ಕಿಸಾನ್ ಸಮ್ಮಾನ್ ಲಾಭಕ್ಕಾಗಿ ವಂಚಕರ ಯತ್ನ : ನಕಲಿ ಖಾತೆಗಳನ್ನು ಪತ್ತೆ ಹಚ್ಚಿದ ಕೃಷಿ ಇಲಾಖೆ
ಅನುಮಾನದ ಮೇಲೆ 85 ಸಾವಿರ ಖಾತೆಗಳು ಬ್ಲಾಕ್.!
Team Udayavani, Feb 15, 2021, 1:05 PM IST
ಬೆಂಗಳೂರು : ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಲಾಭವನ್ನು ಪಡೆಯಲು ಹೊರ ರಾಜ್ಯದ ಖದೀಮರು ಸಂಚು ರೂಪಿಸಿದ್ದು ಈಗ ಬೆಳಕಿಗೆ ಬಂದಿದೆ.
ರೈತರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಅಕ್ರಮ ನಡೆಸಿರುವುದನ್ನು ರಾಜ್ಯದ ಕೃಷಿ ಇಲಾಖೆ ಪತ್ತೆ ಹಚ್ಚಿದೆ. ಕಿಸಾನ್ ಸಮ್ಮಾನ್ ಯೋಜನೆಯಿಂದ ಅರ್ಹ ರೈತರಿಗೆ ಬರುವ ಹಣವನ್ನು ಲಪಟಾಯಿಸಲು ಹೊರರಾಜ್ಯದ ವಂಚಕರು ಹೂಡಿದ ಸಂಚು ಈಗ ಬಹಿರಂಗಗೊಂಡಿದೆ.
ಓದಿ : ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನಡೆಸಿದ ಸಿಎಂ ಯಡಿಯೂರಪ್ಪ
ಚಿತ್ರದುರ್ಗ, ಬೀದರ್ ವ್ಯಾಪ್ತಿಯಲ್ಲಿ ರುಬಿಯಾ ಖಾತುನ್ ಎಂಬ ಹೆಸರಿನಲ್ಲಿ ನಕಲಿ ಖಾತೆ ನತೆರೆದು, ಕಿಸಾನ್ ಸಮ್ಮಾನ್ ದುಡ್ಡಿಗಾಗಿ ಹಲವಾರು ಸಲ ಹಣಕ್ಕಾಗಿ ಕೃಷಿ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿತ್ತು.
ಈ ಅಸಹಜ ವರ್ತನೆ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಅನುಮಾನ ಉಂಟಾದ ಹಿನ್ನೆಲೆಯಲ್ಲಿ ಇಲಾಖೆ ಖಾತೆಯನ್ನು ಪರಿಶೀಲಿಸಿದಾಗ ಹೊರ ರಾಜ್ಯದ ಬ್ಯಾಂಕ್ ಖಾತೆ ಪತ್ತೆಯಾಗಿದೆ. ಪಶ್ಚಿಮ ಬಂಗಾಳದ ದಿನಾಜ್ಪುಗರದ ಖಾತೆ, ಐ ಎಫ್ ಎಸ್ ಸಿ ಕೋಡ್, ಬಿಹಾರದ ಪೂರ್ನಿಯಾದ ಖಾತೆ, ಐ ಎಫ್ ಎಸ್ ಸಿ ಕೋಡ್ ಪತ್ತೆಯಾಗಿದೆ.
ಅನುಮಾನದ ಮೇಲೆ 85 ಸಾವಿರ ಖಾತೆಗಳು ಬ್ಲಾಕ್.!
ಕೃಷಿ ಅಧಿಕಾರಿಗಳು ಈ ವಂಚನೆಯನ್ನು ಮತ್ತಷ್ಟು ಕೆದಕಿದಾಗ ಗಾಬರಿಗೊಳಿಸುವ ಮಾಹಿತಿಗಳು ಮೇಲ್ನೋಟಕ್ಕೆ ಲಭ್ಯವಾಗಿವೆ ಎಂಬ ವರದಿಯಾಗಿದೆ. ನಕಲಿ ಖಾತೆಗಳನ್ನು ಬಳಸಿ ವಂಚಿಸುವ ಪ್ರಕರಣ ಒಂದಲ್ಲ ಎರಡಲ್ಲ ಸರಿಸುಮಾರು 85 ಸಾವಿರ ಖಾತೆಗಳಲ್ಲಿ ಮಾಡಿರಬಹುದು ಎಂಬ ಅನುಮಾನ ಸೃಷ್ಟಿಯಾಗಿದೆ. ಈ ಬಗ್ಗೆ ಬೆಂಗಳೂರಿನ ಸೈಬರ್ ಠಾಣೆಗೆ ದೂರು ನೀಡಲಾಗಿದೆ. ಈ ಹಿನ್ನೆಲೆಯಲ್ಲಿಯೇ 85 ಸಾವಿರ ಅನುಮಾನಾಸ್ಪದ ಖಾತೆಗಳನ್ನು ಸಂಪೂರ್ಣ ಬ್ಲಾಕ್ ಮಾಡಲಾಗಿದ್ದು ಸದ್ಯ ಪ್ರಕರಣ ತನಿಖೆಯಲ್ಲಿದೆ ಎಂದು ವರದಿಯಾಗಿದೆ.
ಕಿಸಾನ್ ಸಮ್ಮಾನ್ ಯೋಜನೆ :
ಕಿಸಾನ್ ಸಮ್ಮಾನ್ ನಿಧಿ, ಇದು ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಇದರಡಿಯಲ್ಲಿ ಸರ್ಕಾರ ಅರ್ಹ ರೈತರ ಖಾತೆಗೆ ವರ್ಷಕ್ಕೆ 6000 ರೂಪಾಯಿ ನೆರವನ್ನು ನೀಡುತ್ತದೆ. ಅರ್ಹ ಬಡ ರೈತರ ಸಹಾಯಕ್ಕಾಗಿ ಈ ಯೋಜನೆಯನ್ನು ಮೋದಿ ಸರ್ಕಾರ ಜಾರಿಗೊಳಿಸಿತ್ತು.
ಓದಿ : ಭಾರ್ಗವಿ ಬಿಲ್ಡರ್ಸ್,ನಿರ್ಮಾಣ್ ಹೋಮ್ಸ್ ಸಹಭಾಗಿತ್ವ:ಕೈಲಾಶ್ ವಸತಿಸಮುಚ್ಚಯಕ್ಕೆ ಶಿಲಾನ್ಯಾಸ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್ಖಾನ್ಗೆ ಲೋಕಾಯುಕ್ತದಿಂದ ನೋಟಿಸ್
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.