ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ತೆರೆ
ವಿಚಾರಗೋಷ್ಠಿ, ಸಾಂಸ್ಕೃತಿಕ ವೈವಿಧ್ಯ, ಸಂವಾದ
Team Udayavani, Feb 14, 2021, 4:50 AM IST
ಕೊಡಿಯಾಲಬೈಲ್: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರ ಕೊಡಿಯಾಲಬೈಲ್‌ನಲ್ಲಿರುವ ಶಾರದಾ ವಿದ್ಯಾಲಯದಲ್ಲಿ ಹಮ್ಮಿಕೊಂಡ 24ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರವಿವಾರ ತೆರೆ ಬೀಳಲಿದೆ.
ಸಮ್ಮೇಳನದ ಎರಡನೇ ದಿನವಾದ ಶನಿವಾರ ಬೆಳಗ್ಗೆಯಿಂದ ಸಂಜೆಯವರೆಗೆ ಉಪನ್ಯಾಸ, ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ತುಳು ನಾಟಕ, ಲಲಿತ ಪ್ರಬಂಧ ಗೋಷ್ಠಿ, ಅಗಲಿದ ಸಾಧಕರ ಸಂಸ್ಮರಣೆ ನಡೆದಿತ್ತು. ಅದೇ ರೀತಿ, ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಗಣ್ಯರಿಂದ ಸಂವಾದಗಳು ನಡೆದವು. ಮುಖ್ಯ ಅತಿಥಿಗಳಾಗಿ ಅನೇಕ ಮಂದಿ ಗಣ್ಯರು ಭಾಗವಹಿಸಿದ್ದರು.
ಇಂದಿನ ಕಾರ್ಯಕ್ರಮ
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ರವಿವಾರ ಬೆಳಗ್ಗೆ 7.30ರಿಂದ 9 ಗಂಟೆಯ ವರೆಗೆ ವಾದ್ಯ ಗೋಷ್ಠಿ- ಚಿಂತನ- ಉದಯರಾಗ-ಯೋಗ ಪ್ರಾತ್ಯಕ್ಷಿಕೆ ನಡೆಯಲಿದ್ದು, ಬೆಳಗ್ಗೆ 9 ಗಂಟೆಯಿಂದ 9.30ರವರೆಗೆ “ದಾಸ ಸಾಹಿತ್ಯ-ವಚನ ಸಾಹಿತ್ಯ’ ವಿಶೇಷ ಉಪನ್ಯಾಸ, 10ರಿಂದ 11.15ರವರೆಗೆ “ರಾಷ್ಟ್ರೀಯ ಶಿಕ್ಷಣ ನೀತಿ’ ಎಂಬ ವಿಷಯದ ಕುರಿತು ಗೋಷ್ಠಿ, 11.15ರಿಂದ 11.30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ, 11.30ರಿಂದ 1 ಗಂಟೆಯ ವರೆಗೆ “ಆರೋಗ್ಯಕರ ಸಮಾಜ-ಸ್ವಾಸ್ಥ Â ಚಿಂತನೆ’ ಕುರಿತು ಗೋಷ್ಠಿ ನಡೆಯಲಿದೆ.
ಮಧ್ಯಾಹ್ನ 1 ಗಂಟೆಯಿಂದ 1.30ರ ವರೆಗೆ “ಇಂಡತ್ತೂ ರಾಜಾವು ನಾಳೆತ್ತೂ ಫಕೀರ’ ಎಂಬ ಬ್ಯಾರಿಕಥಾ ಪ್ರಸಂಗ, ಮಧ್ಯಾಹ್ನ 1.30ರಿಂದ 2.45ರ ವರೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, 2.45ರಿಂದ 3.45ವರೆಗೆ ಬಹುಭಾಷಾ ಕವಿಗೋಷ್ಠಿ, 3.45ರಿಂದ 4.30ರ ವರೆಗೆ ಬಹಿರಂಗ ಅಧಿವೇಶನ ನಡೆಯಲಿದೆ. ಸಂಜೆ 4.30ರಿಂದ 7 ಗಂಟೆಯವರೆಗೆ ಸಮಾರೋಪ ನಡೆಯಲಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಲಿದ್ದಾರೆ. ಇತಿಹಾಸ ಸಂಶೋಧಕ ಡಾ| ಪುಂಡಿಕಾç ಗಣಪಯ್ಯ ಭಟ್ ಸಮಾರೋಪ ಭಾಷಣ ಮಾಡಲಿದ್ದಾರೆ.
ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಬಹುಶ್ರುತ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಷಿ ಮಾತನಾಡಲಿದ್ದಾರೆ. ಉಡುಪಿಯ ಶ್ರೀ ಪೇಜಾವರ ಮಠದ ಜಗದ್ಗುರು ಮಧ್ವಾಚಾರ್ಯ ಸಂಸ್ಥಾನದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸಹಿತ ಗಣ್ಯರ ಉಪಸ್ಥಿತಿಯಲ್ಲಿ ಸಮ್ಮೇಳನಾಧ್ಯಕ್ಷರಿಗೆ ಸಚಿವ ಎಸ್. ಅಂಗಾರ ಸಮ್ಮಾನಿಸಲಿದ್ದಾರೆ.
ಗಮನ ಸೆಳೆದ ಚಿತ್ರ ಪ್ರದರ್ಶನ
ಸಮ್ಮೇಳನದ ಅಂಗಣದಲ್ಲಿರುವ ಜಾರ್ಜ್ ಫೆರ್ನಾಂಡಿಸ್ ಪ್ರದರ್ಶನಾಂಗಣದಲ್ಲಿ ಕರಾವಳಿ ಚಿತ್ರಕಲಾ ಚಾವಡಿ ಮಂಗಳೂರು ಇವರಿಂದ ಚಿತ್ರಕಲಾ ಪ್ರದರ್ಶನ, ಮಾರಾಟ ಮಳಿಗೆ, ಶಾರದಾ ಆಯುರ್ವೇದ ಕಾಲೇಜು, ನ್ಯಾಚುರೋಪತಿ ಕಾಲೇಜಿನ ಆಶ್ರಯದಲ್ಲಿ “ವೈದ್ಯಕೀಯ ಮಾಹಿತಿ ಮಳಿಗೆ’ ಹಾಗೂ ಕೋವಿಡ್ ಅನಂತರದ ಸ್ವಾಸ್ಥ್ಯದ ಕುರಿತು ಅರಿವು ಮೂಡಿಸುವ ಪ್ರಾತ್ಯಕ್ಷಿಕೆ, ಪುಸ್ತಕ ಮಳಿಗೆಗಳ ಸಹಿತ ವಿವಿಧ ಗೃಹೋಪಯೋಗಿ, ಗುಡಿ ಕೈಗಾರಿಕ ವಸ್ತುಗಳ ಮಳಿಗೆ ಇದ್ದವು. ಸಮ್ಮೇಳನಕ್ಕೆ ಆಗಮಿಸಿದ ಸಾಹಿತ್ಯಾಸಕ್ತರು ಮಳಿಗೆಗಳಿಗೆ ಭೇಟಿ ನೀಡಿ ಖರೀದಿಯಲ್ಲಿ ತೊಡಗುತ್ತಿದ್ದರು. ಸಮ್ಮೇಳನಕ್ಕೆ ಆಗಮಿಸಿದವರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.