ಇ ಶೌಚಾಲಯಗಳಿಗೆ ಕಾಯಕಲ್ಪ
ಸ್ವಚ್ಛತೆಯೊಂದಿಗೆ ಭದ್ರತೆ ವ್ಯವಸ್ಥೆ, ಏಪ್ರಿಲ್‌ನಿಂದ 30 ಶೌಚಾಲಯ ಸುಸ್ಥಿತಿಗೆ
Team Udayavani, Feb 13, 2021, 7:07 PM IST
ಹುಬ್ಬಳ್ಳಿ: ಅವ್ಯವಸ್ಥೆ ಆಗರವಾಗಿರುವ ಅತ್ಯಾಧುನಿಕ ಇ-ಶೌಚಾಲಯಗಳಿಗೆ ಇನ್ನು ಮುಂದೆ ಸ್ವತ್ಛತೆಯೊಂದಿಗೆ ಸೂಕ್ತ ಭದ್ರತೆ ವ್ಯವಸ್ಥೆ ದೊರೆಯಲಿದ್ದು, ಏಪ್ರಿಲ್ ವೇಳೆಗೆ ಮಹಾನಗರ ವ್ಯಾಪ್ತಿಯ 30 ಇ-ಶೌಚಾಲಯಗಳು ಮೂಲ ಸ್ವರೂಪಕ್ಕೆ ಬಂದು ಸಮರ್ಪಕವಾಗಿ ಕಾರ್ಯ ನಿರ್ವಹಿಸಲಿವೆ.
ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದ ವಿವಿಧೆಡೆ ಅಳವಡಿಸಿದ್ದ ಇ-ಶೌಚಾಲಯಗಳು ನಿರ್ವಹಣೆ ಕೊರತೆಯಿಂದ ಅವ್ಯವಸ್ಥೆಯ ತಾಣವಾಗಿವೆ. ಕೆಲವೆಡೆ ಬಳಕೆಯ ಸ್ಥಿತಿಯಲ್ಲಿದ್ದರೂ ತಾಂತ್ರಿಕವಾಗಿ ಎಲ್ಲವೂ ದುರಸ್ತಿ ಹಂತ ತಲುಪಿವೆ. ಹೀಗಾಗಿ ಕೆಲವೆಡೆ ಶೌಚಾಲಯಗಳ ಮುಂದೆ ಮೂಗು ಮುಚ್ಚಿಕೊಂಡು ದಾಟುವಂತಾಗಿದ್ದು,ಜನರು ಪಾಲಿಕೆ ಹಾಗೂ ಸ್ಮಾರ್ಟ್‌ಸಿಟಿ ಕಂಪನಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಎಲ್ಲಾ ಅವ್ಯವಸ್ಥೆಗಳಿಗೆ ತಿಲಾಂಜಲಿಇರಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಸಮಗ್ರ ಯೋಜನೆ ರೂಪಿಸಿದ್ದು, ಅಂದುಕೊಂಡಂತೆ ಆದರೆ ಏಪ್ರಿಲ್ ತಿಂಗಳ ಆರಂಭದಲ್ಲಿ ಸುಸ್ಥಿತಿಗೆ ತಲುಪಲಿವೆ.
ಜನರ ಕೆಟ್ಟ ಮನಸ್ಥಿತಿ: ಹು-ಧಾ ಮಹಾನಗರ ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಯಾಗುತ್ತಿದ್ದಂತೆ ಸ್ಮಾರ್ಟ್‌ಸಿಟಿಯಿಂದ15 ಹಾಗೂ ಮಹಾನಗರ ಪಾಲಿಕೆಯಿಂದ 15 ಸೇರಿ 30 ಇ-ಶೌಚಾಲಯಗಳನ್ನು ಅಳವಡಿಸಲಾಯಿತು. ಮೊದಲಒಂದೆರಡು ತಿಂಗಳು ಉತ್ತಮವಾಗಿ ಕಾರ್ಯನಿರ್ವಹಿಸಿದರೂನಿರ್ವಹಣೆ ಕೊರತೆ ಹಾಗೂ ಜನರ ಕೆಟ್ಟ ಮನಸ್ಥಿತಿಯಿಂದಾಗಿ ಬಹುತೇಕ ಶೌಚಾಲಯಗಳು ಸ್ಮಾರಕಗಳಂತೆ ಉಳಿದವು. ಕೆಲವೆಡೆ ಬ್ಯಾಟರಿ ಸೇರಿದಂತೆ ಕೆಲ ಸಾಮಗ್ರಿಗಳುಕಳ್ಳತನವಾದವು. ಇನ್ನೂ ಕೆಲವೆಡೆ ವಿಕೃತ ಮನಸ್ಸಿನ ಜನರು ಹಾಳು ಮಾಡಿದ್ದರು.
ತಾಂತ್ರಿಕ ಸಮಸ್ಯೆ :
ಇ-ಶೌಚಾಲಯಗಳನ್ನು ಅಳವಡಿಸಿದ ಕಂಪನಿಗೆ ಒಂದು ವರ್ಷ ನಿರ್ವಹಣೆ ಹೊಣೆಗಾರಿಕೆ ಇತ್ತು. ಆದರೆ ಜನರು ಶೌಚಾಲಯಗಳನ್ನು ಹಾಳು ಮಾಡುತ್ತಿರುವುದು ನುಂಗಲಾರದ ತುತ್ತಾಗಿತ್ತು. ಹೀಗಾಗಿ ಕಂಪನಿ ನಿರ್ವಹಣೆಯನ್ನು ಕೈ ಚೆಲ್ಲಿತು.2 ಶೌಚಾಲಯ ಅಳವಡಿಸಲು ಸ್ಥಳದ ಸಮಸ್ಯೆ ಆಗಿತ್ತು. 1 ವರ್ಷ ನಿರ್ವಹಣೆ ಅವ ಧಿ ಮುಗಿದರೂ2 ಶೌಚಾಲಯ ನಿರ್ಮಾಣವಾಗದ ಪರಿಣಾಮ ಪಾಲಿಕೆ ತನ್ನ ಸುಪರ್ದಿಗೆ ಪಡೆಯಲಿಲ್ಲ. ಹೀಗಾಗಿಕೆಲವೊಂದು ಪ್ರದೇಶದಲ್ಲಿ ಶೌಚಾಲಯಗಳ ಪರಿಸ್ಥಿತಿ ಅಧೋಗತಿಗೆ ತಲುಪಿದವು. ಎಲ್ಲಾ ಶೌಚಾಲಯಗಳು ಸೆನ್ಸರ್ ಆಧಾರಿತವಾಗಿದ್ದು, ಹಣ ಪಾವತಿಸಿದ ನಂತರ ಬಳಕೆ ಮಾಡುವವ್ಯವಸ್ಥೆ ಸಂಪೂರ್ಣ ಕೆಟ್ಟು ಹೋಗಿದೆ.
ನಿರ್ವಹಣೆಗಾಗಿ ಯೋಜನೆ :
ಮಹಾನಗರ ಪಾಲಿಕೆ 30 ಇ-ಶೌಚಾಲಯಗಳ ನಿರ್ವಹಣೆಗಾಗಿ ಯೋಜನೆ ರೂಪಿಸಿದ್ದು, ತಾಂತ್ರಿಕ ಕಾರ್ಯನಿರ್ವಹಣೆ ಜೊತೆಗೆ ಪ್ರತಿಶೌಚಾಲಯಕ್ಕೆ ಒಬ್ಬರಂತೆ ನಿರ್ವಹಣಾ ಸಿಬ್ಬಂದಿ, ಸ್ವತ್ಛತೆ ಸೇರಿದಂತೆ ಪ್ರತಿಯೊಂದು ಕಾರ್ಯ ಗುತ್ತಿಗೆ ನೀಡಲು ನಿರ್ಧರಿಸಿದೆ. ಇ-ಶೌಚಾಲಯಗಳು ಅತ್ಯಾಧುನಿಕ ತಾಂತ್ರಿಕತೆ ಹೊಂದಿರುವ ಹಿನ್ನೆಲೆಯಲ್ಲಿ ತಾಂತ್ರಿಕ ಸಿಬ್ಬಂದಿಇರಬೇಕು. ಮೊದಲ ಒಂದು ವರ್ಷಗುತ್ತಿಗೆ ಪಡೆದ ಕಂಪನಿಯ ನಿರ್ವಹಣೆಯಕಾರ್ಯವೈಖರಿ ಮೇಲೆ ಮುಂದಿನ ನಾಲ್ಕುವರ್ಷ ಮುಂದುವರಿಸುವ ಯೋಜನೆಯಿದೆ.ಏಪ್ರಿಲ್ ತಿಂಗಳಲ್ಲಿ ಗುತ್ತಿಗೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳುವ ಅಂದಾಜಿದೆ.
ಪಾಲಿಕೆ ಹೆಗಲಿಗೆ ಹೊಣೆ :
ಶೌಚಾಲಯಗಳ ನಿರ್ವಹಣೆ ಗುತ್ತಿಗೆ ನೀಡಲು ಯೋಜನೆ ತಯಾರಿಸುತ್ತಿದ್ದು, ಪಾಲಿಕೆ ವ್ಯಾಪ್ತಿಯ 15 ಶೌಚಾಲಯಗಳನ್ನು ಸಂಪೂರ್ಣ ದುರಸ್ತಿಗೊಳಿಸಿ ಸುಸ್ಥಿತಿಗೆ ತರುವಂತೆ ಕಂಪೆನಿಗೆ ನೊಟೀಸ್ ನೀಡಿದ ಹಿನ್ನೆಲೆಯಲ್ಲಿ ಅಗತ್ಯ ಬಿಡಿಭಾಗಗಳ ಅಳವಡಿಕೆ ಸೇರಿದಂತೆ ಮೂಲರೂಪಕ್ಕೆ ತರುವ ಕೆಲಸ ಕಂಪೆನಿಯಿಂದ ನಡೆಯುತ್ತಿದೆ. ಸ್ಮಾರ್ಟ್‌ಸಿಟಿಯ 15 ಶೌಚಾಲಯಗಳನ್ನು ನಿರ್ವಹಿಸುವುದುಅವರಿಗೆ ಅಸಾಧ್ಯವಾಗಿದ್ದು, ಇವುಗಳನ್ನು ಕೂಡ ಪಾಲಿಕೆಗೆ ಹಸ್ತಾಂತರಿಸಲು ಮುಂದಾಗಿದ್ದಾರೆ. ಹೀಗಾಗಿ ಎಲ್ಲಾ ಶೌಚಾಲಯಗಳನ್ನು ಸುಸ್ಥಿತಿಗೆ ತಂದ ನಂತರ ಜಂಟಿ ಸಮೀಕ್ಷೆ ನಡೆಸಿ ಏಪ್ರಿಲ್ ತಿಂಗಳೊಳಗೆ ಪಾಲಿಕೆ ತನ್ನ ಸುಪರ್ದಿಗೆ ಪಡೆಯಲಿದೆ. ಶೌಚಾಲಯದ ಸ್ವತ್ಛತೆ ಪಾಲಿಕೆಯ ಜವಾಬ್ದಾರಿಯಾಗಿರುವುದರಿಂದ ಸ್ಮಾರ್ಟ್‌ಸಿಟಿಯಿಂದ ನೀಡಿರುವ ಜೆಟ್ಟಿಂಗ್ ಯಂತ್ರಗಳನ್ನು ಬಳಸಿ ಸ್ವಚ್ಛಗೊಳಿಸಿ ಜನಬಳಕೆಗೆ ಯೋಗ್ಯ ರೀತಿಯಲ್ಲಿ ಇರಿಸುವ ಕೆಲಸ ನಡೆಯುತ್ತಿದೆ.
ಸ್ಮಾರ್ಟ್‌ಸಿಟಿಗೆ ಪೂರಕವಾಗಿ ಅತ್ಯಾಧುನಿಕ ಇ-ಶೌಚಾಲಯಗಳನ್ನು ಅಳವಡಿಸಲಾಗಿತ್ತು. ಆದರೆ ಜನರು ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಲಿಲ್ಲ. ಇದರಲ್ಲಿನ ಕೆಲ ವಸ್ತುಗಳನ್ನು ಮುರಿದುಹಾಕಿದ್ದಾರೆ. ಕೆಲವು ಕಳ್ಳತನವಾಗಿವೆ.ಅವ್ಯವಸ್ಥೆ ಹೋಗಲಾಡಿಸಲು ಎಲ್ಲ ಇ-ಶೌಚಾಲಯಗಳ ಸಂಪೂರ್ಣ ನಿರ್ವಹಣೆಗಾಗಿ ಯೋಜನೆಸಿದ್ಧಪಡಿಸಲಾಗಿದೆ. ದುರಸ್ತಿಯಲ್ಲಿರುವಶೌಚಾಲಯಗಳನ್ನು ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ. ಏಪ್ರಿಲ್ ತಿಂಗಳೊಳಗೆ ಇದು ಕಾರ್ಯರೂಪಕ್ಕೆ ಬರಲಿದೆ. –ಡಾ| ಸುರೇಶ ಇಟ್ನಾಳ, ಆಯುಕ್ತ, ಹು-ಧಾ ಮಹಾನಗರ ಪಾಲಿಕ
ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Nikhil Kumarswamy: ಸೋತ ನಿಖಿಲ್‌ಗೆ ಜಿಲ್ಲೆಯ ಪಕ್ಷ ಸಂಘಟನೆ ಹೊಣೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.