ಟೂಲ್‌ಕಿಟ್ ಎಂದರೇನು?
Team Udayavani, Feb 15, 2021, 1:29 AM IST
ಕಳೆದ ಒಂದು ವಾರದಿಂದ ಟೂಲ್‌ಕಿಟ್, ಟೂಲ್‌ಕಿಟ್ ಅಂತ ಓದ್ತಾ ಇದ್ದೇವೆ, ಹಾಗಂದ್ರೆ ಏನು?
ಸರಳವಾಗಿ ಹೇಳುವುದಾದರೆ, ಚಳವಳಿ ಅಥವಾ ಹೋರಾಟ ನಡೆಸುವವರಿಗೆ ಮಾರ್ಗ ದರ್ಶಿಸೂತ್ರ ಇದ್ದ ಹಾಗೆ. ಯಾವಾಗ ಮತ್ತು ಹೇಗೆ ಪ್ರತಿಭಟನೆ ಮಾಡ ಬೇಕು ಎಂದು ಮೊದಲೇ ರೂಪಿ ಸುವ ಒಂದು ಪುಟ್ಟ ಕೈಪಿಡಿ ಇದಾಗಿರುತ್ತದೆ.
ಹಿಂದೆಯೂ ಇತ್ತಾ? ಹೊಸತಾ?
ದಶಕಗಳಿಂದಲೂ ಇಂಥ ಟೂಲ್‌ಕಿಟ್‌ಗಳ ಪ್ರಸ್ತಾವ ಇದೆ. 2011ರಲ್ಲಿ ವಾಲ್‌ಸ್ಟ್ರೀಟ್ ಪ್ರತಿಭಟನೆ, 2019 ರಲ್ಲಿ ಹಾಂ ಕಾಂ ಗ್ ಪ್ರತಿಭಟನೆಗಳ ಲೆಲ್ಲ ಇಂಥ ಟೂಲ್‌ಕಿಟ್ ಬಳಸ ಲಾಗಿತ್ತು. ಈಗ ಸಾಮಾಜಿಕ ಜಾಲತಾಣ ಪ್ರಬಲ ವಾಗಿರುವುದ ರಿಂದ ಹೆಚ್ಚು ಜನಕ್ಕೆ ತಿಳಿಯುತ್ತಿದೆಯಷ್ಟೇ.
ಟೂಲ್‌ಕಿಟ್‌ನಲ್ಲೇನಿರುತ್ತದೆ?
ಪ್ರತಿಭಟನಕಾರರು ಏನು ಮಾಡಬೇಕು ಎನ್ನುವ ಗೈಡ್ ಇದು. ಉದಾ: ಹಾಂಕಾಂಗ್‌ನಲ್ಲಿ ಪ್ರತಿಭಟನೆ ಸಂದರ್ಭ ಮುಖವಾಡ, ಶಿರಸ್ತ್ರಾಣ ಬಳಸಿ ಎಂದು ಇಂಥ ಟೂಲ್‌ಕಿಟ್‌ನಲ್ಲಿ ಸೂಚಿಸಲಾಗಿತ್ತು. ಭಾರತದಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆಯ ಸಂ ದರ್ಭ ಟ್ವಿಟರ್‌ನ್ನು ಸಮರ್ಪಕವಾಗಿ ಬಳಸಿ ಕೊಳ್ಳಿ ಎಂದು ಟೂಲ್‌ಕಿಟ್ ಸಲಹೆ ನೀಡಿತ್ತು.
ಈಗ ಹುಟ್ಟಿಕೊಂಡಿರುವ ಗ್ರೇಟಾ ಥನ್‌ಬರ್ಗ್ ಟೂಲ್‌ಕಿಟ್ ಕತೆ ಏನು?
ಪರಿಸರ ಹೋರಾಟಗಾರ್ತಿ, 18ರ ಹರೆ ಯದ ಗ್ರೇಟಾ ತಮ್ಮ ಟ್ವಿಟರ್ ಖಾತೆಯಲ್ಲಿ ಇಂಥದ್ದೊಂದು ಟೂಲ್‌ಕಿಟ್‌ನ್ನು ಶೇರ್ ಮಾಡಿದ್ದರು; ಆಮೇಲೆ ಅದನ್ನು ಡಿಲೀಟ್ ಮಾಡಿದ್ದರು. ಅದು ಭಾರತದಲ್ಲಿ ಈಗ ನಡೆ ಯುತ್ತಿರುವ ರೈತರ ಪ್ರತಿಭಟನೆ ಕುರಿತಾದ ಮಾರ್ಗದರ್ಶಿ ಸೂತ್ರ ಎಂದು ಹೇಳಲಾಗಿದೆ. ಅದರಲ್ಲಿ ರೈತರ ಪ್ರತಿಭಟನೆ ಯಾವಾಗ ಮತ್ತು ಹೇಗೆ ನಡೆಸಬೇಕೆಂಬ ಮಾಹಿತಿಗಳಿ ದ್ದವು. ಉದಾ: ಫೆ. 4, 5ರಂದು ಟ್ವಿಟರ್ ಮೂ ಲಕ ಅಭಿಯಾನ ನಡೆಸಬೇಕು; ಅದಾನಿ, ಅಂಬಾನಿ ವಿರುದ್ಧ ಸಿಡಿದೇಳಬೇಕು; ಫೆ. 13 ಮತ್ತು 14 ರಂದು ಸ್ಥಳೀಯ ಮಟ್ಟದಲ್ಲಿ ಪ್ರತಿ ಭಟನೆ ನಡೆಸಬೇಕು ಎಂಬ ಮಾಹಿತಿಗಳಿ ದ್ದವು. ವಿವಿಧ ವೆಬ್‌ಸೈಟ್‌ಗಳ ಲಿಂಕ್‌ಗಳಿದ್ದವು.
ಈಗ ಪ್ರಚಲಿತದಲ್ಲಿರುವ ಟೂಲ್‌ಕಿಟ್ ಯಾಕೆ ಇಷ್ಟೊ.ಂದು ಪ್ರಚಾರ ಪಡೆದಿದೆ?
ಇದರಲ್ಲೇ ಇರುವುದು ಆಸಕ್ತಿಕಾರಕ ವಿಚಾರ. ಇದರಲ್ಲಿ ಉಲ್ಲೇಖ ವಾದ ಹಾಗೆ ಯೇ ಪ್ರತಿಭಟನೆಗಳು ನಡೆ ಯುತ್ತಿವೆ ಎಂದು ಪೊಲೀಸರು ಹೇಳುತ್ತಾರೆ. ಜ.26 ರಂದು ದಿಲ್ಲಿ ಯಲ್ಲಿ ನಡೆದ ಕೆಂಪುಕೋಟೆ ಮುತ್ತಿಗೆ ಸಹ ಇದರಲ್ಲಿ ಉಲ್ಲೇಖ ಗೊಂಡಿದ್ದು, ಪೂರ್ವ ಯೋಜಿತವಾಗಿದೆ. ಇದು ಅಂತರ ರಾ ಷ್ಟ್ರೀಯ ಮಟ್ಟದ ಸಂಚು ಎನ್ನುವುದು ಇದ ರಲ್ಲೇ ರೂಪಿತವಾಗಿದೆ ಎನ್ನುವುದು ಸರಕಾ ರದ ವಾದ. ಇದರ ಹಿಂದೆ ದೇಶವಿರೋಧಿ ಸಂಚಿದೆ. ಇದಕ್ಕೆ ಪೂರಕವಾಗಿ ಗ್ರೇಟ್ ಥನ್‌ಬರ್ಗ್ ಹಾಗೂ ಪಾಪ್ ಗಾಯಕಿ ರಿಹನ್ನಾ ಟ್ವೀಟ್ ಮಾಡಿದ್ದು ಇದೆಲ್ಲವನ್ನೂ ನಿರೂಪಿ ಸುತ್ತದೆ ಎಂದು ಸರಕಾರ ಹೇಳಿದೆ.
ಅದ್ಸರಿ, ಈಗ ಬಂಧಿತವಾಗಿರುವ ಬೆಂಗಳೂರಿನ ಹುಡುಗಿ ಪಾತ್ರ ಏನು?
ಈಗ ಬಂಧಿತಳಾಗಿರುವ ದಿಶಾ ರವಿ ಎಂಬಾಕೆ ಫ್ರೈಡೇ ಫಾರ್ ಫ್ಯೂಚರ್ ಎಂಬ ಸಂಘಟನೆಯ ಸಂಸ್ಥಾಪಕಿಯಾಗಿದ್ದು, ಈ ಟೂಲ್‌ಕಿಟ್‌ನ್ನು ಎಡಿಟ್ ಮಾಡುತ್ತಿದ್ದಳು ಎನ್ನಲಾಗಿದೆ. ಹಾಗೆಯೇ ಇವಳಿಗೆ ಖಲಿಸ್ಥಾನ ಉಗ್ರರ ನಂಟು ಇತ್ತೆನ್ನುವುದು ಪೊಲೀಸರ ತನಿಖೆಯಿಂದ ಸಾಬೀತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.