15 ಎಕರೆ: 100 ಕ್ವಿಂಟಲ್ ರಾಗಿ
Team Udayavani, Feb 12, 2021, 5:27 PM IST
ಮಾಗಡಿ: ರಾಗಿ ತಿಂದರೆ ರೋಗವಿಲ್ಲ ಎಂಬ ಪೂರ್ವಿಕರು ಕಟ್ಟಿದ ಗಾಧೆ ಅಕ್ಷರಸಃ ಸತ್ಯ. ಆಧುನಿಕ ಯುಗದಲ್ಲಿಯೂ ರಾಗಿಗೆ ಅತ್ಯಂತ ಬೇಡಿಕೆಯಿದ್ದು, ಮಧುಮೇಹಿಗಳಿಗಂತೂ ರಾಗಿ ರಾಮಭಾಣವಾಗಿದೆ. ರಾಗಿ ಸೇವನೆಯಿಂದಲೇ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿಡಬಹುದು ಎಂದು ರೈತ ಕೆ.ಬಾಗೇಗೌಡ ತಿಳಿಸಿದ್ದಾರೆ.
ತಾಲೂಕಿನಲ್ಲಿ ರಾಗಿ ಪ್ರಮುಖ ಬೆಳೆಯಾಗಿದೆ. ರಾಗಿ ಬೆಳೆದು ಸಾಧನೆ ಮಾಡಿದ ಅನೇಕರಲ್ಲಿ ರೈತ ಕೆ.ಬಾಗೇಗೌಡ ಒಬ್ಬರು. ತಾಲೂಕಿನಬೆಳಗುಂಬ ವ್ಯಾಪ್ತಿಯ ತಮ್ಮ 15 ಎಕರೆ ಜಮೀನಿನಲ್ಲಿ ರಾಗಿ ಬೆಳೆದಿರುವ ಕೆ.ಬಾಗೇಗೌಡ, 100 ಕ್ವಿಂಟಲ್ ರಾಗಿ ಜೊತೆಗೆ 13 ಎಕರೆಯಲ್ಲಿ 40 ಕ್ವಿಂಟಲ್ ತೊಗರಿ ಬೆಳೆದು ಸಂತೃಪ್ತಿ ಜೀವನ ಕಟ್ಟಿಕೊಂಡಿದ್ದಾರೆ.
ಸಾಧಕರ ತವರೂರು: ಮಾಗಡಿ ಮಣ್ಣಿನ ಮಹತ್ವವೇ ಅಂತದ್ದು, ಮಾಗಡಿ ಮಣ್ಣಿನಲ್ಲಿ ನಾಡಪ್ರಭ ಕೆಂಪೇಗೌಡ, ಸಿದ್ಧಗಂಗೆ ಸಂತ ಲಿಂಗೈಕ್ಯ ಡಾ.ಶಿವಕುಮಾರಸ್ವಾಮಿ, ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ, ಕ್ರೀಡಾಪಟು ಕೆ.ಆರ್.ರಾಹುಲ್, ಸಮಾಜ ಸೇವಕ ಕೆ.ಬಾಗೇಗೌಡ, ತಗ್ಗೀಕುಪ್ಪೆ ರಂಗೇಗೌಡ ಸೇರಿದಂತೆ ನೂರಾರು ಮಂದಿ ಸಾಧನೆ ತಾಲೂಕಿನ ಜನತೆಗೆ ಸ್ಫೂರ್ತಿಯಾಗಿದೆ. ರಾಗಿ, ತೊಗರಿ ಸಂಗ್ರಹ: ರೈತ ಕೆ.ಬಾಗೇಗೌಡ ಅವರ ಸಹಾಯಕ ಚಂದ್ರಣ್ಣ , ಕೂಲಿಕಾರರನ್ನು ಹೊಂದಿಸಿಕೊಂಡು ರಾಗಿ, ತೊಗರಿ ಬೆಳೆದು ಧಾನ್ಯ ಸಂಗ್ರಹಿಸುವಲ್ಲಿ ಶ್ರಮಿಸಿದ್ದಾರೆ.
ನಂಬಿದವರನ್ನು ಭೂಮಿ ತಾಯಿ ಎಂದೂ ಕೈ ಬಿಡುವುದಿಲ್ಲ. ಭೂಮಿ ತಾಯಿ ಸೇವೆ ಮಾಡುವುದರಿಂದ ಸಿಗುವ ನೆಮ್ಮದಿ ಬೇರೆ ಯಾವ ಕಂಪನಿಗಳಲ್ಲಿ ದುಡಿದರೂ ಸಿಗುವುದಿಲ್ಲ ಎನ್ನುತ್ತಾರೆ ರೈತ ಕೆ.ಬಾಗೇಗೌಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.