ದುಬಾೖ ನಗರಿಗೆ ಸೌದಿ ಸವಾಲು
Team Udayavani, Feb 17, 2021, 6:55 AM IST
ರಿಯಾದ್: ತನ್ನ ದೇಶದ ಆರ್ಥಿಕ ಲಾಭ ಬೇರೆ ದೇಶಗಳಿಗೆ ಹರಿದು ಹೋಗುವುದನ್ನು ಸಾಧ್ಯವಾದಷ್ಟು ತಗ್ಗಿಸಲು ಹಾಗೂ ದೇಶೀಯ ಮಟ್ಟದಲ್ಲಿ ಅಪಾರ ಪ್ರಮಾಣದ ಉದ್ಯೋಗಗಳನ್ನು ಸೃಷ್ಟಿಸಲು ಸೌದಿ ಅರೇಬಿಯಾ ಹೊಸತೊಂದು ಹೆಜ್ಜೆಯ ನ್ನಿಟ್ಟಿದೆ. ಸೌದಿ ಅರೇಬಿಯಾ ಇಟ್ಟಿರುವ ಈ ಹೊಸ ಹೆಜ್ಜೆ ಪಕ್ಕದ ರಾಷ್ಟ್ರವಾದ ಯು.ಎ.ಇ.ನ ಪ್ರಮುಖ ನಗರ ದುಬಾೖಗೆ ಹೊಸ ಸವಾಲಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಏನಿದು ಸವಾಲು?: ಸೌದಿ ಅರೇಬಿಯಾವನ್ನು ಹೊರತುಪಡಿಸಿದಂತೆ ಮಧ್ಯಪ್ರಾಚ್ಯದ ಇತರ ರಾಷ್ಟ್ರಗಳಲ್ಲಿ ಕೇಂದ್ರ ಕಚೇರಿಗಳನ್ನು ಹೊಂದಿರುವ ಎಲ್ಲ ಬಹುರಾಷ್ಟ್ರೀಯ ಕಂಪೆನಿಗಳು ಆದಷ್ಟು ಬೇಗನೇ ತಮ್ಮ ಕಚೇರಿಗಳನ್ನು ಸೌದಿಗೆ ವರ್ಗಾಯಿಸುವಂತೆ ಅಲ್ಲಿನ ಸರಕಾರ ಒತ್ತಡ ಹೇರಲಾರಂಭಿಸಿದೆ. ಕಚೇರಿಗಳ ಸ್ಥಳಾಂತರಕ್ಕೆ ಇನ್ನು 3 ವರ್ಷಗಳ ಗಡುವು ನೀಡಲಾಗಿದೆ. 2024ರ ಜ. 1ರೊಳಗೆ ತಮ್ಮ ಕಚೇರಿಗಳನ್ನು ಸೌದಿಗೆ ಸ್ಥಳಾಂತರಿಸುವ ಕಂಪೆನಿಗಳೊಂದಿಗೆ ಮಾತ್ರ ತನ್ನ ವ್ಯಾವಹಾರಿಕ ಒಪ್ಪಂದವನ್ನು ಮುಂದುವರಿಸುವುದಾಗಿ ಸರಕಾರ ಖಡಾಖಂಡಿತವಾಗಿ ಹೇಳಿದೆ.
ರಿಯಾದ್ ಅಭಿವೃದ್ಧಿಗೆ ಪಣ: ಹೀಗೆ ಸೌದಿಗೆ ಕಾಲಿಡುವ ಹೊಸ ಕಂಪೆನಿಗಳಿಗೆ ಜಾಗ ಮಾಡಿಕೊಡಲು ರಾಜಧಾನಿ ರಿಯಾದ್ ನಗರವನ್ನು ದುಪ್ಪಟ್ಟು ವಿಶಾಲಗೊಳಿಸಲು ಹಾಗೂ ಅದನ್ನು ಜಾಗತಿಕ ವ್ಯಾಪಾರದ ಸ್ವರ್ಗವಾಗಿಸಲು ಅಲ್ಲಿನ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್, ಇದಕ್ಕಾಗಿ 58 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲು ನಿರ್ಧರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್ಗೆ ಅಮೆರಿಕ ನಿರ್ಬಂಧ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರಕಲಾದ ಬಸ್
Human Error: ಮಾನವ ಲೋಪದಿಂದಲೇ CDS ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ: ವರದಿ
Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ
Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Burhan Wani; ಬುರ್ಹಾನ್ ವಾನಿ ಅನುಚರ ಸೇರಿ 5 ಉಗ್ರರ ಎನ್ಕೌಂಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.