ಭಾಷಣ ಮಾಡುತ್ತಿರುವಾಗಲೇ ಕುಸಿದುಬಿದ್ದ ಗುಜರಾತ್ ಸಿಎಂ ವಿಜಯ್ ರೂಪಾಣಿ
Team Udayavani, Feb 15, 2021, 9:05 AM IST
ವಡೋದರ: ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರು ಕುಸಿದು ಬಿದ್ದ ಘಟನೆ ಭಾನುವಾರ ನಡೆದಿದೆ. ಕೂಡಲೇ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.
ವಡೋದರದ ನಿಜಾಂಪುರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯ ಸಮಾವೇಶದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕುಸಿದುಬಿದ್ದ ವಿಜಯ್ ರೂಪಾಣಿ ಅವರಿಗೆ ಕೂಡಲೇ ವೇದಿಕೆಯಲ್ಲೇ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಅವರೇ ಸ್ವತಃ ವೇದಿಕೆಯಿಂದ ಇಳಿದು ತೆರಳಿದ್ದಾರೆ. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಅಹಮದಾಬಾದ್ ಗೆ ಕರೆದೊಯ್ಯಲಾಗಿದೆ.
ಇದನ್ನೂ ಓದಿ:ತಮಿಳುನಾಡಿನಲ್ಲಿ ಇನ್ನು ಚಿನ್ನಮ್ಮನ ಆಟ ಶುರು
ಸಿಎಂ ವಿಜಯ್ ರೂಪಾಣಿ ಅವರ ಆರೋಗ್ಯ ಎರಡು ದಿನಗಳಿಂದ ಅಷ್ಟೇನೂ ಚೆನ್ನಾಗಿರಲಿಲ್ಲ. ಆದರೆ ಶನಿವಾರ ಜಾಮ್ ನಗರ ಮತ್ತು ಭಾನುವಾರ ವಡೋದರದಲ್ಲಿನ ಸಾರ್ವಜನಿಕ ಸಭೆಗಳನ್ನು ಅವರು ರದ್ದುಗೊಳಿಸುವ ಬದಲು ಅವುಗಳಲ್ಲಿ ಪಾಲ್ಗೊಂಡರು ಎಂದು ಬಿಜೆಪಿ ನಾಯಕ ಭರತ್ ದಾಂಗೆರ್ ಹೇಳಿದ್ದಾರೆ.
ಸಾರ್ವಜನಿಕ ಸಭೆಯ ವೇಳೆ ಮಾತನಾಡುವಾಗ ಮುಖ್ಯಮಂತ್ರಿಗಳು ಕುಸಿದುಬಿದ್ದಿದ್ದಾರೆ. ಆಗ ಅವರ ಭದ್ರತಾ ಸಿಬ್ಬಂದಿ ಅವರನ್ನು ಹಿಡಿದುಕೊಂಡಿದ್ದಾರೆ. ಅವರಿಗೆ ಪ್ರಥಮ ಚಿಕಿತ್ಸೆ ನೀಡಿ, ಅಹಮದಾಬಾದ್‌ಗೆ ಕರೆದೊಯ್ಯಲು ವಿಮಾನ ನಿಲ್ದಾಣದಕ್ಕೆ ಸಾಗಿಸಲಾಯಿತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ವೆಬ್ ಸೈಟ್‌ನಲ್ಲಿ ಟಾಪರ್ ಉತ್ತರ ಪತ್ರಿಕೆ ಪ್ರಕಟಿಸದಿರಲು ಮಂಡಳಿ, ಬೋರ್ಡ್ ನಿರ್ಧಾರ
ಸಿಎಂ ವಿಜಯ್ ರೂಪಾಣಿ ಅವರನ್ನು 24 ಗಂಟೆಗಳ ನಿಗಾದಲ್ಲಿ ಇಡಲಾಗಿದೆ. ಎಲ್ಲಾ ಪರೀಕ್ಷೆಗಳನ್ನು ನಡೆಸಲಾಗಿದೆ. ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಅಹಮದಾಬಾದ್ ನ ಯು.ಎನ್. ಆಸ್ಪತ್ರೆ ವೈದ್ಯ ಆರ್.ಕೆ.ಪಟೇಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.