ನವ ನಿರ್ಮಾಣದ ಬಜೆಟ್‌: ಜನಪ್ರಿಯತೆಗಿಂತ ತುರ್ತು ಅಗತ್ಯ ಬೇಡಿಕೆಗಳು ಆದ್ಯತೆಯಾಗಬೇಕು

Team Udayavani, Feb 16, 2021, 6:45 AM IST

ನವ ನಿರ್ಮಾಣದ ಬಜೆಟ್‌: ಜನಪ್ರಿಯತೆಗಿಂತ ತುರ್ತು ಅಗತ್ಯ ಬೇಡಿಕೆಗಳು ಆದ್ಯತೆಯಾಗಬೇಕು

ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆ ಮಾರ್ಚ್‌ ಮೊದಲ ವಾರದಲ್ಲಿ ರಾಜ್ಯ ಬಜೆಟ್‌ ಮಂಡನೆಯಾಗಲಿದ್ದು, ಇಡೀ ರಾಜ್ಯದ ಜನರ ನಿರೀಕ್ಷೆ ಇದರ ಮೇಲಿದೆ. ಒಂದು ರೀತಿಯಲ್ಲಿ ಇದು ಮರುನಿರ್ಮಾಣದ ಬಜೆಟ್‌. ಜನಪ್ರಿಯ ಯೋಜನೆಗಳಿಗಿಂತ ಕೃಷಿ, ಆರೋಗ್ಯ, ಉದ್ಯೋಗ ಸೃಷ್ಟಿ, ಸಂಚಾರ- ಸಾರಿಗೆ ಸುಧಾರಣೆ, ಕೈಗಾರಿಕೆಗಳಿಗೆ ಪ್ರೋತ್ಸಾಹ, ವ್ಯಾಪಾರ- ವಾಣಿಜ್ಯ ಚಟುವಟಿಕೆಗೆ ಉತ್ತೇಜನ ಮತ್ತು ಅನಗತ್ಯ ವೆಚ್ಚ, ಸಂಪನ್ಮೂಲ ಸೋರಿಕೆ ತಡೆಯುವುದು ಬಜೆಟ್‌ನ ಆದ್ಯತೆಗಳಾಗಬೇಕಾಗಿದೆ. ಇದು ಉದಯವಾಣಿ ಆಶಯವೂ ಹೌದು.

ಆರೋಗ್ಯಕ್ಕೆ ಬೇಕು ಒತ್ತು
ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಂತದಲ್ಲೇ ಮೂಲ ಸೌಕರ್ಯ ವೃದ್ಧಿಸಬೇಕಿದೆ. ಆ್ಯಂಬುಲೆನ್ಸ್‌ ಲಭ್ಯತೆ, ಟೆಲಿ ಮೆಡಿಸಿನ್‌ ಮಾರ್ಗದರ್ಶನ, ನಗರ – ಗ್ರಾಮೀಣ ಜನರಿಗೆ ಅನುಕೂಲ ವಾಗುವಂತೆ ಆಯ್ದ ಕಡೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಅನುದಾನ ನೀಡಬೇಕು. ಸಾಂಕ್ರಾಮಿಕವಲ್ಲದ ರೋಗಗಳ ಚಿಕಿತ್ಸೆಗೆ ಪ್ರದೇಶವಾರು ಚಿಕಿತ್ಸಾ ವ್ಯವಸ್ಥೆ ಕಲ್ಪಿಸುವುದು ಆದ್ಯತೆಯಾಗಬೇಕು.

ಕೃಷಿ ಮೇಲಿರಲಿ ಕೃಪೆ
ನಗರದಿಂದ ಬಹಳಷ್ಟು ಮಂದಿ ಹಳ್ಳಿ ಕಡೆಗೆ ವಾಪಸ್‌ ಹೋಗಿದ್ದಾರೆ. ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ, ಉತ್ತಮ ಸಾಲ ಸೌಲಭ್ಯ, ಅಗತ್ಯ ಸಬ್ಸಿಡಿಗಳು, ನೀರಾವರಿಗೆ ಯೋಜನೆಗಳು, ಆಧುನಿಕ ಕೃಷಿ ಅಥವಾ ತಂತ್ರಜ್ಞಾನ ಆಧಾರಿತ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಬೇಕು.

ಗ್ರಾಮೀಣಾಭಿವೃದ್ಧಿ
ಹಳ್ಳಿಗೆ ವಾಪಸ್‌ ಹೋಗಿರುವವರಿಗೆ ಉದ್ಯೋಗ ಸೃಷ್ಟಿಗಾಗಿ ನರೇಗಾಗೆ ಹೆಚ್ಚಿನ ಅನುದಾನ, ಸ್ಥಳೀಯರನ್ನೇ ಬಳಸಿಕೊಂಡು ಮೂಲ ಸೌಕರ್ಯ ಅಭಿವೃದ್ಧಿ ಮಾಡುವುದು, ಸ್ವಯಂ ಸಹಾಯ ಸಂಸ್ಥೆಗಳಿಗೆ ಉತ್ತೇಜನ ನೀಡಬೇಕಿದೆ.

ವ್ಯಾಪಾರ- ವಹಿವಾಟಿಗೆ ಉತ್ತೇಜನ
ಇದು ತೆರಿಗೆ ಏರಿಕೆಯ ಕಾಲವಲ್ಲ. ಈಗಾಗಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ಜನ ಜೇಬು ಖಾಲಿ ಮಾಡಿಕೊಳ್ಳುತ್ತಿದ್ದಾರೆ. ಇಂಥ ಕಾಲದಲ್ಲಿ ವ್ಯಾಪಾರ -ವಹಿವಾಟಿಗೆ ಉತ್ತೇಜನ ನೀಡಬೇಕು. ಆಗ ತೆರಿಗೆ ಸಂಗ್ರಹ, ಜನರ ಖರೀದಿ ಸಾಮರ್ಥ್ಯ ಹೆಚ್ಚಳ, ವಿಪುಲ ಉದ್ಯೋಗಾವಕಾಶ ಸಿಗುತ್ತದೆ.

ಉದ್ಯೋಗ ಸೃಷ್ಟಿಗೆ ಆದ್ಯತೆ
ಕೈಗಾರಿಕೆಗಳು ಸಹಿತ ಉತ್ಪಾದನೆ, ಸೇವಾ ವಲಯದ ವಹಿವಾಟು ಚೇತರಿಸಿಕೊಳ್ಳುತ್ತಿದ್ದು, ಕಾರ್ಮಿಕರ ಕೊರತೆ ಇದೆ. ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯಮಗಳನ್ನು ಜೋಡಿಸುವ, ಅಗತ್ಯ ತರಬೇತಿ ಕೊಡಿಸಿ ಉದ್ಯೋಗ ಕಲ್ಪಿಸುವುದು ಸದ್ಯದ ಅಗತ್ಯವಾಗಿದೆ.

ಕೈಗಾರಿಕೆ ಸ್ಥಾಪನೆಗೆ ಒತ್ತು
ಒಂದೆರಡು ವರ್ಷಗಳಲ್ಲಿ ಮಂಜೂ ರಾತಿ ಪಡೆದವರು ತ್ವರಿತವಾಗಿ ಕೈಗಾರಿಕೆಗಳನ್ನು ಆರಂಭಿಸುವಂತೆ ಸರಕಾರ ಕ್ರಮ ವಹಿಸಬೇಕು. ಅದಕ್ಕೆ ಅಗತ್ಯವಿರುವ ಸೌಲಭ್ಯ, ಉತ್ತೇಜನ, ವಿನಾಯಿತಿಗಳ ಬಗ್ಗೆಯೂ ಬಜೆಟ್‌ನಲ್ಲಿ ಘೋಷಿಸಿ ಕೈಗಾರಿಕೆಗಳನ್ನು ಆರಂಭಿಸಲು ಪ್ರೋತ್ಸಾಹಿಸಬೇಕು.

ಮೂಲ ಸೌಕರ್ಯ
ರಾಜ್ಯಾದ್ಯಂತ ಜನ ಸಂಚಾರ ಮತ್ತು ಸರಕು ಸಾಗಣೆಗಾಗಿ ರಸ್ತೆ ಮೂಲ ಸೌಕರ್ಯ, ರೈಲ್ವೇ ಮಾರ್ಗ, ಬಂದರು, ವಿಮಾನ ನಿಲ್ದಾಣಗಳ ಅಭಿವೃದ್ಧಿಗೂ ಅನುದಾನ ಒದಗಿಸಿ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ವಾಗ್ಧಾನ ನೀಡಬೇಕಿದೆ.

ಶಿಕ್ಷಣ
ಸರಕಾರಿ ಶಾಲೆಗಳ ಅಭಿವೃದ್ಧಿಗೆ ಇದು ಸುಸಮಯ. ಲಾಕ್‌ಡೌನ್‌ ಬಳಿಕ ಶಾಲೆಗಳಿಗೆ ಮಕ್ಕಳನ್ನು ಕಳುಹಿ ಸುವ ಹೆತ್ತವರ ಸಂಖ್ಯೆ ಅಧಿಕವಾಗಿದೆ. ಇದನ್ನು ಸರಕಾರ ಸದುಪಯೋಗಿಸಿ ಸರಕಾರಿ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸ‌ಬೇಕು. ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನಂತಹ ಇನ್ನಷ್ಟು ಶಿಕ್ಷಣ ಸಂಸ್ಥೆಗಳನ್ನು ತೆರೆಯುವಲ್ಲೂ ಆಸ್ಥೆ ವಹಿಸಬೇಕು.

ನಿರ್ವಹಣ ಬಜೆಟ್‌
ಸ್ವಂತ ತೆರಿಗೆ ಆದಾಯ ನಿರೀಕ್ಷೆಯ ಜತೆಗೆ ಕೇಂದ್ರದಿಂದ ಬರುವ ತೆರಿಗೆ ಪಾಲು, ಸಹಾಯಾನುದಾನದ ಬಗ್ಗೆ ರಾಜ್ಯ ಸರಕಾರಕ್ಕೆ ಈಗಾಗಲೇ ಸ್ಪಷ್ಟ ಅಂದಾಜು ಇದ್ದಂತಿದೆ. ಹಾಗಾಗಿ ಅನುದಾನ ಹಂಚಿಕೆಯನ್ನಷ್ಟೇ ಎಚ್ಚರಿಕೆಯಿಂದ ನಿರ್ವಹಿಸಬೇಕಿದೆ. ಆರ್ಥಿಕ ಶಿಸ್ತು ಪಾಲನೆ ಜತೆಗೆ ಹೆಚ್ಚುವರಿ ಸಾಲದ ಮೊರೆ ಹೋಗದೆ ಲಭ್ಯವಿರುವ ಸಂಪನ್ಮೂಲವನ್ನೇ ಪರಿಣಾಮಕಾರಿಯಾಗಿ ಬಳಸುವ ಮೂಲಕ “ನಿರ್ವಹಣ ಬಜೆಟ್‌’ ಮಂಡಿಸುವುದು ಸದ್ಯದ ಅನಿವಾರ್ಯವಾಗಿದೆ.

ಬದ್ಧತಾ ವೆಚ್ಚ ತಗ್ಗಿಸಲು ದಿಟ್ಟ ಕ್ರಮ ಬೇಕು
ಸದ್ಯ ಆಯವ್ಯಯದ ಅಂದಾಜು ವೆಚ್ಚದಲ್ಲಿ ಶೇ. 90ರಷ್ಟು ಬದ್ಧತಾ ವೆಚ್ಚಕ್ಕೆ ವಿನಿಯೋಗವಾಗುತ್ತಿದೆ. ಸರಕಾರಿ ನೌಕರರಿಗೆ ಸಂಬಳ, ಸಾರಿಗೆ, ಪಿಂಚಣಿ, ಆಡಳಿತ ವೆಚ್ಚ, ಸಾಮಾಜಿಕ ಭದ್ರತಾ ಯೋಜನೆಗಳಡಿ ಮಾಸಾಶನ, ನೆರವು, ಸಾಲ ಮರುಪಾವತಿ, ಇತರ ವೆಚ್ಚಗಳನ್ನು ಸರಕಾರ ಭರಿಸಲೇಬೇಕು. ಆದರೆ ಅನಗತ್ಯ ಹುದ್ದೆಗಳು, ಸಮಾನ ಜವಾಬ್ದಾರಿಯ ಪುನರಾವರ್ತಿತ ಹುದ್ದೆಗಳ, ನಾಮ್‌ ಕೇ ವಾಸ್ತೆ ಹುದ್ದೆ, ಸ್ಥಾನಗಳನ್ನು ಕಡಿತಗೊಳಿಸಲು ಪೂರಕ ಕ್ರಮಗಳನ್ನು ಬಜೆಟ್‌ನಲ್ಲೇ ಘೋಷಿಸಿದರೆ ಪರಿಣಾಮಕಾರಿ ಜಾರಿಗೆ ನೆರವಾಗಬಹುದು.

-  ಎಂ. ಕೀರ್ತಿಪ್ರಸಾದ್‌

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.