ವಿದ್ಯುತ್‌ ಸಮಸ್ಯೆಗಳಿಂದ ಬಸವಳಿದಿದೆ ಸುಳ್ಯ ತಾಲೂಕು

ನಿರಂತರ ಲೋ ವೋಲ್ಟೇಜ್, ಅಸಮರ್ಪಕ ನಿರ್ವಹಣೆಯಿಂದ ಸಂಕಷ್ಟ

Team Udayavani, Feb 13, 2021, 4:00 AM IST

ವಿದ್ಯುತ್‌ ಸಮಸ್ಯೆಗಳಿಂದ ಬಸವಳಿದಿದೆ ಸುಳ್ಯ ತಾಲೂಕು

ಸುಳ್ಯ: ಸುಳ್ಯ ತಾಲೂಕಿನಾದ್ಯಂತ ಜನರಿಗೆ ವಿದ್ಯುತ್‌ ಒಂದಿಲ್ಲೊಂದು ರೀತಿಯಲ್ಲಿ ಕೈಕೊಟ್ಟು ಸಮಸ್ಯೆ ಉಂಟು ಮಾಡುತ್ತಿದೆ. ಬಹುಪಾಲು ಕೃಷಿಯನ್ನೇ ನೆಚ್ಚಿಕೊಂಡ ಜನರಿಗೆ ಆಗಾಗ ಕೈ ಕೊಡುತ್ತಿರುವ ವಿದ್ಯುತ್‌ ತಲೆನೋವಾಗಿ ಪರಿಣಮಿಸಿದೆ. ಲೋ ವೋಲ್ಟೇಜ್‌, ಅಸಮರ್ಪಕ ನಿರ್ವಹಣೆ ಹೀಗೆ ನಾನಾ ಸಮಸ್ಯೆಗಳಿಗಾಗಿ ಮೆಸ್ಕಾಂಗೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ.

ತಾಲೂಕಿನಾದ್ಯಂತ ಅರಣ್ಯ ಹಾಗೂ ವಾಣಿಜ್ಯ ಕೃಷಿ ಪರಿಸರವೇ ಹೆಚ್ಚಾಗಿ ರುವುದರಿಂದ ವಿದ್ಯುತ್‌ ತಂತಿಗಳು ಆಕಸ್ಮಿಕವಾಗಿ ಮರಗಿಡಗಳಿಗೆ ತಾಗಿ ಶಾರ್ಟ್‌ ಆಗಿ ಅಪಾಯ ಸಂಭವಿಸುತ್ತಿರುವುದರಿಂದ ಇದರ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆಯಿದೆ. ಪ್ರತೀ ವರ್ಷ ಸ್ಥಳಿಯರೇ ಶ್ರಮದಾನದ ಮೂಲಕ ತಂತಿಗೆ ತಾಗುವವ ಗೆಲ್ಲುಗಳನ್ನು ಕಡಿದು ಸಂಭವನೀಯ ಅಪಾಯವನ್ನು ತಡೆಯುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಈ ಸಮಸ್ಯೆಗೆ ದೀರ್ಘ‌ಕಾಲದ ಪರಿಹಾರ ಲಭಿಸದೆ ವಿದ್ಯುತ್‌ ಪದೇ ಪದೇ ಕೈಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿತರಣೆಯಲ್ಲಿ ಲೋಪ :

ಮಳೆಗಾಲದಲ್ಲಿ ಮಳೆಯ ಜತೆಗೆ ವಿದ್ಯುತ್‌ ವ್ಯತ್ಯಯವೂ ನಿವಾಸಿಗಳನ್ನು ಕತ್ತಲೆಯಲ್ಲೇ ದಿನ ಕಳೆಯುವಂತೆ ಮಾಡುತ್ತದೆ. ಬೇಸಗೆ ಕಾಲದಲ್ಲಿ ವಿದ್ಯುತ್‌ ತಂತಿಗಳು ಜೋತು ಬೀಳುತ್ತಿರುವುದರಿಂದ ಅವು ಒಂದಕ್ಕೊಂದು ತಾಗಿ ವಿದ್ಯುತ್‌ ಅಸಮರ್ಪಕ ವಿತರಣೆಗೆ ಕಾರಣವಾಗಿದೆ. ಉಬರಡ್ಕ ಮಿತ್ತೂರು, ದುಗಲಡ್ಕ, ನೆಲ್ಲೂರು ಕೆಮ್ರಾಜೆ, ಗುತ್ತಿಗಾರು, ಕಲ್ಮಡ್ಕ, ಪಂಜ, ಅರಂತೋಡು, ಕೊಲ್ಲಮೊಗ್ರ, ಹರಿಹರ ಪಲ್ಲತ್ತಡ್ಕ ಹಾಗೂ ಇತರ ಒಳ ಗ್ರಾಮಗಳಲ್ಲಿ ಇಂಥ ಅಪಾಯಕಾರಿ ಸನ್ನಿವೇಶಗಳು ಹೆಚ್ಚಾಗಿ ಕಾಣಿಸುತ್ತಿರುವುದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಇದರ ಕುರಿತು ಕ್ರಮ ಕೈಗೊಳ್ಳಬೇಕಿದೆ.

ಸುರಕ್ಷಿತ ಪೈಪ್‌ ಅಳವಡಿಸಿ :

ಇತ್ತೀಚೆಗೆ ವಿದ್ಯುತ್‌ ತಂತಿ ಹಾದು ಹೋಗುವ ಪ್ರದೇಶಗಳಲ್ಲಿ ಅಡಿಕೆ, ಕಾಳುಮೆಣಸು ತೆಗೆಯುವ ಸಂದರ್ಭ ಅಲ್ಯುಮೀನಿಯಂ ಏಣಿಗಳು ತಂತಿಗೆ ಸಿಲುಕಿ ಸಾವನ್ನಪ್ಪಿದ ಹಲವು ಪ್ರಕರಣಗಳು ನಮ್ಮ ಕಣ್ಣ ಮುಂದೆ ಜೀವಂತವಾಗಿರುವುದರಿಂದ ವಾಣಿಜ್ಯ ಕೃಷಿ ಜಾಗದಲ್ಲಿ ಹಾದು ಹೋಗುವ ವಿದ್ಯುತ್‌ ತಂತಿಗಳಿಗೆ ಕಡ್ಡಾಯವಾಗಿ ಸುರಕ್ಷಿತ ಪೈಪ್‌ಗ್ಳನ್ನು ಅಳವಡಿಸಬೇಕು ಎಂಬ ನಿಯಮ ಜಾರಿಗೊಳಿಸಬೇಕಾಗಿದೆ.ಅರಣ್ಯ ಪ್ರದೇಶಗಳಲ್ಲಿ ಹಾದು ಹೋಗುವ ತಂತಿಗಳನ್ನು ಆಯಾ ಮೆಸ್ಕಾಂ ಸಿಬಂದಿ ಪರಿಶೀಲಿಸಿ ಅದನ್ನು ಸರಿಪಡಿಸುವ ಕಾರ್ಯ ಸಮರ್ಪಕವಾಗಿ ಆಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ವಿದ್ಯುತ್‌ ಜತೆ ಕಾಡು ಪ್ರಾಣಿಗಳ ಕಾಟ :

ಏಕ ಕಾಲದಲ್ಲಿ ಎಲ್ಲರೂ ಪಂಪ್‌ ಆನ್‌ ಮಾಡುತ್ತಿರುವುದರಿಂದ ಲೋ ವೋಲ್ಟೆàಜ್‌ ಸಮಸ್ಯೆ ಕಾಡುತ್ತಿದೆ. ಪದೇ ಪದೇ ಪಂಪ್‌ ನಿಲ್ಲುವುದರಿಂದ ರೈತರು ಇತರ ಕೆಲಸಗಳನ್ನು ಬದಿಗಿಟ್ಟು ಪಂಪ್‌ ಸ್ಟಾರ್ಟ್‌ ಮಾಡುವತ್ತಲೇ ಗಮನಹರಿಸಬೇಕಾಗಿದೆ. ರಾತ್ರಿಹೊತ್ತು ವಿದ್ಯುತ್‌ ವ್ಯತ್ಯಯವಾಗುತ್ತಿರುವುದು ರೈತರ ನಿದ್ದೆ ಕೆಡಿಸಿದೆ. ಹಲವು ಕಡೆಗಳಲ್ಲಿ ಕೃಷಿಕರ ಪಂಪ್‌ಸೆಟ್‌ಗಳು ತೋಟದ ಒಳಗಿರುವುದರಿಂದ ಆನೆ, ಚಿರತೆ, ಕಾಡುಕೋಣ, ಹಂದಿಗಳ ಭಯವೂ ರೈತರನ್ನು ಕಾಡುತ್ತಿದೆ. ಹಾಗಾಗಿ ಮೆಸ್ಕಾಂ ಇಲಾಖೆ ಲೋ-ವೋಲ್ಟೇಜ್ ಸಮಸ್ಯೆಯನ್ನು ಶೀಘ್ರ ಪರಿಹರಿಸಿ ನೀರು ಹಾಯಿಸಲು ಸರಿಯಾದ ವೇಳಾಪಟ್ಟಿಯನ್ನು ನಿಗದಿಪಡಿಸಬೇಕು ಎಂಬುದು ತಾಲೂಕಿನ ಪ್ರತಿಯೊಬ್ಬ ರೈತನ ಒಕ್ಕೊರಲ ಆಗ್ರಹವಾಗಿದೆ.

ಕಡಿಮೆ ಗುಣಮಟ್ಟದ 2 ಸ್ಟಾರ್‌ ಪಂಪ್‌ಗಳನ್ನು ರೈತರು ಉಪಯೋಗಿಸುತ್ತಿರುವುದು ವಿದ್ಯುತ್‌ ಹೆಚ್ಚು ಪೋಲಾಗುತ್ತಿರಲು ಕಾರಣ. ಪ್ರತೀ ಪಂಪ್‌ಸೆಟ್‌ ಗಳಗೂ ಕೆಪಾಸಿಟರ್‌ ಅಳವಡಿಸಿದರೆ ಈ ರೀತಿಯ ಸಮಸ್ಯೆಗಳು ಬರುವುದಿಲ್ಲ. ಕೆಪಾಸಿಟರ್‌ ಅಳವಡಿಸದೇ ಇರುವುದರಿಂದ ಹತ್ತಿರದ ಟ್ರಾನ್ಸ್‌ಫಾರ್ಮರ್‌ ಗಳು ಹಾಳಾಗುತ್ತಿವೆ. ಈ ಬಗ್ಗೆ ರೈತರು ಮುಂಜಾಗ್ರತೆ ವಹಿಸಬೇಕು. ಈಗ ಮಾಡಾವಿಲ್ಲಿ ಉಪ ಕೇಂದ್ರವಾಗಿರುವುದರಿಂದ 33 ಕೆ.ವಿ ಹೆಚ್ಚುವರಿ ವಿದ್ಯುತ್‌ ಸರಬರಾಜು ಆಗುತ್ತಿದೆ. ಸದ್ಯ 110 ಕೆ.ವಿ ಘಟಕದ ಯೋಜನೆಯಿದ್ದರೂ ಜಾರಿಯಾಗುವವರೆಗೆ ರೈತರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಂಡಿದ್ದೇವೆ. ಹರೀಶ್‌ ನಾಯ್ಕ, ಮೆಸ್ಕಾಂ ಸುಳ್ಯ ಘಟಕದ ಅಧಿಕಾರಿ

ಲೋ-ವೋಲ್ಟೇಜ್‌ ನಿಂದಾಗಿ ಕೃಷಿಗೆ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ. ಹಲವು ಬಾರಿ ಪಂಪ್‌ ಆನ್‌-ಆಫ್‌ ಮಾಡಿದರೆ ಪಂಪ್‌ ಹಾಳಾಗುತ್ತದೆ. ಈ ಬಗ್ಗೆ ಮೆಸ್ಕಾಂನವರು ಶೀಘ್ರ ಪರಿಹಾರ ಕಂಡುಕೊಳ್ಳಬೇಕು. ಗೋಪಾಲಕೃಷ್ಣ ಭಟ್‌, ಕೃಷಿಕರು, ಉಬರಡ್ಕ

 

 -ಸುದೀಪ್‌ ರಾಜ್‌ ಸುಳ್ಯ

ಟಾಪ್ ನ್ಯೂಸ್

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1(1)

Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ

Aranthodu: ಕಾನೂನು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Aranthodu: ಕಾನೂನು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Untitled-5

Puttur: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

death

Belthangady: ನೇಣು ಬಿಗಿದು ವ್ಯಕ್ತಿ ಆತ್ಮಹ*ತ್ಯೆ

crime

Puttur: ಕಾರು ತಡೆಬೇಲಿ ಸಹಿತ ಹಲವು ವಾಹನಗಳಿಗೆ ಢಿಕ್ಕಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

sirsi

Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ

Yathanaa

Waqf Property: ಸಚಿವ ಜಮೀರ್‌ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್‌

ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ

ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.