ಪುತ್ತೂರು ನಗರವಾಸಿಗಳಿಗೆ ತ್ಯಾಜ್ಯ ನೀರು ಸೇವನೆಯ ಸಂಕಟ

 ಪುತ್ತೂರು ನಗರ: ಒಳಚರಂಡಿ ಯೋಜನೆ ನನೆಗುದಿಗೆ

Team Udayavani, Feb 15, 2021, 5:00 AM IST

ಪುತ್ತೂರು ನಗರವಾಸಿಗಳಿಗೆ ತ್ಯಾಜ್ಯ ನೀರು ಸೇವನೆಯ ಸಂಕಟ

ಪುತ್ತೂರು: ಜಿಲ್ಲಾ ಕೇಂದ್ರದ ನಿರೀಕ್ಷೆಯಲ್ಲಿರುವ ಪುತ್ತೂರಿನ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದೆ ತೆರೆದ ಚರಂಡಿ ಮೂಲಕ ಸಾಗುವ ತ್ಯಾಜ್ಯದಿಂದಾಗಿ ನಗರವಾಸಿಗಳಿಗೆ ತ್ಯಾಜ್ಯ ನೀರು ಸೇವನೆಯ ಸಂಕಟ ನಿರ್ಮಾಣವಾಗಿದೆ.

ಇದು ವಿಚಿತ್ರವಾದರೂ ಸತ್ಯ. ಸಮಗ್ರ ಒಳಚರಂಡಿ ವ್ಯವಸ್ಥೆ ಅನುಷ್ಠಾನಕ್ಕೆ ಬಾರದ ಕಾರಣ ಇಂತಹ ಅವ್ಯವಸ್ಥೆ ಪುತ್ತೂರು ನಗರವನ್ನು ಹಲವು ಕಾಲದಿಂದ ಬಾಧಿಸುತ್ತಿದೆ.

ತ್ಯಾಜ್ಯ ನೀರು ಮರಳಿ ನಗರಕ್ಕೆ! :

ಈಗಿನ ಲೆಕ್ಕಚಾರದ ಪ್ರಕಾರ ಜನಸಂಖ್ಯೆ 60 ಸಾವಿರ ದಾಟಿರುವ ನಗರದಲ್ಲಿ ನೂರಾರು ವಾಣಿಜ್ಯ ಕಟ್ಟಡ, ಆಸ್ಪತ್ರೆ, ಕೈಗಾರಿಕೆ, ಹೊಟೇಲ್‌, ಶಿಕ್ಷಣ ಸಂಸ್ಥೆ ಹತ್ತಾರು ಬಗೆಯ ವ್ಯವಹಾರಗಳಿವೆ. ದಿನಂಪ್ರತಿ ಇಲ್ಲಿಂದ ಉತ್ಪತ್ತಿಯಾಗುವ ತ್ಯಾಜ್ಯ, ಮಲಿನ ನೀರು ಹರಿದು ಹೋಗಲು ಪ್ರತ್ಯೇಕ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಹರಿಯುವ ತೆರೆದ ಚರಂಡಿಯಲ್ಲೇ ತ್ಯಾಜ್ಯ ನೀರು ಸಾಗುತ್ತಿದೆ. ಅದು ನೇರವಾಗಿ ನಗರಕ್ಕೆ ನೀರೋದಗಿಸುವ ಕುಮಾರಧಾರ ನದಿಗೆ ಸೇರುತ್ತಿದೆ. ಇದೇ ನದಿ ನೀರನ್ನು ಅಣೆಕಟ್ಟಿನ ಮೂಲಕ ಸಂಗ್ರಹಿಸಿ ದಿನಂಪ್ರತಿ ನಗರಕ್ಕೆ ಕುಡಿಯುವ ನೀರಿಗಾಗಿ ಬಳಸಲಾಗುತ್ತಿದೆ. ಈಗಿನ ಪರಿಸ್ಥಿತಿ ಹೇಗಿದೆ ಅಂದರೆ, ತ್ಯಾಜ್ಯ ನೀರೇ ನದಿಗೆ ಸೇರಿ ಪುನಃ ನಗರಕ್ಕೆ ಬಂದು ದೇಹ ಸೇರುತ್ತಿದೆ.

ಒಳಚರಂಡಿ ಇಲ್ಲ :

ಈ ಹಿಂದೆ ಕರ್ನಾಟಕ ನಗರ ಅಭಿವೃದ್ಧಿ ಮತ್ತು ಕರಾವಳಿ ಪರಿಸರ ನಿರ್ವಹಣ ಯೋಜನೆಯ ಅಡಿಯಲ್ಲಿ ಕೆಯುಐಡಿಎಫ್‌ಸಿ ನೇತೃತ್ವದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಒಳಚರಂಡಿ ಹಾದು ಹೋಗುವ ಲೈನ್‌ ಸಮೀಕ್ಷೆ ನಡೆಸಲಾಗಿತ್ತು. ಯೋಜನೆ ಅನುಷ್ಠಾನಕ್ಕಾಗಿ 125 ಕೋಟಿ ರೂ. ಮೆಗಾ ಪ್ಲಾನ್‌ ಸಿದ್ಧಪಡಿಸಲಾಗಿತ್ತು. ಈ ಬಗ್ಗೆ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗಿತ್ತು.

ಭೂ ಸ್ವಾಧೀನ ಸಮಸ್ಯೆ :

30 ವಾರ್ಡ್‌ಗಳಲ್ಲಿ ಹಂಚಿ ಹೋಗಿರುವ ನಗರಸಭೆ 32 ಚದರ ಕಿ.ಮೀ. ವ್ಯಾಪ್ತಿ ಹೊಂದಿದೆ. ಒಂದು ಹೆದ್ದಾರಿ, 4 ಮುಖ್ಯ ರಸ್ತೆಗಳು, 15ಕ್ಕೂ ಅಧಿಕ ಉಪ ಮುಖ್ಯ ರಸ್ತೆಗಳು ಹಾಗೂ ನೂರಾರು ಒಳರಸ್ತೆಗಳು ಇವೆ. ಇಡೀ ನಗರವನ್ನು ವ್ಯಾಪಿಸುವ ಸಮಗ್ರ ಒಳಚರಂಡಿ ಕಾಮಗಾರಿಗೆ ನೀಲನಕಾಶೆ ಸಿದ್ಧವಾಗಿತ್ತು.

ಸಮಗ್ರ ಯೋಜನ ವರದಿ (ಡಿಪಿಆರ್‌) ತಯಾರಿಸುವ ಕೆಲಸ ಬಾಕಿಯಿದ್ದರೂ ಮೇಲ್ನೋಟದ ಅಂದಾಜು ಪಟ್ಟಿ ತಯಾರಿಸಲಾಗಿತ್ತು. ಸಮೀಕ್ಷೆ ಸಂದರ್ಭದಲ್ಲಿ ಕಂಡುಕೊಂಡಂತೆ ಯೋಜನೆಗಾಗಿ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 518 ಜಮೀನುಗಳಿಂದ ಒಟ್ಟು 39 ಎಕ್ರೆ ಭೂ ಸ್ವಾಧೀನ ಮಾಡಿಕೊಳ್ಳುವ ಅನಿವಾರ್ಯ ಕಂಡು ಬಂದಿತ್ತು. ಹಲವು ಕಡೆಗಳಲ್ಲಿ ಖಾಸಗಿ ಜಮೀನು ಸ್ವಾಧೀನ ಮಾಡುವ ಅನಿವಾರ್ಯ ಸೃಷ್ಟಿಯಾಗಿತ್ತು. ಜಮೀನು ಬಿಟ್ಟುಕೊಡಲು ಪಟ್ಟಾದಾರರು ನಿರಾಕರಿಸುವ ಕಾರಣ ಯೋಜನೆ ನನೆಗುದಿಗೆ ಬಿದ್ದಿದೆ.

ಯೋಜನೆಗೆ ಕುತ್ತು :

ಸಮೀಕ್ಷೆ ಪ್ರಕಾರ ಒಳಚರಂಡಿ ಯೋಜನೆಯನ್ನು ಎಡಿಬಿ ನೆರವಿನಿಂದ ಅನುಷ್ಠಾನಗೊಳಿಸಲು ಕೆಯುಐಡಿಎಫ್‌ಸಿಗೆ ವಹಿಸಲಾಗಿದೆ. ಯೋಜನೆಗೆ ಡಿಪಿಆರ್‌ ಮಾಡಬೇಕಾದರೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಮತ್ತು ಜಮೀನು ನಗರಸಭೆ ಹೆಸರಿಗೆ ವರ್ಗಾವಣೆಯಾಗಬೇಕು. ಇದೆಲ್ಲ ಪ್ರಕ್ರಿಯೆ ಮುಗಿಯಲು ಮೂರು ವರ್ಷ ಬೇಕಾದೀತು. ಮಂಜೂರಾದ ಅನುದಾನ ರದ್ದಾಗುವುದನ್ನು ತಪ್ಪಿಸಲು ದೇವನಹಳ್ಳಿ ಮಾದರಿಯ ಫೀಕರ್‌ ಸೆಪ್ಟೆಜ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ನ್ನು ಪುತ್ತೂರಿಗೆ ಅಳವಡಿಸಬಾರದೇಕೆ ಎಂದು ಕೆಯುಐಡಿಎಫ್‌ಸಿ ಪ್ರಶ್ನಿಸಿತು.

ಹಲವು ಉದ್ದೇಶ :

ಪ್ರಮುಖ ರಸ್ತೆ, ಒಳರಸ್ತೆಗಳ ಮೂಲಕ ಸಾಗುವ ಒಳಚರಂಡಿಗೆ ನಿಗದಿತ ಸ್ಥಳಗಳಲ್ಲಿ ವೈಜ್ಞಾನಿಕ ಪ್ಲಾÂಂಟ್‌ಗಳನ್ನು ನಿರ್ಮಿಸಬೇಕಿದೆ. ಬೆದ್ರಾಳದಲ್ಲಿ 4 ಎಕರೆ ವಿಸ್ತೀರ್ಣದಲ್ಲಿ ಶುದ್ಧಿಕರಣ ಘಟಕ ಮೊದಲಾದಿ ಕಾಮಗಾರಿಗಳು ಸೇರಿವೆ. ಇದಕ್ಕೆ ಸಾಧರಣ 40 ರಿಂದ 43 ಎಕರೆ ಜಮೀನು ಅಗತ್ಯ ಇದೆ ಎನ್ನಲಾಗಿದೆ.

 

-ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Power-Cable

Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್‌ ಕೇಬಲ್‌ ಕಳವು

Stock-liqer

Sulya: ಆರಂತೋಡು: ಚಿಕನ್‌ ಸೆಂಟರ್‌ಗೆ ದಾಳಿ; ಮದ್ಯ ಅಕ್ರಮ ದಾಸ್ತಾನು ಪತ್ತೆ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.