![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Feb 15, 2021, 8:25 AM IST
2021ರಲ್ಲಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳ ಪಟ್ಟಿಯಲ್ಲಿ ಅಜೇಯ್ ರಾವ್ ಅಭಿನಯದ “ಕೃಷ್ಣ ಟಾಕೀಸ್’ ಕೂಡಾ ಒಂದು. ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಸಿನಿಮಾ ಪ್ರಿಯರ ಗಮನ ಸೆಳೆದಿರುವ “ಕೃಷ್ಣ ಟಾಕೀಸ್’ ಚಿತ್ರ ಈಗ ಬಿಡುಗಡೆಯ ದಿನಾಂಕವನ್ನು ಘೋಷಿಸಿಕೊಂಡಿದೆ. ಚಿತ್ರ ಏಪ್ರಿಲ್ 09ರಂದು ಬಿಡುಗಡೆಯಾಗುತ್ತಿದೆ.
ಈ ಹಿಂದೆ “ಓಳ್ ಮುನ್ಸಾಮಿ’ ಚಿತ್ರವನ್ನು ನಿರ್ದೇಶಿಸಿದ್ದ ವಿಜಯಾನಂದ್, “ಕೃಷ್ಣ ಟಾಕೀಸ್’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇದೇ ಮೊದಲ ಬಾರಿಗೆ “ಕೃಷ್ಣ ಟಾಕೀಸ್’ ಚಿತ್ರದಲ್ಲಿ ಅಜೇಯ್ ರಾವ್ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತುಂಬ ಗಂಭೀರ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಇದನ್ನೂ ಓದಿ:ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್ ಡೇ ಗೆ ಸಿಡಿಪಿ ರಿಲೀಸ್
ತಮ್ಮ ಪಾತ್ರದ ಬಗ್ಗೆ ಮಾತನಾಡುವ ಅಜೆಯ್ ರಾವ್, “ಈ ಸಿನಿಮಾದ ಪ್ರತಿ ದೃಶ್ಯಗಳು ಕೂಡ ಪ್ರೇಕ್ಷಕರ ಮನಮುಟ್ಟುವಂತಿದೆ. ಸನ್ನಿವೇಶಗಳು, ಪಾತ್ರಗಳು ಅಷ್ಟೇ ನೈಜವಾಗಿ ಮೂಡಿಬಂದಿದ್ದು, ಕುತೂಹಲ ಕೆರಳಿಸುತ್ತ ಸಿನಿಮಾ ಸಾಗುತ್ತದೆ. ಕೊನೆಕ್ಷಣದವರೆಗೂ ಪ್ರೇಕ್ಷಕರ ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುವ “ಕೃಷ್ಣ ಟಾಕೀಸ್’ ಪ್ರತಿ ಹತ್ತು ನಿಮಿಷಕ್ಕೊಮ್ಮೆ ಸಿನಿಮಾ ದಿಕ್ಕು, ವೇಗ ಬದಲಾಗುತ್ತದೆ. ನೋಡುಗರ ಊಹೆಗೂ ಮೀರಿದ ಪರಿಕಲ್ಪನೆಯನ್ನು ನಿರ್ದೇಶಕರು ತೆರೆಮೇಲೆ ತಂದಿದ್ದಾರೆ. ನನ್ನ ಪ್ರಕಾರ ಮನರಂಜನೆ ಬಯಸುವ, ಕೊರೊನಾದಿಂದ ಬೇಸತ್ತಿರುವ ಪ್ರೇಕ್ಷಕನಿಗೆ “ಕೃಷ್ಣ ಟಾಕೀಸ್’ನಲ್ಲಿ ಒಂದು ಒಳ್ಳೆಯ ಎಂಟರ್‌ಟೈನ್ಮೆಂಟ್ ವ್ಯಾಕ್ಸಿನ್ ಸಿಗಲಿದೆ’ ಎಂದಿದ್ದಾರೆ.
“ಗೋಕುಲ್ ಎಂಟರ್‌ಟೈನರ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಕೃಷ್ಣ ಟಾಕೀಸ್’ ಚಿತ್ರಕ್ಕೆ ಗೋವಿಂದರಾಜು ಅಲೂರು ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ನಿರಂತ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದ ಮೂರು ಹಾಡುಗಳಿಗೆ ಶ್ರೀಧರ್ ವಿ. ಸಂಭ್ರಮ್ ಸಂಗೀತವಿದೆ
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.