ನಮ್ಮೆಲ್ಲರನ್ನು ಬಂಧಿಸಿದೆ ಒಂದು ಸಂಬಂಧದ ಬಳ್ಳಿ
Team Udayavani, Feb 17, 2021, 6:00 AM IST
ಗಲಭೆಗಳು ಉಂಟಾದಾಗ ನಾವೆಲ್ಲರೂ ಮನುಷ್ಯರು, ನಮ್ಮೆಲ್ಲರ ದೇಹದಲ್ಲಿ ಹರಿಯುತ್ತಿರುವ ರಕ್ತದ ಬಣ್ಣ ಒಂದೇ ಎಂಬೆಲ್ಲ ಮಾತುಗಳು ಕೇಳಿಬರುತ್ತವೆ. ನಮ್ಮ ನಡುವೆ ಭೇದಗಳಿಲ್ಲ, ಜಾತಿ, ಜನಾಂಗ, ವರ್ಣ, ಮೇಲು – ಕೀಳು ಎಂಬಿತ್ಯಾದಿ ತರತಮಗಳನ್ನೆಲ್ಲ ನಾವೇ ಹುಟ್ಟುಹಾಕಿಕೊಂಡದ್ದು ಎಂಬುದು ಇದರ ಹೂರಣ. ಎಲ್ಲವೂ ಸರಿಯಿ ರುವಾಗ ಭಸ್ಮಾಸುರನ ವರದಂತಹ ಈ ತರತಮಗಳು ಏನೂ ಮಾಡುವುದಿಲ್ಲ; ಗಮನಕ್ಕೂ ಬರುವುದಿಲ್ಲ. ಆದರೆ ಯಾವುದೋ ಕಾರಣ ದಿಂದ ನಮ್ಮ ನಡು ವೆಯೇ ಅಸಮಾಧಾ ನದ ಬೀಜ ಮೊಳೆತಾಗ ಅದಕ್ಕೆ ನೀರು- ಗೊಬ್ಬರ ವಾಗುವುದು ಇವೇ. ಆಗ ಒಡಕುಗಳು ಬೃಹತ್ ಕಂದರಗಳಾಗಿ ಬದಲಾ ಗುತ್ತವೆ. ಇದು ನಮ್ಮ ಮೂಲ ಸ್ವಭಾವ. ಹಾಗಾಗಿ ನಮ್ಮೆಲ್ಲರಲ್ಲಿ ಹರಿಯುತ್ತಿರುವುದು ಒಂದೇ ರಕ್ತ ಎಂಬ ಮಾತನ್ನು ಅರಿತು ನಡೆಯುವುದು ಸುಲಭಸಾಧ್ಯವಾಗುವುದಿಲ್ಲ.
ಒಂದೆರಡು ಉದಾಹರಣೆ: ಒಂದು ಸಮಾರಂಭದಲ್ಲಿ ಭಾಗವಹಿಸುತ್ತಿದ್ದೇವೆ ಎಂದುಕೊಳ್ಳಿ. ನಮ್ಮದೇ ಜಾತಿಯ, ನಮ್ಮದೇ ಮನೆಮಾತಿನ ಒಂದಿಬ್ಬರು ಸಿಕ್ಕಿದರೆ ತತ್‌ಕ್ಷಣ ನಾವು ಮಾತನಾಡುವ ಭಾಷೆ ಒಂದೇ ಆಗುತ್ತದೆ; ನಮ್ಮೊಂದಿಗೆ ಅದಾಗಲೇ ಮಾತನಾಡುತ್ತಿದ್ದ ಇನ್ನೊಬ್ಬ ನನ್ನು ನಿರ್ಲಕ್ಷಿಸಿಬಿಡುತ್ತೇವೆ.
ಊರಿನಿಂದ ಹೊರಗೆ ಪರವೂರಿನಲ್ಲಿ ಇದ್ದೇವೆ ಎಂದುಕೊಳ್ಳಿ. ಕನ್ನಡಿಗರು ಪರಿಚಯವಾದರೆ ನಮ್ಮದೇ ಒಂದು ಕೂಟವಾಗುತ್ತದೆ. ಅದರಲ್ಲಿ ನಮ್ಮದೇ ಭಾಷಿಕರು ಇದ್ದರೆ ಆ ಕೂಟದ ಒಳಗೆ ಇನ್ನೊಂದು ಪ್ರತ್ಯೇಕ ಗುಂಪು ಹುಟ್ಟಿ ಕೊಳ್ಳುತ್ತದೆ. ಒಂದೇ ಜಾತಿ-ಕುಲದ ಒಂದೆರಡು ಮಂದಿ ಇದ್ದರೆ ಮತ್ತೂಂದು ಸಣ್ಣ ಗುಂಪು! ನಾವೇ ಸೃಷ್ಟಿಸಿಕೊಂಡ ತರತಮಗಳು ಕೀಳಲಾಗದಷ್ಟು ಆಳವಾಗಿ ಬೇರುಬಿಟ್ಟಿರುವ ರೀತಿ ಇದು.
ಇಲ್ಲೊಂದು ಕಥೆಯಿದೆ – ನಮ್ಮೆಲ್ಲರ ಕಥೆ. ಹಾಗಾಗಿ ಎಚ್ಚರಿಕೆಯಿಂದ ಓದಿ ಮನನ ಮಾಡಿಕೊಳ್ಳಿ.
ಒಂದು ಝೆನ್ ಗುರುಮಠ ಇತ್ತು. ಅದರ ಹಿಂಭಾಗದ ಹಿತ್ತಿಲಿನಲ್ಲಿ ಗುರುಗಳ ಶಿಷ್ಯವರ್ಗದವರು ಸಾಲುಗಳನ್ನು ರಚಿಸಿ ಕರಬೂಜದ ಬೀಜಗಳನ್ನು ಬಿತ್ತಿದ್ದರು. ಹಬ್ಬಿದ ಬಳ್ಳಿಗಳಲ್ಲಿ ನೂರಾರು ಮಿಡಿಗಳು ಬಿಟ್ಟಿದ್ದವು. ಕೆಲವು ದಿನಗಳಲ್ಲಿ ಅವು ಹಣ್ಣಾಗುವ ಸಮಯ ಬಂತು.
ಒಂದು ದಿನ ಯಾವುದೋ ಕಾರಣಕ್ಕೆ ಕರಬೂಜಗಳ ನಡುವೆ ವಾಗ್ವಾದ ತಲೆದೋರಿತು. ಪ್ರಾಯಃ ನಮ್ಮ ಹಾಗೆ ಬಣ್ಣ, ಲಿಂಗ, ಆಕಾರ, ಜಾತಿ… ಹೀಗೆ ಯಾವುದಾದರೊಂದು ಕಾರಣಕ್ಕೆ ಜಗಳ ಹುಟ್ಟಿದ್ದಿರಬೇಕು. . ಹಾಗಾಗಿ ಎಲ್ಲವೂ ಕರಬೂಜಗಳೇ ಆಗಿ ದ್ದರೂ ಎರಡು ಪಂಗಡ ಗಳಾದವು. ಭಾರೀ ಜೋರಾದ ವಾಗ್ವಾದ, ಗಲಾಟೆ, ಕಿರುಚಾಟ, ಚೀರಾಟ ಎದ್ದಿತು.
ಮಠದಲ್ಲಿ ಧ್ಯಾನಾ ಸಕ್ತರಾಗಿದ್ದ ಝೆನ್ ಗುರುಗಳಿಗೆ ಇದರಿಂದ ತೊಂದರೆಯಾಯಿತು. ಏನಿದು ಎಂದುಕೊಂಡು ಹೊರಗಿಣು ಕಿದರೆ ಕರಬೂಜಗಳ ನಡುವೆ ಹೊಕೈ!
“ಸುಮ್ಮನಿರುತ್ತೀರೋ ಇಲ್ಲವೋ!’ ಎಂದು ಗುರುಗಳು ಮಠದಿಂದ ಹೊರಗೆ ಧಾವಿಸುತ್ತ ಬೊಬ್ಬಿರಿದರು. ಗಲಾಟೆ ಕಡಿಮೆಯಾಗಲು ಆರಂಭವಾಯಿತು.
“ಹೇ ಕರಬೂಜಗಳೇ! ನಿಮ್ಮೊಳಗೆ ಜಗಳ! ಅದೂ ಗುರುಮಠದ ಹಿತ್ತಿಲಿ ನಲ್ಲಿ! ಸುಮ್ಮನೆ ಚಿನ್‌ಮುದ್ರೆಗೆ ಬನ್ನಿ. ಪದ್ಮಾಸನದಲ್ಲಿ ಬೆನ್ನು ನೆಟ್ಟಗೆ ಮಾಡಿ ಕುಳಿತುಕೊಳ್ಳಿ. ಧ್ಯಾನ ಹೇಳಿಕೊಡುತ್ತೇನೆ’ ಎಂದರು ಗುರುಗಳು.
ಕರಬೂಜಗಳ ಸಿಟ್ಟು ಕೊಂಚ ಕೊಂಚ ವಾಗಿ ಕಡಿಮೆಯಾಯಿತು. ಎಲ್ಲವೂ ಧ್ಯಾನಾಸಕ್ತವಾದವು. “ಎಲ್ಲರೂ ಎರಡೂ ಕೈಗಳನ್ನು ಎತ್ತಿ ಹಸ್ತಗಳನ್ನು ನೆತ್ತಿಯ ಮೇಲಿಟ್ಟುಕೊಳ್ಳಿ ನೋಡೋಣ’ ಗುರು ಗಳು ಆದೇಶಿಸಿದರು.
ಕರಬೂಜಗಳು ಕೈಗಳನ್ನೆತ್ತಿ ಹಸ್ತಗಳನ್ನು ನೆತ್ತಿಯ ಮೇಲಿಟ್ಟುಕೊಂಡಾಗ ಅಲ್ಲಿ ಅದೇನೋ ಸ್ಪರ್ಶಕ್ಕೆ ಸಿಕ್ಕಿತು. ಬಳ್ಳಿ – ಎಲ್ಲ ಕಾಯಿಗಳನ್ನು ಪರಸ್ಪರ ಬಂಧಿಸುವ ಕರಬೂಜದ ಬಳ್ಳಿ!
“ಎಂಥ ಮೂರ್ಖತನ! ನಾವೆಲ್ಲರೂ ಒಂದೇ, ಸುಮ್ಮನೆ ಗಲಾಟೆ ಮಾಡಿ ಕೊಂಡಿದ್ದೆವು’ ಎಂದು ಹೇಳುತ್ತ ಕರಬೂಜಗಳು ಉರುಳಾಡಿಕೊಂಡು ಬಿದ್ದು ಬಿದ್ದು ನಗಲಾರಂಭಿಸಿದವು.
(ಸಾರ ಸಂಗ್ರಹ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.