ತೈಲ ದರ ಇಳಿಸಲಿ : ಸಾರ್ವಜನಿಕ ವಲಯದಿಂದ ಆಗ್ರಹ
Team Udayavani, Feb 14, 2021, 6:40 AM IST
ಬೆಂಗಳೂರು: ಪೆಟ್ರೋಲ್, ಡೀಸೆಲ್ ದರ ಏರುತ್ತಲೇ ಇದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. ಶನಿವಾರ ಪೆಟ್ರೋಲ್ ದರ 91.40 ರೂ.ಗಳಿಗೆ ಮತ್ತು ಡೀಸೆಲ್ ದರ 83.47 ರೂ.ಗಳಿಗೆ ಏರಿದೆ.
ಇದೇ ಹಾದಿಯಲ್ಲಿ ಮುಂದುವರಿದರೆ ಸದ್ಯದಲ್ಲೇ ಪೆಟ್ರೋಲ್ ದರ 100 ರೂ. ಮುಟ್ಟುವ ಆತಂಕವೂ ಎದುರಾಗಿದೆ. ತೈಲ ದರ ಇಳಿಸುವುದಕ್ಕಾಗಿ ಸರಕಾರ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಜನರಿಂದ ಕೇಳಿಬರುತ್ತಿದೆ. ರಾಜಸ್ಥಾನ ಮತ್ತು ಅಸ್ಸಾಂನಲ್ಲಿ ರಾಜ್ಯದ ಪಾಲಿನ ತೆರಿಗೆ ಇಳಿಕೆ ಮಾಡಿದ್ದು, ಇದರಿಂದಾಗಿ ತೈಲ ದರ ಇಳಿದಿದೆ. ರಾಜ್ಯದಲ್ಲಿಯೂ ಬಜೆಟ್ ವೇಳೆ ತೈಲದ ಮೇಲಿನ ತೆರಿಗೆ ಇಳಿಸಲಿ ಎಂಬ ಒತ್ತಾಯ ಹೆಚ್ಚಾಗಿದೆ.
ಪೆಟ್ರೋಲ್, ಡೀಸೆಲ್‌ಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ಏಕೆ ತರಬಾರದು ಎಂಬ ಪ್ರಶ್ನೆಯೂ ಎದ್ದಿದೆ. ಇದಾದರೆ ದರ ಇಳಿಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದರ ಏರಿಕೆ ಬಗ್ಗೆ ಹೊಟೇಲ್, ಲಾರಿ ಮಾಲಕರ ಸಂಘದ ಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೈಲ ದರವನ್ನು ತಹಬಂದಿಗೆ ತರುವ ಪ್ರಯತ್ನ ನಡೆಯುತ್ತಿದೆ. ಬಜೆಟ್‌ನಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು.
-ವಿ. ಸೋಮಣ್ಣ, ವಸತಿ ಸಚಿವ
ತೈಲ ದರ ಹೆಚ್ಚಿದರೆ ಹೊರೆ
ಗ್ರಾಹ ಕರ ಮೇಲೆ ಬೀಳುತ್ತದೆ. ಕೇಂದ್ರ ಸರಕಾರ ಡಿಸೇಲ್, ಪೆಟ್ರೋಲ್ ಮೇಲೆ ವಿಧಿಸುವ ಸೆಸ್ ಅನ್ನು ಐಷಾರಾಮಿ ವಸ್ತುಗಳ ಮೇಲೆ ವಿಧಿಸಲಿ.
-ಚಂದ್ರಶೇಖರ ಹೆಬ್ಟಾರ್, ಅಧ್ಯಕ್ಷರು, ಬೃಹತ್ ಬೆಂಗಳೂರು ಹೊಟೇಲ್ ಸಂಘ
ಕೇಂದ್ರ-ರಾಜ್ಯದ ತೆರಿಗೆ
(ಬೆಂಗಳೂರಿನಲ್ಲಿ ಫೆ. 13ರ ದರ ವಿವರ)
ತೆರಿಗೆ ಪ್ರಮಾಣ (ರೂ.ಗಳಲ್ಲಿ)
ಅಂಶ | ಪೆಟ್ರೋಲ್ | ಡೀಸೆಲ್ |
ಮೂಲ ದರ | 32.09 | 33.48 |
ಅಬಕಾರಿ ಸುಂಕ | 1.40 | 1.80 |
ಹೆಚ್ಚುವರಿ ಸುಂಕ | 0.11 | 0.08 |
ರಸ್ತೆ ಸೆಸ್ | 0.18 | 18 |
ಕೃಷಿ ಸೆಸ್ | 2.50 | 0.04 |
ರಾಜ್ಯ ತೆರಿಗೆ | 22.75 | 15.67 |
ಡೀಲರ್ ಕಮಿಷನ್ | 3.66 | 2.52 |
ಒಟ್ಟು | 91.40 | 83.47 |
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.