ಟಾಪ್ ಲೆಸ್ ನಲ್ಲಿ ಗಣೇಶನ ಪೆಂಡೆಂಟ್ ಹಾಕಿಕೊಂಡಿದ್ದ ಫೋಟೋ ಟ್ವೀಟ್ ಮಾಡಿದ ರಿಹಾನಾ..!
ಅಂರತಾಷ್ಟ್ರೀಯ ಪಾಪ್ ಗಾಯಕಿಯ ಮಹಾ ಯಡವಟ್ಟು..!
Team Udayavani, Feb 16, 2021, 4:05 PM IST
ನವ ದೆಹಲಿ : ರೈತರ ಆಂದೋಲನದ ಕುರಿತು ಟ್ವೀಟ್ ಮಾಡಿದ ಬಳಿಕ ಇದೀಗ ಅಂತಾರಾಷ್ಟ್ರೀಯ ಪಾಪ್ ಗಾಯಕಿ ರಿಹಾನಾ ಇದೀಗ ಮತ್ತೊಂದು ಟ್ವೀಟ್ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.
ಟ್ವೀಟರ್ ನಲ್ಲಿ ರಿಹಾನಾ ತನ್ನ ಒಂದು ಟಾಪ್ ಲೆಸ್ ಪೋಟೋವನ್ನು ಹಂಚಿಕೊಂಡಿದ್ದು, ಆ ಫೋಟೋದಲ್ಲಿ ಅವರು ಶ್ರೀ ಗಣೇಶನ ಪೆಂಡೆಂಟ್ ಧರಿಸಿರುವುದ ಈಗ ವ್ಯಾಪಕ ಟೀಕೆಗೆ ಕಾರಣವಾಗಿದೆ.
ಓದಿ : ಕೂಲಿ ಕೆಲಸಕ್ಕೆ ಕರೆದೊಯ್ದು ಸಂಬಳ ನೀಡದೆ ವಂಚನೆ
ಟ್ರೋಲ್ ಗೆ ಕಾರಣವಾದ ರಿಹಾನಾ..!
ಅಂತರಾಷ್ಟ್ರೀಯ ಪಾಪ್ ಗಾಯಕಿ ಈ ಟಾಪ್ ಲೆಸ್ ಫೋಟೋ ಶೂಟ್ ನಲ್ಲಿ ಶ್ರೀ ಗಣೇಶನ ಪೆಂಡೆಂಟ್ ಧರಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ. ಆಕೆಯಾ ಫ್ಯಾಷನ್ ಸೆನ್ಸ್ ಕುರಿತು ನೆಟ್ಟಿಗರು ಭಾರಿ ಟ್ರೊಲ್ ಮಾಡುತ್ತಿದ್ದಾರೆ.
” ಇದು ತುಂಬಾ ಆಫೆನ್ಸೀವ್ ಆಗಿದೆ, ಕೋಟ್ಯಾಂತರ ಜನರ ಧಾರ್ಮಿಕ ಭಾವನೆಗಳಿಗೆ ಇದು ಧಕ್ಕೆ ತಂದಿದೆ. ಪ್ರತಿವರ್ಷ ಗಣೇಶ್ ಚತುರ್ಥಿ ಹಬ್ಬದಂದು ಶ್ರೀ ಗಣೇಶನನ್ನು ಪೂಜಿಸುತ್ತಾರೆ, ನೀನು ನನಗೆ ನಿರಾಶೆಗೊಲಿಸಿರುವಿ” ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ರಿಹಾನಾ, ಈ ರೀತಿಯಾಗಿ ನಡೆದುಕೊಂಡಿರುವುದು ಇದೆ ಮೊದಲಲ್ಲ. ಇದಕ್ಕೂ ಮೊದಲು 2013 ರಲ್ಲಿ ಅಬು ಧಾಬಿಯ ಶೇಕ್ ಜಾಯದ್ ಗ್ರಾಂಡ್ ಮಾಸ್ಕ್ ಸೆಂಟರ್ ನಲ್ಲಿ ಫೋಟೋ ಶೂಟ್ ನಡೆಸಿದ್ದಳು. ಅಲ್ಲಿ ಕೆಲವು ಆಕ್ಷೇಪಾರ್ಹ ಭಾವಚಿತ್ರಗಳನ್ನು ಕ್ಲಿಕ್ಕಿಸಿದ ಕಾರಣ ಆಕೆಯನ್ನು ಅಲ್ಲಿಂದ ಹೊರಹೋಗಲು ಸೂಚಿಸಲಾಗಿತ್ತು.
ಇನ್ನು, ಫೆ. 12 ರಂದು ರಿಹಾನಾ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ರಾಷ್ಟ್ರೀಯ ಮಾಧ್ಯಮದ ಸುದ್ದಿಯೊಂದನ್ನು ಟ್ಯಾಗ್ ಮಾಡುವುದ ಮೂಲಕ ನಾವು ಈ ಬಗ್ಗೆ ಯಾಕೆ ಚರ್ಚೆ ಮಾಡುವುದಿಲ್ಲ..? ಎಂದು ಟ್ವೀಟ್ ಮಾಡಿದ್ದರು.
ಓದಿ : ಬೆಂಗಳೂರಿನ ದಿಶಾ ರವಿ ಬಂಧನ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
Pakistan: ಇಮ್ರಾನ್ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ
Appoint: ಲಾಕ್‌ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.