ಜನಪ್ರತಿನಿಧಿ ಕ್ರೀಡಾಕೂಟ ಆಯೋಜನೆಯಾಗಲಿ
| ಬೀದರನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜನೆಗೆ ಅಗತ್ಯ ನೆರವು: ಜಿಪಂ ಅಧ್ಯಕ್ಷೆ ನಿರ್ಮಲಾ ಭರವಸೆ
Team Udayavani, Feb 14, 2021, 4:43 PM IST
ಬೀದರ: ಜನಪ್ರತಿನಿಧಿ ಗಳ ಕ್ರೀಡಾಕೂಟ·ಆಯೋಜಿಸುವ ಅಗತ್ಯ ಇದೆ.ಕ್ರೀಡಾಕೂಟದಿಂದ ಜನಪ್ರತಿನಿ ಧಿಗಳಿಗೂ ಮನೋರಂಜನೆ ಸಿಗಲಿದೆಮತ್ತು ಅವರ ಪ್ರತಿಭಾ ಪ್ರದರ್ಶನಕ್ಕೂವೇದಿಕೆ ದೊರಕಲಿದೆ ಎಂದು ಜಿಪಂಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ
ಅಭಿಪ್ರಾಯಪಟ್ಟರು.ರಾಜ್ಯ ಸರ್ಕಾರಿ ನೌಕರರಜಿಲ್ಲಾಮಟ್ಟದ ಕ್ರೀಡಾಕೂಟದ ಪ್ರಯುಕ್ತನಗರದ ಜಿಲ್ಲಾ ರಂಗಮಂದಿರದಲ್ಲಿಆಯೋಜಿಸಿದ್ದ ಸಂಗೀತ ಸಂಜೆಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಅವರು, ವಿದ್ಯಾರ್ಥಿಗಳು, ಶಿಕ್ಷಕರು,ಸರ್ಕಾರಿ ನೌಕರರು ಸೇರಿದಂತೆ ಹಲವುವರ್ಗದವರಿಗೆ ವಿವಿಧ ಬಗೆಯಕ್ರೀಡಾಕೂಟಗಳು ಇವೆ. ಆದರೆ,ಜನಪ್ರತಿನಿಧಿ ಗಳಿಗೆ ಯಾವುದೇಕ್ರೀಡಾಕೂಟ ಇಲ್ಲ ಎಂದು ಬೇಸರ
ವ್ಯಕ್ತಪಡಿಸಿದರು.
ಬೀದರನಲ್ಲಿ ಸರ್ಕಾರಿ ನೌಕರರರಾಜ್ಯಮಟ್ಟದ ಕ್ರೀಡಾಕೂಟಸಂಘಟಿಸಿದ್ದಲ್ಲಿ ಜಿಪಂನಿಂದ ಅಗತ್ಯನೆರವು ನೀಡಲಾಗುವುದು ಎಂದು
ಭರವಸೆ ನೀಡಿದರು. ಬಜಿಪಂ ಸಿಇಒ ಗ್ಯಾನೇಂದ್ರಕುಮಾರಗಂಗ್ವಾರ್ ಮಾತನಾಡಿ, ಕ್ರೀಡಾ
ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದಮನಸ್ಸು ಉಲ್ಲಸಿತಗೊಳುತ್ತದೆ. ಆರೋಗ್ಯ ವೃದ್ಧಿಯೂ ಆಗುತ್ತದೆ.
ಸರ್ಕಾರಿ ನೌಕರರಿಗೆ ಸರ್ಕಾರ ಸಕಲಸೌಕರ್ಯಗಳನ್ನು ನೀಡುತ್ತಿದೆ. ನೌಕರರುಸರ್ಕಾರದ ಆಶಯಕ್ಕೆ ಅನುಗುಣವಾಗಿಕಾರ್ಯ ನಿರ್ವಹಿಸಬೇಕು. ಸರ್ಕಾರದವಿವಿಧ ಯೋಜನೆಗಳನ್ನು ಅರ್ಹರಿಗೆತಲುಪಿಸಬೇಕು ಎಂದು ಸಲಹೆಮಾಡಿದರು.
ನೌಕರರ ಸಂಘದ ಜಿಲ್ಲಾಧ್ಯಕ್ಷರಾಜೇಂದ್ರಕುಮಾರ ಗಂದಗೆ ಅಧ್ಯಕ್ಷತೆವಹಿಸಿದ್ದರು. ಬಿದರಿ ವೇದಿಕೆಯಗಾಯಕಿ ರೇಖಾ ಸೌದಿ, ಬೆಂಗಳೂರಿನಗೋವಿಂದ ಕರ್ನೂಲ್ ಹಾಗೂತಂಡದವರು ಪ್ರಸಿದ್ಧ ಕನ್ನಡ, ಹಿಂದಿಹಾಗೂ ಜಾನಪದ ಗೀತೆಗಳನ್ನುಹಾಡಿ ಶ್ರೋತೃಗಳ ಮನ ತಣಿಸಿದರು.ನೌಕರರಿಂದ ನಡೆದ ಜಾನಪದ ಗೀತೆಗಾಯನ, ಭರತ ನಾಟ್ಯ, ಭಜನೆ, ನಾಟಕಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು
ಗಮನ ಸೆಳೆದವು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಸಹಾಯಕ ನಿರ್ದೇಶಕ ಸಿದ್ರಾಮಸಿಂಧೆ, ಕ್ರೀಡಾ ಇಲಾಖೆಯ
ಸಹಾಯಕ ನಿರ್ದೇಶಕ ಆರ್.ಜಿ.ನಾಡಗೀರ, ನೌಕರರ ಸಂಘದ ಜಿಲ್ಲಾಉಪಾಧ್ಯಕ್ಷರಾದ ಬಸವರಾಜ ಜಕ್ಕಾ,ಪ್ರಭುಲಿಂಗ, ಪ್ರಧಾನ ಕಾರ್ಯದರ್ಶಿರಾಜಶೇಖರ ಮಂಗಲಗಿ, ಕ್ರೀಡಾಕಾರ್ಯದರ್ಶಿಗಳಾದ ಅಬ್ದುಲ್‌ಸತ್ತಾರ್, ಸುಮತಿ ರುದ್ರಾ ಇದ್ದರು.
ರಾಜಕುಮಾರ ಹೊಸದೊಡ್ಡೆನಿರೂಪಿಸಿದರು. ಯೋಗೇಂದ್ರಯದಲಾಪುರೆ ಸ್ವಾಗತಿಸಿದರು.ಮನೋಹರ ಕಾಶಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.