ಉಗ್ರರ ಸಂಚು ವಿಫಲ: 7 ಕೆಜಿ ಐಇಡಿ ಸ್ಪೋಟಕ ವಶ; ಇಬ್ಬರನ್ನು ಬಂಧಿಸಿದ ಪೊಲೀಸರು
Team Udayavani, Feb 14, 2021, 8:21 PM IST
ಜಮ್ಮುಕಾಶ್ಮೀರ: ಪುಲ್ವಾಮ ಭೀಕರ ದಾಳಿ ನಡೆದು ಎರಡು ವರ್ಷವಾದ ವೇಳೆಯಲ್ಲಿಯೇ ಜಮ್ಮುವಿನಲ್ಲಿ ಉಗ್ರರು, ವಿದ್ವಾಂಸಕ ಕೃತ್ಯ ನಡೆಸಲು ರೂಪಿಸಿದ್ದ ಸಂಚನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಜಮ್ಮು ಬಸ್ ನಿಲ್ದಾಣದಲ್ಲಿ 7ಕೆ.ಜಿ ಗಳಷ್ಟು ಸುಧಾರಿತ ಐಇಡಿ ಸ್ಪೋಟಕಗಳನ್ನಿರಿಸಿಕೊಂಡಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಚಂಢಿಗಢದ ನರ್ಸಿಂಗ್ ವಿದ್ಯಾರ್ಥಿ ಸುಹೈಲ್ ಹಾಗೂ ಖಾಜಿ ಎಂದು ಗುರುತಿಸಲಾಗಿದೆ ಎಂದು ಜಮ್ಮು ಕಾಶ್ಮೀರ ಐಜಿ ಮುಖೇಶ್ ಸಿಂಗ್ ತಿಳಿಸಿದ್ದಾರೆ.
ರಘುನಾಥ್ ದೇವಾಲಯ, ಲಾಖ್ ದತ್ತಾ ಬಜಾರ್, ಜಮ್ಮು ರೈಲ್ವೇ ಸ್ಟೇಷನ್ ಉಗ್ರರ ಹಿಟ್ ಲೀಸ್ಟ್ ನಲ್ಲಿದ್ದು, ಪಾಕಿಸ್ತಾನವು ಉಗ್ರ ಚಟುವಟಿಕೆ ನಡೆಸಲು ಅಲ್ ಬದ್ರ್ ಸೇರಿದಂತೆ ಪಂಜಾಬ್ ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಕಾಶ್ಮೀರ ವಿದ್ಯಾರ್ಥಿಗಳನ್ನು ಕೃತ್ಯಕ್ಕೆ ಬಳಸಲು ಸಂಚು ರೂಪಿಸುತ್ತಿದೆ ಎಂದು ಜಮ್ಮು ಕಾಶ್ಮೀರ ಐಜಿಪಿ ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡ ದುರಂತ: ಕಂದಮ್ಮಗಳ ಹುಡುಕಾಟದಲ್ಲಿರುವ ತಾಯಿ ಕರುಳಿನ ವ್ಯಥೆ
ಪುಲ್ವಾಮ ದಾಳಿ ನಡೆದ ದಿನದಂದೇ ವಿದ್ವಾಂಸಕ ಕೃತ್ಯ ನಡೆಸಲು ಉಗ್ರರು ಯೋಜನೆ ರೂಪಿಸಿದ್ದಾರೆ ಎನ್ನುವ ಗುಪ್ತಚರ ಮಾಹಿತಿ ಅನ್ವಯ ಕಳೆದ ಮೂರು ದಿನಗಳಿಂದ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ಈ ವೇಳೆ ಐಇಡಿ ಸ್ಪೋಟಕಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ತನಿಖೆಯ ವೇಳೆ ಪಾಕಿಸ್ತಾನದ ಅಲ್ ಬದ್ರ್ ತಂಝೀಮ್ ಭಯೋತ್ಪಾದಕ ಸಂಘಟನೆ ಐಇಡಿ ಸ್ಪೋಟಕಗಳನ್ನೀರಿಸಲು ಸೂಚನೆ ನೀಡಿತ್ತು ಎಂದು ಆರೋಪಿಗಳು ತಿಳಿಸಿದ್ದಾರೆ.
ಸಂಭಾ ಜಿಲ್ಲೆಯಲ್ಲೂ ಪೊಲೀಸರು 15 ಸಣ್ಣ ಪ್ರಮಾಣದ ಐಇಡಿ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸ್ಪೋಟಕಗಳನ್ನು ಡ್ರೋನ್ ಮೂಲಕ ಕೆಳಗಿಳಿಸಲಾಗಿತ್ತು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ‘ಪಠಾಣ್’ ಚಿತ್ರದಲ್ಲಿ ಭಾಯ್ ಜಾನ್…. ಶಾರುಖ್ ಗೆ ಸಾಥ್ ನೀಡಿದ ಸಲ್ಮಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Sandalwood: ತೆರೆಮೇಲೆ ʼಅನಾಥʼನ ಕನಸು
Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್: ಏನಿದರ ಅಸಲೀಯತ್ತು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.