ಹೋರಾಟ ಯಶಸ್ವಿಯಾಗಿದ್ದಕ್ಕೆ ಸಿದ್ದುಗೆ ಕಿರಿಕಿರಿ: ಈಶ್ವರಪ್ಪ
Team Udayavani, Feb 12, 2021, 3:40 PM IST
ಶಿವಮೊಗ್ಗ: ಎಸ್‌ಟಿ ಮೀಸಲಾತಿಗಾಗಿ ಕುರುಬ ಸಮುದಾಯ ನಡೆಸಿದ ಹೋರಾಟ ಹಾಗೂ ಬೆಂಗಳೂರಿನಲ್ಲಿ ನಡೆದ ಸಮಾವೇಶ ಯಶಸ್ವಿಯಾಗಿದ್ದು ಸಿದ್ದರಾಮಯ್ಯಗೆ ಕಿರಿಕಿರಿ ಉಂಟು ಮಾಡಿದೆ. ನಾನು ಇಲ್ಲದೆ ಲಕ್ಷಾಂತರ ಕುರುಬರು ಸೇರುತ್ತಾರೆ ಎಂಬ ಕಲ್ಪನೆ ಅವರಿಗೆ ಇರಲಿಲ್ಲ. ಹೀಗಾಗಿ ಕಿರಿಕಿರಿಯಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರುಬರ ಎಸ್‌ಟಿ ಮೀಸಲಾತಿ ಹೋರಾಟ ಏಕೆ ಬೇಕೆಂದು ಸಿದ್ದರಾಮಯ್ಯ ಸ್ಪಷ್ಟಪಡಿಸಲಿ. ಹೋರಾಟಕ್ಕೂ ಮೊದಲು ಕಾಗಿನೆಲೆಯ ಜಗದ್ಗುರುಗಳು ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿ ಆಹ್ವಾನಿಸಿದ್ದರು. ಆಗ ನಾನು ಹೋರಾಟಕ್ಕೆ ಬರುವುದಿಲ್ಲ ನೀವು ಮಾಡಿ ಎಂದು ತಿಳಿಸಿದ್ದರು. ಆಗ ಏಕೆ ಕುಲಶಾಸ್ತ್ರದ ಅಧ್ಯಯನದ ಬಳಿಕ ಹೋರಾಟ ಮಾಡೋಣವೆಂದು ಹೇಳಲಿಲ್ಲ? ಸ್ವಾಮೀಜಿಗಳ ಪಾದಯಾತ್ರೆ ಮತ್ತು ಸಮಾವೇಶಕ್ಕೆ ಆರ್ ಎಸ್‌ಎಸ್ ಹಣ ನೀಡಿದೆ ಎಂಬ ಆರೋಪಕ್ಕೆ ಗುರುಗಳೇ ಉತ್ತರ ನೀಡಿದ್ದಾರೆ.
ಇದನ್ನೂ ಓದಿ:ಭಗವಾನ್ ಮುಖಕ್ಕೆ ಮಸಿ:ಕ್ರಮಕ್ಕೆ ಆಗ್ರಹಿಸಿ ಮನವಿ
ತಮ್ಮನ್ನು ಬಿಟ್ಟು ನಡೆದ ಕುರುಬರ ಸಮಾವೇಶ ಯಶಸ್ವಿಯಾದ ಬಗ್ಗೆ ಸಂತೋಷ ಪಡುವ ಬದಲು ರಾಜಕೀಯವಾಗಿ ತಮ್ಮನ್ನು ಬಿಟ್ಟು ಕುರುಬರು ಸೇರಿದ್ದಕ್ಕೆ ಏನೇನೋ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಹೇಳಿಕೆಗೂ ನಡವಳಿಕೆಗೂ ಏನೇನೂ ಸಂಬಂಧವಿಲ್ಲ. ಸಂವಿಧಾನಬದ್ಧವಾಗಿ ಎಲ್ಲಾ ಸಮಾಜಗಳಿಗೂ ಮೀಸಲಾತಿ ಇರಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
B. Y. Raghavendra: 10 ವರ್ಷದಲ್ಲಿ ವಕ್ಫ್ ಆಸ್ತಿ ಶೇ.135 ಹೆಚ್ಚಳ
Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿಟ್ಟು ವ್ಯಕ್ತಿ ನಾಪತ್ತೆ ಪ್ರಕರಣ; ಶವ ಪತ್ತೆ
ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಯತ್ನಕ್ಕೆ ಹಿನ್ನಡೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.