ತಾಲೂಕು ಪಂಚಾಯತ್ ವ್ಯವಸ್ಥೆಯಲ್ಲಿ ಎಳ್ಳಷ್ಟೂ ಲೋಪವಿಲ್ಲ
Team Udayavani, Feb 16, 2021, 7:10 AM IST
“ತಾಲೂಕು ಪಂಚಾಯತ್ ವ್ಯವಸ್ಥೆ ಹಾಗೂ ಕಾರ್ಯನಿರ್ವಹಣೆ ಅದರ ವ್ಯಾಪ್ತಿ ಬಗ್ಗೆ ಯಾರಿಗೆ ಸ್ಪಷ್ಟ ಕಲ್ಪನೆ ಇರುವುದಿಲ್ಲವೋ ಅಂತಹವರು ಮಾತ್ರ ತಾಲೂಕು ಪಂಚಾಯತ್ ರದ್ದುಪಡಿಸ ಬೇಕು ಎಂದು ಹೇಳಲು ಸಾಧ್ಯ’ ತಾಲೂಕು ಪಂಚಾಯತ್ ರದ್ದತಿ ಕುರಿತ ಪ್ರಸ್ತಾಪದ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿಯೂ ಕಾರ್ಯನಿರ್ವಹಿಸಿರುವ ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಕೆ. ಪಾಟೀಲ್ ಅವರ ಮಾತುಗಳು. ತಾಲೂಕು ಪಂಚಾಯತ್ ವ್ಯವಸ್ಥೆ ರದ್ದತಿ ಪ್ರಸ್ತಾಪ ಕುರಿತು “ಉದಯವಾಣಿ’ಗೆ ಅವರು ನೀಡಿರುವ ಸಂದರ್ಶನ ಇಲ್ಲಿದೆ.
– ತಾಲೂಕು ಪಂಚಾಯತ್ ವ್ಯವಸ್ಥೆ ರದ್ದು ಮಾಡಬೇಕೆಂಬ ಪ್ರಸ್ತಾಪ ದಿಢೀರ್ ಯಾಕೆ ಬಂತು?
ಬಿಜೆಪಿ ಸರಕಾರ ಹಾಗೂ ಆ ಪಕ್ಷದ ನಾಯಕರಿಗೆ ತಾ.ಪಂ. ಚುನಾವಣೆ ಮುಂದೂ ಡಬೇಕಾಗಿದೆ. ಹಾಗಾಗಿ ಇಂತಹ ವಿಚಾರ ಪ್ರಸ್ತಾವಿ ಸುತ್ತಿದ್ದಾರೆ. ಆದರೆ, ಈ ದುಸ್ಸಾಹಸಕ್ಕೆ ಕೈ ಹಾಕುವುದು ಬೇಡ. ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಕಾಯ್ದೆ ಮೂಲ ಮಾಜಿ ಪ್ರಧಾನಿ ದಿ| ರಾಜೀವ್‌ಗಾಂಧಿ ತಂದ ಸಂವಿಧಾ ನದ 73 ನೇ ತಿದ್ದುಪಡಿ ಸದಾಶಯವೇ ಪಂಚಾ ಯತ್ ರಾಜ್ ವ್ಯವಸ್ಥೆ ಬಲಪಡಿಸುವುದು.
– ಈಗಿನ ತಾಲೂಕು ಪಂಚಾಯತ್ ವ್ಯವಸ್ಥೆಯಲ್ಲಿ ಲೋಪ ಇದೆಯಾ?
ಎಳ್ಳಷ್ಟೂ ಇಲ್ಲ. ಪಂಚಾಯತ್ ವ್ಯವಸ್ಥೆಯಲ್ಲಿ ಬಹಳಷ್ಟು ಯಶಸ್ವಿ ಕಂಡ ರಾಜ್ಯ ನಮ್ಮದು. ಸಂವಿ ಧಾನ ತಿದ್ದುಪಡಿ ಆದ ಅನಂತರ ನಾವು ಬಹಳಷ್ಟು ರಚನಾತ್ಮಕ ಕಾನೂನು ಮಾಡಿ ಅನುಷ್ಠಾನ ಗೊಳಿಸಿದ್ದೇವೆ. ಗ್ರಾಮ ಸ್ವರಾಜ್ಯ ಮತ್ತು ಪಂಚ ಯತ್ ರಾಜ್ ಕಾನೂನು ಅತ್ಯಂತ ಮಾದರಿ ಕಾನೂನು ಆಗಿದೆ. ಸಂವಿಧಾನದ 73ನೇ ತಿದ್ದುಪಡಿ ಅನಂತರ ರಾಷ್ಟ್ರದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ಅತಿ ದೊಡ್ಡ ಮಹತ್ವ ಬಂದಿದೆ. ಪಂಚಾಯತ್ ರಾಜ್ ವ್ಯವಸ್ಥೆ ಮೂಲಕ ಉತ್ತಮ ಕೆಲಸ ಆಗುತ್ತಿದೆ. ಒಳ್ಳೆಯ ಭಾವನೆಯೂ ಇದೆ.
– ತಾಲೂಕು ಪಂಚಾಯತ್‌ಗಳಿಗೆ ಅನು ದಾನ ಕಡಿಮೆ ಇದೆ. ಹೀಗಾಗಿ ರದ್ದು ಮಾಡು ವುದು ಸೂಕ್ತ ಎಂಬ ಮಾತಿದೆಯಲ್ಲ?
ಅನುದಾನ ಕೊಡಿ, ಕೊಡಬೇಕು. ಯಾಕೆ ಕೊಡುವುದಿಲ್ಲ? ಒಂದು ವಿಧಾನಸಭೆ ಕ್ಷೇತ್ರಕ್ಕೆ 400 ಕೋಟಿ ರೂ., 500 ಕೋಟಿ ರೂ., ಕೊಡುವ ಬದಲು ಈ ತಾಲೂಕು ಪಂಚಾಯತ್ ವ್ಯವಸ್ಥೆ ಬಲಪಡಿಸಿ. ಯಾರು ಬೇಡ ಎನ್ನುತ್ತಾರೆ? ಆಗ ತಾಲೂಕು ಪಂಚಾಯತ್ ಸದಸ್ಯರಾದವರು ಮುಂದೆ ಶಾಸಕ, ಸಚಿವ, ರಾಜ್ಯಮಟ್ಟದ ನಾಯಕರಾಗುತ್ತಾರೆ.
– ನಿಜಕ್ಕೂ ತಾಲೂಕು ಪಂಚಾಯತ್‌ಗೆ ಕೆಲಸ ಇಲ್ಲವೇ?
ಯಾರು ಹಾಗೆಂದವರು? ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆ ಉಸ್ತುವಾರಿ ಮಾಡುತ್ತಿರುವುದು ತಾಲೂಕು ಪಂಚಾಯತ್. ನರೇಗಾದಡಿ ಎಷ್ಟು ಅನುದಾನ ಬರುತ್ತದೆ? ತಾ.ಪಂ. ಉಸ್ತುವಾರಿಯಲ್ಲಿ ನರೇಗಾ ಕೆಲಸ ನಡೆಯುವುದು ಬಹುಶಃ ಇವರಿಗೆ ಗೊತ್ತೇ ಇಲ್ಲವೇನೋ.
– ತಾಲೂಕು ಪಂಚಾಯತ್ ರದ್ದತಿ ವಿಚಾರದಲ್ಲಿ ನಿಮ್ಮ ನಿಲುವು ಏನು?
ಸಂವಿಧಾನದ ಪ್ರಕಾರ ಸಾಧ್ಯವಿಲ್ಲ. ನಮ್ಮಲ್ಲಿ ಮೂರು ಹಂತದ ವ್ಯವಸ್ಥೆ ಕಾರ್ಯನಿರ್ವಹಿ ಸುತ್ತದೆ. ಗ್ರಾಮ, ತಾಲೂಕು, ಜಿಲ್ಲಾ ಪಂಚಾ ಯತ್ ವ್ಯವಸ್ಥೆಯಿದೆ. ಸಚಿವ ಈಶ್ವರಪ್ಪ ಅವರು ತಾ.ಪಂ. ರದ್ದು ಮಾಡಬೇಕೆಂಬ ಪ್ರಸ್ತಾವ ಮಾಡಿ ದ್ದಾರೆ. ಅವರಿಗಾದರೂ ಆ ಆಲೋಚನೆ ಯಾಕೆ ಬಂತೋ ಗೊತ್ತಿಲ್ಲ. ಲೋಪಗಳಿದ್ದರೆ ಸರಿಪಡಿಸುವ ಕೆಲಸ ಆಗಬೇಕೇ ವಿನಹಃ ರುಂಡ ಕತ್ತರಿಸುವ ಕೆಲಸ ಮಾಡಬಾರದು.
– ಶಾಸಕರೇ ತಾಲೂಕು ಪಂಚಾಯತ್ ರದ್ದು ಮಾಡಬೇಕೆಂದು ಹೇಳುತ್ತಿದ್ದಾರಂತಲ್ಲಾ?
ತಾಲೂಕು ಪಂಚಾಯತ್ ವ್ಯವಸ್ಥೆ ಹಾಗೂ ಕಾರ್ಯ ನಿರ್ವಹಣೆ ಅದರ ವ್ಯಾಪ್ತಿ ಬಗ್ಗೆ ಯಾರಿಗೆ ಸ್ಪಷ್ಟ ಕಲ್ಪನೆ ಇರುವುದಿಲ್ಲವೋ ಅಂತ ಹವರು ಮಾತ್ರ ರದ್ದುಪಡಿಸಬೇಕೆಂದು ಹೇಳಲು ಸಾಧ್ಯ. ಪಂಚಾಯತ್ ರಾಜ್ ವ್ಯವಸ್ಥೆ ಕೇವಲ ಚರಂಡಿ, ರಸ್ತೆ ಕೆಲಸ ಮಾತ್ರವಲ್ಲ. ರಾಜಕೀಯ, ಸಾಮಾಜಿಕ ಅಭಿವೃದ್ಧಿ, ಗ್ರಾಮ ಗಳನ್ನು ಕಟ್ಟುವ ಕೆಲಸ.
ರಾಜಕೀಯ ಹುನ್ನಾರ
ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಮಂಡಲ ಪಂಚಾಯತ್ ಹಾಗೂ ಜಿಲ್ಲಾ ಪರಿಷತ್ ವ್ಯವಸ್ಥೆ ಇತ್ತು. ಅದು ದೊಡ್ಡ ಪಂಚಾಯತ್. ಆದರೆ ಈಗ ಸಣ್ಣ ಪಂಚಾಯತ್ ವ್ಯವಸ್ಥೆ ಇದೆ. ಸ್ಮಾಲ್ ಈಸ್ ಬ್ಯೂಟಿಫುಲ್. ಮತ್ತಷ್ಟು ವಿಕೇಂದ್ರೀಕರಣ ಆಗಿದೆ. ಅತ್ಯುತ್ತಮವಾದ ವ್ಯವಸ್ಥೆ ಇದ್ದರೂ ಸಂವಿಧಾನದ ವಿರೋಧ ವಾಗಿ ಯಾಕೆ ಹೋಗುತ್ತಿದ್ದಾರೋ ಅರ್ಥ ವಾಗುತ್ತಿಲ್ಲ. ತಾಲೂಕು ಪಂಚಾಯತ್ ಚುನಾವಣೆ ಮುಂದೂಡಲು ಮಾಡುತ್ತಿರುವ ರಾಜಕೀಯ ಹುನ್ನಾರವಿದು.
– ಎಸ್. ಲಕ್ಷ್ಮೀನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.