ಕೈ ಕೊಟ್ಟ “ಕಾವೇರಿ’; ಆಸ್ತಿ ನೋಂದಣಿ ಕಿರಿಕಿರಿ
ನೋಂದಣಿ ಇಲಾಖೆಯಲ್ಲಿ ಪ್ಲಾಟ್‌ಗಳ ಮಾಹಿತಿ ಅಲಭ್ಯನಿತ್ಯವೂ ಅಪ್‌ಲೋಡ್ ಆಗದ ದಾಖಲಾತಿ
Team Udayavani, Feb 13, 2021, 8:26 PM IST
ಗಂಗಾವತಿ: ಪೌರಾಡಳಿತ ಮತ್ತು ನೋಂದಣಿ ಇಲಾಖೆಗಳ ಸಮನ್ವಯ ಕೊರತೆಯಿಂದಾಗಿ ನಗರ ಪ್ರದೇಶಗಳಲ್ಲಿ ನಿವೇಶನ ಖರೀದಿ ಮಾಡುವವರಿಗೆ ಆಸ್ತಿ ನೋಂದಾವಣಿ ಮಾಡುವುದು ದುಸ್ತರವಾಗಿದೆ. ಇದರಿಂದಸರ್ಕಾರಕ್ಕೆ ಅಪಾರ ಪ್ರಮಾಣದ ಆದಾಯ ನಿಲುಗಡೆಯಾಗಿದೆ. ರಾಜ್ಯದಲ್ಲಿ ಕಾವೇರಿಸಾಫ್ಟ್‌ವೇರ್ ಮೂಲಕ ನಗರ ಪ್ರದೇಶದಲ್ಲಿಆಸ್ತಿಗಳ ನೋಂದಣಿ ಕಾರ್ಯಕ್ಕೆ ತಡೆಯಾಗಿದೆ.
ನಗರಸಭೆ ಮತ್ತು ನೋಂದಣಿ ಇಲಾಖೆಯ ಆಸ್ತಿಗಳ ದಾಖಲಾತಿ ಸರಿಯಾಗಿ ಆಪ್‌ಲೋಡ್ ಆಗದೇ ಇರುವುದರಿಂದ ಆಸ್ತಿಗಳಪೈಕಿ ಖರೀದಿಸಿದ ನಿವೇಶನ ಅಳತೆಯಲ್ಲಿವ್ಯತ್ಯಾಸವಾಗುತ್ತಿದೆ. ಇದರಿಂದ ನೋಂದಣಿಕಾರ್ಯಕ್ಕೆ ತಡೆಯಾಗಿದೆ. ಸರ್ಕಾರಕ್ಕೆ ಶುಲ್ಕದರೂಪದಲ್ಲಿ ಬರಬೇಕಾಗಿರುವ ಆದಾಯಸ್ಥಗಿತವಾಗಿದೆ. ಒಂದೂವರೆ ವರ್ಷದ ಹಿಂದೆನಗರಸಭೆಯಲ್ಲಿ ಆಸ್ತಿ ಮ್ಯುಟೇಶನ್ ಹಾಗೂ ಖಾತಾ ನಕಲು ಪ್ರಮಾಣಪತ್ರ ಪಡೆಯಲು ಅನುಕೂಲವಾಗುವಂತೆ ಗ್ರಾಮೀಣಾಭಿವೃದ್ಧಿಮತ್ತು ನಗರಾಭಿವೃದ್ಧಿ ಹಾಗೂ ನೋಂದಣಿ ಇಲಾಖೆ ಜಂಟಿಯಾಗಿ ಕಾವೇರಿ ಸಾಫ್ಟ್ ವೇರ್ ಅಭಿವೃದ್ಧಿಪಡಿಸಿದ್ದು, ಸಾರ್ವಜನಿಕರು ಆಸ್ತಿ ಖರೀದಿ ಮತ್ತು ಮಾರಾಟ ಮಾಡುವ ಸಂದರ್ಭದಲ್ಲಿ ನೋಂದಣಿ ಮತ್ತು ಇತರೆ ಇಲಾಖೆಗಳಲ್ಲಿ ಆನ್‌ಲೈನ್ ಮೂಲಕ ದಾಖಲಾತಿ ಮಾಡಲಾಗುತ್ತದೆ.
ಗ್ರಾಮೀಣ ಭಾಗದಲ್ಲಿರುವ ಆಸ್ತಿಗಳನ್ನು ನೋಂದಣಿ ಇಲಾಖೆ ನಿರ್ವಹಿಸುತ್ತಿದ್ದು, ಮಾರಾಟ ಮತ್ತು ಖರೀದಿ ಸಂದರ್ಭದಲ್ಲಿ ದಾಖಲಾತಿಗಳನ್ನು ನೋಂದಣಿ ದಿನವೇ ಸ್ಕ್ಯಾ ನ್ ಮಾಡಿ ಅವುಗಳನ್ನು ಸಂಬಂಧಪಟ್ಟ ಗ್ರಾಪಂಗಳ ಸಾಫ್ಟ್ವೇರ್ ಗಳಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ಈ ಕಾರ್ಯ ಯಶಸ್ವಿಯಾಗಿದ್ದು, ನಗರ ಪ್ರದೇಶದಲ್ಲೂ ಕಾವೇರಿ ಸಾಫ್ಟ್ವೇರ್ ಮೂಲಕ ನೋಂದಣಿ
ಮಾಡಿದ ದಿನದಂದು ಸ್ಕ್ಯಾ ನ್ ಮಾಡಿ ಅಪ್ ಲೋಡ್ ಮಾಡುವ ಯೋಜನೆ ಇದ್ದರೂ ಕೊಪ್ಪಳ ಸೇರಿ ರಾಜ್ಯಾದ್ಯಂತ ನಿತ್ಯವೂ ಸ್ಕ್ಯಾ ನ್ ಮತ್ತು ಅಪ್‌ಲೋಡ್ ಕಾರ್ಯವಾಗುತ್ತಿಲ್ಲ. ನೋಂದಣಿಯಾದ ಮರುದಿನ ಮಧ್ಯಾಹ್ನದವರೆಗೆ ಅಪ್‌ಲೋಡ್ ಕಾರ್ಯ ನಡೆಯುವುದರಿಂದ ಸಾರ್ವಜನಿಕರು ನೋಂದಣಿ ಮಾಡಲು ವಿಳಂಬಮಾಡುವಂತಾಗುತ್ತದೆ. ನಿಯಮದಂತೆ ಅಂದಿನ ಕಾರ್ಯವನ್ನು ಅಂದೇ ಸ್ಕ್ಯಾ ನ್ ಮತ್ತು ಆಪ್‌ಲೋಡ್ ಮಾಡಬೇಕು. ಆದರೆ ಈ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ.
ನೋಂದಣಿಯಾಗದ ಅನ್‌ಸೈಜ್ ನಿವೇಶನ: ಕಾವೇರಿ ಸಾಫ್ಟ್ವೇರ್ ಬಂದಾಗಿನಿಂದ ನಗರ ಪ್ರದೇಶದ ಲೇಔಟ್‌ಗಳ ನಿವೇಶನದಲ್ಲಿರುವ ಅನಿಯಮಿತ (ಅನ್‌ಸೈಜ್ ಪ್ಲಾಟ್)ನಿವೇಶನದ ದಾಖಲಾತಿಗಳುನೋಂದಣಿ ಇಲಾಖೆಯಲ್ಲಿ ಲಭ್ಯವಿಲ್ಲ.ಇದರಿಂದ ನಿವೇಶನದ ಪೈಕಿ ನಿವೇಶನದನೋಂದಣಿ ಇಲ್ಲದೇ ಸಾರ್ವಜನಿಕರುಪರದಾಡುತ್ತಿದ್ದಾರೆ. ನಗರಸಭೆಯ ಕಂದಾಯ ವಿಭಾಗದವರು ತಮ್ಮ ವ್ಯಾಪ್ತಿಯ ಆಸ್ತಿಗಳನ್ನು ಸಂಪೂರ್ಣವಾಗಿ ನೋಂದಣಿ ಇಲಾಖೆಕಾವೇರಿ ಸಾಫ್ಟ್ವೇರ್‌ಗೆ ಅಪ್‌ಲೋಡ್‌ಮಾಡಬೇಕಿದ್ದು, ಬಹುತೇಕ ಜಿಲ್ಲೆಗಳಲ್ಲಿಇನ್ನೂ ಅಪ್‌ಲೋಡ್ ಆಗಿಲ್ಲ. ಸಾರ್ವಜನಿಕರು ಆಸ್ತಿಯ ಮ್ಯುಟೇಶನ್‌ಮತ್ತು ಖಾತಾ ನಕಲು ಪ್ರಮಾಣಪತ್ರವನ್ನುನಿಗದಿ ಶುಲ್ಕ ಭರಿಸಿ ಆನ್‌ಲೈನ್ ಮೂಲಕ ಪಡೆಯಲು ಕಾವೇರಿ ಸಾಫ್ಟ್ವೇರ್ ನೆರವಾಗಲಿದೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ. ಆದರೆ ಗಂಗಾವತಿ ಸೇರಿ ರಾಜ್ಯದ ಬಹುತೇಕ ನಗರಸಭೆಗಳಲ್ಲಿ ಮ್ಯಾನುವಲ್‌ನಲ್ಲಿ ಫಾರಂ-3 ಹಾಗೂ ಖಾತಾ ನಕಲು ಪ್ರಮಾಣ ಪತ್ರವನ್ನು ಸರ್ಕಾರದ ಆದೇಶ ಧಿಕ್ಕರಿಸಿ ವಿತರಿಸಲಾಗುತ್ತಿದೆ.
ಕಾವೇರಿ ಸಾಫ್ಟ್ವೇರ್ ಮೂಲಕ ನಗರ ಪ್ರದೇಶದ ಆಸ್ತಿ ನೋಂದಣಿ ಕಾರ್ಯಕ್ಕೆ ತಾಂತ್ರಿಕ ಸಿದ್ಧತೆ ನಡೆಸಿ ಯಶಸ್ವಿಯಾಗಿದೆ. ನಗರ ಪ್ರದೇಶದ ಆಸ್ತಿಗಳನ್ನು ಇನ್ನೂ ಸರಿಯಾಗಿ ಅಪ್ ಲೋಡ್ ಮಾಡದೇ ಇರುವುದರಿಂದ ಅನ್‌ಸೈಜ್ ನಿವೇಶನ ನೋಂದಣಿಯಾಗುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಇನ್ಮುಂದೆ ನಿತ್ಯ ನೋಂದಣಿಯಾದ ಆಸ್ತಿಗಳ ದಾಖಲಾತಿಗಳನ್ನು ಸ್ಕ್ಯಾನಿಂಗ್ ಮಾಡಿ ಅಪ್‌ಲೋಡ್ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. –ಫರೀದಾ, ನೋಂದಣಿ ಅಧಿಕಾರಿ, ಗಂಗಾವತಿ
ನಗರಸಭೆ ಮತ್ತು ನೋಂದಣಿ ಇಲಾಖೆ ಸಮನ್ವಯ ಕೊರತೆಯಿಂದ ನಗರ ಪ್ರದೇಶದ ಅನ್‌ಸೈಜ್ ಆಸ್ತಿಗಳ ನೋಂದಣಿ ಕಾರ್ಯ ಸ್ಥಗಿತವಾಗಿದೆ. ನಗರಸಭೆ ಮತ್ತು ನೋಂದಣಿ ಇಲಾಖೆ ಅಧಿಕಾರಿಗಳು ದಾಖಲಾತಿಗಳನ್ನು ಅಪ್‌ಲೋಡ್ ಮಾಡುವ ಮೂಲಕ ಸಾರ್ವಜನಿಕರಿಗೆ ನೆರವಾಗಬೇಕು. ಇದರಿಂದ ಕೆಲಸದಲ್ಲಿ ಸಮಯ ಉಳಿತಾಯ ಮತ್ತು ಸರ್ಕಾರಕ್ಕೆ ನೋಂದಣಿ ಶುಲ್ಕದ ಆದಾಯ ಬರುತ್ತದೆ. -ಎಸ್. ಸುರೇಶ, ನಗರ ನಿವಾಸಿ
-ಕೆ.ನಿಂಗಜ್ಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಹೊಸಪೇಟೆ: ಸ್ಕ್ಯಾನ್ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ
Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ
Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ
Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.