“ಪ್ರತ್ಯೇಕತೆ ಕೂಗು ಏಳದಂತೆ ಮಾಡೋಣ’
ಕಲ್ಯಾಣ ಕರ್ನಾಟಕ ಭಾಗದ ಅನ್ಯಾಯ ಸರಿಪಡಿಸಿ
Team Udayavani, Feb 14, 2021, 3:28 PM IST
ಸೇಡಂ: ಕಲ್ಯಾಣ ಕರ್ನಾಟಕ ಮತ್ತು ಉತ್ತರ·ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಏಳದಂತೆಮಾಡಬೇಕಾದರೆ ಆ ಭಾಗಕ್ಕಾದ ಅನ್ಯಾಯ
ಸರಿಪಡಿಸಬೇಕಾಗಿದೆ ಎಂದು ಈಶಾನ್ಯಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕರಾಜಕುಮಾರ ಪಾಟೀಲ ತೇಲ್ಕೂರ್ ಹೇಳಿದರು.ಪಟ್ಟಣದ ಸುವರ್ಣ ಕರ್ನಾಟಕ ಭವನದಲ್ಲಿಸರಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರಕೇಂದ್ರ ಹಮ್ಮಿಕೊಂಡಿದ್ದ ಗುಲಬರ್ಗಾ
ವಿಶ್ವವಿದ್ಯಾಲಯ ಉಪ ಕುಲಪತಿ ಮತ್ತು ನೂತನಕುಲಸಚಿವರ ಸನ್ಮಾನ ಸಮಾರಂಭ ಉದ್ಘಾಟಿಸಿಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಆಗಬೇಕು. ಎಲ್ಲೆಲ್ಲಿ ಅಸಮತೋಲನ ಇದೆಯೋಅವುಗಳನ್ನು ಸರಿಯಾಗಿಸಿದಾಗ ಮಾತ್ರ ಪ್ರತ್ಯೇಕರಾಜ್ಯದ ಕೂಗನ್ನು ತಡೆಯಲು ಸಾಧ್ಯವಾಗುತ್ತದೆ.ಈ ಕುರಿತು ಎಲ್ಲ ರಾಜಕೀಯ ನಾಯಕರುಎಚ್ಚರಿಕೆ ವಹಿಸಬೇಕು ಎಂದರು.
ಡಾ| ಬಿ.ಆರ್. ಅಂಬೇಡ್ಕರ್ ಸಂವಿಧಾನದಮೂಲಕ ನೀಡಿದ ಮೂಲಭೂತ ಕರ್ತವ್ಯ ಮತ್ತುಹಕ್ಕುಗಳನ್ನು ಪಡೆದಿರುವುದಕ್ಕೆ ಹೆಮ್ಮೆ ಪಡಬೇಕು.800 ವರ್ಷಗಳ ಹಿಂದೆ ಇದೇ ಕಾರ್ಯವನ್ನುಅಂದಿನ ಶರಣರು ಪ್ರತಿಪಾದಿಸಿದ್ದರು. ಅವೇಈಗಿನ ಸಂವಿಧಾನದಲ್ಲಿವೆ. ಮೂಲಭೂತ ಹಕ್ಕುಕಾಪಾಡಲು ಪ್ರತಿಯೊಂದು ಜಾತಿ, ಜನಾಂಗವನ್ನುಜೊತೆಗೂಡಿಸಿಕೊಂಡು ಬಸವಣ್ಣ ಹೋರಾಟಮಾಡಿದ್ದರು ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದವರೇಗುಲಬರ್ಗಾ ವಿವಿ ಉಪ ಕುಲಪತಿ ಮತ್ತುಕುಲ ಸಚಿವರಾಗಬೇಕೆಂಬ ಕನಸಿಗೆ ಈಗರೆಕ್ಕೆ ಬಂದಂತಾಗಿದೆ. ಕಲ್ಯಾಣ ಭಾಗದವರೇಈಗ ಕುಲಪತಿ ಆಗಿರುವುದು ಹೆಮ್ಮೆ ವಿಷಯಎಂದರು.
ಗುವಿಗು ಉಪ ಕುಲಪತಿ ಪ್ರೊ| ದಯಾನಂದಅಗಸರ ಮಾತನಾಡಿ, 40 ವರ್ಷಗಳಿಂದಲೂ ಈಭಾಗದವರೇ ಗುಲಬರ್ಗಾ ವಿಶ್ವವಿದ್ಯಾಲಯದ
ಉಪ ಕುಲಪತಿ, ಕುಲ ಸಚಿವರಾಗಬೇಕೆಂದುಇದ್ದ ಕನಸು ಈಗ ಸಾಕಾರವಾಗಿದೆ ಎಂದುಹೇಳಿದರು.
ಮೃತ ಡಿ.ಕೆ. ರವಿ ಅವರು ಸೇಡಂ ಉಪವಿಭಾಗಾಧಿ ಕಾರಿ ಆಗಿದ್ದಾಗ ಮಳಖೇಡದಕಾಗಿಣಾ ನದಿ ಸಮೀಪದಲ್ಲಿ 25 ಎಕರೆ ಜಮೀನನ್ನು
ವಿವಿಗೆ ನೀಡಿದ್ದರು. ಬರುವ ದಿನಗಳಲ್ಲಿ ಅದೇಜಮೀನಿನಲ್ಲಿ ಜೀವನ ಕೌಶಲ್ಯ ಆಧಾರಿತ ಆಧುನಿಕಶಿಕ್ಷಣ ಕೇಂದ್ರ ಪ್ರಾರಂಭಿಸುವ ಪ್ರಸ್ತಾವನೆಯನ್ನು
ಶೀಘ್ರವೇ ಸರ್ಕಾರದ ಮುಂದಿಡಲಾಗುವುದುಎಂದು ತಿಳಿಸಿದರು.
ಗುವಿಗು ಉಪ ಕುಲಪತಿ ಪ್ರೊ| ದಯಾನಂದಅಗಸರ, ಆಡಳಿತ ಕುಲಸಚಿವ ಶರಣಬಸಪ್ಪಕೋಟೆಪ್ಪಗೋಳ, ಮೌಲ್ಯಮಾಪನ ಕುಲಸಚಿವ
ಪ್ರೊ| ಸೋನಾರ ನಂದಪ್ಪ, ಬೆಂಗಳೂರು ರಾಜೀವಗಾಂಧಿ ಆರೋಗ್ಯ ವಿವಿ ಕುಲಸಚಿವ ಶಿವಾನಂದಕಾಪಶಿ ಅವರನ್ನು ಸನ್ಮಾನಿಸಲಾಯಿತು.
ಜಿಡಿಎ ಸಹಾಯಕ ಆಯುಕ್ತ ರಾಚಪ್ಪ, ಸಿಡಿಸಿಸದಸ್ಯ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ| ಶ್ರೀನಿವಾಸಮೊಕದಮ್, ಪುರಸಭೆ ಅಧ್ಯಕ್ಷ ಚನ್ನಮ್ಮ ಪಾಟೀಲ,ರಾಜಕುಮಾರ ಸಲಗರ, ಪ್ರಾಂಶುಪಾಲಪ್ರೊ| ಶಿವಶರಣಪ್ಪ ಧಾಬಾ, ರಾಮು ರಾಠೊಡವೇದಿಕೆಯಲ್ಲಿದ್ದರು.
ಸಿಡಿಸಿ ಸದಸ್ಯ ಬನ್ನಪ್ಪ ಕುಂಬಾರ ಸ್ವಾಗತಿಸಿ,ಪರಿಚಯಿಸಿದರು. ಶಾರದಾ, ಶಿವಾನಿಪ್ರಾರ್ಥಿಸಿದರು, ಪ್ರೊ| ಬಿ.ಆರ್. ಅಣ್ಣಾಸಾಗರನಿರೂಪಿಸಿದರು.
ಓದಿ :·ಅಶ್ವಿನ್ ಮ್ಯಾಜಿಕ್ ಗೆ ಗಂಟುಮೂಟೆ ಕಟ್ಟಿದ ಆಂಗ್ಲರು: ಭಾರತಕ್ಕೆ ಬೃಹತ್ ಮುನ್ನಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.