ನಾನು ಬಜಾರಿ, ಅವನು ತುಂಬಾ ಸೈಲೆಂಟ್ – ಆದರೂ ಒಳ್ಳೆ ಜೋಡಿ ನಮ್ಮದು !


Team Udayavani, Feb 14, 2021, 3:00 PM IST

Feeling of love

ಒಂದು ಜೋಡಿ ಅಂದ ಮೇಲೆ ಸೈಲೆಂಟ್ – ವೈಲೆಂಟ್, ಸಹನೆ – ಅಸಹನೆ, ಬಜಾರಿ – ಮೌನಿ ಹೀಗೆ ವಿರುದ್ಧ ಸ್ವಭಾವ ಇರಲೇಬೇಕು. ಆಗ ಮಾತ್ರ ಆ ಜೋಡಿ ಖುಷಿ ಖುಷಿಯಾಗಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡಿರಲು ಸಾಧ್ಯ. ಪ್ರೀತಿ ಅಂತ ಬಂದಾಗ ಒಂದಿಷ್ಟು ಮುನಿಸು, ಇನ್ನೊಂದಿಷ್ಟು ತುಂಟ ಜಗಳ, ವಿರಹ, ಪ್ರೇಮ ಇದ್ದೇ ಇರುತ್ತದೆ.

ಎಲ್ಲವೂ ಪ್ರೀತಿ ಎಂದಲ್ಲ, ಕೆಲವೊಂದು ಪ್ರೀತಿ ಒಂದಿಷ್ಟು ವಾರಗಳ ಕಾಲ, ತಿಂಗಳ ಕಾಲ ಇದ್ದು ಮತ್ತೆ ಮರೆಯಾದರೆ, ಇನ್ನೂ ಕೆಲವು  ಪ್ರೀತಿ, ಜೀವನದ ಪಾಠ ಕಲಿಸಿ ಮರೆಯಾಗುತ್ತದೆ. ಕೆಲವರು ಸಮಯ ಬದಲಾದಂತೆ ಅವರೂ ಬದಲಾಗಿ ಜೀವನದ ಬೇರೆ ಬೇರೆ ಹಾದಿಯಲ್ಲಿ ಸಾಗುತ್ತಾರೆ,  ಆದರೆ ಕೆಲವೊಂದು ಪ್ರೀತಿ , ಗೆಳೆಯರಾಗಿ, ನಂತರ ಬೆಸ್ಟ್ ಫ್ರೆಂಡ್ ಆಗಿ, ಪ್ರೇಮಿಗಳಾಗಿ, ದಂಪತಿಗಳಾಗಿ ಜೀವನದುದ್ದಕ್ಕೂ ಜೊತೆಯಾಗಿರುತ್ತಾರೆ. ಅದೇ ಬೆಸ್ಟ್ ಕಣ್ರೀ. ನಾವು ಪ್ರೀತಿಸಿದ ಹುಡುಗ ಜೀವನಪೂರ್ತಿ ಇರ್ತಾನೆ ಅಂತ ಅನಿಸಿದಾಗ ಆಗುವ ಖುಷಿ ಬೇರೇನೆ. ಆಗ ನಿಜವಾದ ಪ್ರೀತಿಗೆ ಸಾರ್ಥಕತೆ ಸಿಗುತ್ತದೆ.

ಅಂತದ್ದೇ ಕನಸು ಕೂಡ ನನಗೆ. ಪ್ರೀತಿ ಅಂತ ಆದ್ರೆ ಜೀವನ ಪೂರ್ತಿ ನನ್ನ ಹುಡುಗ ಜೊತೆಗೆ ಇರಬೇಕು ಅಂತ ಆಸೆ. ಆದ್ರೆ ಬೇರೆಯವರ ಪ್ರೀತಿ ವಿಷಯ ಕೇಳಿ ಸಾಕಾಗಿಹೋಗಿದೆ. 5 ದಿನದ ಪ್ರೀತಿ ಅಂತೆ, ಅವನು ಕೈ ಕೊಟ್ಟನಂತೆ, ಬೇರೆಯವರನ್ನ ಇಷ್ಟ ಪಟ್ಟಳಂತೆ, ಅವಳಿಗೆ ಹೆದರಿಕೆಯಂತೆ,  ಹಾಗಾಗಿ ಬ್ರೇಕಪ್ ಅಂತೆ. ಇಂತಹ ಸಾವಿರ ಲವ್ ಬ್ರೇಕಪ್ ಸುದ್ಧಿಗಳನ್ನು ಕೇಳಿ ಪ್ರೀತಿಯೇ ಮಾಡಬಾರದು ಅಂತ ಅನಿಸಿಬಿಟ್ಟಿತ್ತು.

ಹೀಗೆ ಅನಿಸಿದ್ದು 4 ವರ್ಷಗಳ ಹಿಂದೆ. ಆದ್ರೆ ಈಗ ನಾನು ಒಬ್ಬ ಹುಡುಗನನ್ನು ಪ್ರೀತಿ ಮಾಡ್ತಾ ಇದ್ದೇನೆ. ನನ್ನ ಜೀವನ ಒಬ್ಬರ ಜೊತೆ ಅಂತ ಇದ್ರೆ ಅದು ಇವನೇ.  ನನ್ನ ಹುಡುಗ ತುಂಬಾ ಪಾಪ, ನನ್ನ ಎಲ್ಲಾ ಚೇಷ್ಟೆಗಳನ್ನು ಸಹಿಸಿಕೊಂಡು ಒಂದಿಷ್ಟೂ ಬೈಯದೆ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಕೆಲವೊಂದು ಬಾರಿ ಕೋಪ ಬಂದರೂ ‘ಏಯ್ ಲೂಸ್’ ಅಂತ ಬೈತಾನೆ ಅಷ್ಟೇ.

ನಮ್ಮ ಪ್ರೀತಿ ಶುರುವಾಗಿದ್ದು ಒಂದು ಸಿಹಿ ತಿನಸಿನಿಂದ. ಆದಿನ ನಾನು ಕ್ಯಾರೆಟ್ ಹಲ್ವಾ ಮಾಡಿದ್ದೆ. ಹಾಗೆ ಅವನಿಗೂ ಕೊಡೋಣ ಅಂತ ಹೊರಟೆ. ಯಾಕೆಂದ್ರೆ ಅವನಿಗೆ ಸಿಹಿ ತಿನಿಸು ಅಂದ್ರೆ ತುಂಬಾ ಇಷ್ಟ. ಕ್ಯಾರೆಟ್ ಹಲ್ವಾ ಪೂರ್ತಿ ತಿಂದು ಮುಗಿಸಿದ ನಂತರ ತುಂಬಾ ಚೆನ್ನಾಗಿತ್ತು. ಥ್ಯಾಂಕ್ಯೂ ಅಂದ. ಸರಿ ಅಂತ ನಾನು ಮನೆಗೆ ಬಂದೆ. ಮನೆಗೆ ಬಂದು 1 ನಿಮಿಷದಲ್ಲಿ ನನ್ನ  ವಾಟ್ಸಪ್ ಗೆ ಒಂದು ಮೆಸೇಜು ಬಂತು ” ಐ ಲವ್ ಯು” ಚೈ, ಇವತ್ತು ಅಲ್ಲಿ ಹೇಳಲೇಬೇಕು ಅಂತ ಹೊರಟು ಬಂದಿದ್ದೆ. ಆದ್ರೆ ಏನೋ ಭಯ. ಜೀವನ ಪೂರ್ತಿ ಜೊತೆಗಿರುತ್ತಿಯಾ? ಚೈ ಅಂತ ಶುರುವಾದ ಪ್ರೀತಿ ನಮ್ಮದು.

ನಾನು ಅವನು ಭೇಟಿ ಆದ್ರೆ ಗಂಟೆಗಟ್ಟಲೆ ನಾನೇ ಮಾತಾಡ್ತಾ ಇರಬೇಕು. ಅವನು ಕೇವಲ ಓಹೋ, ಹೌದಾ, ಸರಿ, ಇಲ್ಲಾ ಚೈ,  ಅಷ್ಟೇ ಮತ್ತೇನೂ ಇಲ್ಲಾ. ಆದ್ರೂ ತುಂಬಾ ಇಷ್ಟ ಪಡ್ತಾನೆ. ನನ್ನೆಲ್ಲಾ ತಲೆಹರಟೆಗಳನ್ನು ಸಹಿಸಿಕೊಂಡು ಮುಗ್ಧ ನಗುವಿನ ಜೊತೆಗೆ ನೋಡ್ತಾ ಇರ್ತಾನೆ. ಆತ ನನ್ನ ಜೀವನದಲ್ಲಿ ಹಲವಾರು ಬದಲಾವಣೆಯನ್ನು ತಂದ ವ್ಯಕ್ತಿ. ಚಿಕ್ಕ ಚಿಕ್ಕ ವಿಷಯಕ್ಕೂ ಸಿಟ್ಟು ಮಾಡಿಕೊಳ್ಳುತ್ತಿದ್ದ ನನಗೆ, ಇವನು ಬಂದ ಮೇಲೆ ಸಿಟ್ಟು ಮಾಡಿಕೊಳ್ಳಲು ವಿಷಯವೇ ಇರಲಿಲ್ಲ. ಗಲಾಟೆ ಮಾಡೋಣ ಅಂತ ಅನಿಸಿದರೂ ಅವನ ಮುಖ ನೋಡ್ತಾ ಇದ್ದಹಾಗೆ  ಸಿಟ್ಟೆಲ್ಲಾ ಕರಗಿ ಬಿಡುತ್ತಿತ್ತು. ಕೆಲವೊದು ವಿಷಯಕ್ಕೆ ಮಾನಸಿಕವಾಗಿ ತುಂಬಾ ಬಳಲುತ್ತಿದ್ದ ನನಗೆ, ಈತ ನನ್ನ ಜೀವನದಲ್ಲಿ ಬಂದ ಮೇಲೆ ನನಗೆ ಧೈರ್ಯು ನೀಡುವ ವ್ಯಕ್ತಿಯಾಗಿ, ಬರವಸೆ ಕೊಡುವ ವ್ಯಕ್ತಿಯಾಗಿ ಜೊತೆಗಾರನಾಗಿ ಇದ್ದಾನೆ. ಅಷ್ಟು ಸಾಕು.

ಬೇರೊಬ್ಬರಿಗೆ ನಮ್ಮ ಪ್ರೀತಿ ತೋರ್ಪಡಿಕೆ ಪ್ರಿತಿಯಾಗಬಾರದು, ಅಥವಾ ಪ್ರೀತಿಯಲ್ಲಿ ಇದ್ದ ಕೂಡಲೇ ಹಾಗಿರಬೇಕು, ಹೀಗಿರಬೇಕು, ಸುತ್ತಾಡಬೇಕು, ಗಿಫ್ಟ್ ಕೊಟ್ರೆ ಮಾತ್ರ ಪ್ರೀತಿ, ಪ್ರೇಮಿಗಳ ದಿನದಂದು ರಾತ್ರಿ 12 ಗಂಟೆಗೆ ವಿಶ್ ಮಾಡಬೇಕು, ಇವ್ವೆಲ್ಲಾವು ಇದ್ರೆ ಮಾತ್ರ ಪ್ರೀತಿ ಅಲ್ಲ.  ಇಬ್ಬರ ಜೀವನವನ್ನು ಅರ್ಥ ಮಾಡಿಕೊಂಡು, ಖುಷಿಯನ್ನು ಯಾವ ರೀತಿ ಹಂಚಿಕೊಳ್ಳುತ್ತೇವೋ ಅದೇ ರೀತಿ ನೋವು, ದುಃಖಗಳನ್ನೂ ಹಂಚಿಕೊಂಡು ಜೊತೆಯಾಗಿದ್ದು, ಬದುಕಿನ ಕಷ್ಟ ಸುಖಗಳನ್ನ ಅರ್ಥ ಮಾಡಿಕೊಂಡು ಜೊತೆಯಾಗಿದ್ದರೆ ಅಷ್ಟೇ ಸಾಕು.

 ಚೈತ್ರಾ

ದ್ವಿತೀಯ ಎಂ.ಸಿ.ಜೆ ವಿದ್ಯಾರ್ಥಿನಿ

ಎಸ್.ಡಿ.ಎಂ ಕಾಲೇಜು, ಉಜಿರೆ

ಟಾಪ್ ನ್ಯೂಸ್

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Untitled-1

Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Untitled-5

Mangaluru: ಗಾಂಜಾ ಸೇವನೆ; ಯುವಕನ ಬಂಧನ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.