![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Feb 12, 2021, 2:42 PM IST
ಪ್ರತಿವರ್ಷ ಕನ್ನಡ ಚಿತ್ರರಂಗಕ್ಕೆ ಒಂದಷ್ಟು ನವ ನಾಯಕ ನಟಿಯರ ಪ್ರವೇಶ ಆಗುತ್ತಲೇ ಇರುತ್ತದೆ. ಹೀಗೆ ಸ್ಯಾಂಡಲ್‌ವುಡ್‌ಗೆ ಅಡಿಯಿಡುವ ನವ ನಟಿಯರಲ್ಲಿ ಕೆಲವು ನಾಯಕಿಯರು ಸಿನಿಮಾಗಳು ಬಿಡುಗಡೆಯಾದ ಮೇಲೆ ಗುರುತಿಸಿಕೊಂಡು ಸುದ್ದಿಯಾದರೆ, ಇನ್ನು ಕೆಲವು ನಟಿಯರು ತಮ್ಮ ಚೊಚ್ಚಲ ಚಿತ್ರ ಬಿಡುಗಡೆಯಾಗುವ ಮೊದಲೇ ಒಂದಷ್ಟು ಗುರುತಿಸಿಕೊಳ್ಳುತ್ತಾರೆ. ಇತ್ತೀಚೆಗೆ ಹೀಗೆ ತಮ್ಮ ಚೊಚ್ಚಲ ಚಿತ್ರದ ಮೂಲಕವೇ ಸಿನಿಪ್ರಿಯರ ಗಮನ ಸೆಳೆಯುತ್ತಿರುವ ನಟಿ ನೀತಾ ಅಶೋಕ್. ಕಿಚ್ಚ ಸುದೀಪ್ ಅಭಿನಯದ “ವಿಕ್ರಾಂತ್ ರೋಣ’ ಚಿತ್ರದಲ್ಲಿ ನಿರೂಪ್ ಭಂಡಾರಿ ಅವರಿಗೆ ಜೋಡಿಯಾಗಿ ನೀತಾ ಕಾಣಿಸಿಕೊಳ್ಳುತ್ತಿದ್ದಾರೆ.
ಅಚ್ಚ ಕನ್ನಡದ ಹುಡುಗಿ ನೀತಾ ಅಶೋಕ್ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ. ಕಿರುತೆರೆಯ”ಯಶೋಧೆ’, “ನಾ ನಿನ್ನ ಬಿಡಲಾರೆ’, “ನೀಲಾಂಬರಿ’ ಮೊದಲಾದ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದ ನೀತಾ, “ವಿಕ್ರಾಂತ್ ರೋಣ’ ಚಿತ್ರದ ಮೂಲಕ ಹಿರಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ.
ಇದನ್ನೂ ಓದಿ:ಉದಯವಾಣಿಯಲ್ಲಿ ಕಿಚ್ಚನ ಬೆಳ್ಳಿ ಹಬ್ಬದ ಸಂಭ್ರಮ: 25 ವರ್ಷದ ಸಿನಿಪಯಣಕ್ಕೆ ಆತ್ಮೀಯ ಅಭಿನಂದನೆ
ಇನ್ನು “ವಿಕ್ರಾಂತ್ ರೋಣ’ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರೊಂದಿಗೆ, ನಿರೂಪ್ ಭಂಡಾರಿ ಕೂಡ ಸಂಜೀವ್ ಗಂಭೀರ್ ಎಂಬ ಮತ್ತೂಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ವಿಕ್ರಾಂತ್ ರೋಣ’ದಲ್ಲಿ ನಿರೂಪ್ ಭಂಡಾರಿಗೆ ಜೋಡಿಯಾಗಿ ಅಭಿನಯಿಸುತ್ತಿರುವ ನೀತಾ ಅಶೋಕ್, ಚಿತ್ರದಲ್ಲಿ ಅಪರ್ಣಾ ಬಲ್ಲಾಳ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮೊದಲ ಬಾರಿಗೆ ಬಿಗ್ ಸ್ಟಾರ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಅಡಿಯಿಡುತ್ತಿರುವ ನೀತಾ ಅಶೋಕ್ “ವಿಕ್ರಾಂತ್ ರೋಣ’ದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುತ್ತಾರೆ. “ಸಾಮಾನ್ಯವಾಗಿ ಅನೇಕ ನಟಿಯರಿಗೆ ಮೊದಲ ಸಿನಿಮಾದಲ್ಲೇ ಇಷ್ಟೊಂದು ಬಿಗ್ ಓಪನಿಂಗ್ ಸಿಗುವುದು ಅಪರೂಪ. ಅಂಥದ್ದೊಂದು ಅಪರೂಪದ ಅವಕಾಶ “ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಸಿಕ್ಕಿದೆ’ ಎನ್ನುವ ನೀತಾ, “ಸುದೀಪ್ ಅವರಂಥ ಸ್ಟಾರ್ ನಟರ ಜೊತೆ ಅಭಿನಯಿಸಿದ್ದು ನಿಜಕ್ಕೂ ಒಳ್ಳೆಯ ಅನುಭವ. ಇಡೀ ಸಿನಿಮಾ ತಂಡ ತುಂಬ ಪ್ಯಾಷನೇಟ್ ಆಗಿ ಸಿನಿಮಾ ಮಾಡಿದೆ. ನಿರ್ದೇಶಕ ಅನೂಪ್ ಭಂಡಾರಿ ತುಂಬ ಅಡ್ವೆಂಚರಸ್ ಆಗಿರುವಂಥ ಪಾತ್ರವನ್ನು ಈ ಸಿನಿಮಾದಲ್ಲಿ ನನಗೆ ಕೊಟ್ಟಿದ್ದಾರೆ’ ಎನ್ನುತ್ತಾರೆ.
ಇದನ್ನೂ ಓದಿ: ಮೋಶನ್ ಪೋಸ್ಟರ್‌ನಲ್ಲಿ ಭಜರಂಗಿ-2 ಸದ್ದು
ಸದ್ಯ “ವಿಕ್ರಾಂತ್ ರೋಣ’ದ ಸಿನಿಮಾದ ಬಗ್ಗೆ ಮತ್ತು ತನ್ನ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುವ ನೀತಾ ಅಶೋಕ್, “ಕಿಚ್ಚ ಸುದೀಪ್ ಅಭಿಮಾನಿಗಳಿಗೆ “ವಿಕ್ರಾಂತ್ ರೋಣ’ ಹೊಸಥರದ ಅನುಭವ ಕೊಡುವಂಥ ಸಿನಿಮಾವಾಗಲಿದೆ. ನನ್ನ ಪಾತ್ರದ ಮೇಲೂ ಸಾಕಷ್ಟು ನಿರೀಕ್ಷೆ ಇದೆ. ಈ ವರ್ಷ ಒಂದು ಬಿಗ್ ಸ್ಟಾರ್ ಸಿನಿಮಾದ ಮೂಲಕ ಬಿಗ್ ಸ್ಕ್ರೀನ್‌ಗೆ ಎಂಟ್ರಿಯಾಗುತಿರುವುದಕ್ಕೆ ಖುಷಿಯಾಗುತ್ತಿದೆ. ನಾನು ಕೂಡ ಈ ಬಗ್ಗೆ ತುಂಬ ಎಕ್ಸೆ„ಟ್ ಆಗಿದ್ದೇನೆ…’ ಎನ್ನುತ್ತಾರೆ.
ಇತ್ತೀಚೆಗಷ್ಟೇ ನಟ ಕಿಚ್ಚ ಸುದೀಪ್ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ “ವಿಕ್ರಾಂತ್ ರೋಣ’ ಚಿತ್ರತಂಡ, ದುಬೈನ ಬುಝ್ì ಖಲೀಫಾ ಟವರ್‌ನಲ್ಲಿ “ವಿಕ್ರಾಂತ್ ರೋಣ’ದ ಟೈಟಲ್ ಅನಾವರಣಗೊಳಿಸಿತ್ತು. ಈಗಾಗಲೇ ಬಿಡುಗಡೆಯಾಗಿರುವ “ವಿಕ್ರಾಂತ್ ರೋಣ’ ಟೈಟಲ್, ಲುಕ್ ಎಲ್ಲವೂ ಸಿನಿಪ್ರಿಯರಿಂದ ಸಾಕಷ್ಟು ಮೆಚ್ಚು ಪಡೆದುಕೊಳ್ಳುತ್ತಿದೆ. ಒಟ್ಟಾರೆ “ವಿಕ್ರಾಂತ್ ರೋಣ’ನ ಜೊತೆ ಸ್ಯಾಂಡಲ್‌ವುಡ್‌ಗೆ ಬಿಗ್ ಎಂಟ್ರಿ ಪಡೆಯುತ್ತಿರುವ ನೀತಾ ಎಷ್ಟರ ಮಟ್ಟಿಗೆ ಪ್ರೇಕ್ಷಕರ ಮನ ಗೆಲ್ಲಲಿದ್ದಾರೆ ಅನ್ನೋದು ಇನ್ನೇನು ಕೆಲ ತಿಂಗಳಲ್ಲೇ ಗೊತ್ತಾಗಲಿದೆ.
ಜಿ.ಎಸ್.ಕಾರ್ತಿಕ್ ಸುಧನ್
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.