![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Feb 14, 2021, 5:50 AM IST
ಫೋಟೋ ಸ್ಟೋರಿ- ನಮ್ಮ ಛಾಯಾಚಿತ್ರಗ್ರಾಹಕರ ಚಿತ್ರಕಾವ್ಯ. ಒಂದು ವಿಷಯ ವಸ್ತುವನ್ನು ಆಧರಿಸಿ ಅದನ್ನು ತಮ್ಮ ಛಾಯಾಚಿತ್ರಗಳ ಮೂಲಕವೇ ವಿಸ್ತರಿಸುತ್ತಾ ಮತ್ತೂಂದು ತುದಿಗೆ ಮುಟ್ಟಿಸಿ ಒಂದು ಬೆರಗನ್ನು ಸೃಷ್ಟಿಸುವುದು ಈ ಪರಿಕಲ್ಪನೆಯ ಉದ್ದೇಶ. ಇಂದಿನ ಸ್ಟೋರಿ ಮೊದಲನೆಯದು. ನಮ್ಮ ಹಿರಿಯ ಸುದ್ದಿ ಛಾಯಾಚಿತ್ರಗ್ರಾಹಕ ಆಸ್ಟ್ರೋ ಮೋಹನ್ ಕಮ್ಮಾರನ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ.
ಬದುಕೇ ದೊಡ್ಡದು ಎನ್ನುತ್ತದೆ ನೂರಾರು ಕಿ.ಮೀ. ದೂರದಿಂದ ಬಂದು ಆದಿ ಉಡುಪಿಯಲ್ಲಿ ಬೀಡು ಬಿಟ್ಟು ಶ್ರಮಪಡುತ್ತಿರುವ ಪಂಜಾಬ್‌ನ ಸಿಂಗ್ ಕುಟುಂಬ. ಗುಡಿ ಕೈಗಾರಿಕೆಗಳೆಲ್ಲ ಬದಿಗೆ ಸರಿದು ಯಂತ್ರಗಳಿಂದ ಸಾಮೂಹಿಕ ಉತ್ಪಾದನೆಯ ಕಾಲವಿದು. ಕಮ್ಮಾರ ಎಂಬ ಕುಲಕಸುಬೇ ಕಾಣೆಯಾಗಿರುವ ಸಂದರ್ಭದಲ್ಲಿ ಅದನ್ನು ನೆನಪಿಸುತ್ತಿದೆ ಈ ಸಿಂಗ್ ಕುಟುಂಬ. ವಾಹನದ ಕಬ್ಬಿಣದ ಬಿಡಿಭಾಗಗಳನ್ನು ಕೆಂಪಗೆ ಕಾಯಿಸಿ, ಹೊಡೆದು, ಬಡಿದು ಕತ್ತಿ, ಕೊಡಲಿಗಳನ್ನು ರೂಪಿಸುವುದು ಇವರ ಕಾಯಕ. ಅದೇ ಅವರ ಬದುಕಿನ ನಿರ್ವಾಹಕ. ಹೆಲಿಪ್ಯಾಡ್ ಬಳಿ ಎರಡು ಕುಟುಂಬಗಳಿವೆ. ಕಾಯಕವೇ ಕೈಲಾಸ ಎಂಬುದು ಇವರ ಧರ್ಮ. ಸ್ಪ್ರಿಂಗ್‌ಪ್ಲೇಟ್‌ಗಳನ್ನು ಬಳಸಿ ಕತ್ತಿ, ಕೊಡಲಿ ಮತ್ತು ಮಚ್ಚುಗಳನ್ನು ತಯಾರಿಸಿದರೆ ಅವು ಸುದೀರ್ಘಕಾಲ ಹರಿತವಾಗಿಯೇ ಉಳಿಯುತ್ತವೆ, ತುಕ್ಕು ಹಿಡಿಯುವುದಿಲ್ಲ ಎಂಬ ಮಾತಿದೆ. ಪತ್ನಿ, ಮಕ್ಕಳು ಹೆಚ್ಚು ತೂಕದ ಸುತ್ತಿಗೆಯನ್ನು ಎತ್ತಿ ಕಬ್ಬಿಣವನ್ನು ತಮ್ಮಿಷ್ಟದ ಆಕಾರಕ್ಕೆ ತರುವ ಸನ್ನಿವೇಶ ಬೆರಗುಗೊಳಿಸುವಂಥದ್ದು. ಸುಮಾರು ಎರಡು ನೂರರಿಂದ ಒಂದು ಸಾವಿರ ರೂ. ವರೆಗೂ ಈ ಆಯುಧಗಳಿಗೆ ಬೆಲೆ. ಈ ಊರಿಗೆ ಬಂದು ಎರಡು ತಿಂಗಳಾದವು. ಅತ್ಯಧಿಕ ಲಾಭವಿಲ್ಲ. ಆದರೆ ಬದುಕಲು ಅಡ್ಡಿಯಿಲ್ಲ ಎನ್ನುತ್ತಾರೆ ಹರ್‌ಪ್ರೀತ್ ಸಿಂಗ್.
ಬದುಕೆಂಬ ಕುಲುಮೆಯಲ್ಲಿ ಅರಳುವ ಕಲಾಕೃತಿಗಳಿಗೆ ಲೆಕ್ಕವೂ ಇಲ್ಲ , ಸಾಧ್ಯವೂ ಇಲ್ಲ!
1.ಕಬ್ಬಿಣ ಹದ ಮಾಡುವ ಬಗೆ. ಹೀಗೇ ತಾನೇ ಸಂದರ್ಭ- ಸನ್ನಿವೇಶಗಳೂ ಬದುಕನ್ನು ಹದ ಮಾಡುವ ಬಗೆಯೂ ಇದೇ.
2.ಇದು ಬೆರಗಲ್ಲ ; ಹಾಗೆಂದು ಆತಂಕವೂ ಅಲ್ಲ. ಕೌತುಕದ ಒಂದು ನೋಟ ಎನ್ನಬಹುದು. ಆರ್ಥಿಕವಾಗಿ ಸಬಲರಲ್ಲದ ಎಲ್ಲ ಸಮುದಾಯಗಳಿಗೂ ಅಭಿವೃದ್ಧಿ ಎಂಬುದು ಇಂಥದ್ದೇ ಒಂದು ಕೌತುಕ.
3.ಈ ಹೊತ್ತಿನ ಕಾವಿನಲ್ಲಿ ಬದುಕನ್ನು ಆರಳಿಸಿಕೊಳ್ಳುವ ತವಕ. ಅದೇ ಆಧುನಿಕ ಭಾಷೆಯ ಟ್ರೆಂಡಿಂಗ್ !
4. ಒಂದು ಹದಕ್ಕೆ ಒಂದು ರೂಪ, ಎರಡನೇ ಹದಕ್ಕೆ ಬೇರೊಂದು ರೂಪ, ಬದುಕು ಸಹಸ್ರ ರೂಪ !
5. ನಾವು ನಿಮ್ಮ ಆಳುಗಳು, ನೀವು ಹೇಳಿದ್ದನ್ನು ಮಾಡು ತ್ತೇವೆ ಎನ್ನುತ್ತಿವೆ ಬಿಕರಿಗೆ ಮುನ್ನ ಅಯುಧಗಳು !
6. ಎಲ್ಲ ತಯಾರಿ, ಕೊಳ್ಳೋಕೆ ಬನ್ರೀ ಎಂದು ಕರೆಯುವ ಮಧ್ಯೆ ಚಿಕ್ಕದೊಂದು ಕಮರ್ಶಿಯಲ್ ಬ್ರೇಕ್ !
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.