ತಂತ್ರಜ್ಞಾನ ಅರಿವಿಗೆ ಡಿಜೆ ಫೋಟೋ ಎಕ್ಸ್‌ಪೋ ವೇದಿಕೆ

ವಾಸವಿ ಮಹಲ್‌ನಲ್ಲಿ ಪ್ರದರ್ಶನ-ಮಾರಾಟ ಮೇಳ ಆರಂಭಅತ್ಯಾಧುನಿಕ ಕ್ಯಾಮೆರಾಗಳು, ಹೊಸ ತಂತ್ರಜ್ಞಾನ ಹೊತ್ತು ತಂದ ಪ್ರಿಂಟರ್‌ಗಳು

Team Udayavani, Feb 13, 2021, 5:26 PM IST

ತಂತ್ರಜ್ಞಾನ ಅರಿವಿಗೆ ಡಿಜೆ ಫೋಟೋ ಎಕ್ಸ್‌ಪೋ ವೇದಿಕೆ

ಹುಬ್ಬಳ್ಳಿ: ಪೋಟೊ-ವಿಡಿಯೋಗ್ರಾಫರ್‌ ಸಂಘ ವಾಸವಿ ಮಹಲ್‌ನಲ್ಲಿ ಆಯೋಜಿಸಿರುವ ಡಿಜೆ ಪೋಟೊ ಎಕ್ಸ್ ಪೋ ಪ್ರದರ್ಶನ ವಿವಿಧ ನಾವೀನ್ಯ ಉತ್ಪನ್ನ, ತಂತ್ರಜ್ಞಾನಗಳೊಂದಿಗೆ ಗಮನ ಸೆಳೆಯುತ್ತಿದ್ದು, ಪೋಟೊ-ವಿಡಿಯೋಗ್ರಫಿಕ್ಷೇತ್ರದಲ್ಲಿ ಆಗಿರುವ ಹೊಸ ಕ್ರಾಂತಿಯ ಮಾಹಿತಿ ನೀಡುತ್ತಿದೆ.

ಅತ್ಯಾಧುನಿಕ ಕ್ಯಾಮೆರಾಗಳು, ಹೊಸ ತಂತ್ರಜ್ಞಾನ ಹೊತ್ತು ತಂದ ಪ್ರಿಂಟರ್‌ಗಳು, ಹಲವು ದಿನಗಳ ಕೆಲಸವನ್ನು ಕೆಲವೇ ಗಂಟೆಗಳಲ್ಲಿ ಮಾಡಿಕೊಡುವಸಾಫ್ಟ್‌ವೇರ್‌ಗಳಿಗೆ ವಾಸವಿ ಮಹಲ್‌ ವೇದಿಕೆಯಾಗಿದೆ. ಪೋಟೊ-ವಿಡಿಯೋಗ್ರಫಿ ವೃತ್ತಿಯಲ್ಲಿರುವವರು, ಛಾಯಾಚಿತ್ರ ಹವ್ಯಾಸವಿರುವವರು ಹತ್ತು ಹಲವು ಆಯ್ಕೆಯವಸ್ತು-ಉತ್ಪನ್ನಗಳನ್ನು ಕಣ್ತುಂಬಿಕೊಳ್ಳಲು,ಮಾಹಿತಿ ಪಡೆಯಲು ಮುಗಿಬೀಳುತ್ತಿದ್ದಾರೆ. ದೇಶ-ವಿದೇಶಗಳ ಖ್ಯಾತ ಕಂಪೆನಿಗಳು ತಮ್ಮ ಉತ್ಪನ್ನಗಳೊಂದಿಗೆ ಬಂದಿವೆ. ಕ್ಯಾಮೆರಾಗಳು, ಪ್ರಿಂಟರ್‌, ಥರ್ಮಲ್‌ಪ್ರಿಂಟರ್‌, ಕ್ಯಾಮೆರಾ ಸುರಕ್ಷೆಗೆ ಬ್ಯಾಗ್‌ ಗಳು ಸೇರಿದಂತೆ ವಿವಿಧ ಉತ್ಪನ್ನಗಳ ಪ್ರದರ್ಶನ-ಮಾರಾಟಕ್ಕೆ ಜೋರಾದ ಸ್ಪಂದನೆಯೂ ದೊರೆಯುತ್ತಿದೆ.

 2 ಗಂಟೆಯಲ್ಲಿ ಆಲ್ಬಂ ಸಿದ್ಧ: ಮದುವೆ, ಗೃಹ ಪ್ರವೇಶ, ಜನ್ಮದಿನ, ಜಾತ್ರೆ ಸೇರಿದಂತೆ ಯಾವುದೇ ಸಭೆ-ಸಮಾರಂಭದ ಛಾಯಾಚಿತ್ರಗಳ ಆಲ್ಬಂ ಮಾಡಬೇಕಾದರೆ ಕೆಲ ದಿನ ಬೇಕಾಗುತ್ತದೆ. ಆದರೆ ಇದೀಗಎಂತಹದ್ದೇ ಸಭೆ-ಸಮಾರಂಭ ಇದ್ದರೂಕೇವಲ ಎರಡು ತಾಸಿನಲ್ಲಿಯೇ ಆಲ್ಬಂಸಿದ್ಧಪಡಿಸಿ ಗ್ರಾಹಕರಿಗೆ ನೀಡಬಹುದಾಗಿದೆ. ಅದಕ್ಕಾಗಿ ಬೆಂಗಳೂರಿನ ಸಂಸ್ಥೆಯೊಂದು ಡಿಜಿಫ್ಲಿಕ್‌ ಆಲ್ಬಂ ಡಿಸೈನಿಂಗ್‌ ಸಾಫ್ಟ್ ವೇರ್‌ ಸಿದ್ಧಪಡಿಸಿದೆ. ಈ ಸಾಫ್ಟ್‌ವೇರ್‌ನಲ್ಲಿ ಪೋಟೊ ಆಯ್ಕೆ, ಪೋಟೊ ನಿರ್ವಹಣೆ, ಪೋಟೊ ಎಡಿಟ್‌ ಸೇರಿದಂತೆ ವಿವಿಧಬಗೆಯ ಅವಕಾಶಗಳನ್ನು ನೀಡಿದ್ದು, ಅದರ ಮೂಲಕ ಕೇವಲ 2 ಗಂಟೆಗಳಲ್ಲಿ ಆಲ್ಬಂ ಸಿದ್ಧಪಡಿಸಬಹುದಾಗಿದೆ.

ಸಾಫ್ಟ್‌ವೇರ್‌ನಲ್ಲಿ ಉಚಿತ 20 ಸಾವಿರಕ್ಕೂ ಹೆಚ್ಚು ಡಿಸೈನ್‌ಗಳನ್ನು ಅಳವಡಿಸಲಾಗಿದೆ, ಏಕಕಾಲಕ್ಕೆ 20 ಸಾವಿರಕ್ಕಿಂತ ಹೆಚ್ಚು ಡಿಸೈನ್‌ ತಯಾರಿಸಬಹುದು. 27 ಸಾವಿರಕ್ಕೂ ಹೆಚ್ಚು ಲೇಔಟ್‌ಗಳು, 37 ಸಾವಿರಕ್ಕೂ ಹೆಚ್ಚು ಕ್ಲಿಪಾರ್ಟ್ಸ್ಗಳು, 10 ಸಾವಿರಕ್ಕೂ ಹೆಚ್ಚು ಫ್ರೇಮ್‌ಗಳು ಹಾಗೂ ಮಾಸ್ಕ್ ಗಳು, 5500 ಕ್ಕೂ ಹೆಚ್ಚು ಬ್ಯಾಕ್‌ಗ್ರೌಂಡ್ಸ್‌ಗಳು ಸೇರಿದಂತೆ ಇನ್ನು ಹಲವಾರು ವೈಶಿಷ್ಟ ಗಳನ್ನು ಈ ಸಾಫ್ಟ್‌ವೇರ್‌ನಲ್ಲಿ ಅಳವಡಿಸಲಾಗಿದೆ.

ಸಾಫ್ಟ್‌ವೇರ್‌ ಮೂಲ ಬೆಲೆ 9 ಸಾವಿರ ರೂ. ಇದ್ದು, ಪ್ರದರ್ಶನದ ಹಿನ್ನೆಲೆಯಲ್ಲಿ ರಿಯಾಯಿತಿಯಾಗಿ 7 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಪ್ಯಾನಾಸೋನಿಕ್‌, ಫಿಜಿ, ಸ್ಯಾಡೋ, ಎಲ್‌ ಇಡಿ ಫ್ರೇಮ್ಸ್‌, ಸ್ಟುಡಿಯೋ-29 ಸೇರಿದಂತೆ ಹೈದ್ರಾಬಾದ್‌, ಮಹಾರಾಷ್ಟ್ರ, ದೆಹಲಿ ಸಂಸ್ಥೆಗಳು ಪ್ರದರ್ಶನದಲ್ಲಿ ಪಾಲ್ಗೊಂಡಿವೆ. ಎರಡು ದಿನಗಳ ಕಾಲ ನಡೆಯಲಿರುವ ಪ್ರದರ್ಶನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಪೋಟೊ ಹಾಗೂ ವಿಡಿಯೋ ಗ್ರಾಫರ್ ಆಗಮಿಸಿ ತಮಗೆ ಬೇಕಾದ ವಸ್ತುಗಳ ಖರೀದಿ ಹಾಗೂ ವೀಕ್ಷಣೆ ಮಾಡುತ್ತಿರುವುದು ಕಂಡು ಬಂದಿತು.

10 ಸೆಕೆಂಡ್‌ನ‌ಲಿ ಫ್ರಿಂಟ್‌ :

ಇಂಕ್ವೆಟ್‌ ಹಾಗೂ ಥರ್ಮಲ್‌ ಪ್ರಿಂಟರ್‌ ನೋಡುಗರ ಗಮನ ಸೆಳೆಯುತ್ತಿವೆ. ಈ ಪ್ರಿಂಟರ್‌ ಗಳಲ್ಲಿ ಒಂದು ಛಾಯಾಚಿತ್ರ ಸೆರೆ ಹಿಡಿದ ಕೇವಲ 10ರಿಂದ 12 ಸೆಕೆಂಡ್‌ಗಳಲ್ಲಿ ಪ್ರಿಂಟ್‌

ತೆಗೆದು ಗ್ರಾಹಕರಿಗೆ ನೀಡಬಹುದಾಗಿದೆ. ಇದರಿಂದ ಸಮಯದ ಉಳಿತಾಯ ಹಾಗೂಗ್ರಾಹಕನಿಗೆ ಬೇಗ ನೀಡಿದ ಸಂತಸ ಎರಡು ಆಗಲಿದೆ. ಫಿಜಿಫಿಲ್ಮಂ ಹಾಗೂ ಡಿಎನ್‌ಪಿ ಕಂಪೆನಿಗಳ ಯಂತ್ರಗಳು ಪ್ರದರ್ಶನದಲ್ಲಿವೆ.

ಪೋಟೋ-ವಿಡಿಯೋಗ್ರಾಫಿಗೆ ಅವಶ್ಯವಾಗಿ ಬೇಕಾಗುವ ಸಣ್ಣ ಸಣ್ಣ ವಸ್ತುಗಳು ಪ್ರದರ್ಶನದಲ್ಲಿ ಇಲ್ಲದಿರುವುದು ನಿರಾಶೆಮೂಡಿಸಿವೆ. ಕ್ಯಾಮರಾ ಸ್ಟ್ಯಾಂಡ್‌ಗಳಿಲ್ಲ, ಸ್ಥಳೀಯ ಕಂಪನಿಗಳ ಸ್ಟಾಲ್‌ಗ‌ಳು ಹೆಚ್ಚಾಗಿದ್ದು, ಹೊರಗಿನವರು ಬಂದಿಲ್ಲ. ಇದರಿಂದ ಈ ವರ್ಷದ ಪ್ರದರ್ಶನ ಬೇಸರ ಮೂಡಿಸಿದೆ. –ಮೈಲಾರ ಪಂಚಣ್ಣವರ, ಮುಗದ, ಪೋಟೋಗ್ರಾಫರ್‌

ಬೆಂಗಳೂರಿಗಿಂತ ಇಲ್ಲಿ ದುಬಾರಿಯಾಗಿದ್ದು, ಅಗತ್ಯ ಪರಿಕರಗಳು ಇಲ್ಲವಾಗಿವೆ. ಬೇಕಾದ ವಸ್ತುಗಳ ಸ್ಟಾಲ್‌ಗ‌ಳೇ ಇಲ್ಲಿ ಇಲ್ಲವಾಗಿವೆ.  –ವೀರೇಶ ರೇವಣಕಿ, ಗಜೇಂದ್ರಗಡ, ಪೋಟೋಗ್ರಾಫರ್‌

ಥರ್ಮಲ್‌ ಪ್ರಿಂಟರ್‌ನಲ್ಲಿ ಕೇವಲ 10 ಸೆಕೆಂಡ್‌ಗಳಲ್ಲಿ ಪೋಟೋ ಪ್ರಿಂಟ್‌ ತೆಗೆಯಬಹುದು. ಇದರಿಂದ ಕಡಿಮೆ ಸಮಯ, ಕಡಿಮೆ ವೆಚ್ಚವಾಗಲಿದ್ದು, ಗ್ರಾಹಕರಿಗೆ ಹಾಗೂ ಪೋಟೋಗ್ರಾಫರ್‌ಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.  ನವೀನ ಶೆಟ್ಟಿ, ಕರ್ನಾಟಕ-ಗೋವಾ ಸೇಲ್ಸ್‌ಮನ್‌, ಡಿಎನ್‌ಪಿ ಕಂಪನಿ

ಬದಲಾಗುತ್ತಿರುವ ತಂತ್ರಜ್ಞಾನದಿಂದ ಜನರು ಹೊಸದನ್ನು ಕಾಣಲು ಬಯಸುತ್ತಿದ್ದಾರೆ. ಇದೀಗ ಎಲ್‌ಇಡಿ ಪೋಟೋಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಪ್ರದರ್ಶನದಲ್ಲಿ ಇಡಲಾಗಿದೆ. ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದ್ದು, ನಾಳೆಯವರೆಗೆ ಪ್ರದರ್ಶನ ನಡೆಯಲಿದೆ.  ಆನಂದ ಇರಕಲ್ಲ, ಸ್ಟುಡಿಯೋ-29

 

-ಬಸವರಾಜ ಹೂಗಾರ

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.