲ್ಲಿ ಒಬ್ಬರು ಮರುಪ್ರಶ್ನೆ ಹಾಕಿದರು.

“ನಾನು ನನ್ನೂರನ್ನು ತ್ಯಜಿಸಿ ಬಂದಿ ದ್ದೇನೆ, ಈ ಊರಿನಲ್ಲಿ ವಾಸ್ತವ್ಯ ಹೂಡ ಬಹುದೇ’ ಅಶ್ವಾರೋಹಿ ಉತ್ತರಿಸಿದ.
“ಸರಿ, ನೀನು ಬಿಟ್ಟು ಬಂದ ಊರು ಹೇಗಿತ್ತು? ಜನರು ಹೇಗಿದ್ದರು?’ ವೃದ್ಧರು ಮತ್ತೂಂದು ಪ್ರಶ್ನೆ ಎಸೆದರು.

“ಅಯ್ಯೋ ಹೇಳಿ ಸುಖವಿಲ್ಲ. ಅಲ್ಲೆಲ್ಲ ಮತ್ಸರಿಗಳು, ದುಷ್ಟರು, ಮೂರ್ಖರೇ ತುಂಬಿದ್ದಾರೆ. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ. ಎಲ್ಲರೂ ಪರಸ್ಪರ ದೂರು ಹೇಳಿಕೊಳ್ಳುತ್ತ ಜಗಳ ವಾಡಿಕೊಂಡೇ ಇರುವವರು. ಹಾಗಾ ಗಿಯೇ ನಾನು ಆ ಊರನ್ನು ಬಿಟ್ಟು ಬರಬೇಕಾಯಿತು. ಈಗ ಹೇಳಿ, ಈ ಊರಿನ ಬಗ್ಗೆ’ ಎಂದ ಬಂದಾತ.

ವೃದ್ಧರು ಉತ್ತರಿಸಿದರು, “ಹಾಗಾದರೆ ಕ್ಷಮಿಸು ತಮ್ಮಾ, ನೀನು ಮುಂದಕ್ಕೆ ಎಲ್ಲಾದರೂ ಹೊಸ ಊರು ಹುಡುಕು ವುದೇ ಲೇಸು. ಈ ಊರಿನವರು ನಿನ್ನೂ ರಿನವರಂತೆಯೇ ಇದ್ದಾರೆ. ಇಲ್ಲಿಯ ವರೂ ಬಹಳ ಕೆಟ್ಟವರು…’

ಅಶ್ವಾರೋಹಿ ಮುಂದಕ್ಕೆ ನಡೆದ. ವೃದ್ಧರು ಮಾತುಕತೆ ಮುಂದುವರಿಸಿ ದರು. ಸ್ವಲ್ಪ ಹೊತ್ತಿನಲ್ಲಿ ಎತ್ತಿನಬಂಡಿ ಯೊಂದು ಆ ದಾರಿಯಾಗಿ ಸಾಗಿಬಂತು. ಅರಳಿಕಟ್ಟೆಯ ಬಳಿಯೇ ಅದು ನಿಂತಿತು. ಗಾಡಿಯಲ್ಲಿದ್ದ ಮಧ್ಯವಯಸ್ಕ ನೊಬ್ಬ ಕೆಳಕ್ಕಿಳಿದು ವೃದ್ಧರ ಬಳಿಗೆ ಬಂದ. ಬಾಗಿ ನಮಸ್ಕರಿಸಿ, “ಹಿರಿಯರೇ, ನೀವು ಈ ಊರಿನವರು ಎಂದುಕೊಂಡಿದ್ದೇನೆ. ಹೇಗಿದೆ ನಿಮ್ಮೂರು? ಇಲ್ಲಿನ ನಾಗರಿ ಕರು ಎಂಥವರು?’ ಎಂದು ಪ್ರಶ್ನಿಸಿದ.

ವೃದ್ಧರು ಎಲ್ಲಿಂದ ಬಂದೆ, ಯಾಕೆ ಬಂದೆ, ಇಲ್ಲಿನವರ ಬಗ್ಗೆ ಕೇಳಿದ್ದೇಕೆ ಎಂದು ವಿಚಾರಿಸಿದರು.
ಬಂದಾತ ಹೇಳಿದ, “ಅನಿವಾರ್ಯ ಕಾರಣ ಗಳಿಂದ ನನ್ನೂರನ್ನು ಬಿಟ್ಟು ಹೊರಡಬೇಕಾ ಯಿತು; ವ್ಯಾಪಾರದಲ್ಲಿ ನಷ್ಟವುಂಟಾಗಿ. ಆದರೆ ನನ್ನೂರಿನವರು ಸುಸಂಸ್ಕೃತರು, ಪರೋಪಕಾರಿಗಳು. ನಾನು ಹೊರಡು ವುದಕ್ಕೆ ಸಮ್ಮತಿಸಲೇ ಇಲ್ಲ, ನಾನು ಮಾಡಿರುವ ಸಾಲಗಳನ್ನು ತಾವೇ ತೀರಿಸುವೆವು ಎಂದರು. ಆದರೆ ನಾನು ಒಪ್ಪಲಿಲ್ಲ. ಈ ಊರಿನವರೂ ಅಂಥ ವರೇ ಆಗಿದ್ದಾರೆ ಎಂದಾದರೆ ಸ್ವಲ್ಪ ಕಾಲ ಇಲ್ಲಿ ನೆಲೆಸು ತ್ತೇನೆ. ಹಣಕಾಸಿನ ಸ್ಥಿತಿಗತಿ ಸರಿಹೋದ ಮೇಲೆ ಮತ್ತೆ ನನ್ನೂರಿಗೆ ಹೋಗುತ್ತೇನೆ. ನನ್ನ ಕೊನೆಗಾಲವನ್ನು ಅಲ್ಲೇ ಕಳೆಯ ಬೇಕು ಎಂಬುದು ನನ್ನಾಸೆ…’ ಇಷ್ಟು ಹೇಳುವಷ್ಟರಲ್ಲಿ ಬಂದಾ ತನ ಕೆನ್ನೆಗಳಿಂದ ದುಃಖಾಶ್ರುಗಳು ಉರುಳುತ್ತಿದ್ದವು.

ವಯೋವೃದ್ಧರು ಅಗಸೆ ಬಾಗಿಲನ್ನು ಅಗಲವಾಗಿ ತೆರೆದರು, “ಬಾ ತಮ್ಮಾ. ಇದೇ ನಿನ್ನೂರು ಎಂದುಕೋ. ಇಷ್ಟ ಬಂದಷ್ಟು ಕಾಲ ಇಲ್ಲಿರು…’

ಸಮಾಜ ನಮ್ಮ ಮುಖಕ್ಕೆ ಹಿಡಿದ ಕನ್ನಡಿ ಇದ್ದಂತೆ. ನಾವು ಇರುವ ಹಾಗೆ, ನಾವು ಕಾಣುವ ಹಾಗೆ ನಮ್ಮ ಸುತ್ತ ಮುತ್ತಲಿನ ಜನರು ಕೂಡ ಇರುತ್ತಾರೆ, ಕಾಣುತ್ತಾರೆ. ನಮ್ಮಲ್ಲಿ ದುರ್ಗುಣ ಗಳಿದ್ದರೆ ಸಮಾಜವೆಂಬ ಕನ್ನಡಿಯ ಲ್ಲಿಯೂ ಅವೇ ಪ್ರತಿಫ‌ಲಿಸುತ್ತವೆ. ಸದಾ ಶಯ, ಸದ್ಗುಣ, ಸಕಾರಾತ್ಮಕ ನಿಲುವು ಇತ್ಯಾದಿಗಳ ಬೆಳಕು ನಮ್ಮಲ್ಲಿದ್ದರೆ ಕನ್ನಡಿಯಲ್ಲಿಯೂ ಅದೇ ಕಾಣಿಸುತ್ತದೆ. ಚೆನ್ನಾಗಿರಬೇಕಾದ್ದು, ಬದಲಾಗ ಬೇಕಾದ್ದು ಒಳಗಿನಿಂದ. ಆಗ ಪ್ರತಿ ಬಿಂಬವೂ ಬದಲಾಗುತ್ತದೆ.

ಟಾಪ್ ನ್ಯೂಸ್

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.