ಜಾನಪದ ಸಾಹಿತ್ಯ ಅಚ್ಚಳಿಯದ ಶಕ್ತಿ: ಡಾ| ಬೋಳರಡ್ಡಿ
ನಗರದಲ್ಲಿ ಹಮ್ಮಿಕೊಂಡಿದ್ದ ಜಾನಪದ ವಿಚಾರ ಸಂಕಿರಣಕ್ಕೆ ಪ್ರಾಚಾರ್ಯೆ ಡಾ| ಎಸ್.ಟಿ. ಬೋಳರಡ್ಡಿ ಚಾಲನೆ ನೀಡಿದರು.
Team Udayavani, Feb 14, 2021, 5:08 PM IST
ವಿಜಯಪುರ: ಯಾವುದೇ ದೇಶ ಅಥವಾ ನಾಡಿನ ಶ್ರೀಮಂತಿಕೆಯನ್ನು ಅಳಿಯಲು ಆ ನಾಡಿನ ಸಂಸ್ಕೃತಿ ಮತ್ತು
ಪರಂಪರೆ ಸಾಧನವಾಗುತ್ತದೆ. ಹೀಗಾಗಿ ಜಾನಪದ ಸಾಹಿತ್ಯ ಎಂದೂ ಅಳಿಯದ ಸಾಹಿತ್ಯ ಶಕ್ತಿ ಎಂದು ದಿ ಪ್ರಸಿಡೆನ್ಸಿ ಶಿಕ್ಷಣ
ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ| ಎಸ್.ಟಿ. ಬೋಳರಡ್ಡಿ ಅಭಿಪ್ರಾಯಪಟ್ಟರು. ನಗರದ ದಿ| ಶರಣಪ್ಪ ಮಂಗಾನವರ ಸಭಾಭವನದಲ್ಲಿ ದಿ ಪ್ರಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯ ಹಾಗೂ ಸಹ್ಯಾದ್ರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾನಪದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ಥಾನಿಕ ಜಾನಪದರ ಜೀವನ ವಿಧಾನ, ಅವರು ಅನುಸರಿಸುವ ಮೌಲ್ಯದರ್ಶಿಗಳು ಮುಖ್ಯವಾಗುತ್ತವೆ. ಇತಿಹಾಸ ಮತ್ತು
ಪರಂಪರೆ ಹೊಂದಿರುವ ಕರ್ನಾಟಕ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ವಿಶಿಷ್ಠ ಮತ್ತು ಅನನ್ಯ ಹೊಂದಿದೆ. ಕಲೆ ಸಂಸ್ಕೃತಿ ಮತ್ತು ಜ್ಞಾನ ಪರಂಪರೆ ನಶಿಸದಂತೆ ಸಂರಕ್ಷಣೆಗಾಗಿ ಜಾನಪದ ಸಾಹಿತ್ಯ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಜಾನಪದ ಕಲೆಗಳನ್ನು ಇಂದಿನ ಯುವಪೀಳಿಗೆ ಮರೆಯುತ್ತಿದ್ದು ವಿದ್ಯಾರ್ಥಿಗಳು ಅಧ್ಯಯನದೊಂದಿಗೆ
ಜಾನಪದ ಕಲೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಜಾನಪದ ಕಲೆಯು ಮುಂದಿನ ಪಿಳಿಗೆಗೆ ಪೂರಕವಾಗುವಲ್ಲಿ ಒಂದು ಉತ್ತಮ ವೇದಿಕೆ ಆಗಬೇಕು.
ಅದಕ್ಕಾಗೇ ಜಾನಪದ ಕಲೆಗಳ ವಿಶ್ವವಿದ್ಯಾಲಯಗಳು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಜಾನಪದ ಹಿನ್ನಲೆ, ಸಂಸ್ಕೃತಿ, ಕಲೆಗಳ ಕುರಿತು ಹೆಚ್ಚಿನ
ಪ್ರಮಾಣದಲ್ಲಿ ಅಧ್ಯನಶೀಲರಾಗಲು ಉಪಯುಕ್ತವಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸಕ ಬಿ.ಡಿ. ಅಂಜುಟಗಿ ಮಾತನಾಡಿ, ನಮ್ಮ ಜೀವನದಲ್ಲಿ ಹಾಡು, ವಚನ, ಒಗಟು, ಸಂಸ್ಕೃತಿ, ಜಾನಪದ ಅವುಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಕರ್ನಾಟಕ ಅಮೂಲ್ಯ, ಸಮೃದ್ಧ ಜಾನಪದ ಸಂಪತ್ತಿನ ಆಗರವಾಗಿದೆ. ಈ ಜ್ಞಾನದ ಅನನ್ಯತೆ ಶೋಧಿ ಸಿ, ಸಂರಕ್ಷಿಸುವ ಸಂವರ್ಧನೆ
ಕಾರ್ಯ ತುರ್ತಾಗಿ ಆಗಬೇಕಿದೆ. ಆಗಲೇ ಜಾನಪದ ವೈವಿದ್ಯತೆಯ ಜ್ಞಾನ ಸಂಗ್ರಹವಾಗಿ ಭವಿಷ್ಯದ ಪೀಳಿಗೆಗೆ ಇದರ
ಶಕ್ತಿಯ ಅರಿವಾಗಲಿದೆ ಎಂದರು.
ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಬಿ.ಎನ್. ಪಾಟೀಲ ಮಾತನಾಡಿ, ಸಾಹಿತ್ಯ, ಸಂಸ್ಕೃತಿ, ಜಾನಪದ ಕುರಿತು ಕಾಲ ಕಾಲಕ್ಕೆ
ವಿಚಾರ ಸಂಕಿರಣ ಆಯೋಜಿಸುವ ಮೂಲಕ ಜಾನಪದ ಸಾಹಿತ್ಯದ ಮೌಲ್ಯ ಉಳಿಸಬೇಕಿದೆ. ಜಾನಪದ ಹಿನ್ನೆಲೆ, ಮೌಲ್ಯಗಳನ್ನು
ಅರ್ಥೈಸಿಕೊಳ್ಳುವಲ್ಲಿ ಸಹಕಾರಿ ಆಗಲಿದೆ. ಜಾನಪದ ಕಲೆಯ ಸಾಮಾನ್ಯ ಜಾನಪದ, ಸಾದ್ವಿಕರ ಜಾನಪದ ಅಧ್ಯಯನ, ಕಲೆಗಳ
ಅಧ್ಯಯನ, ಪಾರಂಪರಿಕ ವಿಜ್ಞಾನ ಮತ್ತು ತಂತ್ರಜ್ಞಾನ ಅಲಕ್ಷಿತ ಅಧ್ಯಯನ ಹಾಗೂ ಅನ್ವಯಿಕ ಜಾನಪದ ಎಂದು ಜಾನಪದವನ್ನು
6 ಭಾಗಗಳಾಗಿ ವಿಂಗಡಿಸಲಾಗಿದೆ. ಇಂದಿನ ಯುವಕರು ಅಧ್ಯಯನ ಮಾಡುವ ಜಾನಪದ ಸಾಹಿತ್ಯ ಕಲೆ ಉಳಿಸಲು ಸಹಕಾರಿ
ಆಗಲಿದೆ ಎಂದರು.
ಸಹ್ಯಾದ್ರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಪ್ರಾಚಾರ್ಯ ಬಿ.ಎಸ್. ಬಾಪಗೊಂಡ ಅಧ್ಯಕ್ಷತೆ ವಹಿಸಿದ್ದರು. ಈರಮ್ಮ ಬಿರಾದಾರ, ಓಂಕಾರ ನಾವಿ, ಎಸ್. ಎಸ್. ಗೊರನಾಳ, ಪಿ.ಆರ್. ಡೋಣೂರ, ಸಹಾಯಕ ಪ್ರಾಧ್ಯಾಪಕ ಪಿ.ಆರ್. ಡೋಣೂರ ಇದ್ದರು.
ಓದಿ :ಆನ್‌ಲೈನ್ ಕಲಿಕೆಯಿಂದ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಲು ವಿದ್ಯಾರ್ಥಿಗಳ ಹಿಂದೇಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ಕಾಂಗ್ರೆಸ್ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ: ಯತ್ನಾಳ್
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ
Vijayapura: ವಕ್ಫ್ ವಿರುದ್ಧ ಹಲವು ಮಠಾಧೀಶರ ನೇತೃತ್ವದಲ್ಲಿ ಹೋರಾಟ
MUST WATCH
ಹೊಸ ಸೇರ್ಪಡೆ
Belthangady: ಹೆಬ್ಬಾವು ಹಿಡಿದು ವೈರಲ್ ಆದ ಕುಪ್ಪೆಟ್ಟಿ ನಿವಾಸಿ ಆಶಾ!
Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.