ರೈತರ ಅಭಿವೃದ್ದಿಗೆ ಶ್ರಮಿಸಿ: ಕುಮಾರಸ್ವಾಮಿ
ಅಂಬಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಉದ್ಘಾಟನೆ ಕಾರ್ಯಕ್ರಮ
Team Udayavani, Feb 15, 2021, 5:57 PM IST
ಚಿಕ್ಕಮಗಳೂರು: ರೈತರು ಈ ದೇಶದ ಜೀವನಾಡಿ.·ಅವರಿಗೆ ಸಾಲ ಸೌಲಭ್ಯಗಳ ಮೂಲಕ ಸರ್ವಾಂಗೀಣ
·ಅಭಿವೃದ್ಧಿಗೆ ಶ್ರಮಿಸಬೇಕಿರುವುದು ಸರ್ಕಾರದಜವಾಬ್ದಾರಿ. ಈ ನಿಟ್ಟಿನಲ್ಲಿ ಸಹಕಾರಿ ಸಂಘಟನೆಗಳುರೈತರಿಗೆ ನೆರವಾಗುತ್ತಿವೆ ಎಂದು ಮೂಡಿಗೆರೆ ಕ್ಷೇತ್ರದಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದರು.ಭಾನುವಾರ ಮಳಲೂರಿನಲ್ಲಿ ನೂತನವಾಗಿಆರಂಭಗೊಂಡಿರುವ ಅಂಬಳೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಕಟ್ಟಡ ಉದ್ಘಾಟಿಸಿ ಅವರು
ಮಾತನಾಡಿದರು.
ಸದಸ್ಯರ ದೇಣಿಗೆ ಸಹಕಾರದಿಂದ ಮಳಲೂರಿನಲ್ಲಿಉತ್ತಮ ಗುಣಮಟ್ಟದ ಕೃಷಿ ಪತ್ತಿನ ಸಹಕಾರ ಸಂಘದಕಟ್ಟಡ ನಿರ್ಮಾಣವಾಗಿದ್ದು, ರೈತರಿಗೆ ಉತ್ತಮ ಸೇವೆನೀಡುವ ಮೂಲಕ ಹೆಸರು ಗಳಿಸಲಿ ಎಂದರು.ಮಳಲೂರು ಪಂಚಾಯತ್ 14 ಕೆರೆಗಳಿಗೆ
ನೀರು ತುಂಬಿಸುವ ಏತ ನೀರಾವರಿ ಯೋಜನೆ ನನ್ನಬಹುದಿನಗಳ ಕನಸು. ಜನತೆ ಸಹಕಾರ ನೀಡಿದಲ್ಲಿಅದನ್ನು ಪೂರ್ಣಗೊಳಿಸುತ್ತೇನೆ ಎಂದು ಹೇಳಿದರು.6 ಕೋಟಿ ರೂ. ವೆಚ್ಚದಲ್ಲಿ 14 ಕೆರೆಗಳಿಗೆ ನೀರು
ತುಂಬಿಸುವ ಏತ ನೀರಾವರಿ ಯೋಜನೆಯಿಂದಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆಪರಿಹರಿಸಬಹುದಿತ್ತು. ಆದರೆ ರೈತರ ಅಸಹಕಾರದಿಂದ
ಯೋಜನೆ ಅರ್ಧಕ್ಕೆ ನಿಂತಿದೆ. ಮತ್ತೂಮ್ಮೆ ರೈತರು,ಜನರು ಒಮ್ಮತದ ಅಭಿಪ್ರಾಯದೊಂದಿಗೆ ಸಹಕರಿಸಿದಲ್ಲಿಯೋಜನೆ ಪೂರ್ಣಗೊಳಿಸಲು ಬದ್ಧ ಎಂದರು.
ರೈತರಿಗೆ ಸಾಲ ಸೌಲಭ್ಯ ವಿತರಣೆಯಲ್ಲಿ ರಾಷ್ಟ್ರೀಕೃತಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್‌ಗಳು ತಾರತಮ್ಯಧೋರಣೆ ಅನುಸರಿಸುತ್ತಿವೆ. ಸಹಕಾರಿ ಕ್ಷೇತ್ರದ ಬಗ್ಗೆದೊಡ್ಡ ಅಸಮಾಧಾನವಿದೆ. ನಬಾರ್ಡ್ ಮೂಲಕಸಹಕಾರಿ ಬ್ಯಾಂಕುಗಳಿಂದ ಪತ್ತಿನ ಸಹಕಾರಿ ಸಂಘಗಳಿಗೆ
ಸಾಲ ನೀಡುವ ಬದಲು ಸರ್ಕಾರವೇ ರೈತರಿಗೆ ನೇರವಾಗಿಸಾಲ ವಿತರಣೆಗೆ ಮುಂದಾಗಬೇಕು ಎಂದರು.
ಸರ್ಕಾರ ಹೊಸ ಕೃಷಿ ನೀತಿಯನ್ನು ಜಾರಿಗೆತಂದಿದ್ದು ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲವಿತರಣೆಗೆ ಮುಂದಾಗಬೇಕು. ಕಾμ ಬೆಳೆಗಾರರಿಗೆ
10 ಲಕ್ಷದವರೆಗೂ ಶೂನ್ಯ ಬಡ್ಡಿದರದಲ್ಲಿ ನೀಡಬೇಕು.ಮಲೆನಾಡು ಮತ್ತು ಬಯಲುಸೀಮೆ ಭಾಗದಬೆಳೆಗಾರರಿಗೆ ಒಂದೇ ಮಾದರಿ ಸಾಲ ವಿತರಣೆ
ಸರಿಯಲ್ಲ ಎಂದರು.
ಮೂಡಿಗೆರೆ ತಾಲೂಕಿನಲ್ಲಿ ಕಳೆದ ವರ್ಷ ಸಂಭವಿಸಿದಅತಿವೃಷ್ಟಿಯಿಂದ ಕಾμ ಬೆಳೆಗಾ ರರು ಸೇರಿದಂತೆರೈತರು ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ರೈತರಿಗೆಹೊಸ ನೀತಿಯಂತೆ ಸಹಕಾರಿ ಬ್ಯಾಂಕ್‌ಗಳ ಮೂಲಕಸಾಲಸೌಲಭ್ಯ ನೀಡಬೇಕು. ಕೊರೊನಾದಿಂದ ಮಾರ್ಚ್
ತಿಂಗಳಿಂದ ಸರ್ಕಾರದ ಅನುದಾನ ಬಿಡುಗಡೆಮಾಡಿಲ್ಲ, ಆದರೂ ಕ್ಷೇತ್ರದ ಮುತುವರ್ಜಿ ವಹಿಸಿ ರಸ್ತೆ,ಕುಡಿಯುವ ನೀರಿನ ಸೌಲಭ್ಯಕ್ಕೆ ಅನುದಾನ ತರಲುಶ್ರಮಿಸಿದ್ದೇನೆ. ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಗೆ
ಸಿಎಂಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ಮಾಜಿ ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ,ರೈತರು ಪದೇ ಪದೇ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.ಕಾಫಿ ಬೆಳೆಗಾರರಿಗೆ ಈ ಹಿಂದೆ 3ಲಕ್ಷದವರೆಗೂಬಡ್ಡಿರಹಿತ ಸಾಲ ನೀಡಲಾಗುತ್ತಿತ್ತು. ಅದನ್ನು 10 ಲಕ್ಷಕ್ಕೆ
ಏರಿಸಬೇಕೆಂದು ತಿಳಿಸಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆವಿರುದ್ಧ ಆಕ್ಷೇಪ ವ್ಯಕ್ತವಾಗಿದೆ. ರೈತರು ಹೋರಾಟನಡೆಸುತ್ತಿದ್ದಾರೆ. ಸರ್ಕಾರ ರೈತರ ಪರ ನಿಲ್ಲದಿದ್ದರೆಮುಂದಿನ ದಿನಗಳಲ್ಲಿ ರೈತರ ಕಣ್ಣೀರು ಸರ್ಕಾರಕ್ಕೆಶಾಪವಾಗಲಿದೆ. ಸರ್ಕಾರ ಕಾಯ್ದೆಗಳನ್ನು ಕೂಡಲೇ
ಹಿಂಪಡೆಯಬೇಕೆಂದು ಆಗ್ರಹಿಸಿದರು.ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನತಾ ನ್ಯಾಯಾಲಯಕ್ಕೆಮನ್ನಣೆ ಸಿಗಬೇಕು. ವಿರೋ ಧಿ ಪ್ರಸ್ತಾವಗಳನ್ನು
ಕೈಬಿಡುವಂತೆ ಒತ್ತಾಯಿಸಿದ ಅವರು ಅಂಬಳೆ ಕ್ಷೇತ್ರದಅಭಿವೃದ್ಧಿಗೆ ಶಾಸಕರು ವಿಶೇಷ ಒತ್ತು ನೀಡಬೇಕು.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಏತನೀರಾವರಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.ಅಂಬಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ
ಸಂಘದ ಅಧ್ಯಕ್ಷ ಕೆ.ಎಸ್.ಜಗನ್ನಾಥ್ ಮಾತನಾಡಿ,1976ರಲ್ಲಿ ಆರಂಭವಾದ ಸಂಘ 3,890ಸದಸ್ಯರನ್ನು ಒಳಗೊಂಡಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಎಲ್ಲಾ ನಿರ್ದೇಶಕರ ಸಹಕಾರದಿಂದ
ಟ್ಟಡ ನಿರ್ಮಾಣವಾಗಿದ್ದು ಪೀಠೊಪಕರಣಗಳಖರೀದಿಗೆ ನೆರವು ನೀಡಿ ಅಭಿವೃದ್ಧಿಗೆ ಶ್ರಮಿಸಬೇಕೆಂದುತಿಳಿಸಿದರು.
ತಾಪಂ ಸದಸ್ಯ ಕೆ.ವಿ. ಮಹೇಶ್, ಡಿಸಿಸಿ ಬ್ಯಾಂಕ್‌ನಿರ್ದೇಶಕ ನಿರಂಜನ್, ಸತೀಶ್, ಪರಮೇಶ್, ರೈತಮುಖಂಡ ಕೃಷ್ಣೇಗೌಡ, ಟಿಎಪಿಸಿಎಂಸ್ ಅಧ್ಯಕ್ಷಮಂಜುನಾಥ್, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕರುದ್ರೇಗೌಡ, ಕಸಾಪ ಅಧ್ಯಕ್ಷ ಕುಂದೂರು ಅಶೋಕ್,ಮಳಲೂರು ಗ್ರಾಪಂ ಅಧ್ಯಕ್ಷ ನವೀನ್‌ಕುಮಾರ್,ಉಪಾಧ್ಯಕ್ಷ ಚಂದ್ರೇಗೌಡ, ಪುಟ್ಟೇಗೌಡ, ಯೋಗೀಶ್,ನಿರ್ದೇಶಕರಾದ ಭುವನೇಶ್, ಪದ್ಮಯ್ಯ ವಿನಯ್,ಸಂದೇಶ್, ಶಶಿಪ್ರಸಾದ್, ಕುಮಾರಶೆಟ್ಟಿ, ಜಯರಾಂ,ಚಂದ್ರಮ್ಮ, ರತ್ನಮ್ಮ ಮತ್ತಿತರರು ಇದ್ದರು.
ಓದಿ :·ಮಜೂರು ಗ್ರಾ.ಪಂ : ಬಿಜೆಪಿ ಬೆಂಬಲಿತರ ತೆಕ್ಕೆಗೆ ಒಲಿದ ಅಧ್ಯಕ್ಷ – ಉಪಾಧ್ಯಕ್ಷ ಗಾದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.