ಬೇಸಿಗೆಗೆ ಮುನ್ನವೇ ಕಲ್ಲಂಗಡಿ ಹಣ್ಣಿಗೆ ಹೆಚ್ಚಿದ ಬೇಡಿಕೆ
Team Udayavani, Feb 16, 2021, 6:23 PM IST
ಸಿರುಗುಪ್ಪ: ಬಿಸಿಲಿನ ಝಳಕ್ಕೆ ಜನರು ದಾಹ ತಣಿಸಿಕೊಳ್ಳಲು ಕಲ್ಲಂಗಡಿ ಹಣ್ಣಿನ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ನಗರದಲ್ಲಿ ಕಲ್ಲಂಗಡಿ ಹಣ್ಣಿಗೆ ಉತ್ತಮ ಬೇಡಿಕೆ ಬಂದಿದೆ. ಈಗಾಗಲೇ ನಗರದೆಲ್ಲೆಡೆ ಸಾಕಷ್ಟು ಕಲ್ಲಂಗಡಿ ಆಮದು ಆಗಿದ್ದು, ಅಷ್ಟೇ ಪ್ರಮಾಣದಲ್ಲಿ ಗ್ರಾಹಕರಿರುವುದು ವ್ಯಾಪಾರಿಗಳಲ್ಲಿ ಸಂತಸ ಇಮ್ಮಡಿಗೊಳಿಸಿದೆ.
ತಾಲೂಕಿನಲ್ಲಿ ಬೆಳಗ್ಗೆ ಚಳಿ ಪ್ರಮಾಣ ಹೆಚ್ಚಿದ್ದರೂ ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ತಾಪಮಾನ 30ರಿಂದ 32 ಡಿಗ್ರಿ ಸೆಲ್ಸಿಯಸ್‌ಗೆ ಏರಿ ಜನರು ಹೈರಾಣಾಗುತ್ತಿದ್ದಾರೆ. ಹೀಗಾಗಿ ಬೇಸಿಗೆ ಆರಂಭಕ್ಕೂ ಮುನ್ನವೇ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ಬಿಸಿಲಿನ ತಾಪದ ದಾಹ ತಣಿಸಲು ಜನರು ಕಲ್ಲಂಗಡಿಗೆ ಮೊರೆಯಿಟ್ಟಿದ್ದಾರೆ. ಈ ಬಾರಿ ಬೇಸಿಗೆ ಇನ್ನು ಒಂದು ತಿಂಗಳು ಮುಂಚೆ ಇರುವಾಗಲೇ ನಗರದ ಪ್ರಮುಖ ಬೀದಿಗಳಲ್ಲಿ ತಂಪು ಪಾನೀಯ ಮತ್ತು ಕಲ್ಲಂಗಡಿ ವ್ಯಾಪಾರ ಜೋರಾಗಿ ಸಾಗುತ್ತಿದೆ. ಜನವರಿ ಕೊನೆಯ ವಾರದಿಂದಲೇ ಮಧ್ಯಾಹ್ನದ ವೇಳೆಯಲ್ಲಿಉರಿಬಿಸಿಲು ಆರಂಭಗೊಂಡಿರುವುದರಿಂದ ತಂಪು ಪಾನೀಯ ಮತ್ತು ಕಲ್ಲಂಗಡಿ ವ್ಯಾಪಾರ ಜೋರಾಗಿ ನಡೆಯುತ್ತಿದೆ.
ನಗರದ ಪ್ರಮುಖ ರಸ್ತೆಗಳಲ್ಲಿ ಕಲ್ಲಂಗಡಿ ಹಣ್ಣಿನ ಅಂಗಡಿಗಳು ತೆರೆದಿವೆ. ಸೀಮಾಂಧ್ರ ಪ್ರದೇಶ ಮತ್ತು ತುಮಕೂರಿನ ಮಡಕಶಿರಸುತ್ತಮುತ್ತಲಿನಿಂದ ಕಲ್ಲಂಗಡಿ ಹಣ್ಣುಗಳುಮಾರುಕಟ್ಟೆಗೆ ಬರುತ್ತಿವೆ, ಕಲ್ಲಂಗಡಿ ಹಣ್ಣು ಒಂದು ಕೆ.ಜಿ ಲೆಕ್ಕದಲ್ಲಿ ಮಾರಾಟವಾಗುತ್ತಿದ್ದು, ಒಂದುಕೆ.ಜಿಗೆ 25ರಿಂದ 35ರ ವರೆಗೆ ಇದೆ. ಒಂದು ಪ್ಲೇಟ್ ಅಥವಾ ಹಣ್ಣೀನ ಒಂದು ಪೀಸ್ 10 ರೂ.ಕ್ಕೆ ಮಾರಾಟವಾಗುತ್ತಿದೆ. ಒಟ್ಟಾರೆ ಒಂದು ತಿಂಗಳಿಗೆ2 ರಿಂದ 3 ಲಾರಿ ಲೋಡ್ ಕಲ್ಲಂಗಡಿ ಹಣ್ಣುಗಳು ಮಾರಾಟ ಮಾಡುತ್ತಿರುವುದಾಗಿ ಕಲ್ಲಂಗಂಡಿ ಹಣ್ಣಿನ ವ್ಯಾಪಾರಿಗಳು ತಿಳಿಸಿದ್ದಾರೆ.
ಬೇಸಿಗೆ ದಿನಗಳಲ್ಲಿ ಉಷ್ಠಾಂಶ ಹೆಚ್ಚಿರುವುದರಿಂದ ಮನುಷ್ಯನ ದೇಹ, ದೇಹದ ನೀರಿನ ಸಮತೋಲನ ಕಾಯ್ದುಕೊಳ್ಳಬೇಕಾಗುತ್ತದೆ.ಜೊತೆಗೆ ಮನುಷ್ಯನ ದೇಹದಲ್ಲಿ ನೀರಿನ ಪ್ರಮಾಣ ಬಿಸಿಲಿನ ಝಳಕ್ಕೆ ಕಡಿಮೆಯಾಗುವುದರಿಂದನಿರ್ಜಲೀಕರಣ, ಅಜೀರ್ಣದಂತಹ ಅನಾರೋಗ್ಯಸಮಸ್ಯೆಗಳು ಉಂಟಾಗುತ್ತವೆ. ಇಂತಹ ಆರೋಗ್ಯಸಮಸ್ಯೆಗಳಿಂದ ದೂರವಿರಲು ಕಲ್ಲಂಗಡಿ ಸಹಾಯ ಮಾಡುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ ಸಿ ಇದ್ದು, ಮಾನವ ದೇಹಕ್ಕೆ ಹೆಚ್ಚಿನ ಪೌಷ್ಟಿಕಾಂಶಸಿಗುತ್ತದೆ. ಬಿಸಿಲಿನಲ್ಲಿ ದಾಹ ನೀಗಿಸುವ ಜೊತೆಗೆ ದೇಹದ ಆರೋಗ್ಯ ಕಾಪಾಡುವಲ್ಲಿ ಕಲ್ಲಂಗಡಿ ಹಣ್ಣು ಮುಖ್ಯವಾಗಿದೆ.
ಎಳೆನೀರಿನ ಮಾರಾಟವು ಜೋರಾಗಿನಡೆದಿದ್ದು, ರೂ.35ಕ್ಕೆ ಒಂದು ಎಳೆನೀರು ಮಾರಾಟವಾಗುತ್ತಿದೆ. ಪ್ರತಿದಿನ ನಗರದಲ್ಲಿರುವಎಳೆನೀರು ವ್ಯಾಪಾರಿಗಳು ಸುಮಾರು 500ರಿಂದ 700ಕ್ಕೂ ಹೆಚ್ಚು ಎಳೆನೀರು ಮಾರಾಟಮಾಡುತ್ತಿದ್ಧಾರೆ. ರಾಸಾಯನಿಕ ಮಿಶ್ರಿತ ತಂಪುಪಾನಿಯ ಕುಡಿದು ಆರೋಗ್ಯ ಹಾಳುಮಾಡಿಕೊಳ್ಳುವ ಬದಲು ರೈತರ ನೈಸರ್ಗಿಕ ಉತ್ಪನ್ನಗಳನ್ನು ಸೇವಿಸಿ, ರೈತರಿಗೂ ಪ್ರೋತ್ಸಾಹ ನೀಡಲು ಬೇಸಿಗೆ ಒಳ್ಳೆಯ ಸಮಯವಾಗಿದೆ.
ದಾಹ ತಣಿಸಲು ಕಲ್ಲಂಗಡಿ ಅಷ್ಟೇ ಅಲ್ಲದೇ ಎಳೆನೀರು, ಕಬ್ಬಿನ ಹಾಲು, ನಿಂಬೆರಸ, ಹಣ್ಣಿನ ರಸಕ್ಕೂ ಬೇಡಿಕೆ ಹೆಚ್ಚಾಗಿದೆ. ಒಂದು ಎಳೆನೀರು 35 ರೂ., ಒಂದು ಲೋಟ ಕಬ್ಬಿನ ಹಾಲಿಗೆ 10 ರೂ., ನಿಂಬೆ ಷರಬತ್ತು ಮತ್ತು ಸೋಡಾಕ್ಕೆ 10 ರೂ.ಬೆಲೆ ಇದೆ. ಬಿಸಿಲು ಹೆಚ್ಚಿದಂತೆ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚು, ಮಾರ್ಚ್, ಏಪ್ರಿಲ್‌ನಲ್ಲಿ ಮಾರಾಟ ಜೋರಾಗಿರುತ್ತದೆ. ಈಗ ಇನ್ನೂ ಪೂರ್ಣ ಪ್ರಮಾಣದ ಬೇಸಿಗೆ ಆರಂಭವಾಗಿಲ್ಲ, ಆದರೆ ವ್ಯಾಪಾರ ಜೋರಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಲಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
-ಆರ್.ಬಸವರೆಡ್ಡಿ ಕರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.