ಹೆಲ್ಮೆಟ್‌ಯಿಲ್ಲದದರಿಗೆ ದಂಡದ ಬಿಸಿ
ಪೊಲೀಸರಿಂದ ವಿವಿಧ ವೃತ್ತಗಳಲ್ಲಿ ಚುರುಕಿನ ತಪಾಸಣೆ,ದಂಡವಿಧಿಸಿ ಹೆಲ್ಮೆಟ್ ಬಗ್ಗೆ ಜಾಗೃತಿ
Team Udayavani, Feb 16, 2021, 4:29 PM IST
ಕುಮಟಾ: ಪಟ್ಟಣದಾದ್ಯಂತ ಹೆಲ್ಮೆಟ್ ಧರಿಸದೇ ಸಂಚರಿಸುತ್ತಿರುವ ದ್ವಿಚಕ್ರ ವಾಹನ ಸವಾರರಿಗೆ ಕುಮಟಾ ಪೊಲೀಸರು ಸೋಮವಾರ ಬಿಸಿ ಮುಟ್ಟಿಸಿದ್ದಾರೆ. ಪಟ್ಟಣದ ಪ್ರಮುಖ ರಸ್ತೆ ಸೇರಿದಂತೆ ವಿವಿಧ ವೃತ್ತಗಳಲ್ಲಿ ಚುರುಕಿನ ತಪಾಸಣೆ ನಡೆಸಿದ ಪೊಲೀಸರು ಹಲವು ವಾಹನ ಸವಾರರಿಗೆ ದಂಡ ವಿಧಿಸಿದ್ದಾರೆ.
ತಾಲೂಕಿನಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಿ ಹಲವು ತಿಂಗಳುಗಳೇ ಕಳೆದಿವೆ. ಪೊಲೀಸರೂಈ ಬಗ್ಗೆ ಜಾಥಾ ಸೇರಿದಂತೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡುಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡುತ್ತಿದ್ದಾರೆ. ಆದರೂ ಕೆಲ ಯುವಕರು ಹೆಲ್ಮೆಟ್ ಧರಿಸದೇ, ವಾಹನ ಪರವಾನಿಗೆಯಿಲ್ಲದೇ,ತ್ರಿಬಲ್ ರೈಡ್ ಮಾಡುತ್ತಿದ್ದಾರೆ. ಇದರವಿರುದ್ಧ ಕಾರ್ಯೋನ್ಮುಖರಾದ ಪೊಲೀಸರು ಪ್ರತಿದಿನ ಒಂದಿಲ್ಲೊಂದು ಸ್ಥಳದಲ್ಲಿ ನಿಂತುತೀವ್ರ ತಪಾಸಣೆ ನಡೆಸುತ್ತಿದ್ದಾರೆ.ಪಟ್ಟಣದ ಗಿಬ್ ಸರ್ಕಲ್, ಹೆಗಡೆ ವೃತ್ತ, ಜೈವಂತ ಸ್ಟುಡಿಯೋ, ಹೊಸ ಬಸ್ ನಿಲ್ದಾಣ ಹಾಗೂಸುಭಾಸ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ತಪಾಸಣೆ ನಡೆಸಿದ ಸಿಪಿಐ ಪರಮೇಶ್ವರ ಗುನಗಾ, ಪಿಎಸ್‌ಐಗಳಾದ ಆನಂದಮೂರ್ತಿ, ರವಿ ಗುಡ್ಡಿ ಹಾಗೂ ಸುಧಾ ಅಘನಾಶಿನಿ ನೇತೃತ್ವದ ಪೊಲೀಸರ ತಂಡವು, ಹೆಲ್ಮೆಟ್ ಧರಿಸದ, ಪರವಾನಿಗೆಯಿಲ್ಲದ ಹಾಗೂತ್ರಿಬಲ್ ರೈಡ್ ಮಾಡುತ್ತಿರುವ ಸವಾರರಿಗೆ ದಂಡ ವಿಧಿಸಿ ಜಾಗೃತಿ ಮೂಡಿಸುವುದರ ಜೊತೆಗೆ ಬಿಸಿ ಮುಟ್ಟಿಸಿದ್ದಾರೆ.
ಇನ್ನು ಪೊಲೀಸರಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಕೆಲವು ಸವಾರರು ಪರ್ಯಾ ರಸ್ತೆಯನ್ನು ಅವಲಂಬಿಸಿದರೆ, ಇನ್ನು ಕೆಲವರು ತಪಾಸಣೆ ಮುಗಿಯುವವರೆಗೂ ಅಂಗಡಿ ಮುಂಗಟ್ಟು ಹಾಗೂ ರಸ್ತೆಬದಿಯಲ್ಲಿಯೇ ಕಾದು ನಿಂತರು. ಕಳೆದ ಹಲವಾರು ತಿಂಗಳುಗಳಿಂದ ಕುಮಟಾ ಪೊಲೀಸರು ಹೆಲ್ಮೆಟ್ ಕಡ್ಡಾಯಗೊಳಿಸಿ, ಹೆಲ್ಮೆಟ್ ಧರಿಸುವುದರ ಬಗ್ಗೆ ಜಾಗೃತಿ ಮೂಡಿಸಿ, ತೀವ್ರ ತಪಾಸಣೆ ನಡೆಸುತ್ತಿದ್ದರೂ ಕೆಲವರು ತಮಗೆ ಸಂಬಂಧವಿಲ್ಲದಂತೆ ಹೆಲ್ಮೆಟ್ ಧರಿಸದೇ ಸಂಚರಿಸುತ್ತಿರುವುದು ಬೇಸರದ ಸಂಗತಿಯಾಗಿದೆ.
ದ್ವಿಚಕ್ರ ವಾಹನ ಸವಾರರು ತಮ್ಮ ಜೀವದ ರಕ್ಷಣೆಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕುಹಾಗೂ ವಾಹನ ಚಲಾವಣೆಯಪರವಾನಗಿ, ಹೊಗೆ ತಪಾಸಣಾ ಪತ್ರ, ವಾಹನ ನೋಂದಣಿ ಪತ್ರದ ಜೊತೆಗೆವಿಮಾ ಪತ್ರವನ್ನು ಹೊಂದಿರಬೇಕು. ಈ ಬಗ್ಗೆ ಸ್ವಯಂ ಪ್ರೇರಿತರಾಗುವುದರ ಜೊತೆ ಸುತ್ತಮುತ್ತಲಿನವರಲ್ಲೂ ಜಾಗೃತಿ ಮೂಡಿಸಬೇಕು.- ಅರವಿಂದ ವೆರ್ಣೇಕರ, ಸಾಮಾಜಿಕ ಕಾರ್ಯಕರ್ತ
ಕಾನೂನಿನ ನಿಯಮದಂತೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ. ನಿಯಮ ಉಲ್ಲಂಘಿಸುವವರ ಮೇಲೆ ದಂಡ ವಿಧಿಸಿ, ಅರಿವು ಮೂಡಿಸಲಾಗುತ್ತಿದ್ದು, ಈ ಪ್ರಕ್ರಿಯೆ ನಿರಂತರವಾಗಿರುತ್ತದೆ.– ಪರಮೇಶ್ವರ ಗುನಗಾ, ಪೊಲೀಸ್ ವೃತ್ತ ನಿರೀಕ್ಷಕ, ಕುಮಟಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.