ಸಾಕು ಪ್ರಾಣಿಗಳ ಪ್ರೀತಿ ಅರಿತುಕೊಳ್ಳಿ

ಶ್ವಾನಗಳಿಗೆ ಉಚಿತ ರೆಬಿಸ್‌ ಲಸಿಕ

Team Udayavani, Feb 14, 2021, 5:24 PM IST

14-24

ಮುದ್ದೇಬಿಹಾಳ: ಸಾಕು ನಾಯಿಯಿಂದ ಬಹಳಷ್ಟು ರೋಗಗಳು ಕಡಿಮೆಯಾಗುತ್ತವೆ ಎನ್ನುವುದು ಸಂಶೋಧನೆಯಿಂದ ದೃಢಪಟ್ಟಿದೆ.
ಸಾಕು ನಾಯಿಯಿಂದ ಇರುವ ಅನುಕೂಲಗಳು, ಅದರಿಂದ ದೊರೆಯುವ ಪ್ರೀತಿ, ವಿಶ್ವಾಸ ಮುಂತಾದವುಗಳನ್ನು ನಾವು ಅರಿತುಕೊಳ್ಳಬೇಕು
ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ| ಪ್ರಾಣೇಶ ಜಹಾಗಿರದಾರ ಹೇಳಿದರು.

ಪಟ್ಟಣದ ವಿಬಿಸಿ ಪ್ರೌಢಶಾಲೆ ಮೈದಾನದಲ್ಲಿ ಜಿಲ್ಲಾಡಳಿತ, ಪಶುಪಾಲನಾ ಹಾಗೂ ಪಶು ವೈದ್ಯಕೀಯ ಇಲಾಖೆ ಮತ್ತು ಜಿಲ್ಲಾ ಪ್ರಾಣಿ ದಯಾ ಸಂಘ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ವಾನಗಳ ಪ್ರದರ್ಶನ, ಶ್ವಾನಗಳಿಗೆ ಉಚಿತ ರೆಬಿಸ್‌ ಲಸಿಕೆ ಹಾಗೂ ರೆಬಿಸ್‌ ರೋಗದ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಪಂ ಕ್ರಿಯಾಯೋಜನೆ ಅನುಮೋದನೆ ನೀಡಿದ್ದರಿಂದ ಈ ಕಾರ್ಯಕ್ರಮದ ಮೂಲಕ ಈ ಭಾಗದ ಬಹುಜನರ, ಬಹುದಿನಗಳ ಬೇಡಿಕೆ ಈಡೇರಿಸಲಾಗಿದೆ. ಜನರೂ ಅಭೂತಪೂರ್ವ ಸ್ಪಂದನೆ ನೀಡಿದ್ದಾರೆ. ಇತ್ತೀಚಿಗೆ ಈ ಭಾಗದಲ್ಲಿ ನೀರಾವರಿ ಹೆಚ್ಚಾಗುತ್ತಿದೆ. ಕೆರೆಗಳು ತುಂಬುತ್ತಿವೆ.
ಇದರೊಟ್ಟಿಗೆ ಪಶು ಸಂಗೋಪನೆ, ಹೈನುಗಾರಿಕೆಯೂ ಅಭಿವೃದ್ಧಿ ಆಗಬೇಕು. ನಾಯಿ ಸಾಕಣೆ ಹೆಚ್ಚಾಗಬೇಕು. ಬರುವ ದಿನಗಳಲ್ಲಿ ಇಲಾಖೆಯ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಬೇಕು. ಮುದ್ದೇಬಿಹಾಳದಲ್ಲಿ ಬೇಟೆ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಇರಾನ್‌ ದೇಶದ ನಾಯಿಯ ತಳಿಗಳನ್ನು ಹೋಲುವ ಮಾದರಿಯ ನಾಯಿಗಳು ಈ ಭಾಗದಲ್ಲಿವೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ವಿಶ್ವಾಸಕ್ಕೆ ಪಾತ್ರವಾಗಿರುವ ನಾಯಿ ನಿಯತ್ತಿನ
ಪ್ರಾಣಿ. ತನ್ನನ್ನು ಸಾಕಿದವರಿಗೆ ಅದು ಎಂದೂ ಬೊಗಳುವುದಿಲ್ಲ. ಆದರೆ ಮನುಷ್ಯ 10 ಬಾರಿ ನಮ್ಮಿಂದ ಸಹಾಯ ಪಡೆದುಕೊಂಡರೂ ಒಂದು ಬಾರಿ ಸಹಾಯ ಮಾಡದಿದ್ದರೆ ಆ ಹತ್ತೂ ಸಹಾಯ ಮರೆತು ನಮ್ಮನ್ನು ಟೀಕಿಸುತ್ತಾನೆ, ವಿರೋಧಿ ಸುತ್ತಾನೆ. ಇದು ಮನುಷ್ಯ
ಮನುಷ್ಯನಿಗೆ ವಿರೋಧಿ ಯಾದರೆ, ನಾಯಿ ತನ್ನ ಸಾಕಿದ ಮನುಷ್ಯನಿಗೆ ಎಂದೂ ವಿರೋಧಿಯಾಗೊಲ್ಲ ಎನ್ನುವುದನ್ನು ತೋರಿಸಿಕೊಡುತ್ತದೆ.
ನಾಯಿಯಂತೆ ಅಲೆದಾಡುವವನು ಬಡವ, ನಾಯಿಯೊಂದಿಗೆ ತಿರುಗಾಡುವವನು ಶ್ರೀಮಂತ ಎನ್ನುವ ಮಾತು ಚಾಲ್ತಿಯಲ್ಲಿದೆ. ನಾಯಿಗೆ
ಇರುವಂಥ ನಿಯತ್ತು ಮನುಷ್ಯರ ಬಳಿ ಇಲ್ಲ. ನಾಯಿ ಸಾಯುವವರೆಗೂ ಸಾಕಿದವರಿಗೆ ಬೊಗಳುವುದಿಲ್ಲ. ಅದು ಅದರ ನಿಯತ್ತು. ಈ ಪ್ರದರ್ಶನ ಏರ್ಪಡಿಸಿರುವುದು ಶ್ಲಾಘನೀಯ ಎಂದರು.

ತಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಹವಾಲ್ದಾರ್‌, ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಪುರಸಭೆ ಸದಸ್ಯೆ ಸಹನಾ ಬಡಿಗೇರ, ತಾಲೂಕು
ಕಸಾಪ ಅಧ್ಯಕ್ಷ ಎಂ.ಬಿ. ನಾವದಗಿ, ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ದೇವೇಂದ್ರ ವಾಲೀಕಾರ, ಇಲಾಖೆಯ ಸಹಾಯಕ
ನಿರ್ದೇಶಕ ಶಿವಾನಂದ ಮೇಟಿ, ಮುಖ್ಯ ಪಶು ವೈದ್ಯಾ ಧಿಕಾರಿ ರಮೇಶ ರಾಠೊಡ, ಡಾ| ಸತೀಶ ಮುಂಡಾಸ, ಡಾ| ಎಸ್‌.ಬಿ.
ಕುಂಬಾರ, ಗುರುಸಂಗಪ್ಪ ಮತ್ತಿತರರು ವೇದಿಕೆಯಲ್ಲಿದ್ದರು. ಸಂಗಮೇಶ ಶಿವಣಗಿ ಪ್ರಾರ್ಥಿಸಿದರು.

ಬಿ.ಜಿ. ಹಿರೇಮಠ ಸ್ವಾಗತಿಸಿದರು. ಶ್ರೀಶೈಲ ಹೂಗಾರ ನಿರೂಪಿಸಿದರು. ಮುಖ್ಯ ಪಶು ವೈದ್ಯಾ ಧಿಕಾರಿ ಡಾ|ಸುರೇಶ ಭಜಂತ್ರಿ ವಂದಿಸಿದರು.

ಓದಿ : ‘ಪ್ರೇಮಿಗಳ ದಿನ’… ಸಿಂಗಲ್ ಇರೋರಿಗೆ ಚಾರ್ ಮಿನಾರ್ ಚೆಲುವೆಯ ಬಿಗ್ ಗಿಫ್ಟ್…ಏನದು ?

ಟಾಪ್ ನ್ಯೂಸ್

hk-patil

MUDA; ಕಾಂಗ್ರೆಸ್ ಗೊಂದು, ಬಿಜೆಪಿಗೊಂದು‌ ಕಾನೂನು ಇದೆಯೇ?: ಎಚ್.ಕೆ.ಪಾಟೀಲ್

voter

Maharashtra Polls; ಹರಿಯಾಣದಂತೆ ಬಂಡಾಯ ಸ್ಪರ್ಧಿಗಳು ಲೆಕ್ಕಾಚಾರ ತಲೆಕೆಳಗಾಗಿಸುತ್ತಾರೆಯೇ?

US Election Result:ಡೊನಾಲ್ಡ್ ಟ್ರಂಪ್‌ ಕೈಹಿಡಿದ Swing States,2ನೇ ಬಾರಿ ಅಧ್ಯಕ್ಷ ಗಾದಿ?

US Election Result:ಡೊನಾಲ್ಡ್ ಟ್ರಂಪ್‌ ಕೈಹಿಡಿದ Swing States,2ನೇ ಬಾರಿ ಅಧ್ಯಕ್ಷ ಗಾದಿ?

siddanna

MUDA; ಲೋಕಾಯುಕ್ತ ಪೊಲೀಸರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ: ಸಿಎಂ ಕಿಡಿ

Actor Surya: ಶಿವಣ್ಣ ಜೊತೆ ಸ್ಪರ್ಧೆಯಿಲ್ಲ; ತಮಿಳು ನಟ ಸೂರ್ಯ ಸ್ಪಷ್ಟನೆ  

Actor Surya: ಶಿವಣ್ಣ ಜೊತೆ ಸ್ಪರ್ಧೆಯಿಲ್ಲ; ತಮಿಳು ನಟ ಸೂರ್ಯ ಸ್ಪಷ್ಟನೆ  

1-reddd

BJP,ಮೋದಿ ಸಾಂವಿಧಾನಿಕ ಮೌಲ್ಯಗಳ ನಾಶಕ್ಕೆ ಯತ್ನಿಸುತ್ತಿದ್ದಾರೆ: ಪ್ರಿಯಾಂಕಾ ಕಿಡಿ

Tiger

Jaipur; ರಾಷ್ಟ್ರೀಯ ಉದ್ಯಾನವನದಿಂದ ಭಾರೀ ಸಂಖ್ಯೆಯ ಹುಲಿಗಳು ನಾಪತ್ತೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

Surya—jagadmbika-Pal-(JPC)

Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Vijayapura-waqf

Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ

Vijayapura: Protest against Waqf led by many Seers

Vijayapura: ವಕ್ಫ್ ವಿರುದ್ಧ ಹಲವು ಮಠಾಧೀಶರ ನೇತೃತ್ವದಲ್ಲಿ ಹೋರಾಟ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

hk-patil

MUDA; ಕಾಂಗ್ರೆಸ್ ಗೊಂದು, ಬಿಜೆಪಿಗೊಂದು‌ ಕಾನೂನು ಇದೆಯೇ?: ಎಚ್.ಕೆ.ಪಾಟೀಲ್

9

BTS Kannada Movie: ತೆರೆ ಹಿಂದಿನ ಕಥೆಗಳ ಬಿಟಿಎಸ್‌

voter

Maharashtra Polls; ಹರಿಯಾಣದಂತೆ ಬಂಡಾಯ ಸ್ಪರ್ಧಿಗಳು ಲೆಕ್ಕಾಚಾರ ತಲೆಕೆಳಗಾಗಿಸುತ್ತಾರೆಯೇ?

US Election Result:ಡೊನಾಲ್ಡ್ ಟ್ರಂಪ್‌ ಕೈಹಿಡಿದ Swing States,2ನೇ ಬಾರಿ ಅಧ್ಯಕ್ಷ ಗಾದಿ?

US Election Result:ಡೊನಾಲ್ಡ್ ಟ್ರಂಪ್‌ ಕೈಹಿಡಿದ Swing States,2ನೇ ಬಾರಿ ಅಧ್ಯಕ್ಷ ಗಾದಿ?

siddanna

MUDA; ಲೋಕಾಯುಕ್ತ ಪೊಲೀಸರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ: ಸಿಎಂ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.